Subscribe to Gizbot

ಎಸ್‌ಬಿಐ ಬ್ಯಾಂಕ್‌ನ ನೂತನ ನಿಯಮಗಳು ಯಾವುವು? ಹೇಗೆ ವ್ಯವಹಾರ?

Written By:

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ವ್ಯವಹಾರಕ್ಕೆ ಹಲವು ನೂತನ ನಿಯಮಗಳನ್ನು ಜಾರಿಗೆ ತಂದಿದೆ. ನೋಟು ರದ್ದಾದ ನಂತರ ಸಾರ್ವಜನಿಕ ಬ್ಯಾಂಕ್ ವ್ಯವಹಾರದಲ್ಲಿ ಮೊದಲ ಸಾರಿ ಇಷ್ಟೊಂದು ದೊಡ್ಡ ಬದಲಾವಣೆಯಾಗಿದ್ದು, ನಾಗರಿಕರು ಈ ಬಗ್ಗೆ ತಿಳಿಯಬೇಕಿದೆ.!

ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಏಪ್ರಿಲ್ 1ರಿಂದ ದಂಡ ಹೇರುವ ಪ್ರಕ್ರಿಯೆಯನ್ನು ಮತ್ತೆ ಜಾರಿಗೆ ತರಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸಿದೆ. ಹಣವನ್ನು ತಿಂಗಳಲ್ಲಿ ಮೂರು ಸಲದವರೆಗೆ ಯಾವುದೇ ಶುಲ್ಕವಿಲ್ಲದೆ ಠೇವಣಿಯಿಡಲು ಅವಕಾಶ ನೀಡಲಾಗಿದ್ದು, ಅದಕ್ಕಿಂತ ಹೆಚ್ಚಿನ ಸಾರಿ ಠೇವಣಿಯಿಟ್ಟರೆ 50 ರೂಪಾಯಿ ಹಾಗೂ ಸೇವಾ ಶುಲ್ಕವನ್ನು ವಿಧಿಸಲಿದೆ.

ಎಸ್‌ಬಿಐ ಬ್ಯಾಂಕ್‌ನ ನೂತನ ನಿಯಮಗಳು ಯಾವುವು? ಹೇಗೆ ವ್ಯವಹಾರ?

ನಿಮ್ಮ ಜಿ-ಮೇಲ್ ಮಾಹಿತಿ ಸಹ ಹ್ಯಾಕ್ ಆಗಿರಬಹುದು!..ಸುರಕ್ಷಿತವಾಗಿಲ್ಲ!!

ತಿಂಗಳ ಸರಾಸರಿ ಕನಿಷ್ಠ ಹಣವು ಖಾತೆಯಲ್ಲಿ ಇಲ್ಲದಿದ್ದರೆ 100ರೂಪಾಯಿ ಹಾಗೂ ಸೇವಾ ಶುಲ್ಕವನ್ನು ದಂಡವಾಗಿ ಕಟ್ಟಬೇಕಾಗುತ್ತದೆ.ಮೆಟ್ರೊಪಾಲಿಟನ್ ನಗರಗಳಲ್ಲಿ ಸರಾಸರಿ ಕನಿಷ್ಠ ಠೇವಣಿ ಶೇಕಡಾ 75 ಕ್ಕಿಂತ ಕಡಿಮೆಯಿದ್ದರೆ ದಂಡದ ಮೊತ್ತ 100 ರೂಪಾಯಿಯಿಂದ 5,000ದವರೆಗೆ ಏರಿಕೆಯಾಗುತ್ತದೆ. ಶೇಕಡಾ 50ಕ್ಕಿಂತ ಕಡಿಮೆಯಿದ್ದರೆ ಬ್ಯಾಂಕು 50ರೂಪಾಯಿ ಮತ್ತು ಸೇವಾ ಶುಲ್ಕವನ್ನು ಹೇರುತ್ತದೆ.!!

ಎಸ್‌ಬಿಐ ಬ್ಯಾಂಕ್‌ನ ನೂತನ ನಿಯಮಗಳು ಯಾವುವು? ಹೇಗೆ ವ್ಯವಹಾರ?

ಇತರ ಬ್ಯಾಂಕುಗಳ ಎಟಿಎಂನಿಂದ ತಿಂಗಳಿಗೆ ಮೂರಕ್ಕಿಂತ ಹೆಚ್ಚು ಬಾರಿ ವಹಿವಾಟು ನಡೆಸಿದರೆ 20 ರೂಪಾಯಿ ದಂಡ ಮತ್ತು ಎಸ್‌ಬಿಐ ಬ್ಯಾಂಕಿನಿಂದ ತನ್ನ ಗ್ರಾಹಕರು 5 ಕ್ಕಿಂತ ಹೆಚ್ಚು ಸಲ ಹಣವಿತ್ ಡ್ರಾ ಮಾಡಿದರೆ 10 ರೂಪಾಯಿ ದಂಡ ವಿಧಿಸುತ್ತದೆ. ಇನ್ನು ಮೂರು ತಿಂಗಳ ಅವಧಿಯಲ್ಲಿ ಸರಾಸರಿ 25,000 ರೂಪಾಯಿ ನಗದು ಖಾತೆಯಲ್ಲಿ ಇಟ್ಟುಕೊಂಡಿದ್ದರೆ ಪ್ರತಿ ಮೂರು ತಿಂಗಳಿಗೊಮ್ಮೆ ಡೆಬಿಟ್ ಕಾರ್ಡು ಹೊಂದಿರುವವರಿಗೆ ಎಸ್ಎಂಎಸ್ ಸಂದೇಶಕ್ಕೆ 15 ರೂಪಾಯಿ ಶುಲ್ಕ ವಿಧಿಸುತ್ತದೆ.!!

English summary
After private sector lenders, now government-owned banks have decided to levy cash handling charges on transactions. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot