ಹಬ್ಬದ ಸೀಸನ್‌ನಲ್ಲಿ ಆನ್‌ಲೈನ್‌ ಶಾಪಿಂಗ್ ಮೊದಲು ಓದಿಕೊಳ್ಳಬೇಕಾದ ಮಾಹಿತಿಗಳು!

By Suneel
|

ದಿಪಾವಳಿ ಮತ್ತು ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಆನ್‌ಲೈನ್‌ ರೀಟೇಲ್‌ ಸ್ಟೋರ್‌ಗಳು ಹಲವು ರೀತಿಯ ಆಫರ್‌ಗಳೊಂದಿಗೆ ಗ್ರಾಹಕರನ್ನು ಖರೀದಿಗಾಗಿ ಆಕರ್ಷಣೆ ಮಾಡುವುದು ಈಗಾಗಲೇ ಪ್ರಾರಂಭವಾಗಿದೆ. ಆಫರ್‌ಗಳು ಸ್ಮಾರ್ಟ್‌ಫೋನ್, ಹೋಮ್ ಆಕ್ಸೇಸೀರೀಸ್‌ಗಳು, ಬಟ್ಟೆಗಳು, ಇತರೆ ಎಲ್ಲಾ ವಸ್ತುಗಳ ಖರೀದಿಗೆ ಆಕರ್ಷಕ ರಿಯಾಯಿತಿ ನೀಡುವುದಾಗಿಯೂ ಜಾಹಿರಾತುಗಳು ಪ್ರದರ್ಶನವಾಗುತ್ತಿರುತ್ತವೆ. ಆದರೆ ಇವುಗಳನ್ನೆಲ್ಲಾ ನಂಬುವುದು ಒಳ್ಳೆಯದಲ್ಲಾ.

ಕೆಲವು ಸ್ಮಾರ್ಟ್‌ ಶಾಪರ್‌ಗಳು ಆನ್‌ಲೈನ್‌ ಖರೀದಿ ಮಾಡುವಾಗ ಹಲವು ರೀತಿಯ ತಂತ್ರಗಳನ್ನು ಬಳಸುತ್ತಾರೆ. ಇದರಿಂದ ಶೇ.25 ರಷ್ಟು ಹಣವನ್ನು ಪ್ರತಿ ಪ್ರಾಡಕ್ಟ್ ಖರೀದಿಯಲ್ಲೂ ಸಹ ಉಳಿಸಬಹುದು. ಅಂದಹಾಗೆ ಇಂತಹ ತಂತ್ರಗಳ ಬಗ್ಗೆ ಬಹುಸಂಖ್ಯಾತ ಆನ್‌ಲೈನ್‌ ಖರೀದಿದಾರರಿಗೆ ತಿಳಿದಿರುವುದಿಲ್ಲ. ಆನ್‌ಲೈನ್‌ ರೀಟೇಲ್‌ ಸ್ಟೋರ್‌ಗಳಲ್ಲಿ ಖರೀದಿ ಮಾಡುವ ಮುನ್ನ ಫಾಲೋ ಮಾಡಲೇಬೇಕಾದ ತಂತ್ರಗಳನ್ನು ನಾವು ನಿಮಗೆ ಪರಿಚಯಿಸುತ್ತಿದ್ದು, ಈ ತಂತ್ರಗಳನ್ನು ಫಾಲೋ ಮಾಡಿ ಪ್ರತಿ ಪ್ರಾಡಕ್ಟ್ ಖರೀದಿಯಲ್ಲು ಶೇ.25 ರಷ್ಟು ಹಣ ಉಳಿಸಿ.

ದಿಪಾವಳಿ, ನವರಾತ್ರಿ ಅಮೆಜಾನ್‌ ಆಫರ್: ವಿಂಡೋಸ್‌ ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ಶೇ.40 ರಿಯಾಯ್ತಿ

