ಇಂಟರ್ನೆಟ್‌ನಲ್ಲಿ ಪ್ರಚಾರ ಗಿಟ್ಟಿಸಿಕೊಂಡ ಫೇಕ್ ಸುದ್ದಿಗಳು

By Shwetha
|

ಇತ್ತೀಚೆಗಿನ ಜಮಾನ ಯಾವ ರೀತಿಯಲ್ಲಿ ಬೆಳೆದು ಬಿಟ್ಟಿದೆ ಎಂದರೆ ಸಣ್ಣ ಸುದ್ದಿ ಕೂಡ ರೆಕ್ಕೆಪುಕ್ಕ ಕಟ್ಟಿಕೊಂಡು ದೊಡ್ಡ ಸುದ್ದಿಯಾಗುಂತಹ ಮಟ್ಟಕ್ಕೆ ತಲುಪಿದೆ. ನಾಯಿ ಮನುಷ್ಯನನ್ನು ಕಚ್ಚಿದರೂ ಸುದ್ದಿ, ಮನುಷ್ಯ ನಾಯಿಯನ್ನು ಕಚ್ಚಿದರೂ ಸುದ್ದಿ, ನಂತರ ಅದುವೇ ಇಂಟರ್ನೆಟ್‌ನಲ್ಲಿ ಸುತ್ತಾಡಿ, ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಲೈಕ್ಸ್, ಕಮೆಂಟ್ಸ್ ಗಿಟ್ಟಿಸಿ ಶೇರ್‌ಗೊಂಡು ಹಳತಾಗುತ್ತದೆ. ಅದಾಗ್ಯೂ ಸುದ್ದಿ ಹರಡುವ ಮಾದರಿ ಮಾತ್ರ ಕಾಳ್ಗಿಚ್ಚಿನಂತೆಯೇ ಇದ್ದು ಆ ಸುದ್ದಿ ಸರಿಯೇ ತಪ್ಪೇ ಎಂಬುದನ್ನು ಅವಲೋಕಿಸುವ ವ್ಯವಧಾನ ಕೂಡ ಯಾರಿಗೂ ಇರುವುದಿಲ್ಲ.

ಓದಿರಿ: ಭಾರತದಲ್ಲಿ ಈ ಟೆಕ್ನಾಲಜಿಯಿಂದ 70,000 ಉದ್ಯೋಗಗಳು ಲಾಸ್‌

ಈಗ ಇದೇ ಮಾದರಿಯಲ್ಲಿಯೇ ಸುದ್ದಿಯಾಗಿರುವ ಇಂಟರ್ನೆಟ್‌ನಲ್ಲಿ ವ್ಯಾಪಕ ಪ್ರಚಾರವನ್ನು ಗಿಟ್ಟಿಸಿಕೊಂಡಿರುವ ಸುದ್ದಿಗಳ ಮಾಹಿತಿಯನ್ನು ನಾವು ನೀಡುತ್ತಿದ್ದು ಕೆಳಗಿನ ಸ್ಲೈಡರ್ ನೋಡಿ.

ಫೋಟೋಶಾಪ್ ಇಮೇಜ್

ಫೋಟೋಶಾಪ್ ಇಮೇಜ್

ಇಂಡಿಯನ್ ಪ್ರೆಸ್ ಬ್ಯೂರೋ ವೆಬ್‌ಸೈಟ್‌ನಲ್ಲಿ ಚಿತ್ರವೊಂದನ್ನು ಹಾಕಿದ್ದು ಇದರಲ್ಲಿ ಮೋದಿಯವರು ನೆರೆ ಸಂತ್ರಸ್ತ ಚೆನ್ನೈ ನಗರವನ್ನು ಹೆಲಿಕಾಪ್ಟರ್‌ನಿಂದ ವೀಕ್ಷಿಸುತ್ತಿದ್ದಾರೆ. ಇದೊಂದು ಫೋಟೋಶಾಪ್ ಆದ ಚಿತ್ರವಾಗಿತ್ತು ಮತ್ತು ಟ್ವಿಟ್ಟರ್ ಬಳಕೆದಾರರು ಈ ಚಿತ್ರವನ್ನು ಅಣಕಿಸಿದ್ದು ಮಾತ್ರ ಅಷ್ಟಿಷ್ಟಲ್ಲ. ಚಿತ್ರವನ್ನು ತೆಗೆದುಹಾಕಲಾಗಿತ್ತಾದರೂ ಅದು ವೈರಲ್‌ ಆಗಿತ್ತು.

ಪರಿವರ್ತನೆ

ಪರಿವರ್ತನೆ

ಟಿವಿ ಸೆಲೆಬ್ರಿಟಿ ಬ್ರೂಸ್ ಜೆನ್ನರ್, ಕ್ಯಾಟಲಿನ್ ಜೆನ್ನರ್ ಆಗಿ ಪರಿವರ್ತನೆಗೊಂಡು, ವ್ಯಾನಿಟಿ ಫೇರ್ ಪತ್ರಿಕೆಯ ಮುಖಪುಟದಲ್ಲಿ 'ಕಾಲ್ ಮಿ ಕ್ಯಾಟಲಿನ್' ಎಂಬುದಾಗಿ ಬರೆಯಿಸಿಕೊಂಡಿದ್ದರು ಇದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು ಮತ್ತು ಅವರ ಪರಿವರ್ತನೆಗೆ ಮೆಚ್ಚುಗೆಯೂ ದೊರಕಿತ್ತು.

