Subscribe to Gizbot

ಮಾನವನ ಮೆದುಳು ರೊಬೋಟ್ ದೇಹ: ಮರಣ ನಮ್ಮ ಕಾಲಡಿಯಲ್ಲಿ

Written By:

ಇಂದಿನ ವೈಜ್ಞಾನಿಕ ಯುಗದಲ್ಲಿ ಏನೆಲ್ಲಾ ಸಾಧಿಸಲು ಸಾಧ್ಯ ಅಲ್ಲವೇ? ಸಾಧಿಸುವ ಸಾಮರ್ಥ್ಯ ನಮ್ಮಲ್ಲಿದ್ದರೆ ಸಾಕು ನಾವು ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂದಿನ ಲೇಖನ ಸಾಕ್ಷಿಯಾಗಲಿದೆ. ರಷ್ಯಾದ ಬಿಲಯನೇರ್ ಡಿಮಿಟ್ರಿ ಇಟ್ಸ್‌ಕೋವ್ ಮಾನವನ ಪ್ರಜ್ಞೆಯನ್ನು ಕಂಪ್ಯೂಟರ್‌ಗೆ ಮಿಶ್ರಮಾಡುವ ಅನೂಹ್ಯ ಅನ್ವೇಷಣೆಗೆ ತಮ್ಮನ್ನು ತೊಡಗಿಸಿಕೊಂಡಿದ್ದು ತಾನು ಸತ್ತರೂ ತನ್ನ ಮೆದುಳು ಕಾರ್ಯನಿರ್ವಹಿಸುವ ವಿಚಿತ್ರ ಸಂಶೋಧನೆ ಇದಾಗಿದ್ದು ಇದಕ್ಕೆ ಸೈಬರ್ ನಾಟಿಕ್ ಇಮ್ಮೊರ್ಟಾಲಿಟಿ ಎಂಬ ಹೆಸರನ್ನು ನೀಡಿದ್ದಾನೆ.

ಇಂಟರ್ನೆಟ್ ಮೀಡಿಯಾದಲ್ಲಿ ಹೆಸರನ್ನು ಗಳಿಸಿಕೊಂಡ ನಂತರ ಡಿಮಿಟ್ರಿ 2045 ಆರಂಭವನ್ನು ಪ್ರಾರಂಭಿಸಿದ್ದು ವಿಜ್ಞಾನಿಗಳ ಜತೆಗೂಡಿ ಸೈಬರ್ ನಾಟಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕೆಲಸದಲ್ಲಿ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಡಿಮಟ್ರಿಯ ಈ ಅನೂಹ್ಯ ಸಾಧನೆಯನ್ನು ಕುರಿತು ಮತ್ತಷ್ಟು ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮರಣದ ನಂತರವೂ ಜೀವಿಸುವ ಹೊಸ ಸಾಧನೆ

#1

35 ರ ಹರೆಯದ ಡಿಮಿಟ್ರಿ ಮರಣದ ನಂತರವೂ ಜೀವಿಸುವ ಹೊಸ ಸಾಧನೆಯತ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಂಪ್ಯೂಟರ್‌ಗೆ ತನ್ನ ಪ್ರಜ್ಞೆಯನ್ನು ಅಪ್‌ಲೋಡ್ ಮಾಡುವ ಮೂಲಕ ಮಾನವ ರೊಬೋಟ್‌ನಂತೆ ಜೀವಿಸುವ ಬಯಕೆ ಈ ಅನ್ವೇಷಣೆಯಲ್ಲಿ ಅಡಗಿದೆ.

'ದ ಇಮ್ಮರ್ಟಲಿಸ್ಟ್'

#2

ಬಿಬಿಸಿ ಹಾರಿಜಾನ್ ಡಾಕ್ಯುಮೆಂಟರಿ 'ದ ಇಮ್ಮರ್ಟಲಿಸ್ಟ್' ನಿಂದ ಇವರು ಪ್ರಭಾವಿತಗೊಂಡು ಈ ಸಾಧನೆಗೆ ತೊಡಗಿಸಿಕೊಂಡಿದ್ದು ಮುಂದಿನ 30 ವರ್ಷಗಳಲ್ಲಿ ನಾವು ಸದಾ ಕಾಲ ಜೀವಂತವಾಗುವ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಇದು ಸಾಧ್ಯ ಎಂಬುದಾಗಿ 100% ಖಾತ್ರಿಯನ್ನು ನಾನು ನೀಡುತ್ತೇನೆ ಎಂಬುದು ಡಿಮಿಟ್ರಿ ಮಾತಾಗಿದೆ.

