ಇಂಟರ್ನೆಟ್‌ನಲ್ಲೇ ಹೆಚ್ಚು ಅಪಾಯಕಾರಿಯಾಗಿರುವ ದೇಶ- ಇಲ್ಲಿ ಅಂತದ್ದೇನಿದೆ?

By Shwetha
|

ರೊಮಾನಿಯಾದ ರಮ್ನಿಕು ವಲ್ಸಿಯಾ ಸುಂದರವಾದ ಆಧುನಿಕ ಪಟ್ಟಣವಾಗಿ ಹೆಸರುವಾಸಿಯಾಗಿದೆ. ಆದರೆ ಈ ನಗರ ಹೊರಗಿನಿಂದ ಮಾತ್ರವೇ ಸುಂದರವಾಗಿದ್ದು ಒಳಭಾಗದಲ್ಲಿ ತನ್ನದೇ ಬೀಭತ್ಸೆಯನ್ನು ಒಳಗೊಂಡಿದೆ. ಸೈಬರ್ ತೀವ್ರವಾದಿಗಳು ಈ ನಗರದಲ್ಲಿದ್ದು ಇಂಟರ್ನೆಟ್‌ನಲ್ಲೇ ಹೆಚ್ಚು ಅಪಾಯಕಾರಿ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ತನ್ನ ಕ್ರಿಮಿನಲ್ ಚಟುವಟಿಕೆಗಳಿಂದ ಈ ನಗರ ಖ್ಯಾತವಾಗಿದ್ದು ಸೈಬರ್ ಸಂಪರ್ಕಿತ ನಗರವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇಲ್ಲಿನ ಜನರ ಹೊಸ ಜಗತ್ತಿನವರೆಗಿನ ತುಡಿತವು ಅವರಲ್ಲಿ ಹೊಸ ಮಾದರಿಯ ಇಂಟರ್ನೆಟ್ ಕ್ರಾಂತಿಯನ್ನು ಉಂಟು ಮಾಡಿದ್ದರೂ ಸಮಾಜ ಬಾಹಿರ ಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹ್ಯಾಕ್ ಮಾಡುವಂತಹ ಅಪಾಯಕಾರಿ ನೆಲೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಈ ನಗರ ಕುರಿತಾದ ಇನ್ನಷ್ಟು ರೋಚಕ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ತಿಳಿಸುತ್ತಿದ್ದೇವೆ.

#1

#1

ರೊಮಾನಿಯಾದಲ್ಲಿದ್ದ ಕಮ್ಯುನಿಸಮ್ ತಂತ್ರಜ್ಞಾನ ಕ್ರಾಂತಿಗೆ ಇಲ್ಲಿಯವರನ್ನು ಸೆಳೆಯಿತು. 1989 ರ ರೊಮಾನಿಯನ್ ರೆವಲ್ಯುಶನ್ ಎಲ್ಲವನ್ನೂ ಬದಲಾಯಿಸಿತು.

#2

#2

ಇಲ್ಲಿದ್ದ ಯುವಕರು ಉಳಿದ ಜಗತ್ತಿನೊಂದಿಗೆ ಇಂಟರ್ ಕನೆಕ್ಟಿವಿಟಿ ಸಿಸ್ಟಮ್‌ ಅನ್ನು ಉದ್ದೀಪನೆಗೊಳಿಸಲು ಆರಂಭಿಸಿದರು. ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳನ್ನು ಜಗತ್ತಿಗೆ ತೋರಿಸಲು ಆರಂಭಿಸಿದರು.

#3

#3

ಹೊಸ ತಲೆಮಾರಿನ ಹ್ಯಾಕರ್‌ಗಳ ಉಗಮಕ್ಕೆ ಈ ಕ್ರಾಂತಿ ಕಾರಣವಾಗಿದ್ದು ವಿಶ್ವದ ಹೆಚ್ಚು ಜನಪ್ರಿಯ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಹುಟ್ಟುಹಾಕಿತು.

