ತೆರಿಗೆ ವಂಚಕರಿಗೆ ಖೆಡ್ಡ!..ಪಾನ್‌ಕಾರ್ಡ್ ಇಲ್ಲದೇ ಬ್ಯಾಂಕ್ ವ್ಯವಹಾರ ಕಷ್ಟ!!

Written By:

ಭಾರತೀಯ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ದು, ಯಾವುದೇ ಬ್ಯಾಂಕ್ ಗ್ರಾಹಕ ಪಾನ್‌ಕಾರ್ಡ್ ಹೊಂದಿಲ್ಲದೇ ಹೆಚ್ಚು ಹಣದ ವ್ಯವಹಾರವನ್ನು ನಡೆಸುವಂತಿಲ್ಲ ಎನ್ನುವ ತಿದ್ದುಪಡಿ ಒಂದನ್ನು ಜಾರಿಗೆ ತಂದಿದೆ. ಹಾಗಾಗಿ, ಪಾನ್‌ಕಾರ್ಡ್ ಇಲ್ಲದೇ ಇನ್ನು ಬ್ಯಾಂಕ್ ಕಾರ್ಯ ಬಹಳಷ್ಟು ಕ್ಲಿಷ್ಟಕರವಾಗಿದೆ.!!

ಭಾರತದಲ್ಲಿ ಒಟ್ಟು 25 ಕೋಟಿ ಬಳಕೆದಾರರು ಪಾನ್‌ಕಾರ್ಡ್ ಹೊಂದಿದ್ದು, ಪ್ರಸ್ತುತ ಪಾನ್‌ಕಾರ್ಡ್ ಬಳಕೆ ಮಾಡದೇ ಹೆಚ್ಚು ಹಣ ವ್ಯವಹಾರ ಮಾಡುವ ಗ್ರಾಹಕರ ಮೇಲೆ ಹೆಚ್ಚು ಕಣ್ಣಿಡುವಂತೆ ಎಲ್ಲಾ ಬ್ಯಾಂಕ್‌ಗಳಿಗೂ ನಿರ್ದೇಶನ ನೀಡಿದೆ. ಹೆಚ್ಚು ಹಣ ವಿನಿಮಯ ಮಾಡುವ ಗ್ರಾಹಕರ ಬಗ್ಗೆ ಮಾಹಿತಿ ನೀಡಬೇಕು ಎಂದು ಎಲ್ಲಾ ಬ್ಯಾಂಕ್‌ಗಳಿಗೂ ಆದೇಶ ಹೊರಡಿಸಿದೆ.

ತೆರಿಗೆ ವಂಚಕರಿಗೆ ಖೆಡ್ಡ!..ಪಾನ್‌ಕಾರ್ಡ್ ಇಲ್ಲದೇ ಬ್ಯಾಂಕ್ ವ್ಯವಹಾರ ಕಷ್ಟ!!

'2K' '4K' ಟಿವಿ ಖರೀದಿಸುವ ಮುನ್ನ ಇದನ್ನು ಓದಿ!!

ತೆರಿಗೆ ಇಲಾಖೆ ರೂಪಿಸಿರುವ ಹೊಸ ತಿದ್ದುಪಡಿಯಲ್ಲಿ , ಪಾನ್‌ಕಾರ್ಡ್ ಇಲ್ಲದೇ ಎಷ್ಟು ವ್ಯವಹಾರ ನಡೆಸಬಹುದು ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಪಾನ್‌ಕಾರ್ಡ್ ಇದ್ದು ಸಹ 2 ಲಕ್ಷಕ್ಕಿಂತ ಹೆಚ್ಚು ವ್ಯವಹಾರಕ್ಕೆ ಹೊಸ ತಿದ್ದುಪಡಿಯನ್ನು ತರಲಾಗಿದೆ. ನೋಟು ಅಮಾನ್ಯದ ನಂತರ ಇದೀಗ ಬ್ಯಾಂಕಿಂಗ್ ವ್ಯವಹಾರದ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದ್ದು, ತೆರಿಗೆ ವಂಚಕರನ್ನು ಬಲೆಗೆ ಬೀಳಿಸಲು ಕೆಡ್ಡ ತೋಡಿದಂತಿದೆ.

ತೆರಿಗೆ ವಂಚಕರಿಗೆ ಖೆಡ್ಡ!..ಪಾನ್‌ಕಾರ್ಡ್ ಇಲ್ಲದೇ ಬ್ಯಾಂಕ್ ವ್ಯವಹಾರ ಕಷ್ಟ!!

ಇನ್ನು ಸುರಕ್ಷತಾ ದೃಷ್ಟಿಯಿಂದ ಪಾನ್‌ಕಾರ್ಡ್ ಗುಣಮಟ್ಟತೆಯ ಸುರಕ್ಷತೆಗೆ ಮುಂದಾಗಿರುವ ತೆರಿಗೆ ಇಲಾಖೆ, ಜನವರಿ 1 ರಿಂದ ನ್ಯಾಷಿನಲ್ ಸೆಕ್ಯುರಿಟಿಸ್ ಡೆಪಾಸಿಟರಿ ಸಂಸ್ಥೆಯಿಂದ ತಯಾರಿಸಲ್ಪಟ್ಟಿರುವ ಸಂಪೂರ್ಣ ಸುರಕ್ಷತಾ ಪಾನ್‌ಕಾರ್ಡ್‌ಗಳನ್ನು ವಿತರಿಸುತ್ತಿದೆ. ಹೊಸದಾಗಿ ನೀಡಲಾಗುತ್ತಿರುವ ಪಾನ್‌ಕಾರ್ಡ್ಗಳು ಹೆಚ್ಚು ಸರಕ್ಷತೆ ಮತ್ತು ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿದೆ.

Read more about:
English summary
Central Board of Direct Taxes (CBDT) has amended the income tax rules and instructed all banks to link the PANCARD. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot