ಮಕ್ಕಳ ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಪೋಷಕರ ಪಾತ್ರವೇನು?..ನಿಮ್ಮದೆಷ್ಟು ತಪ್ಪಿದೆ ಗೊತ್ತಾ?

ತಂತ್ರಜ್ಞಾನವು ಆರೋಗ್ಯಕರವಾಗಿ ಬಳಸಲ್ಪಟ್ಟಾಗ ಮಾತ್ರ ಸಮಾಜದ ಸ್ವಾಸ್ಥ್ಯ ಹೆಚ್ಚುತ್ತದೆ. ಆದರೆ, ಸ್ಮಾರ್ಟ್‌ಫೋನ್ ಬಳಕೆ ಇಂದು ಮಕ್ಕಳನ್ನು ತಪ್ಪುದಾರಿಗೆ ಎಳೆಯುತ್ತಿದ್ದು, ಇದರ ಪರಿಣಾಮಕ್ಕೆ ಪೋಷಕರೆ ನೇರವಾಗಿ ಕಾರಣವಾಗಿದ್ದಾರೆ.!

|

ಕೆಲವೇ ಕೆಲವು ವರ್ಷಗಳ ಹಿಂದಷ್ಟೆ ಕೇವಲ ಕರೆ ಮತ್ತು ಸಂದೇಶ ರವಾನೆಗಷ್ಟೇ ಸೀಮಿತವಾಗಿದ್ದ ಮೊಬೈಲ್‌ ಇಂದು ಬರಿಯ ಈ ಎರಡು ಉದ್ದೇಶಕ್ಕಷ್ಟೇ ಸೀಮಿತವಾಗಿರದೆ ಇಂಟರ್ನೆಟ್, ಕ್ಯಾಮರಾ, ಟಿ.ವಿ, ಸಾಮಾಜಿಕ ಮಾಧ್ಯಮಗಳ ಬಳಕೆಗೆ ಉಪಯೋಗವಾಗಬಲ್ಲ ಸ್ಮಾರ್ಟ್‌ಫೋನ್‌ ಎಂಬ ಹೆಸರಿನ ಸಾಧನವಾಗಿ ಬದಲಾಗಿದೆ.!!

ಆದರೆ, ಇಲ್ಲಿ ಗಂಭೀರವಾದ ಸಂಗತಿಯಂದರೆ ಇಂದು ಐದು ವರ್ಷದ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಮಕ್ಕಳೂ ಮೊಬೈಲಿಗೆ ಅಂಟಿಕೊಂಡಿರುವುದು ಕಾಣಬರುತ್ತಿದೆ. ಇನ್ನು ಹದಿಹರೆಯದ ಮಕ್ಕಳು ಸ್ವಂತ ಮೊಬೈಲನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಸ್ಮಾರ್ಟ್‌ ಅನ್ನು ಸುಲಲಿತವಾಗಿ ಆಪರೇಟ್ ಮಾಡಬಲ್ಲವರಾಗಿರುತ್ತಾರೆ.!!

ತಂತ್ರಜ್ಞಾನವು ಆರೋಗ್ಯಕರವಾಗಿ ಬಳಸಲ್ಪಟ್ಟಾಗ ಮಾತ್ರ ಸಮಾಜದ ಸ್ವಾಸ್ಥ್ಯ ಹೆಚ್ಚುತ್ತದೆ. ಆದರೆ, ಸ್ಮಾರ್ಟ್‌ಫೋನ್ ಬಳಕೆ ಇಂದು ಮಕ್ಕಳನ್ನು ತಪ್ಪುದಾರಿಗೆ ಎಳೆಯುತ್ತಿದ್ದು, ಇದರ ಪರಿಣಾಮಕ್ಕೆ ಪೋಷಕರೆ ನೇರವಾಗಿ ಕಾರಣವಾಗಿದ್ದಾರೆ.! ಹಾಗಾದರೆ, ಮಕ್ಕಳ ಫೋನ್ ಬಳಕೆಯಲ್ಲಿ ಪೋಷಕರ ಪಾತ್ರವೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಮೊಬೈಲ್ ಬಳಕೆ ಕಡಿಮೆಗೊಳಿಸಿ.!!

ಮೊಬೈಲ್ ಬಳಕೆ ಕಡಿಮೆಗೊಳಿಸಿ.!!

ಮಕ್ಕಳು ಹೊಸ ವಿಷಯಗಳ ಬಗೆಗೆ ಕುತೂಹಲ ಹೊಂದಿರುವುದು ಸಾಮಾನ್ಯವಾದ ಸಂಗತಿ. ಇದು ಮೊಬೈಲ್ ಪ್ರಪಂಚದಲ್ಲಿ ಇನ್ನೂ ಹೆಚ್ಚು.! ಹಾಗಾಗಿ, ಮಕ್ಕಳಿಗೆ ಮೊಬೈಲ್ ಬಗೆಗೆ ಮಾಹಿತಿ ನೀಡುವುದಲ್ಲದೆ, ಮಕ್ಕಳಲ್ಲಿ ಮೊಬೈಲ್‌ ಬಳಕೆಯನ್ನು ಕಡಿಮೆಗೊಳಸುವುದು ಸಹ ಪೋಷಕರ ಆದ್ಯ ಕರ್ತವ್ಯವಾಗಿದೆ.!!

ಇಂಟರ್‌ನೆಟ್ ಉಪಯೋಗವಾಗಲಿ.!!

ಇಂಟರ್‌ನೆಟ್ ಉಪಯೋಗವಾಗಲಿ.!!

ಗೂಗಲ್‌, ಯುಟ್ಯೂಬ್, ಮೊಬೈಲ್‌ ಗೇಮ್‌ ಇನ್ನಿತರ ಅಂತರ್ಜಾಲಗಳ ಬಳಕೆ ಮಕ್ಕಳಲ್ಲಿ ಜ್ಞಾನಾಭಿವೃದ್ಧಿಯನ್ನು ಮಾಡಬೇಕೇ ವಿನಾ ಅವರನ್ನು ತಪ್ಪು ದಾರಿಗೆ ಎಳೆಯುವಂತಾಗಬಾರದು. ಆದರೆ, ಮಕ್ಕಳು ಇಂಟರ್‌ನೆಟ್‌ನಲ್ಲಿ ಬೇಡದ ಸಂಗತಿಗಳೆಡೆಗೆ ಬೇಗ ಸೆಳೆಯಲ್ಪಡುವುದರಿಂದ ಅವರ ಇಂಟರ್‌ನೆಟ್ ಬಳಕೆ ಮೇಲೆ ನಿಗಾವಹಿಸುವುದು ಉತ್ತಮ!!

ರೇಡಿಯೇಶನ್ ತೊಂದರೆಗೆ ತುತ್ತಾಗುತ್ತಿದ್ದಾರೆ.!!

ರೇಡಿಯೇಶನ್ ತೊಂದರೆಗೆ ತುತ್ತಾಗುತ್ತಿದ್ದಾರೆ.!!

ಕೆಲವು ಅಧ್ಯಯನಗಳ ಪ್ರಕಾರ ಮೊಬೈಲುಗಳಿಂದ ಹೊರಹೊಮ್ಮುವ ರೇಡಿಯೇಶನ್‌ ಮಕ್ಕಳ ಮೆದುಳಿನಲ್ಲಿ ವಯಸ್ಕ ಮೆದುಳಿಗೆ ಹೋಲಿಸಿದಾಗ ಶೇ.60ರಷ್ಟು ಬೇಗ ಗ್ರಹಿಸಲ್ಪಡುತ್ತದೆ ಎನ್ನಲಾಗಿದೆ. ಅಂದರೆ ಮಕ್ಕಳ ಮೆದುಳು ಸೂಕ್ಮವಾಗಿದ್ದು, ಅತಿಯಾದ ಮೊಬೈಲ್‌ ಬಳಕೆ ಕೇವಲ ದೇಹಾರೋಗ್ಯವನ್ನು ಹಾಳುಗೆಡಹುವುದಲ್ಲದೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತವೆ.

ದೈಹಿಕ ಆಟಗಳಿಗೆ ಉತ್ತೇಜಿಸಿ.!!

ದೈಹಿಕ ಆಟಗಳಿಗೆ ಉತ್ತೇಜಿಸಿ.!!

ಮೊದಲು ಮಕ್ಕಳು ಆಟವಾಡುವುದನ್ನು ಬಿಟ್ಟು ಮನೆಗೆ ಬಂದರೆ ಸಾಕು ಎನ್ನುತ್ತಿದ್ದ ಪೋಷಕರು ಈಗ ಮಕ್ಕಳು ಹೊರಗೆ ಆಟವಾಡಲು ತೆರಳುವುದಿಲ್ಲ ಎಂದು ಚಿಂತಿಸುತ್ತಿದ್ದಾರೆ. ಹಾಗಾಗಿ, ಮಕ್ಕಳನ್ನು ದೈಹಿಕ ಆಟಗಳಿಗೆ ಹೆಚ್ಚು ಉತ್ತೇಜಿಸಿ. ಓದು, ಸಂಗೀತ, ಸಾಹಿತ್ಯ, ಚಿತ್ರಕಲೆ ಮೊದಲಾದ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸಿ.!!

ನಿಮ್ಮ ಮೊಬೈಲ್ ಬಳಕೆಯಲ್ಲಿ ನಿಯಂತ್ರಣವಿರಲಿ!!

ನಿಮ್ಮ ಮೊಬೈಲ್ ಬಳಕೆಯಲ್ಲಿ ನಿಯಂತ್ರಣವಿರಲಿ!!

ತಂದೆ ತಾಯಿಯರ ನಡತೆಗಳನ್ನು ಮಕ್ಕಳು ಹಿಂಬಾಲಿಸುವುದು ಸಾಮಾನ್ಯ. ಹಾಗಾಗಿ, ಮಕ್ಕಳ ಮುಂದೆ ಮೊಬೈಲುಗಳಲ್ಲಿ ಯುಟ್ಯೂಬ್, ಗೂಗಲ್‌ ಇನ್ನಿತರ ವೀಡಿಯೋ ಆಕರಗಳನ್ನು ಬಳಸದಿರುವುದು ಒಳ್ಳೆಯದು ಮತ್ತು ಅವುಗಳನ್ನು ಅವರಿಗೆ ಪರಿಚಯಿಸದಿರುವುದು ಸೂಕ್ತವಾದುದು ಎನ್ನಬಹುದು.!!

ಶಿಯೋಮಿಯಿಂದ ಮತ್ತೊಂದು ಬಂಪರ್ ಆಫರ್!!...ಗೊತ್ತಾದ್ರೆ ಈಗಲೇ ಫೋನ್ ಖರೀದಿಸ್ತೀರಾ!!ಶಿಯೋಮಿಯಿಂದ ಮತ್ತೊಂದು ಬಂಪರ್ ಆಫರ್!!...ಗೊತ್ತಾದ್ರೆ ಈಗಲೇ ಫೋನ್ ಖರೀದಿಸ್ತೀರಾ!!

Best Mobiles in India

English summary
I’ll admit it. I’m a dinosaur among my friends because I won’t get my kids a cell phone.to know more visit. to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X