#4

#4

ಅಂಡರ್ ವರ್ಲ್ಡ್ ಸೈಬರ್ ಭಯೋತ್ಪಾದನೆಯನ್ನು ಆಳವಾಗಿ ಬೆಂಬಲಿಸಲು ದೇಶವು ಸಜ್ಜಾಯಿತು ಅಂತೆಯೇ ತನ್ನ ಕಾರ್ಯಾಚರಣೆಗಳನ್ನು ಟ್ರ್ಯಾಕ್ ಡೌನ್ ಮಾಡಲಾರಂಭಿಸಿತು. ಹೆಚ್ಚಿನ ಹ್ಯಾಕರ್‌ಗಳು ಇದರ ಮೂಲಕ ಡಾಲರುಗಟ್ಟಲೆ ಹಣವನ್ನು ಸಂಪಾದಿಸಲು ಆರಂಭಿಸಿದರು.

#5

#5

ಈ ದೇಶದ ಹ್ಯಾಕರ್‌ಗಳು ವಿಶ್ವದ ಬಲಿಷ್ಟ ದೇಶಗಳು ಮತ್ತು ವ್ಯಕ್ತಿಗಳನ್ನೇ ಹ್ಯಾಕಿಂಗ್ ಟಾರ್ಗೆಟ್ ಆಗಿ ಇರಿಸಿಕೊಂಡಿದ್ದಾರೆ. ಗುಸಿಫರ್ ಎನ್ನುವ ಹ್ಯಾಕರ್ ಈಗ ತಾನೇ ಜೀವನ ಪರ್ಯಂತದ ಜೈಲು ಶಿಕ್ಷಗೆ ಗುರಿಯಾಗಿದ್ದು ಆತನೊಬ್ಬನೇ ವಿಶ್ವದ ಬಲಿಷ್ಟ ವ್ಯಕ್ತಿಗಳನ್ನು ಹ್ಯಾಕ್ ಮಾಡುವ ಗುರಿಯನ್ನಿಟ್ಟುಕೊಂಡಿದ್ದ.

#6

#6

ಆತ ಚಾರ್ಜ್ ಡಬ್ಲ್ಯೂ ಬುಶ್ ಮತ್ತು ಅವರ ಕುಟುಂಬ, ಹಿಲರಿ ಕ್ಲಿಂಟನ್, ಸ್ಟೇಟ್ ಕೊಲೀನ್ ಪವೆಲ್, ಹೀಗೆ ದೊಡ್ಡ ದೊಡ್ಡ ಶಕ್ತಿಯುತ ಜನರನ್ನೇ ಹ್ಯಾಕ್ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದನಂತೆ.

#7

#7

ಒಬ್ಬ ಹ್ಯಾಕರ್‌ನ ಪಟ್ಟಿಯಲ್ಲೇ ಇಷ್ಟು ದೊಡ್ಡ ವ್ಯಕ್ತಿಗಳು ಇದ್ದಾರೆ ಎಂದಾದಲ್ಲಿ ಇಂತಹುದೇ ಸಾಕಷ್ಟು ಹ್ಯಾಕರ್‌ಗಳು ಇನ್ನೆಷ್ಟು ವ್ಯಕ್ತಿಗಳನ್ನು ಗುರಿಯಾಗಿಸಿಟ್ಟುಕೊಂಡಿರಬಹುದು ಅಲ್ಲವೇ?

#8

#8

ಮೂರು ತಿಂಗಳ ಜೈಲು ಶಿಕ್ಷಗೆ ಗುರಿಯಾಗಿದ್ದ ಇನ್ನೊಬ್ಬ ಹ್ಯಾಕರ್ ಹೇಳುವಂತೆ ಅವನಂತಹ ತಜ್ಞರು 80% ದಷ್ಟು ಎಲ್ಲಾ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವಷ್ಟು ಪರಿಣಿತಿಯನ್ನು ಪಡೆದಿದ್ದಾರೆ ಎಂಬುದಾಗಿದೆ.

#9

#9

ನಮ್ಮ ಫೋನ್ ಇಲ್ಲವೇ ಕಂಪ್ಯೂಟರ್ ಅನ್ನು ಬಳಸಿಕೊಂಡು ಗೌಪ್ಯ ಸಂವಹನಗಳನ್ನು ನಡೆಸುತ್ತೇವೆ ಅಂತೆಯೇ ಬ್ಯಾಂಕಿಂಗ್ ಕೆಲಸಗಳನ್ನು ನಿರ್ವಹಿಸುತ್ತೇವೆ.

#10

#10

ಇಂತಹ ಅವಕಾಶಗಳಿಗಾಗಿ ಕಾದು ಕುಳಿತಿರುವ ಹ್ಯಾಕರ್‌ಗಳ ದಾಳಿಗೆ ತುತ್ತಾಗುವವರು ನಾವೇ ಆಗಿರಬಹುದು. ಇಂತಹ ಅಪಾಯಕಾರಿ ದೇಶಗಳು ವಿಶ್ವದಲ್ಲೇ ಇದ್ದು ಎಲ್ಲಿಂದ ಅಪಾಯ ಹೇಗೆ ಎದುರಾಗಬಹುದು ಎಂಬುದನ್ನು ನಾವು ತಿಳಿದುಕೊಂಡು ಕಾರ್ಯನಿರ್ವಹಿಸಬೇಕು.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಿಜ್ಞಾನಕ್ಕೆ ಸವಾಲೆಸೆದಿರುವ ನಿಗೂಢ ರಹಸ್ಯಗಳು<span style=
ಏಷ್ಯಾ ಖಂಡದಲ್ಲೇ ಅತಿ ಕಡಿಮೆ ಇಂಟರ್ನೆಟ್‌ ವೇಗ ಭಾರತದಲ್ಲಿ: ಏಕೆ ಗೊತ್ತೇ?
ಸರ್ಕಾರಿ ಹ್ಯಾಕರ್‌ಗಳಿಂದ 1 ದಶಲಕ್ಷ ಜಿಮೇಲ್‌ ಖಾತೆಗಳು ಹ್ಯಾಕ್
ಬರಾಕ್ ಒಬಾಮಾರಿಗೆ ಬ್ಲ್ಯಾಕ್‌ಬೆರ್ರಿ ಫೋನ್‌ನಿಂದ ತಲೆನೋವಂತೆ!" title="ವಿಜ್ಞಾನಕ್ಕೆ ಸವಾಲೆಸೆದಿರುವ ನಿಗೂಢ ರಹಸ್ಯಗಳು
ಏಷ್ಯಾ ಖಂಡದಲ್ಲೇ ಅತಿ ಕಡಿಮೆ ಇಂಟರ್ನೆಟ್‌ ವೇಗ ಭಾರತದಲ್ಲಿ: ಏಕೆ ಗೊತ್ತೇ?
ಸರ್ಕಾರಿ ಹ್ಯಾಕರ್‌ಗಳಿಂದ 1 ದಶಲಕ್ಷ ಜಿಮೇಲ್‌ ಖಾತೆಗಳು ಹ್ಯಾಕ್
ಬರಾಕ್ ಒಬಾಮಾರಿಗೆ ಬ್ಲ್ಯಾಕ್‌ಬೆರ್ರಿ ಫೋನ್‌ನಿಂದ ತಲೆನೋವಂತೆ!" />ವಿಜ್ಞಾನಕ್ಕೆ ಸವಾಲೆಸೆದಿರುವ ನಿಗೂಢ ರಹಸ್ಯಗಳು
ಏಷ್ಯಾ ಖಂಡದಲ್ಲೇ ಅತಿ ಕಡಿಮೆ ಇಂಟರ್ನೆಟ್‌ ವೇಗ ಭಾರತದಲ್ಲಿ: ಏಕೆ ಗೊತ್ತೇ?
ಸರ್ಕಾರಿ ಹ್ಯಾಕರ್‌ಗಳಿಂದ 1 ದಶಲಕ್ಷ ಜಿಮೇಲ್‌ ಖಾತೆಗಳು ಹ್ಯಾಕ್
ಬರಾಕ್ ಒಬಾಮಾರಿಗೆ ಬ್ಲ್ಯಾಕ್‌ಬೆರ್ರಿ ಫೋನ್‌ನಿಂದ ತಲೆನೋವಂತೆ!

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳ ಮಾಹಿತಿ ಪಡೆದುಕೊಳ್ಳಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
In this article we are giving you brief description on most dangerous town on the internet..really here peoples activities are more crazy and making fear.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X