ಡೆಸ್ಕ್‌ಟಾಪ್‌ ಮೂಲಕ ಖರೀದಿ

ಡೆಸ್ಕ್‌ಟಾಪ್‌ ಮೂಲಕ ಖರೀದಿ

ಮೊಬೈಲ್‌ ಶಾಪಿಂಗ್‌ ಆಪ್‌ಗಳಿಂದ ಖರೀದಿ ಮಾಡುವುದು ಸಮಸ್ಯೆಯ ಕೆಲಸ. ಡೆಸ್ಕ್‌ಟಾಪ್‌ ಮೂಲಕ ಆನ್‌ಲೈನ್ ಶಾಪಿಂಗ್‌ ಮಾಡುವುದು ಎಂದಿಗೂ ಅನುಕೂಲಕರ ಮತ್ತು ಸುಲಭವಾಗಿದೆ. ಡೆಸ್ಕ್‌ಟಾಪ್‌ನಲ್ಲಿ ಪರಿಶೀಲನೆ ಮತ್ತು ಮರು ಪರಿಶೀಲನೆಯನ್ನು ಒಂದು ಪ್ರಾಡಕ್ಟ್‌ ಬಗ್ಗೆ ಮಾಡಬಹುದು.

ಖರೀದಿದಾರರು ಒಂದು ಪ್ರಾಡಕ್ಟ್‌ನ ಉತ್ತಮ ಫೋಟೋವನ್ನು ನೋಡಬಹುದು, ಅಲ್ಲದೇ ಇತರೆ ಆನ್‌ಲೈನ್ ಸ್ಟೋರ್‌ಗಳಲ್ಲಿ ಪ್ರಾಡಕ್ಟ್‌ ಖರೀದಿ ಬೆಲೆಯನ್ನು ಹೋಲಿಕೆ ಮಾಡಿ ನೋಡಬಹುದು.

ಖರೀದಿ ಬೆಲೆಯನ್ನು ಇತರೆ ಸ್ಟೊರ್‌ಗಳಿಗೆ ಹೋಲಿಸಿ ನೋಡಿ

ಖರೀದಿ ಬೆಲೆಯನ್ನು ಇತರೆ ಸ್ಟೊರ್‌ಗಳಿಗೆ ಹೋಲಿಸಿ ನೋಡಿ

ಡೆಸ್ಕ್‌ಟಾಪ್‌ ಬಳಕೆದಾರರು ಶಾಪಿಂಗ್‌ ಸೇಲ್ ಕ್ರೋಮ್‌ ವಿಸ್ತರಣೆಯನ್ನು Buyback ನಿಂದ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು. ಈ ಟೂಲ್‌ನಿಂದ ಯಾವುದೇ ಪ್ರಾಡಕ್ಟ್‌ನ ಖರೀದಿ ಬೆಲೆಯನ್ನು ಇತರೆ ಇ-ಕಾಮರ್ಸ್ ಸ್ಟೋರ್‌ಗಳಿಗೆ ಹೋಲಿಕೆ ಮಾಡಿ ನೋಡಬಹುದು. ಅಲ್ಲದೇ ಉತ್ತಮ ಬೆಲೆ, ಕೂಪನ್‌ ಮತ್ತು ಆಫರ್‌ ಅನ್ನು ಪ್ರಾಡಕ್ಟ್‌ ಸಂಬಂಧಪಟ್ಟಂತೆ ತಿಳಿದು ಖರೀದಿಸಬಹುದು

ಶಾಪಿಂಗ್ ಸೇಲ್ ಕ್ರೋಮ್‌ ವಿಸ್ತರಣೆಯು ಪ್ರಾಡಕ್ಟ್‌ ಖರೀದಿದಾರರಿಗೆ, ಖರೀದಿ ಬೆಲೆ ಕುಸಿತದ ಅಪ್‌ಡೇಟ್‌ ಅನ್ನು ನೀಡುತ್ತದೆ. ಅವರ ನೆಚ್ಚಿನ ಪ್ರಾಡಕ್ಟ್‌ ಬೆಲೆ ಅಲರ್ಟ್ ನೀಡುತ್ತದೆ.

