ವಿಜ್ಞಾನ ವಿಸ್ಮಯ: 5,000 ವರ್ಷಗಳ ಹಿಂದಿನ ಮಮ್ಮಿಯ ಪುನರುಜ್ಜೀವನ

By Shwetha
|

ಆತನ ಸಾವಿನ ಸಾವಿರಾರು ವರ್ಷಗಳ ನಂತರ, ಓಟ್ಜಿ ದ ಐಸ್‌ಮ್ಯಾನ್ ಅನ್ನು ಮಾನವ ಆಕಾರದ ಮಾಡೆಲ್ ಅನ್ನು ಮರುತಯಾರಿಸಲಾಗಿದೆ. 5,000 ವರ್ಷಗಳ ಹಿಂದಿನ ಮಮ್ಮಿ ದೇಹದ 3 ಡಿ ಮುದ್ರಿತ ಲಿಂಕ್ ಅನ್ನು ವಿಜ್ಞಾನಿಗಳು ಸಾದರಪಡಿಸಿದ್ದು ಸಿಟಿ ಸ್ಕ್ಯಾನ್ ಅನ್ನು ಬಳಸಿಕೊಂಡು ಕೈಯಿಂದಲೇ ಚಿತ್ರ ಬಿಡಿಸುವ ಅದ್ಭುತ ಕಲೆಗಾರ ಗ್ಯಾರಿ ಸ್ಟಾಬ್ ಈ ಚಿತ್ರಣಗಳನ್ನು ರಚಿಸಲು ಹಲವಾರು ತಿಂಗಳುಗಳನ್ನೇ ತೆಗೆದುಕೊಂಡಿದ್ದಾರೆ.

ಸ್ಕ್ಯಾನ್ ಮಾಡಿದ ಚಿತ್ರಗಳನ್ನು ವರ್ಚ್ಯುವಲ್ 3 ಡಿ ಮಾಡೆಲ್‌ಗೆ ಪರಿವರ್ತಿಸಲಾಗಿದ್ದು ಇದನ್ನು ಮುದ್ರಿಸಲಾಗಿದ್ದು ಮತ್ತು ಪೋಸ್ಟ್ ಪ್ರೊಸೆಸ್ ಮಾಡಲಾಗಿದೆ. ಇಂದಿನ ಲೇಖನದಲ್ಲಿ ಈ 3 ಡಿ ಮಾಡೆಲ್ ಅನ್ನು ತಯಾರಿಸಿದ್ದರ ಕುರಿತಾದ ಮಾಹಿತಿಯನ್ನು ನಾವು ಕೆಳಗಿನ ಸ್ಲೈಡರ್‌ಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದು 3 ಡಿ ಮುದ್ರಣವನ್ನು ನಿರ್ಮಿಸುವಾಗ ಎದುರಿಸಿದ ಸವಾಲುಗಳನ್ನು ಇಲ್ಲಿ ಬಣ್ಣಿಸುತ್ತಿದ್ದೇವೆ.

#1

#1

ಮೂರು 3 ಡಿ ಪ್ರತಿಕೃತಿಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು ಒಂದನ್ನು ಉತ್ತರ ಅಮೇರಿಕಾದ ಟ್ರಾವೆಲಿಂಗ್ ಎಕ್ಸಿಬಿಶನ್‌ನಲ್ಲಿ ಇರಿಸಲಾಗಿದ್ದು ಮತ್ತೆರಡನ್ನು ತರಬೇತಿ ಅಭ್ಯಾಸಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆಯಂತೆ.

#2

#2

ಕೈಗಳನ್ನು ಮಾಡುವಾಗ ಕೊಂಚ ಕಷ್ಟಕರ ಎಂಬುದಾಗಿ ಕಂಡುಬಂದರೂ ಸಿಟಿ ಸ್ಕ್ಯಾನ್‌ಗಳಲ್ಲಿ ಇದನ್ನು ಕ್ಯಾಪ್ಚರ್ ಮಾಡಲು ಸಾಧ್ಯವಾಗದೇ ಇದ್ದುದು ಇದಕ್ಕೆ ಕಾರಣವಾಗಿದೆ.

#3

#3

ಸಪ್ಟೆಂಬರ್ 1991 ರಲ್ಲಿ ದಕ್ಷಿಣ ಆಸ್ಟ್ರಿಯಾದಲ್ಲಿ ಓಟ್ಜಲ್ ಆಲ್ಸ್ಪ್ ಪತ್ತೆಯಾಗಿದ್ದು ಶಿಲಾಯುಗದಿಂದಲೂ ಇದನ್ನು ಐಸ್‌ನಲ್ಲಿಟ್ಟು ಸಂರಕ್ಷಿಲಾಗಿದೆ. ಈ ವ್ಯಕ್ತಿ ತನ್ನ 45 ರ ಹರೆಯದಲ್ಲೇ ಹಿಂಸಾತ್ಮಕವಾಗಿ ಕೊಲೆಯಾಗಿದ್ದ ಎಂಬ ಅಂಶ ತಿಳಿದು ಬಂದಿದ್ದು ಈತ 50 ಕಿಲೋಗ್ರಾಮ್ ತೂಗುತ್ತಿದ್ದ ಎಂಬುದಾಗಿ ಪತ್ತೆಮಾಡಲಾಗಿದೆ.

#4

#4

ತಾಮ್ರ ಯುಗದಲ್ಲಿ ಈತ ಜೀವಂತವಿದ್ದು ಒಂದು ಘೋರ ಮರಣವನ್ನು ಹೊಂದಿದ್ದ ಎಂಬುದಾಗಿ ಕಂಡುಹಿಡಿಯಲಾಗಿದೆ. ಈತ ಕಂದು ಕಣ್ಣುಗಳನ್ನು ಹೊಂದಿದ್ದ ಲ್ಯಾಕ್ಟೋಸ್ ಸಹಿಸದ ವ್ಯಕ್ತಿಯಾಗಿದ್ದ. ಈತ ಹೃದಯ ರೋಗಗಳಿಂದ ನರಳುತ್ತಿದ್ದನಂತೆ.

#5

#5

ಓಟ್ಜಿಯ 3 ಡಿ ಆವೃತ್ತಿಯು ತನ್ನ ದೇಹದಲ್ಲಿ ಕೆಲವೊಂದು ಭಾಗಗಳನ್ನು ಕಳೆದುಕೊಂಡಿದೆ. ಪಕ್ಕೆಲುಬುಗಳಿಲ್ಲ ಅಂತೆಯೇ ಕೈಗಳನ್ನು ನಿರ್ಮಿಸುವಾಗ ಈ ತಂಡ ಕೊಂಚ ಸವಾಲುಗಳನ್ನು ಎದುರಿಸಿದೆ.

#6

#6

ಸ್ಕ್ಯಾನ್ ಮಾಡಿದ ಚಿತ್ರಗಳನ್ನು ವರ್ಚುವಲ್ 3 ಡಿ ಮಾಡೆಲ್‌ಗಳಿಗೆ ವರ್ಗಾಯಿಸಲಾಗಿದ್ದು ಇದನ್ನು ಪ್ರಿಂಟ್ ಮತ್ತು ಪೋಸ್ಟ್ ಪ್ರೊಸೆಸ್ ಮಾಡಲಾಗಿದೆ

#7

#7

ಮಮ್ಮಿಯ ಗಾಢ ತ್ವಚೆಗೆ ಬೆಳಕನ್ನು ಚೆಲ್ಲಿ ಒಟ್ಟು 61 ಟ್ಯಾಟೂಗಳನ್ನು ತಜ್ಞರು ಪತ್ತೆಹಚ್ಚಿದ್ದಾರೆ. ಅಂತೆಯೇ ಇದನ್ನು ವಿಶ್ವದ ಅತ್ಯಂತ ಹಳೆಯ ಬೀಟಿಂಗ್ ಮಾರ್ಕಿಂಗ್ಸ್ ಎಂಬುದಾಗಿ ಅವರು ಬಣ್ಣಿಸಿದ್ದಾರೆ.

#8

#8

ಈ ಟ್ಯಾಟೂಗಳು ಓಟ್ಜಿಯ ಹಿಂಭಾಗದ ಕೆಳಗಿನ ಭಾಗದಲ್ಲಿ, ಕಾಲುಗಳಲ್ಲಿ, ಮೊಣಕಾಲುಗಳ ಮಧ್ಯೆ ಪತ್ತೆಯಾಗಿದ್ದು ಇದು ಹೆಚ್ಚು ಕಡಿಮೆ ಗಾಯಗಳಿಂದ ಉಂಟಾಗಿರುವಂಥದ್ದಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಭವಿಷ್ಯವನ್ನೇ ಬದಲಾಯಿಸುವ ಟಾಪ್ ಅನ್ವೇಷಣೆಗಳು

ಭೂಮಿ ಸುತ್ತುವುದೇ ನಿಂತಾಗ ಏನಾಗುತ್ತದೆ?

ಮಮ್ಮಿ ಸಮಾಧಿಯಲ್ಲಿ ಅಡಿಡಾಸ್ ಶೂ ಪತ್ತೆ

ಇದು ಸತ್ಯ: ಫೇಸ್‌ಬುಕ್‌ನಿಂದಲೇ ನಡೆದ ಹತ್ತು ಕೊಲೆಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
Thousands of years after his death, Otzi 'the iceman' has been resurrected as a life-sized model.Scientists today presented a 3D printed copy of the mummified 5,000-year-old body found in the Alps 25 years ago...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more