Subscribe to Gizbot

ಭವಿಷ್ಯದ ಸಾವಿರ ವರ್ಷಗಳಲ್ಲಿ ಭೂಮಿ ಹೇಗೆಲ್ಲಾ ಬದಲಾಗುತ್ತದೆಯಂತೆ ಗೊತ್ತಾ!?

Written By:

ಮನುಷ್ಯ ಸೇರಿ ಲಕ್ಷಾಂತರ ಜೀವರಾಶಿಗಳ ನಿಲಯ ಈ ಭೂಮಿಯಲ್ಲಿ ಕಾಲ ಕಾಲಕ್ಕೂ ಜೀವಗಳು ಮಾರ್ಪಾಡಾಗುತ್ತದೆ ಮತ್ತು ಭವಿಷಯದಲ್ಲಿಯೂ ಮಾರ್ಪಾಡಾಗುತ್ತಲೇ ಇರುತ್ತದೆ ಎಂಬುದು ಎಲ್ಲಾ ವಿಜ್ಞಾನಿಗಳ ವಾದ. ಹಾಗಾಗಿಯೇ, ಮಂಗನಿಂದ ಮಾನವ ಎಂಬ ತತ್ವವನ್ನು ಈ ವರೆಗಿನ ಬಹುತೇಕ ಎಲ್ಲಾ ವಿಜ್ಞಾನಗಳು ಒಪ್ಪಿಕೊಂಡಿದ್ದಾರೆ ಎನ್ನಬಹುದು.!!

ಭವಿಷ್ಯದ ಸಾವಿರ ವರ್ಷಗಳಲ್ಲಿ ಭೂಮಿ ಹೇಗೆಲ್ಲಾ ಬದಲಾಗುತ್ತದೆಯಂತೆ ಗೊತ್ತಾ!?

ಹಾಗಾಗಿ, ಭೂತಕಾಲದ ಬಗ್ಗೆ ಇದ್ದ ವಿಷಯ ಇದೀಗ ಭವಿಷ್ಯದ ಕಡೆಗೆ ವಾಲಿದೆ.!! ಈ ಹಿಂದೆ ಹಾಗಿದ್ದ ಭೂಮಿ ಭವಿಷ್ಯದಲ್ಲಿ ಹೀಗಿರಲಿದೆ ಎಂದು ಹಲವು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.! ಹಾಗಾಗಿ, ವಿಜ್ಞಾನಿಗಳು ಅಂದಾಜು ಮಾಡಿರುವಂತೆ ಭವಿಷ್ಯದಲ್ಲಿ ಭೂಮಿ ಹೇಗಿರಲಿದೆ? ಮಾನವನ ಕಥೆ ಏನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭವಿಷ್ಯದಲ್ಲಿ ಮಾನವನ ಚಹರೆ ಬದಲಾಗಲಿದೆಯಂತೆ!!

ಭವಿಷ್ಯದಲ್ಲಿ ಮಾನವನ ಚಹರೆ ಬದಲಾಗಲಿದೆಯಂತೆ!!

ಇನ್ನು ಸಾವರ ವರ್ಷಗಳ ವೇಳೆಗಾಗಲೇ ಈಗಿರುವ ಮಾನವನ ಹೋಲಿಕೆ ಬದಲಾಗಲಿದೆ ಎಂಬುದನ್ನು ವಿಜ್ಞಾನಿಗಳು ಹೇಳುತ್ತಾರೆ. ಭವಿಷ್ಯದ ಮಾನವನ ಪಾದಗಳು ಚಪ್ಪಟೆಯಾಕಾರವನ್ನು ಪಡೆಯಲಿವೆಯಂತೆ. ದೇಹ ಈಗಿರುವುದಕ್ಕಿಂತ 3 ರಿಂದ 4 ಪಟ್ಟು ಬೃಹದಾಕಾರವಾಗಿ ಬೆಳೆಯಲಿದೆಯಂತೆ. ಕಣ್ಣುಗಳು ಮತ್ತು ಮುಖ ಮತ್ತಷ್ಟು ಚಿಕ್ಕದಾಗಿರುತ್ತವೆಯಂತೆ.!!

