ಏಲಿಯನ್‌ಗಳು ಹೆಚ್ಚು ಕಾಣಿಸಿಕೊಂಡ ಪ್ರಪಂಚದ ಟಾಪ್‌ ಸ್ಥಳಗಳು

By Suneel
|

ಏಲಿಯನ್‌ಗಳು ಭೂಮಿಗೆ ಬಂದಿದ್ದು ಆಯ್ತು. ಅಲ್ಲಿ ಇಲ್ಲಿ ಪ್ರಪಂಚದಾದ್ಯಂತ ಭೇಟಿ ನೀಡಿ ಹೋಗಿದ್ದು ಆಯ್ತು. ಈ ಮಾಹಿತಿಯನ್ನು ಬಹುಶಃ ಕಳೆದ ದಶಕದಲ್ಲಿ ಹಲವು ಭಾರಿ ಬಹುಸಂಖ್ಯಾತರು ತಿಳಿದಿದ್ದಾರೆ. ಏಳಿಯನ್‌ಗಳು ಭೂಮಿಗೆ ಭೇಟಿ ನೀಡಿದಾಗಿನಿಂದಲೂ ಸಹ ಅವುಗಳ ಬಗ್ಗೆ ಸಂಶೋಧನೆ ನಿರಂತರವಾಗಿ ನೆಡೆಯುತ್ತಲೇ ಇದೆ. ಅಲ್ಲದೇ ಇತ್ತ ಆಗಾಗ ಏಲಿಯನ್‌ಗಳು ಮಂಗಳ ಗ್ರಹದಲ್ಲಿವೆ, ಅವುಗಳು ನಾಶ ಹೊಂದಿವೆ ಎಂದು ಪಿತೂರಿ ಸಿದ್ಧಾಂತಿಗಳು ಚರ್ಚಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಆದ್ರೆ ಖಚಿತವಾದ ವಿಷಯಾ ಅಂದ್ರೆ ಏಲಿಯನ್‌ಗಳು ಪ್ರಪಂಚದಾದ್ಯಂತ ಹಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವುದಂತು ನಿಜ ಹಾಗೂ ಹಲವು ಜನರು ನೋಡಿರುವುದು ಸಹ ಸತ್ಯ. ಅಲ್ಲದೇ ಈ ಮಾಹಿತಿಗಳು ವಿಶ್ವದಾದ್ಯಂತ ವರದಿಯಾಗಿವೆ. ಇಂದಿನ ಲೇಖನದಲ್ಲಿ ಏಲಿಯನ್‌ಗಳು (Unidentified flying object)ಇತರ ದೇಶಗಳಿಗಿಂತ ಹೆಚ್ಚು ಕಾಣಿಸಿಕೊಂಡ ದೇಶಗಳು ಮತ್ತು ಪ್ರದೇಶಗಳು ಯಾವುವು, ಹಾಗೂ ಹೆಚ್ಚು ವರದಿಯಾಗಿರುವುದು ಎಲ್ಲಿ ಎಂಬ ಬಗ್ಗೆ ವಿಶೇಷ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ವೆಲ್ಷ್ ಟ್ರಿಯಾಂಗಲ್

ವೆಲ್ಷ್ ಟ್ರಿಯಾಂಗಲ್

ಅಂದಹಾಗೆ ಸೌತ್‌ವೆಸ್ಟ್‌ ಗ್ರೇಟ್‌ ಬ್ರಿಟನ್‌'ನ ವೇಲ್ಸ್‌ನಲ್ಲಿ 1977 ರಲ್ಲಿ ಅಧಿಕವಾಗಿ ಗುರುತಿಸಲಾಗದ ಫ್ಲೇಯಿಂಗ್‌ ಸಾಸರ್‌ ಕಾಣಿಸಿಕೊಂಡಿತ್ತು. ಅಲ್ಲದೇ ಏಲಿಯನ್‌ಗಳು ಜನರನ್ನು ಪ್ರಜ್ವಲಿಸುತ್ತಾ ತಿರುಗುವ ಪ್ಲೇಯಿಂಗ್‌ ಸಾಸರ್‌ನಿಂದ ಜನರನ್ನು ನೋಡುತ್ತಿದ್ದವು ಮತ್ತು ಕಾರನ್ನು ಸಹ ಹಿಂಬಾಲಿಸಿತ್ತು ಎಂದು ವರದಿಯಾಗಿತ್ತು.