ದಿರಿಸಿನ ಬಣ್ಣ

ದಿರಿಸಿನ ಬಣ್ಣ

ಈ ದಿರಿಸು ಯಾವ ಬಣ್ಣದ್ದು ಎಂಬುದು ಕೂಡ ಕಾಳ್ಗಿಚ್ಚಿನಂತೆ ಹಬ್ಬಿ ನೋಡುಗರ ಅಭಿಪ್ರಾಯವನ್ನು ಬದಲಾಯಿಸಿಬಿಟ್ಟಿತ್ತು.

ಪ್ಲುಟೋದ ಚಿತ್ರಗಳು

ಪ್ಲುಟೋದ ಚಿತ್ರಗಳು

ನಾಸಾ ಬಿಡುಗಡೆ ಮಾಡಿದ್ದ ಪ್ಲುಟೋದ ಒಂದು ಚಿತ್ರದಲ್ಲಿ ಹೃದಯದ ಆಕಾರ ಕಂಡುಬಂದಿದ್ದರಿಂದಾಗಿ ಇದು ತಾಣದಲ್ಲಿ ಹೆಚ್ಚು ಶೇರ್‌ಗಳನ್ನು ಪಡೆದುಕೊಂಡಿತು.

ಸುದ್ದಿಯಾದ ಕೆನಾಡಿಯನ್ ಪತ್ರಕರ್ತ

ಸುದ್ದಿಯಾದ ಕೆನಾಡಿಯನ್ ಪತ್ರಕರ್ತ

ವರೀಂದರ್ ಜುಬ್ಬಲ್, ಕೆನಡಾದ ಪತ್ರಕರ್ತನಾಗಿದ್ದು, ಸುಸೈಡ್ ವೆಸ್ಟ್ ಅನ್ನು ಧರಿಸಿಕೊಂಡ ಆತನ ಚಿತ್ರ ಸಾಮಾಜಿಕ ತಾಣದಲ್ಲಿ ಭಯವನ್ನು ಸೃಷ್ಟಿಸಿತ್ತು. ಆದರೆ ಮೂಲತಃ ಈ ಚಿತ್ರವನ್ನು ಆನ್‌ಲೈನ್ ಕಿರುಕುಳಕ್ಕಾಗಿ ಈ ಚಿತ್ರವನ್ನು ಫೋಟೋಶಾಪ್ ಮಾಡಿದ್ದರು. ಪ್ಯಾರೀಸ್ ದಾಳಿಯ ನಂತರ ಈ ಚಿತ್ರವನ್ನು ಪೋಸ್ಟ್ ಮಾಡಲಾಗಿತ್ತು. ಜುಬ್ಬಲ್ ಆಗಸ್ಟ್ 2015 ರಂದು ನೈಜ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಅಯ್‌ಲನ್ ಕುರ್ದಿ

ಅಯ್‌ಲನ್ ಕುರ್ದಿ

3 ವರ್ಷದ ಅಯ್‌ಲನ್ ಕುರ್ದಿಯ ಮೃತದೇಹ ಟರ್ಕಿಯ ನದಿದಂಡೆಯಲ್ಲಿ ದೊರಕಿತ್ತು. ಮಾನವೀಯತೆ ದಂಡೆಗೆ ಎಸೆಯಲ್ಪಟ್ಟಿದೆ ಎಂಬುದಾಗಿ ಈ ಚಿತ್ರಕ್ಕೆ ಹ್ಯಾಶ್‌ಟ್ಯಾಗ್ ಹುಟ್ಟಿಕೊಂಡು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿ ಹರಿದಾಡಿತು.

ಕೆಎಫ್‌ಸಿ ಚಿಕನ್‌ನಲ್ಲಿ ಇಲಿ

ಕೆಎಫ್‌ಸಿ ಚಿಕನ್‌ನಲ್ಲಿ ಇಲಿ

ಕೆಎಫ್‌ಸಿ ಚಿಕನ್‌ನಲ್ಲಿ ಇಲಿ ಕಂಡುಬಂದಿದೆ ಎಂಬುದಾಗಿ ಇಂಟರ್ನೆಟ್‌ನಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ನಂತರ ಸ್ವತಃ ಕೆಎಫ್‌ಸಿಯೇ ಇದೊಂದು ಕಟ್ಟುಕಥೆ ಎಂಬುದಾಗಿ ಬಣ್ಣಿಸಿ ಇದೊಂದು ಸುಳ್ಳು ಸುದ್ದಿ ಎಂಬುದಾಗಿ ತಿಳಿಸಿದೆ.

Best Mobiles in India

English summary
Here are the photos that went viral on internet and stayed in our minds.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X