ಮನುಷ್ಯ ಹೆಚ್ಚುಕಾಲ ಜೀವಿಸುತ್ತಾನಂತೆ!!

ಮನುಷ್ಯ ಹೆಚ್ಚುಕಾಲ ಜೀವಿಸುತ್ತಾನಂತೆ!!

ಪ್ರಸ್ತುತ ಮನುಷ್ಯನ ಸರಾಸರಿ ಜೀವಿತಾವಧಿ 60 ರಿಂದ 70 ವರ್ಷಗಳು ಮಾತ್ರ ಇದೆ. ಆದರೆ, ಭವಿಷ್ಯದಲ್ಲಿ ಮನುಷ್ಯ ಈಗಿನ ನಾಲ್ಕೈದು ಪಟ್ಟು ಹೆಚ್ಚು ಕಾಲ ಜೀವಿಸುತ್ತಾನಂತೆ. ಜ್ಞಾನಿಗಳು ಮನುಷ್ಯನ ಜೀವಿತಾವಧಿಯನ್ನು ಹೆಚ್ಚು ಮಾಡಲು ಪ್ರಯೋಗಗಳನ್ನು ಮಾಡುತ್ತಿರುವುದು ಇದಕ್ಕೆ ಕಾರಣವಂತೆ!!

ಬೆರೆ ಗ್ರಹದಲ್ಲಿ ಮಾನವನ ವಾಸ!!

ಬೆರೆ ಗ್ರಹದಲ್ಲಿ ಮಾನವನ ವಾಸ!!

ಮಾನವರು ಬೇರೆ ಗ್ರಹದಲ್ಲಿ ಶಾಶ್ವತವಾಗಿ ನೆಲೆಸಲು ತೆರಳುತ್ತಾರಂತೆ. ಬೆರೆ ಗ್ರಹದಲ್ಲಿ ಮಾನವ ಬದುಕಲು ವಾಸಯೋಗ್ಯ ವಾತವರಣವನ್ನು ಕೃತಕವಾಗಿ ನಿರ್ಮಿಸಿಕೊಳ್ಳುವಷ್ಟು ತಂತ್ರಜ್ಞಾನ ಭವಿಷ್ಯದಲ್ಲಿ ಬೆಳೆಯುತ್ತದಂತೆ. ಇದೆಲ್ಲಾ ಬಿಡಿ ವಿಶ್ವದ ಇತರ ಒಂದು ಭೂಮಿಯಲ್ಲಿನ ಜೀವರಾಶಿಯನ್ನು ಮಾನವನು ಕೂಡಿಕೊಳ್ಳುತ್ತಾನಂತೆ.!!

ಮನುಷ್ಯನನ್ನೇ ಆಳಲಿವೆ ಕಂಪ್ಯೂಟರ್!!

ಮನುಷ್ಯನನ್ನೇ ಆಳಲಿವೆ ಕಂಪ್ಯೂಟರ್!!

ಈಗಾಗಲೇ ಕೃತಕ ಬುದ್ದಿಮತ್ತೆ ಕಂಪ್ಯೂಟರ್ ತಂತ್ರಜ್ಞಾನ ಮಾನವನನ್ನು ಮೀರಿಸಿದೆ. ಆದರೆ, ಭವಿಷ್ಯದಲ್ಲಿ ಕಂಪ್ಯೂಟರ್ ಪ್ರಪಂಚ ಮನುಷ್ಯನನ್ನೇ ಆಳಲಿವೆಯಂತೆ.! ಈಗ ಇರುವ ಕಂಪ್ಯೂಟರ್‌ಗಳಿಗಿಂತ ಕೆಲವು ಸಾವಿರ ಪಟ್ಟು ವೇಗದ, ಮನುಷ್ಯ ಮೆದುಳು ಸಾಧಿಸಲು ಸಾಧ್ಯವಿಲ್ಲದ, ಮಾಡಲಾಗದ ಅನೇಕ ಕೆಲಸಗಳನ್ನು ಮಾಡುವ ಕಂಪ್ಯೂಟರ್‌ಗಳೂ ಬರುತ್ತವೆಯಂತೆ.!!

ಇಂಧನ ಸಮಸ್ಯೆ ಎಂದೂ ಇರುವುದಿಲ್ಲವಂತೆ.!!

ಇಂಧನ ಸಮಸ್ಯೆ ಎಂದೂ ಇರುವುದಿಲ್ಲವಂತೆ.!!

ಮುಂದಿನ 1000 ವರ್ಷಗಳಲ್ಲಿ ನ್ಯಾನೊ ತಂತ್ರಜ್ಞಾನವು ಅಭಿವೃದ್ಧಿ ಹೊಂದಿರುತ್ತದೆಯಂತೆ. ಇದರಿಂದಾಗಿ ಸೌರ ಶಕ್ತಿಯನ್ನು ಹೆಚ್ಚು ಬಳಸಲಾಗಿ ಮಾನವರಿಗೆ ವಿದ್ಯುತ್ ಮತ್ತು ಇಂಧನ ಸಮಸ್ಯೆ ಎಂದೂ ಇರುವುದಿಲ್ಲವಂತೆ. ಎಂದೂ ಬರಿದಾಗದ ನೈಸರ್ಗಿಕ ಶಕ್ತಿಯೇ ಮನುಷ್ಯನಿಗೆ ಆಧಾರವಾಗಲಿದೆಯಂತೆ.!!

ಭೂಮಿಯ ಮೇಲೆ ಒಂದೇ ಭಾಷೆ!!

ಭೂಮಿಯ ಮೇಲೆ ಒಂದೇ ಭಾಷೆ!!

ಪ್ರಪಂಚದಾದ್ಯಂತ ಅನೇಕ ಜನರು ಅನೇಕ ಭಾಷೆಗಳಲ್ಲಿ ಮಾತನಾಡುತ್ತಾರೆ. ಆದರೆ ಭವಿಷ್ಯದಲ್ಲಿ, ಭೂಮಿಯ ಮೇಲಿನ ಎಲ್ಲಾ ಜನರು ಒಂದೇ ಭಾಷೆಯನ್ನು ಮಾತನಾಡುತ್ತಾರಂತೆ. ಆದರೆ, ವಿಜ್ಞಾನಿಗಳು ಇಂತಹ ಊಹೆಯನ್ನು ಯಾವ ಆಧಾರದ ಮೇಲೆ ನೀಡಿದರು ಎಂಬುದನ್ನು ಮಾತ್ರ ತಿಳಿಸಿಲ್ಲ.!!

1 ಸಾವಿರ ವರ್ಷ ಬದುಕಬಹುದಷ್ಟೆ!!

1 ಸಾವಿರ ವರ್ಷ ಬದುಕಬಹುದಷ್ಟೆ!!

ಇನ್ನು ಕೇವಲ 1 ಸಾವಿರ ವರ್ಷ ಮಾತ್ರ ಭೂಮಿ ಮಾನವನಿಗೆ ಬದುಕಲು ಅರ್ಹವಾಗಿದೆ ನಂತರ ಮಾನವ ಪರ್ಯಾಯ ವ್ಯವಸ್ಥೆ ನೋಡಿಕೊಳ್ಳಬೇಕು ಎಂದು ಪ್ರಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ. ಹಾಗಾಗಿ, ಮುಂದಿನ ಒಂದು ಸಾವಿರ ವರ್ಷಗಳ ಭವಿಷ್ಯದ ಭೂಮಿ ಹೇಗಿರಬಹುದು? ನಿಮ್ಮ ಅಭಿಪ್ರಾಯವೇನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here are possible futures for the human race, based on some theories of continuing evolution. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot