ಟೆಕ್ಸಾಸ್‌ನಲ್ಲಿ ದೈತ್ಯ ಗೋಡೆಯ ಹಿಂದೆ ಅವಿತಿದ್ದ ನಾಗರೀಕತೆ

By Shwetha
|

ಸುಮಾರು 100 ವರ್ಷಕ್ಕಿಂತಲೂ ಹಿಂದೆ ಟೆಕ್ಸಾಸ್‌ನಲ್ಲಿ ವಿಚಿತ್ರ ಗೋಡೆಯೊಂದು ಪತ್ತೆಯಾಯಿತು. ಆದರೆ ಇದೀಗ ಬಂದ ಸುದ್ದಿಯ ಪ್ರಕಾರ ಈ ಗೋಡೆಯು ಯಾವುದೋ ಒಂದು ಕಳೆದು ಹೋದ ನಾಗರೀಕತೆಯ ಕುರುಹಾಗಿದೆ ಎಂಬುದಾಗಿ ತಿಳಿದು ಬಂದಿದೆ. ಟೆಕ್ಸಾಸ್‌ನಲ್ಲಿ ರೋಕ್‌ವಾಲ್ ಎಂಬ ನಗರವೊಂದಿದೆ. ಈ ಹೆಸರು ನಗರಕ್ಕೆ ಹೇಗೆ ಬಂದಿತು ಎಂಬುದು ಕೂಡ ಅಲ್ಲಿನ ವಾಸವಿರುವ ಜನರಿಗೆ ತಿಳಿದಿಲ್ಲ. ಅವರುಗಳು ನಂಬಿರುವ ಪ್ರಕಾರ ಈ ಗೋಡೆಯು ಕಂಡುಬಂದ ನಂತರದಿಂದ ಈ ಹೆಸರು ಬಂದಿದೆ ಎಂದಾಗಿದೆ. ಅಲ್ಲಿನವರು ನೀರಿಗಾಗಿ ಭೂಮಿಯನ್ನು ಕೊರೆದಾಗ ಈ ಗೋಡೆ ಮೇಲೆ ಬಂದಿದೆ.

ಓದಿರಿ: ಮೆದುಳು ಇಲ್ಲದೇ ಸಾಮಾನ್ಯರಂತೆ ಬದುಕುತ್ತಿರುವ ವ್ಯಕ್ತಿ

ವರದಿಗಳ ಪ್ರಕಾರ, ಗೋಡೆಯು 4 ಮೈಲುಗಳಷ್ಟು ಅಗಲವಾಗಿದ್ದು 7 ಮೈಲುಗಳಷ್ಟು ಉದ್ದವಾಗಿದೆ, ಒಟ್ಟಾರೆ ಇದು ಆವರಿಸಿಕೊಂಡಿರುವ ಪ್ರದೇಶ 20 ಸ್ಕ್ವೇರ್ ಮೈಲುಗಳಾಗಿದೆ. ಆದರೆ ಇದು ಅನ್ವೇಷಣೆಯಾಗಿದ್ದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬೇಕಾಗಿದೆ. ಒಂದು ಕುಟುಂಬವು ನೀರಿಗಾಗಿ ಭೂಮಿಯನ್ನು ಕೊರೆದಾಗ ಈ ವಿಚಿತ್ರ ಗೋಡೆಯು ಪತ್ತೆಯಾಗಿದೆ. ಸಾಮಾನ್ಯ ಮನುಷ್ಯನಿಂದ ಈ ಗೋಡೆಯನ್ನು ಎತ್ತುವುದು ಅಸಾಧಾರಣವಾದ ಮಾತಾಗಿತ್ತು. ಈ ಕುಟುಂಬವು ಇಷ್ಟಕ್ಕೇ ಕೊರೆಯುವುದನ್ನು ನಿಲ್ಲಿಸದೇ ಇದನ್ನು ಇನ್ನಷ್ಟು ಆಳವಾಗಿ ಶೋಧಿಸಲು ಹೊರಟಿತು ಮುಂದೇನಾಯಿತು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.

ಗೋಡೆಯ ಕುರಿತಾದ ಶೋಧನೆ

ಗೋಡೆಯ ಕುರಿತಾದ ಶೋಧನೆ

ವರ್ಷಗಳ ನಂತರ, 1949 ರಲ್ಲಿ ಫೋರ್ತ್ ವಾತ್‌ನ ಸ್ಯಾಂಡರ್ಸ್, ಗೋಡೆಯ ಕುರಿತಾದ ಶೋಧನೆಯನ್ನು ನಡೆಸಲಾರಂಭಿಸಿದರು. ಈ ಸಂದರ್ಭದಲ್ಲಿ ಇನ್ನಷ್ಟು ಅಯಸ್ಕಾಂತೀಯ ಕಲ್ಲುಗಳು ಉಗಮಗೊಂಡವು ಎನ್ನಲಾಗಿದೆ.