ಮೈರ್ಟೆಲ್ ಬೀಚ್ ದಕ್ಷಿಣ ಕರೊಲಿನಾ

ಮೈರ್ಟೆಲ್ ಬೀಚ್ ದಕ್ಷಿಣ ಕರೊಲಿನಾ

ನೀವು ಏಲಿಯನ್‌ಗಳನ್ನು ಮತ್ತು ಪ್ಲೇಯಿಂಗ್ ಸಾಸರ್ ಅನ್ನು ನೋಡಿಲ್ಲಾ ಎಂದರೆ ಬಹುಶಃ ದಕ್ಷಿಣ ಕೆರೊಲಿನಾದ ಮೈರ್ಟೆಲ್ ಬೀಚ್ ಪ್ರದೇಶದಲ್ಲಿ ಇದ್ದಿದ್ದರೆ ನೋಡಬಹುದಿತ್ತೇನೋ. ಈ ಬಗ್ಗೆ "ದಿ ಗ್ರ್ಯಾಂಡ್‌ ಸ್ಟ್ರಾಂಡ್‌" ಮಾಹಿತಿ ಹಂಚಿತ್ತು.

ದಿ ಎಂ-ಟ್ರಿಯಾಂಗಲ್‌, ರಷ್ಯಾ

ದಿ ಎಂ-ಟ್ರಿಯಾಂಗಲ್‌, ರಷ್ಯಾ

ರಷ್ಯಾದಲ್ಲಿ 600 ಕಿಲೋ ಮೀಟರ್‌ ದೂರದ ಪೂರ್ವ ಮಾಸ್ಕೋದಲ್ಲಿ ಅಲ್ಲಿನ ಬಹುಸಂಖ್ಯಾತ ಗುಡ್ಡಗಾಡಿನ ನಿವಾಸಿಗಳು ಹೆಚ್ಚು ನಿಗೂಢ ಚಟುವಟಿಕೆಗಳನ್ನು, ಭಯಾನಕ ಬೆಳಕು ಮತ್ತು ಫ್ಲೇಯಿಂಗ್ ಸಾಸರ್‌ಗಳನ್ನು ನೋಡಿರುವುದಾಗಿ ವರದಿಯಾಗಿತ್ತು. ಅಲ್ಲದೇ ಎಂ-ಟ್ರಿಯಾಂಗಲ್‌ ಪ್ರದೇಶಕ್ಕೆ ಭೇಟಿ ನೀಡಿದ್ದ ಹಲವರು ಈ ಬಗ್ಗೆ ವಿಶೇಷ ವರದಿ ಮಾಡಿದ್ದರು.

ವಾರ್ಮಿನಿಸ್ಟರ್‌, ವಿಲ್ಟ್‌ಶೈರ್‌,  ಬ್ರಿಟನ್‌

ವಾರ್ಮಿನಿಸ್ಟರ್‌, ವಿಲ್ಟ್‌ಶೈರ್‌, ಬ್ರಿಟನ್‌

ಪ್ಯಾರಿಸ್‌ನ ವಾರ್ಮಿನಿಸ್ಟರ್‌ ಪ್ರದೇಶದಲ್ಲಿ ಅರೆಪಾರದರ್ಶಕವಾಗಿ ಕಿತ್ತಳೆ ಬಣ್ಣದ ಡಿಸ್ಕ್‌ ಒಂದು ಅದ್ಭುತ ವೇಗದಲ್ಲಿ ಆಕಾಶಕ್ಕೆ ಹಾರಿತ್ತು. ಇದು ಪ್ಲೇಯಿಂಗ್ ಸಾಸರ್ ಎಂಬುದರಲ್ಲಿ ಸಂಶಯ ಬೇಡ. ಈ ಸುದ್ದಿಯನ್ನು ಸ್ವತಂತ್ರವಾಗಿ ಶೇಕಡ ನೂರರಷ್ಟು ವಾಸ್ತವವಾಗಿ ಬಹುಸಂಖ್ಯಾತರು Unidentified flying object ಎಂದು ಹೇಳಿದ್ದರು.

ಕೆನಡಾ

ಕೆನಡಾ

ಕೆನಡಾದಲ್ಲಿ ಅನೇಕ ಪ್ರದೇಶಗಳು ಏಲಿಯನ್‌ ಕಾಣಿಸಿಕೊಂಡಿರುವುದಕ್ಕೆ ಹೆಸರುವಾಸಿಯಾಗಿವೆ. ಅಲ್ಲದೇ ವಿಶೇಷ ಅಂದ್ರೆ ಅತ್ಯಧಿಕವಾಗಿ 2011-2012 ರ ನಡುವೆ ಹೆಚ್ಚು ಈ ಏಲಿಯನ್‌ ಆಬ್ಜೆಕ್ಟ್ ಕಾಣಿಸಿಕೊಂಡಿದೆ ಎಂದು Ufology ಸಂಶೋಧನೆ ಹೇಳಿದೆ.

ಚಿಲಿಯ UFO ದಾರಿ

ಚಿಲಿಯ UFO ದಾರಿ

ಕಳೆದ 2 ದಶಕಗಳಲ್ಲಿ ಚಿಲಿಯ ಕೇಂದ್ರ ಜಿಲ್ಲೆಯಲ್ಲಿ ಹಲವು ಭಾರಿ ಏಲಿಯನ್‌ ಕಾಣಿಸಿ ಕೊಂಡಿರುವುದಕ್ಕೆ ಉದಾಹರಣೆಯಾಗಿದೆ. 2008 ರಲ್ಲಿಯೂ ಸಹ ಸಾಂ ಕ್ಲೆಮೆಂಟೆ ನಗರವು ಸಹ ಏಲಿಯನ್‌ಗಳ ಪ್ಯಾಡ್‌ ಕಾಣಸಿಕೊಂಡಿದಕ್ಕೆ ಸಾಕ್ಷಿಯಾಗಿದೆ.

 ಮೆಕ್ಸಿಕೊ ಸಿಟಿ

ಮೆಕ್ಸಿಕೊ ಸಿಟಿ

1991 ಜುಲೈ 11 ರಂದು ವಿಶಾಲ ಏಲಿಯನ್‌ ಕ್ರಾಫ್ಟ್‌ ಒಂದು ಪೆಸಿಫಿಕ್‌ ಸಾಗರದ ಮೇಲ್ಮೈನಿಂದ ಪ್ರಾರಂಭಿಸಿ ಮೆಕ್ಸಿಕೊ ಕಡೆಗೆ ಚಲಿಸಿ ದಕ್ಷಿಣ ಅಮೇರಿಕದಲ್ಲಿ ಕೆಳಗೆ ಇಳಿದು ಬ್ರೆಜಿಲ್‌ ಪ್ರದೇಶದ ಕಡೆ ಹಾರುತ್ತಾ ಕೊನೆಗೊಂಡಿತು. ಮೆಕ್ಸಿಕೊ ಜನರು ಕಂಡ ಅತಿ ವಿಶಾಲವಾದ ಕ್ರಾಫ್ಟ್‌ ಅದು.

ಸ್ಟೀಫೆನ್‌ವಿಲ್ಲೆ, ಟೆಕ್ಸಾಸ್

ಸ್ಟೀಫೆನ್‌ವಿಲ್ಲೆ, ಟೆಕ್ಸಾಸ್

ಅಮೇರಿಕದ ಟೆಕ್ಸಾಸ್‌ನ ಸ್ಟೀಫೆನ್‌ವಿಲ್ಲೆ ಅತ್ಯಧಿಕ ವಿಶಾಲವಾದ ಸಾಮೂಹಿಕ ಅದ್ಭುತ Unidentified flying object ಕಾಣಿಸಿಕೊಂಡದಕ್ಕೆ ಉದಾಹರಣೆಯಾಗಿದೆ.2008 ರಲ್ಲಿ 12 ಹೆಚ್ಚು ಜನರು ರಾತ್ರಿಯ ವೇಳೆ ವಿಶಾಳ ಪ್ಲೇಯಿಂಗ್ ಸಾಸರ್‌ ನೋಡಿದಕ್ಕೆ ಸಾಕ್ಷಿಯಾಗಿ ವರದಿ ಮಾಡಲಾಗಿತ್ತು. ಅಲ್ಲದೇ ಅತೀ ವೇಗದಲ್ಲಿ ಇದು ಚಲಿಸುತ್ತಿತ್ತು ಎಂದು ಸಹ ಹೇಳಲಾಗಿತ್ತು. ಇದು ಅಮೇರಿಕದ ಇತಿಹಾಸದಲ್ಲೇ ಅತಿ ವಿಶಾಲ ಪ್ಲೇಯಿಂದ ಸಾಸರ್‌ ಕಾಣಿಸಿಕೊಂಡ ವರದಿಯಾಗಿತ್ತು.

ಎಲ್ಕ್‌ ನದಿ, ಮಿನ್ನೆಸೊಟ

ಎಲ್ಕ್‌ ನದಿ, ಮಿನ್ನೆಸೊಟ

ಅಮೇರಿಕದ ಹಿಮಚ್ಛಾದಿತ ಪ್ರದೇಶ ಮಿನ್ನೆಸೊಟ ಎಲ್ಕ್‌ ನದಿ ಪ್ರದೇಶವು ಅದ್ಭುತ ರೀತಿಯಲ್ಲಿ ಪ್ಲೇಯಿಂದ ಸಾಸರ್‌ ಕಾಣಿಸಿಕೊಂಡಿದ್ದಕ್ಕೆ ಸಾಕ್ಷಿಯಾಗಿದೆ. ಇಲ್ಲಿ 1990 ರಲ್ಲಿ ಮಾತ್ರ ಕಾಣಿಸಿಕೊಂಡಿದೆ. ನಂತರದಲ್ಲಿ ಈ ಪ್ರದೇಶದಲ್ಲಿ ಪ್ಲೇಯಿಂಗ್‌ ಸಾಸರ್‌ ಕಾಣಸಿಕೊಂಡಿಲ್ಲ.

ಪೆಸಿಫಿಕ್‌ ಕರಾವಳಿ ಹೆದ್ದಾರಿ, ಕ್ಯಾಲಿಫೋರ್ನಿಯಾ

ಪೆಸಿಫಿಕ್‌ ಕರಾವಳಿ ಹೆದ್ದಾರಿ, ಕ್ಯಾಲಿಫೋರ್ನಿಯಾ

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಿರಂತರವಾಗಿ ಏಲಿಯನ್‌ಗಳ ಪ್ಲೇಯಿಂಗ್ ಸಾಸರ್ ಅಮೇರಿಕದ ಪೆಸಿಫಿಕ್‌ ಕರಾವಳಿ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದಕ್ಕೆ ಸಾವಿರಾರು ಜನರು ಪ್ರತ್ಯಕ್ಷ ಸಾಕ್ಷಿ ಇದ್ದರು.

ಕೊಲರೆಸ್‌ ದ್ವೀಪ, ಬ್ರೆಜಿಲ್

ಕೊಲರೆಸ್‌ ದ್ವೀಪ, ಬ್ರೆಜಿಲ್

ಏಲಿಯನ್‌ ಫ್ಲೇಯಿಂಗ್ ಸಾಸರ್‌ ಕಾಣಿಸಿಕೊಂಡ ವಿಷಯದಲ್ಲಿ ಬ್ರೆಜಿಲ್‌ ಇತರ ಪ್ರದೇಶಗಳಿಗಿಂತ ಒಂದು ಕೈ ಮೇಲೆಯೇ. 1977 ರಲ್ಲಿ ಬ್ರೆಜಿಲ್‌ನ ಕೊಲೆರೆಸ್‌ ದ್ವೀಪದಲ್ಲಿ UFO (Unidentified flying object) ಕಾಣಿಸಿಕೊಂಡಿತ್ತು.

ಆರಿಜೋನ

ಆರಿಜೋನ

ಅತಿ ಹೆಚ್ಚು ಭಾರಿ UFO ಕಾಣಿಸಿಕೊಂಡ ಪಟ್ಟಿಯಲ್ಲಿ ಆರಿಜೋನ ಟಾಪ್‌ ಎನಿಸಿಕೊಂಡಿದೆ. ಕಾರಣ ಇದು ಏರಿಯಾ 51 ನೆವೆಡಾದ ಹತ್ತಿರದಲ್ಲಿದೆ. ಅಲ್ಲದೇ ಇದು ಏಲಿಯನ್‌ಗಳಿರುವ ಪ್ರದೇಶ ಎಂದು ಹೆಸರು ಪಡೆದಿದೆ.

ನುಲ್ಲಾರ್‌ಬಾರ್ ಪ್ಲೇನ್‌, ಆಸ್ಟ್ರೇಲಿಯಾ

ನುಲ್ಲಾರ್‌ಬಾರ್ ಪ್ಲೇನ್‌, ಆಸ್ಟ್ರೇಲಿಯಾ

ಬ್ರಿಟಿಷ್‌ ಮೊದಲು ಆಟೋಮಿಕ್‌ ಬಾಂಬ್‌ ಪರೀಕ್ಷೆ ನಡೆಸಿದಾಗ ನುಲ್ಲಾರ್‌ಬಾರ್‌ ಪ್ರದೇಶದಲ್ಲಿ ಮೊದಲು ಇಲ್ಲಿ UFO ಪಳೆಯುಳಿಕೆ ವಸ್ತುಗಳು ಕಾಣಿಸಿಕೊಂಡಿದ್ದವು. ಇದು 1950 ರಲ್ಲಿ ಜರುಗಿತ್ತು.

ವೀಡಿಯೋ

ಭಾರತದ ಕಾನ್ಪುರದ ಹುಡುಗನೊಬ್ಬ ಫ್ಲೇಯಿಂಗ್ ಸಾಸರ್‌ ಹಾರಾಟವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಬಗ್ಗೆ ವೀಡಿಯೋ ನೋಡಿರಿ.
ವೀಡಿಯೋ ಕೃಪೆ :Mystery Universe

ಗಿಜ್‌ಬಾಟ್‌

ಗಿಜ್‌ಬಾಟ್‌

ಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆಏಲಿಯನ್ ಅನ್ವೇಷಣೆಗಾಗಿ ಬಹುದೊಡ್ಡ ಯೋಜನೆ

ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ

ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

ಏಲಿಯನ್ ಅನ್ವೇಷಣೆಗೆ ವಿಶ್ವದ ಬೃಹತ್ ಟೆಲಿಸ್ಕೋಪ್ಏಲಿಯನ್ ಅನ್ವೇಷಣೆಗೆ ವಿಶ್ವದ ಬೃಹತ್ ಟೆಲಿಸ್ಕೋಪ್

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
The All Time Top Aliens Hotspots From Around The World. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X