ಮನಸ್ಸಿನ ಮೂಲಕ ಈ ರೊಬೋಟ್‌ಗಳ ಮೇಲೆ ನಿಯಂತ್ರಣ

#3

ಅವರ 2045 ವೆಬ್‌ಸೈಟ್ ಪ್ರಕಾರ 2020 ರಲ್ಲಿ ಅವತಾರಗಳು ಆವಿಷ್ಕರಿಸಲಿವೆ. ಮನಸ್ಸಿನ ಮೂಲಕ ಈ ರೊಬೋಟ್‌ಗಳ ಮೇಲೆ ನಿಯಂತ್ರಣವನ್ನು ಮಾಡಿಕೊಂಡು ಬ್ರೈನ ಕಂಪ್ಯೂಟರ್ ಇಂಟರ್ ಫೇಸ್ ಮೂಲಕ ಬಳಕೆದಾರರ ಮೆದುಳಿನ ಮೇಲೆ ಪ್ರತಕ್ರಿಯೆಯನ್ನು ಪ್ರಸಾರ ಮಾಡಲಾಗುತ್ತದೆ.

ಕಸಿ ಮಾಡಿದ ಮಾನವ ಮೆದುಳು

#4

ಸರಿಸುಮಾರು ಐದು ವರ್ಷಗಳ ನಂತರ, ಕಸಿ ಮಾಡಿದ ಮಾನವ ಮೆದುಳಿನೊಂದಿಗೆ ರೊಬೋಟ್‌ಗಳು ಕಾರ್ಯಪ್ರವೃತ್ತಗೊಳ್ಳಲಿವೆ.

ಕೃತಕ ಮೆದುಳು

#5

2035 ಕ್ಕೆ ಕೃತಕ ಮೆದುಳಿನೊಂದಿಗೆ ರೊಬೋಟ್‌ಗಳು ಮಾನವ ವ್ಯಕ್ತಿತ್ವವು ಪ್ರವೃತ್ತರಾದಾಗ 2045 ಹೋಲೋಗ್ರಾಮ್ ಮೂಲಕ ಇವರನ್ನು ಅನುಸರಣೆ ಮಾಡಲಾಗುತ್ತದೆ.

ಅನ್ವೇಷಣೆಗಳು ಇನ್ನೂ ಪ್ರಕ್ರಿಯೆಯಲ್ಲಿದೆ

#6

ಈ ಅನ್ವೇಷಣೆಗಳು ಇನ್ನೂ ಪ್ರಕ್ರಿಯೆಗೊಳ್ಳುತ್ತಿದ್ದು ಯಾವುದೇ ಸಂಶೋಧನೆಗಳನ್ನು ಇನ್ನೂ ನಡೆಸಿಲ್ಲ.

100 ಶೇಕಡಾ ಯಶಸ್ಸು

#7

ಆದರೆ ವಿಜ್ಞಾನ ಲೋಕವು ಈ ಅನ್ವೇಷಣೆ 100 ಶೇಕಡಾ ಯಶಸ್ಸನ್ನು ಗಳಿಸಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿದೆ.

ಇನ್ನಷ್ಟು ಕಾಲ ಬದುಕಬೇಕೆಂಬ ಆಸೆ

#8

ಅದಾಗ್ಯೂ ಈ ಸಂಶೋಧನೆಯಿಂದ ಇನ್ನಷ್ಟು ಕಾಲ ಬದುಕಬೇಕೆಂಬ ಆಸೆ ಇರುವವರಿಗೆ ಮಾತ್ರ ಪ್ರಯೋಜನವಾಗಲಿದೆ.

2045 ಇನ್‌ಶಿಯೇಟೀವ್

#9

2045 ಇನ್‌ಶಿಯೇಟೀವ್ ಎಂಬ ಹೆಸರನ್ನು ಈ ಯೋಜನೆಗೆ ಡಿಮಿಟ್ರಿ ನೀಡಿದ್ದಾರೆ. ರೊಬೋಟ್‌ಗಳಳೊಗೆ ಮಾನವನ ಮೆದುಳನ್ನು ಅಪ್‌ಲೋಡ್ ಮಾಡುವ ಮೂಲಕ ಮರಣದ ನಂತರ ಬದುಕುವ ವ್ಯವಸ್ಥೆ ಇದಾಗಿದೆ.

ಆಂಡ್ರಾಯ್ಡ್ ರಚಿಸಿ

#10

ನರವಿಜ್ಞಾನಿಗಳು, ರೊಬೋಟ್ ತಯಾರಕರು ಮತ್ತು ಪ್ರಜ್ಞೆ ಸಂಶೋಧಕರು ಹೇಳುವಂತೆ ಆಂಡ್ರಾಯ್ಡ್ ಅನ್ನು ರಚಿಸಿ ಬೇರೆಯವರ ವ್ಯಕ್ತಿತ್ವವನ್ನು ಇದರಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದಾಗಿದೆ.

ಸ್ಟೋರ್ ಮಾಡಿಡಬಹುದಾದ ಸಾಮರ್ಥ್ಯ

#11

ರೊಬೋಟ್‌ಗಳು ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳನ್ನು ಕಂಪ್ಯೂಟರ್‌ನಂತೆಯೇ ಸ್ಟೋರ್ ಮಾಡಿಡಬಹುದಾದ ಸಾಮರ್ಥ್ಯವನ್ನು ಪಡೆದುಕೊಂಡಿವೆ ಎಂದಾಗಿದೆ.

