ಸಾಮಾಜಿಕ ಜವಾಬ್ದಾರಿ ಕೈಗೆತ್ತಿಕೊಂಡಿವೆ ಟೆಕ್ ಕಂಪೆನಿಗಳು!!..ಗೂಗಲ್, ಫೇಸ್‌ಬುಕ್‍, ಆಪಲ್ ಸಾಥ್!!

ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಕೈಗಳು ಯಾವಾಗಲೂ ಇದ್ದೇ ಇರುತ್ತವೆ. ಅವನ್ನು ನಿಯಂತ್ರಿಸುವುದು ಸಾಧ್ಯವೇ?

|

ಹೊಸ ಹೊಸ ತಂತ್ರಜ್ಞಾನ ಜನರಿಗೆ ಎಷ್ಟು ಉಪಯೋಗವಾಗುತ್ತದೆಯೋ ಹಾಗೆಯೇ ದುರುಪಯೋಗವಾಗುತ್ತವೆ ಎಂಬುದನ್ನು ತಂತ್ರಜ್ಞಾನ ಕಂಪನಿಗಳು ಈಗ ಯೋಚಿಸಲು ಶುರುಮಾಡಿವೆ. ಹಾಗಾಗಿಯೇ, ಗೂಗಲ್, ಫೇಸ್‌ಬುಕ್‍, ಆಪಲ್ ಸೇರಿದಂತೆ ಹಲವು ದಿಗ್ಗಜ ಟೆಕ್ ಕಂಪೆನಿಗಳೂ ತಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಇದೀಗ ಮಾತನಾಡುತ್ತಿವೆ.!!

ತಂತ್ರಜ್ಞಾನದ ಆವಿಷ್ಕಾರ ಮಾತ್ರ ನಮ್ಮ ಕೆಲಸ, ಅದನ್ನು ಜನ ಹೇಗೆ ಬಳಸುತ್ತಾರೆ ಎಂಬುದು ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದ ಕಂಪೆನಿಗಳೆಲ್ಲವೂ ಇದೀಗ ತನ್ನ ತಂತ್ರಜ್ಞಾನಗಳ ಪರಿಣಾಮಗಳನ್ನು ನಿಯಂತ್ರಿಸಲು ಮುಂದಾಗಿವೆ.!! ಹಾಗಾದರೆ, ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಕೈಗಳು ಯಾವಾಗಲೂ ಇದ್ದೇ ಇರುತ್ತವೆ. ಅವನ್ನು ನಿಯಂತ್ರಿಸುವುದು ಸಾಧ್ಯವೇ? ತಮ್ಮ ಸಾಮಾಜಿಕ ಜವಾಬ್ದಾರಿಯ ಬಗ್ಗೆ ತಂತ್ರಜ್ಞಾನ ದಿಗ್ಗಜ ಕಂಪನಿಗಳು ಇದೀಗ ಏನು ಮಾಡುತ್ತಿವೆ ಎಂಬುದನ್ನು ಮುಂದೆ ತಿಳಿಯಿರಿ.!!

ನೈತಿಕ ಜವಬ್ದಾರಿ ಎಂದ ಟೀಮ್ ಕುಕ್!!

ನೈತಿಕ ಜವಬ್ದಾರಿ ಎಂದ ಟೀಮ್ ಕುಕ್!!

ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುವಂತಹ ಅಂತರ್ಜಾಲ ಚಟುವಟಿಕೆಗಳನ್ನು ನಿಯಂತ್ರಿಸುವುದು ಎಲ್ಲಾ ತಂತ್ರಜ್ಞಾನ ಕಂಪನಿಗಳ ನೈತಿಕ ಜವಬ್ದಾರಿ. ಈ ನಿಟ್ಟಿನಲ್ಲಿ ಎಲ್ಲಾ ತಂತ್ರಜ್ಞಾನ ಕಂಪನಿಗಳೂ ಪೂರಕವಾಗಿ ಕೆಲಸ ಮಾಡಬೇಕು ಆಪಲ್ ಸಿಇಒ ಟಿಮ್ ಕುಕ್‍ ಹೇಳಿದ್ದಾರೆ.!!

ಸುಳ್ಳುಸುದ್ದಿಗಳಿಗೆ ಬ್ರೇಕ್!!

ಸುಳ್ಳುಸುದ್ದಿಗಳಿಗೆ ಬ್ರೇಕ್!!

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ತಪ್ಪು ಮಾಹಿತಿ, ದ್ವೇಷ ಬಿತ್ತುವ ವಿಷಯಗಳನ್ನು ಹಬ್ಬುವುದನ್ನು ನಿಯಂತ್ರಿಸುವ ಬಗ್ಗೆ ಫೇಸ್‌ಬುಕ್ ತಲೆಕೆಡಿಸಿಕೊಂಡಿದೆ. ಸುಳ್ಳುಸುದ್ದಿಗಳಿಂದಾಗಿ ಬಹುದೊಡ್ಡ ಸಮಸ್ಯೆಗಳು ಎದುರಾಗುತ್ತಿದ್ದು, ಕೃತಕ ಬುದ್ದಿಮತ್ತೆ ಸಹಾಯದಿಂದ ಸುಳ್ಳುಸುದ್ದಿಗಳ ನ್ಯೂಸ್‌ ಫೀಡ್‌ಗೆ ಬ್ರೇಕ್ ಹಾಕಲು ಫೇಸ್‌ಬುಕ್ ಮುಂದಾಗಿದೆ.!!

ನಕಲಿ ಖಾತೆಗಳ ಮೇಲೆ ಕಣ್ಣು!!

ನಕಲಿ ಖಾತೆಗಳ ಮೇಲೆ ಕಣ್ಣು!!

ನಕಲಿ ಖಾತೆಗಳನ್ನು ರದ್ದುಗೊಳಿಸುವುದು, ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸುವವರ ಖಾತೆಗಳನ್ನು ಅಮಾನತಿನಲ್ಲಿಡುವುದು ಸೇರಿದಂತೆ ಹಲವು ರೀತಿಯ ಕ್ರಮಗಳಿಗೆ ಫೇಸ್‌ಬುಕ್ ಮುಂದಾಗಿರುವುದಾಗಿ ತಿಳಿಸಿದೆ. ಇದೇ ಬಗೆಯ ಆಶಯವನ್ನು ಹಲವು ಪ್ರಮುಖ ತಂತ್ರಜ್ಞಾನ ಕಂಪೆನಿಗಳೂ ವ್ಯಕ್ತಪಡಿಸಿವೆ.!!

ವೆಬ್‌ಸೈಟ್‌ ನಿಯಂತ್ರಣಕ್ಕೆ ಕ್ರಮ!!

ವೆಬ್‌ಸೈಟ್‌ ನಿಯಂತ್ರಣಕ್ಕೆ ಕ್ರಮ!!

ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿ ಹರಡುವ ಹಲವು ಜಾಲತಾಣಗಳನ್ನು ನಿರ್ಬಂಧಿಸಲು ಗೂಗಲ್ ಮುಂದಾಗಿದೆ. ವೆಬ್‌ಸೈಟ್‌ಗಳ ಮೂಲಕ ಜನರ ದಾರಿತಪ್ಪಿಸಲು ಮುಂದಾಗುವ ವೆಬ್‌ಸೈಟ್‌ಗಳನ್ನು ಹುಡುಕಿ ಅವುಗಳನ್ನು ನಿಯಂತ್ರಿಸಲು ಗೂಗಲ್ ಈಗಾಗಲೇ ಕ್ರಮಗಳನ್ನು ಕೈಗೊಂಡಿದೆ.!!

How to Sharing a Mobile Data Connection with Your PC (KANNADA)
ವಿಡಿಯೋಗಳು ಡಿಲೀಟ್!!

ವಿಡಿಯೋಗಳು ಡಿಲೀಟ್!!

ಮಕ್ಕಳನ್ನು ಪೋಷಕರು ಹಿಂಸಿಸುವ ಸಾಕಷ್ಟು ವಿಡಿಯೊಗಳನ್ನು ಯೂಟ್ಯೂಬ್ ಈಗಾಗಲೇ ತೆಗೆದುಹಾಕಿದೆ. ಹೆಚ್ಚು ಅಶ್ಲೀಲತೆ ಹೊಂದಿರುವ ವಿಡಿಯೋಗಳಿಗೂ ಬ್ರೇಕ್ ಹಾಕಲು ಯೂಟ್ಯೂಬ್ ಮುಂದಾಗಿದ್ದು, ಇದಕ್ಕಾಗಿ ಹಲವು ತಂಡಗಳನ್ನೇ ತಯಾರುಮಾಡಿದೆ.!!

2017ನೇ ವರ್ಷದಲ್ಲಿನ ಟಾಪ್ ಗ್ಯಾಜೆಟ್‌ಗಳ ಲೀಸ್ಟ್!!..ವರ್ಷದ ಬೆಸ್ಟ್ ಮೊಬೈಲ್ ಇದು!!2017ನೇ ವರ್ಷದಲ್ಲಿನ ಟಾಪ್ ಗ್ಯಾಜೆಟ್‌ಗಳ ಲೀಸ್ಟ್!!..ವರ್ಷದ ಬೆಸ್ಟ್ ಮೊಬೈಲ್ ಇದು!!

Best Mobiles in India

English summary
technology companies Tunstall Healthcare and InHealthcare have joined forces to roll out a series of services that aim to integrate health and social care. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X