ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಎಚ್ಚರ!..ಈ ನಾಲ್ವರಿಗೆ ಬಂದ ಪರಿಸ್ಥಿತಿ ನಿಮಗೂ ಬರಬಹುದು!!

ಆನ್‌ಲೈನ್ ಮುಖಾಂತರ ಆಮಿಷ ಒಡ್ಡಿ ಎರಡೇ ದಿನಗಳಲ್ಲಿ ಬೆಂಗಳೂರಿನ ನಾಲ್ವರು ಉದ್ಯೋಗ ಆಕಾಂಕ್ಷಿಗಳಿಗೆ 'ಬಾಟಮ್ ಫಿಶಿಂಗ್’ ಜಾಲ ವಂಚಿಸಿದೆ.!!

|

ಪ್ರತಿಷ್ಠಿತ ಖಾಸಗಿ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಜನರನ್ನು ವಂಚಿಸಿಸುತ್ತಿರುವ 'ಬಾಟಮ್ ಫಿಶಿಂಗ್' ಜಾಲಕ್ಕೆ ಬ್ರೇಕ್ ಹಾಕುವವರು ಇಲ್ಲವಾಗಿದ್ದಾರೆ.! ಹೌದು, ಆನ್‌ಲೈನ್ ಮುಖಾಂತರ ಆಮಿಷ ಒಡ್ಡಿ ಎರಡೇ ದಿನಗಳಲ್ಲಿ ಬೆಂಗಳೂರಿನ ನಾಲ್ವರು ಉದ್ಯೋಗ ಆಕಾಂಕ್ಷಿಗಳಿಗೆ 'ಬಾಟಮ್ ಫಿಶಿಂಗ್' ಜಾಲ ವಂಚಿಸಿದೆ.!!

ಇಲ್ಲಿ ವಂಚನೆಗೆ ಒಳಗಾಗಿರುವವ ಎಲ್ಲರೂ ಪದವೀಧರರೆ ಆಗಿದ್ದು, ಆನ್‌ಲೈನ್ ವಂಚಕರ ಮಾತು ಕೇಳಿ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಎಲ್ಲರೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಅವರು ದೂರು ನೀಡಿರುವಂತೆ 'ಬಾಟಮ್ ಫಿಶಿಂಗ್' ಜಾಲ ಅವರನ್ನು ಹೇಗೆಲ್ಲಾ ಮೋಸ ಮಾಡಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಮೋಸ!!

ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಮೋಸ!!

ಉದ್ಯೋಗವನ್ನು ಹರಸುತ್ತಿರುವ ವಿಧ್ಯಾಂವತರನ್ನು ಟಾರ್ಗೆಟ್ ಮಾಡಿಕೊಂಡಿರುವ ವಂಚಕರು ಉದ್ಯೋಗ ಹುಡುಕುವವರ ಮಾಹಿತಿಯನ್ನು ಹಲವು ಮೂಲಗಳಿಂದ ಪಡೆದುಕೊಂಡು ಇಂತಹ ಕಾರ್ಯ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ತುಂಬಿದ್ದವರು ವಂಚಕರ ಬಲೆಗೆ ಸಿಲುಕಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.!!

ಏರ್‌ಲೈನ್ಸ್ ಸಿಇಒ ಫೋನ್!!

ಏರ್‌ಲೈನ್ಸ್ ಸಿಇಒ ಫೋನ್!!

ಪದ್ಮನಾಭನಗರದ ನಿವಾಸಿ ಎಸ್‌.ಕಿರಣ್ ಎಂಬುವರಿಗೆ ವಿಘ್ನೇಶ್ ಎಂಬಾತ ಪರಿಚಯ ಬೆಳೆಸಿದ್ದಾನೆ. ನಂತರ ತಾನು ‘ಇಂಡಿಯಾ ಏರ್‌ಲೈನ್ಸ್ ಸಿಇಒ ಎಂದು ಸುಳ್ಳು ಹೇಳಿಕೊಂಡು ನಿಮಗೆ ಏರ್‌ಲೈನ್ಸ್‌ನಲ್ಲಿ ಕೆಲಸ ನೀಡುತ್ತೇನೆ. ಅದಕ್ಕಾಗಿ ಉದ್ಯೋಗದ ನೋಂದಣಿ ಶುಲ್ಕ, ತರಬೇತಿ ಶುಲ್ಕ ವೆಂದು 57 ಸಾವಿರ ರೂ. ಕೇಳಿದ್ದಾರೆ. ಕಿರಣ್ ಹಣ ಹಾಕಿದ ಕ್ಷಣವೆ ಮೊಬೈಲ್ ಸ್ವಿಚ್ ಆಫ್ ಆಗಿದೆ.!!

ಟಾಟಾ ಮೋಟಾರ್ಸ್ ಕೆಲಸ!!

ಟಾಟಾ ಮೋಟಾರ್ಸ್ ಕೆಲಸ!!

ಆನ್‌ಲೈನ್‌ನಲ್ಲಿ ಉದ್ಯೋಗದ ಹುಡುಕಾಟ ನಡೆಸುತ್ತಿದ್ದ ಕೆಂಗೇರಿ ನಿವಾಸಿ ವಿವೇಕ್ ಎಂಬ ಯುವಕನಿಗೆ ಕರೆ ಮಾಡಿದ ಮಹಿಳೆಯೋರ್ವಳು ಟಾಟಾ ಮೋಟಾರ್ಸ್‌' ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದಾಳೆ. ಇದಕ್ಕಾಗಿ ಮುಂಗಡ ಶುಲ್ಕ ಪಾವತಿಸುವಂತೆ ಕೇಳಿ ವಿವಿಧ ಹೆಸರಿನಲ್ಲಿ 16 ಸಾವಿರ ಹಣವನ್ನು ಲಪಟಾಯಿಸಿದ್ದಾರೆ.!!

ಇ–ಮೇಲ್‌ ಫಿಶಿಂಗ್!!

ಇ–ಮೇಲ್‌ ಫಿಶಿಂಗ್!!

ಚಂದ್ರಾಲೇಔಟ್ ನಿವಾಸಿ ಬಿ.ಪಿ.ಯಶೋದಾ ಎಂಬುವವರಿಗೆ ಬಂದ ಒಂದು ಇ-ಮೇಲ್‌ ಸಂದೇಶ ಅವರ 46 ಸಾವಿರ ಹಣ ಕಳೆದುಕೊಳ್ಳುವಂತೆ ಮಾಡಿದೆ.! '[email protected]' ಅಡ್ರೆಸ್‌ ಮೇಲ್‌ನಿಂದ ಜೆಟ್ ಏರ್‌ವೇಸ್‌ನಲ್ಲಿ ನೌಕರಿ ಆಮಿಷ ತೋರಿಸಿ ಉದ್ಯೋಗ ನೀಡಲು ಹಣಪಾವತಿಸುವಂತೆ ಕೇಳಿ 46 ಸಾವಿರ ಹಣವನ್ನು ದೋಚಿದ್ದಾರೆ.!!

ಪ್ರೀ–ಲ್ಯಾನ್ಸರ್ ಸಂದರ್ಶನ!!

ಪ್ರೀ–ಲ್ಯಾನ್ಸರ್ ಸಂದರ್ಶನ!!

ಮನೆಯಲ್ಲಿಯೇ ಕುಳಿತು ಪತ್ರಿಕೆಗಳಿಗೆ ಕೆಲಸ ನಿರ್ವಹಿಸುವವರನ್ನು ‘ಪ್ರೀ-ಲ್ಯಾನ್ಸರ್' ಎಂದು ಕರೆಯುತ್ತಾರೆ. ಆದರೆ, ಸಿಂಗಸಂದ್ರದ ಎಂ.ಜೆ.ನಿಶ್ಚಿತಾ ಎಂಬ ಯುವತಿಗೆ ಪ್ರೀ-ಲ್ಯಾನ್ಸರ್ ಎಂಬ ಹೆಸರಿನ ಕಂಪೆನಿಯ ಹೆಸರಿನಲ್ಲಿಯೇ 4 ಲಕ್ಷ ವೇತನ ನೀಡುವ ಸಂದೇಶ ಬಂದಿದೆ.! ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದ ನಿಶ್ಚಿತಾಗೆ ನಿತೀಶ್ ಕುಮಾರ್ ಎಂಬ ಹೆಸರಿನಿನ ವ್ಯಕ್ತಿ 63,800 ಪಾವತಿಸಿದರೆ, ಉದ್ಯೋಗ ಸಿಗುವಂತೆ ಮಾಡುವುದಾಗಿ ಹೇಳಿ ವಂಚಿಸಿದ್ದಾನೆ.!!

ದೇಶಿಯ ವಿಮಾನ ಪ್ರಯಾಣಿಕರಿಗೆ 4 ದಿನ ಭರ್ಜರಿ ಆಫರ್!!..ಈಗಲೇ ಟಿಕೆಟ್ ಬುಕ್ ಮಾಡಿ.!!ದೇಶಿಯ ವಿಮಾನ ಪ್ರಯಾಣಿಕರಿಗೆ 4 ದಿನ ಭರ್ಜರಿ ಆಫರ್!!..ಈಗಲೇ ಟಿಕೆಟ್ ಬುಕ್ ಮಾಡಿ.!!

Best Mobiles in India

English summary
You are excited, want to start as soon as possible but suddenly you came to know, Unknown person is asking money for registration.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X