ಶಿಲಾರಚನೆ

ಶಿಲಾರಚನೆ

ಒಂದು ಕಲ್ಲು ತನ್ನದೇ ಆದ ಶಿಲಾರಚನೆಗಳನ್ನು ಪಡೆದುಕೊಂಡಿದ್ದು ನಾಗರೀಕತೆಯ ಅಸ್ತಿತ್ವವನ್ನು ಪ್ರದರ್ಶಿಸುತ್ತಿತ್ತು ಎನ್ನಲಾಗಿದೆ. ಈ ಗೋಡೆಯು ಬಾಗಿಲು ಇಲ್ಲವೇ ಕಿಟಕಿ ಮಾದರಿಯ ರಚನೆಯನ್ನು ಪಡೆದುಕೊಂಡಿತ್ತು ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ.

ನಾಗರೀಕತೆ

ನಾಗರೀಕತೆ

ಗೋಡೆಯು ಒಂದು ನಾಗರೀಕತೆಯ ಕುರುಹಾಗಿತ್ತು ಎಂಬುದನ್ನು ತೋರಿಸುವ ಹಲವಾರು ಅಂಶಗಳನ್ನು ಪ್ರದರ್ಶನ ಪಡಿಸಿದೆ ಇದರಿಂದಾಗಿ ಹಿಂದೆ ಒಂದು ನಾಗರೀಕತೆ ಇದ್ದು ಕಾಲಕ್ರಮೇಣ ಅದು ಭೂಮಿಯನ್ನು ಸೇರಿಕೊಂಡಿರಬಹುದು ಎಂಬುದಾಗಿ ಶಾಸ್ತ್ರಜ್ಞರು ನುಡಿದಿದ್ದಾರೆ.

ರಾಕ್‌ವಾಲ್ ರಾಕ್

ರಾಕ್‌ವಾಲ್ ರಾಕ್

ರಾಕ್‌ವಾಲ್ ರಾಕ್ ಎಂಬ ಹೆಸರನ್ನು ಈ ಗೋಡೆಗೆ ನೀಡಲಾಗಿದ್ದು, ನಮ್ಮ ಸಾಮರ್ಥ್ಯಗಳನ್ನು ಪರೀಕ್ಷಿಸಿಕೊಳ್ಳಲು ಅಂತೆಯೇ ಪುರಾತನ ನಾಗರೀಕತೆಗಳ ಮಹತ್ವತೆಗಳನ್ನು ಅರಿತುಕೊಳ್ಳಲು ಇದರಿಂದ ಸಾಧ್ಯ ಎಂಬುದು ಪ್ರಾಚೀನ ಶಾಸ್ತ್ರಜ್ಞ ಡೆಲ್ಲಾಸ್ ತಿಳಿಸಿದ್ದಾರೆ.

ಫ್ರೆಂಚ್ ಗುಹೆ

ಫ್ರೆಂಚ್ ಗುಹೆ

ಫ್ರೆಂಚ್ ಗುಹೆಗಳಲ್ಲಿ ರಹಸ್ಯಮಯವಾದ ಭೂಗತ ರಚನೆಗಳು ಪತ್ತೆಯಾಗಿದ್ದು ಟೆಕ್ಸಾಸ್‌ನ ಈ ಗೋಡೆಯೂ ಇದೇ ಮಾದರಿಯದ್ದಾಗಿದೆ ಎಂಬುದು ಖಗೋಳ ಶಾಸ್ತ್ರಜ್ಞರ ಅಂಕಿ ಅಂಶವಾಗಿದೆ.

ರಹಸ್ಯ ರಿಂಗ್‌

ರಹಸ್ಯ ರಿಂಗ್‌

ರಹಸ್ಯ ರಿಂಗ್‌ಗಳನ್ನು ಇಳಿಬಿದ್ದಿರುವ ಖನಿಜ ನಿಕ್ಷೇಪಗಳಿಂದ ತಯಾರಿಸಲಾಗಿದ್ದು ಈ ಕಂಬದ ಮಾದರಿಯ ಖನಿಜ ನಿಕ್ಷೇಪಗಳನ್ನು ಸಮಾನಾಗಿ ತುಂಡರಿಸಲಾಗಿದ್ದು 16 ಇಂಚಿನ ಉದ್ದದ ಅಂಡಾಕಾರದ ಮಾದರಿಯಲ್ಲಿ ಜೋಡಿಸಲಾಗಿದೆ.

ನಿಯಾಂಡರ್ತಲ್‌

ನಿಯಾಂಡರ್ತಲ್‌

ಭೂಗತವಾಗಿ ಬದುಕಬಲ್ಲ ತಂತ್ರಗಳನ್ನು ನಿಯಾಂಡರ್ತಲ್‌ಗಳು ಅನುಕರಿಸುವಲ್ಲಿ ನಿಪುಣರಾಗಿದ್ದು 176,500 ವರ್ಷಗಳ ಹಿಂದೆಯೇ ಅವರು ಈ ಚಟುವಟಿಕೆಗಳಲ್ಲಿ ಸಿದ್ಧಹಸ್ತರಾಗಿದ್ದರು.

ಆಧುನೀಕತೆಗೆ ಹೆಜ್ಜೆ

ಆಧುನೀಕತೆಗೆ ಹೆಜ್ಜೆ

ಮಾನವ ಜನಾಂಗವು ಆ ಕಾಲದಲ್ಲಿಯೇ ಆಧುನೀಕತೆಗೆ ಹೆಜ್ಜೆ ಇಟ್ಟಿದ್ದವು ಎಂಬುದನ್ನು ಈ ರಚನೆಗಳು ಪುಷ್ಟೀಕರಿಸಿವೆ. ರಿಂಗ್‌ಗಳು ಮತ್ತು ಸುತ್ತಲಿನ ರಚನೆಯು ಬೆಂಕಿಯ ಕುರುಹುಗಳ ಅಸ್ತಿತ್ವವನ್ನು ಕೆಂಪು ಮತ್ತು ಕಪ್ಪು ಮಸಿಯ ರೂಪದಲ್ಲಿ ಪ್ರಸ್ತುತಪಡಿಸಿವೆ.

ಕುರುಹು

ಕುರುಹು

ರಚನೆಯ ಹೊರಭಾಗದ ಕೆಲವೊಂದು ಕುರುಹುಗಳು ಇನ್ನೂ ಪತ್ತೆಯಾಗಿಲ್ಲ. ಈ ರಚನೆಗಳನ್ನು ಅವರು ಬಹುಶಃ ಬೆಂಕಿಯುರಿಸಲು ಅಥವಾ ಗುಹೆಯಲ್ಲಿ ಬೆಳಕಿನ ವ್ಯವಸ್ಥೆಗಾಗಿ ಬಳಸಿರಬಹುದು ಎಂಬುದಾಗಿ ವಿಜ್ಞಾನಿಗಳು ಅಂದುಕೊಂಡಿದ್ದಾರೆ.

ದೊಡ್ಡ ಪ್ರಾಣಿ

ದೊಡ್ಡ ಪ್ರಾಣಿ

ನಿಯಾಂಡರ್ತಲ್‌ಗಳನ್ನು ಹೊರತುಪಡಿಸಿ ದೊಡ್ಡ ಪ್ರಾಣಿಗಳಾದ ಕರಡಿ ಮತ್ತು ತೋಳಗಳು ಈ ರಚನೆಯನ್ನು ನಿರ್ಮಿಸಿದ್ದಿರಬಹುದು ಎಂಬುದಾಗಿ ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ.

Sacsayhuamán

Sacsayhuamán

ದೊಂದು ಪುರಾತನ ಸೈಟ್ ಆಗಿದ್ದು ಭೂಮಿಯಲ್ಲಿ ಪತ್ತೆಯಾಗಿದೆ. ಇದನ್ನು ಹೇಗೆ ನಿರ್ಮಿಸಲಾಗಿದೆ ಎಂಬುದು ಇಂದಿನ ಇಂಜಿನಿಯರ್‌ಗಳಿಗೂ ಪತ್ತೆಹಚ್ಚಲು ಕಷ್ಟಾಸಾಧ್ಯವಾಗಿದೆ. ಏಕೈಕ ಹಾಳೆಯಲ್ಲಿ ಸರಿಯಾಗಿ ಕೂರುವ ಈ ಕಲ್ಲುಗಳು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

ಟ್ವಿನಾಕು

ಟ್ವಿನಾಕು

ಟ್ವಿನಾಕು ಗೇಟ್‌ವೇನಲ್ಲಿ ಸ್ಥಾಪಿತವಾಗಿರುವ ಗಟ್ಟಿಯಾದ ಶಿಲೆಯಾಗಿದೆ. ಈ ಪುರಾತನ ಶಿಲೆಯಲ್ಲಿರುವ ಕೆಲವೊಂದು ಕೆತ್ತನೆಗಳನ್ನು ಸಂಶೋಧಕರಿಗೆ ಇಂದಿಗೂ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಜ್ಯೋತಿಷ್ಯ ಮತ್ತು ಖಗೋಳ ಮೌಲ್ಯಗಳನ್ನು ಈ ಕೆತ್ತನೆಗಳು ಪಡೆದುಕೊಂಡಿವೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

ನಿಗೂಢ ಸ್ಥಳ

ನಿಗೂಢ ಸ್ಥಳ

ಭೂಮಿಯಲ್ಲಿರುವ ಹೆಚ್ಚು ನಿಗೂಢ ಸ್ಥಳವಾಗಿ ಈ ಗುಹೆಗಳು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. 2000 ಹಳೆಯದಷ್ಟು ಪುರಾತನ ಇತಿಹಾಸವನ್ನು ಈ ಗುಹೆಗಳು ಪಡೆದುಕೊಂಡಿದ್ದು ಕೃತಕ ಗುಹೆಗಳಾಗಿದ್ದು ಮಾನವನು ಈ ಗುಹೆಗಳನ್ನು ಪತ್ತೆಹಚ್ಚಿದ್ದು ಗುಹೆಗಳ ಎತ್ತರ ಮತ್ತು ಆಕಾರವನ್ನು ಕಂಡು ಸಂಶೋಧಕರು ಸ್ತಂಭೀಭೂತರಾಗಿದ್ದಾರೆ. ಈ ಕೃತಕ ಗುಹೆಗಳನ್ನು ಏತಕ್ಕಾಗಿ ನಿರ್ಮಿಸಲಾಗಿದೆ ಎಂಬುದು ಇನ್ನೂ ರಹಸ್ಯಮಯವಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

ಭೂಮಿಯಾಳದ ನಗರ

ಭೂಮಿಯಾಳದ ನಗರ

ಭೂಮಿಯಾಳದ ನಗರ ನಿಜಕ್ಕೂ ಅದ್ಭುತವಾಗಿರುವ ನೀರಿನಾಳದ ಈ ನಗರವನ್ನು ಸ್ಕೂಬಾ ತರಬೇತುದಾರರೊಬ್ಬರು ಪತ್ತೆಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ನೀರಿನಾಳದ ನಗರವಾಗಿ ಪತ್ತೆಯಾಗಿದೆ. 10,000 ವರ್ಷಗಳ ಹಿಂದೆ ಈ ಕಲ್ಲುಗಳು ನೀರಿನಲ್ಲಿ ಮುಳುಗಡೆಯಾಗಿವೆ ಎಂಬುದು ಅನ್ವೇಷಣೆಯಾಗಿದ್ದು ಪುರಾತನ ಈಜಿಪ್ಟಿಯನ್ನರುಗಳ ಪಿರಾಮಿಡ್‌ಗಳ ರಚನೆಗಿಂತಲೂ ಮುನ್ನವೇ ಇದು ಜನ್ಮತಾಳಿದೆ ಎನ್ನಲಾಗಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

ಅತ್ಯಂತ ಪುರಾತನ ನಗರ

ಅತ್ಯಂತ ಪುರಾತನ ನಗರ

ಅತ್ಯಂತ ಪುರಾತನ ನಗರವಾಗಿ ಖ್ಯಾತಿಗೊಂಡಿದ್ದ ಮೊಹೆಂಜೋದಾರವನ್ನು 1992 ರಲ್ಲಿ ಸಿಂಧೂತಟದಲ್ಲಿ ಪತ್ತೆ ಮಾಡಿದ್ದು ಭಾರತೀಯ ಖಗೋಳಶಾಸ್ತ್ರಜ್ಞ ಆರ್. ಬನಾರ್ಜಿಯಾಗಿದ್ದಾರೆ. ಸುಧಾರಿತ ನ್ಯೂಕ್ಲಿಯರ್ ಆಯುಧಗಳಿಂದ ಈ ನಗರ ಅವನತಿಯನ್ನು ಕಂಡಿದೆ ಎಂಬುದಾಗಿ ಹೇಳಲಾಗುತ್ತಿದೆ. ಚಿತ್ರಕೃಪೆ: ಏಂಶಿಯೆಂಟ್ ಕೋಡ್

Best Mobiles in India

English summary
The Antediluvian wall of Texas, and some have gone as far to suggest that the strange rock wall buried under the surface is the ultimate evidence of a Lost Civilization beneath Texas.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X