 ಪ್ರಾಡಕ್ಟ್‌ ಖರೀದಿ ಮುನ್ನ ವಿವಿಧ ಸ್ಟೋರ್‌ಗಳನ್ನು ಚೆಕ್‌ ಮಾಡಿ

ಪ್ರಾಡಕ್ಟ್‌ ಖರೀದಿ ಮುನ್ನ ವಿವಿಧ ಸ್ಟೋರ್‌ಗಳನ್ನು ಚೆಕ್‌ ಮಾಡಿ

ಯಾವುದೇ ಒಂದು ಪ್ರಾಡಕ್ಟ್‌ ಖರೀದಿಗೆ ಮುನ್ನ ಆನ್‌ಲೈನ್‌ ಶಾಪಿಂಗ್‌ ಮಾಡುವವರು, ಮಿಸ್‌ ಮಾಡದೇ ವಿವಿಧ ಇ-ಕಾಮರ್ಸ್ ಸೈಟ್‌ಗಳಲ್ಲಿ ಬೆಲೆಯನ್ನು ಚೆಕ್‌ ಮಾಡಬೇಕು. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಪ್ರಾಡಕ್ಟ್ ಬೆಲೆ ಅಮೆಜಾನ್‌ನಲ್ಲಿ ಹೆಚ್ಚಾಗಿರಬಹುದು.

ಬೆಟರ್ ಡೀಲ್ಸ್ ಮತ್ತು ಬೆಟರ್ ಬೆಲೆಯಲ್ಲಿ ಪ್ರಾಡಕ್ಟ್‌ ಖರೀದಿಸಲು ವಿವಿಧ ಆನ್‌ಲೈನ್‌ ರೀಟೇಲ್ ಸ್ಟೋರ್‌ಗಳನ್ನು ಚೆಕ್‌ ಮಾಡುವುದು ಉತ್ತಮ.

ಡಿಸ್ಕೌಂಟ್‌ನಿಂದ ಹೆಚ್ಚು ಆಕರ್ಷಿತರಾಗದಿರಿ !

ಡಿಸ್ಕೌಂಟ್‌ನಿಂದ ಹೆಚ್ಚು ಆಕರ್ಷಿತರಾಗದಿರಿ !

ಶೇ.70 ಮತ್ತು ಶೇ.80 ರಷ್ಟು ಡಿಸ್ಕೌಂಟ್ ಸ್ಕೀಮ್‌ಗಳು ಇಂದು ಸಾಮಾನ್ಯವಾಗಿವೆ. ಈ ಡಿಸ್ಕೌಂಟ್ ಪ್ರದರ್ಶನಗಳಿಗೆ ಆಕರ್ಷಿತರಾಗುವುದು ದಡ್ಡತನ. ಕಾರಣ ಆನ್‌ಲೈನ್ ಶಾಪಿಂಗ್‌ ಸ್ಟೋರ್‌ಗಳು ಬೆಲೆಯನ್ನು ಹೆಚ್ಚಿಸಿ, ಡಿಸ್ಕೌಂಟ್‌ ಅನ್ನು ನೀಡಿರುತ್ತವೆ. ಆದ್ದರಿಂದ ಪ್ರಾಯೋಗಿಕವಾಗಿ ಬೆಲೆಯನ್ನು ಇತರೆ ಸೈಟ್‌ಗಳಲ್ಲಿಯೂ ಚೆಕ್‌ ಮಾಡುವುದು ಉತ್ತಮ.

ಅಂತಿಮ ಖರೀದಿಗೆ ಮುನ್ನ ಎಲ್ಲಾ ಡೀಲ್ಸ್‌ಗಳನ್ನು ಚೆಕ್‌ ಮಾಡಿ

ಅಂತಿಮ ಖರೀದಿಗೆ ಮುನ್ನ ಎಲ್ಲಾ ಡೀಲ್ಸ್‌ಗಳನ್ನು ಚೆಕ್‌ ಮಾಡಿ

ಆನ್‌ಲೈನ್‌ ಖರೀದಿದಾರರು ಖರೀದಿಗೆ ಮುನ್ನ ಪ್ರಾಡಕ್ಟ್‌ನ ಇತರೆ ಡೀಲ್‌ಗಳನ್ನು ಮಿಸ್‌ ಮಾಡದೇ ಎರಡೂ ಬಾರಿ ಚೆಕ್‌ ಮಾಡುವುದು ಒಳ್ಳೆಯದು. ಕಾರಣ ಅದೇ ವರ್ಗದಲ್ಲಿ ಹೆಚ್ಚಿನ ಬೆಲೆ ಕುಸಿತವಾಗಿರುವ ಸನ್ನಿವೇಶಗಳು ಇರುತ್ತವೆ.

Best Mobiles in India

Read more about:
English summary
Save Money With These Simple Online Shopping Tricks. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X