ಮಾನವನ ಮೆದುಳಿನ ಡಿಜಿಟಲ್ ಆವೃತ್ತಿ

#12

ಆಂಡ್ರಾಯ್ಡ್‌ಗೆ ಮಾನವನ ಮೆದುಳಿನ ಡಿಜಿಟಲ್ ಆವೃತ್ತಿಯನ್ನು ಅಪ್‌ಲೋಡ್ ಮಾಡುವ ಕಾರ್ಯವನ್ನು ಇವು ಮಾಡಬಹುದಾಗಿದ್ದು ವ್ಯಕ್ತಿಯ ಮೆದುಳನ್ನು ಯಶಸ್ವಿಯಾಗಿ ರೀಬೂಟ್ ಮಾಡಬಹುದಾಗಿದೆ. ರೊಬೋಟಿಕ್ ನಕಲಿಯಲ್ಲಿ ಮಾನವನ ದೇಹವನ್ನು ಕಂಡುಕೊಳ್ಳುವ ಅನ್ವೇಷಣೆ ಇದಾಗಿದ್ದು, ಈ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ ನಂತರ, ಹೋಲೋಗ್ರಾಮ್ ಮಾನವ ವ್ಯಕ್ತಿತ್ವವನ್ನು ಹಿಂಬಾಲಿಸಲಿದೆ.

ಮನಸ್ಸಿನಿಂದ ನಿಯಂತ್ರಿತವಾಗಿರುವ ರೊಬೋಟ್

#13

ಯೋಜನೆಯ ಪ್ರಥಮ ಹಂತವೇ ಮನಸ್ಸಿನಿಂದ ನಿಯಂತ್ರಿತವಾಗಿರುವ ರೊಬೋಟ್ ಅನ್ನು ರಚಿಸುವುದಾಗಿದೆ. ಡಾಕ್ಯುಮೆಂಟ್ರಿ ತಯಾರಕರು ಕ್ಯಾಲಿಫೋರ್ನಿಯಾಗೆ ಪ್ರಯಾಣ ಬೆಳೆಸಿದ್ದು, ಇಲ್ಲಿ ರೊಬೋಟ್ ಕೈಯನ್ನು ತನ್ನ ಆಲೋಚನೆಗಳಿಂದ ನಿಯಂತ್ರಿಸುವ ಎರಿಕ್ ಸೋರ್ಟೊ ಹೆಸರಿನ ಕ್ಯಾಲಿಫೋರ್ನಿಯಾ ವ್ಯಕ್ತಿ ದೊರಕಿದ್ದಾನೆ.

ಹೊಸ ಕೃತಕ ಜೀವಿಯೊಳಗೆ ಅಳವಡಿಸುವುದಾಗಿದೆ

#14

ಈ ಯೋಜನೆಯ ಮುಖ್ಯ ಉದ್ದೇಶ ವ್ಯಕ್ತಿಯ ವ್ಯಕ್ತಿತ್ವವನ್ನು ಹೊಸ ಕೃತಕ ಜೀವಿಯೊಳಗೆ ಅಳವಡಿಸುವುದಾಗಿದೆ ಎಂಬುದಾಗಿ ಯೋಜನೆಗೆ ಹಣ ಹೂಡುತ್ತಿರುವ ಬಿಲಿಯಾಧಿಪತಿ ಡಿಮಿಟ್ರಿ ನುಡಿದಿದ್ದಾರೆ.

ವ್ಯಕ್ತಿತ್ವ ವರ್ಗಾವಣೆ

#15

ಮನಸ್ಸಿನ ವರ್ಗಾವಣೆ ಅಥವಾ ಅಪ್‌ಲೋಡಿಂಗ್ ಮುಂತಾಗಿ ಬೇರೆ ಬೇರೆ ವಿಜ್ಞಾನಿಗಳು ಕರೆದರೂ ನಾನು ಮಾತ್ರ ಇದನ್ನು ವ್ಯಕ್ತಿತ್ವ ವರ್ಗಾವಣೆಯೆಂದೇ ಕರೆಯುತ್ತೇನೆ ಎಂಬುದು ಡಿಮಿಟ್ರಿ ಮಾತಾಗಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಪ್ರಾಣಿಗಳ ಧ್ವನಿ ಕಲಿಸಲು ಹೊಸ ಫೀಚರ್‌ ಬಿಡುಗಡೆ ಮಾಡಿದ ಗೂಗಲ್‌
ಕಾಣೆಯಾದ ಶೇಕ್ಸ್‌ಪಿಯರ್‌ ತಲೆಬುರುಡೆ: ಪತ್ತೆ ಮಾಡಿದ ತಂತ್ರಜ್ಞಾನ
ಭೂಮಿಗೆ ಭೇಟಿ ಕೊಟ್ಟ ಏಲಿಯನ್‌ಗಳ ಮರಣ ರಹಸ್ಯ
ಕಾಲ್ಪನಿಕ ವಿಜ್ಞಾನದಿಂದ ಸಂಶೋಧನೆಗೊಂಡ ಪ್ರಖ್ಯಾತ ಟೆಕ್ನಾಲಜಿಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಲೇಖನಗಳಿಗೆ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Russian billionaire Dmitry Itskov has ambitious plans that involve the blending of human consciousness into a computer.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot