Subscribe to Gizbot

ರೋಡಿಗೂ ಬಂತು ತಂತ್ರಜ್ಞಾನ!..ವಿಶ್ವದ ಮೊದಲ ಸೈಕಲ್ ಸೋಲಾರ್ ಮಾರ್ಗ!!

Written By:

ಆಧುನಿಕ ಮಾನವನಿಗೆ ಅತ್ಯವಶ್ಯವಾಗಿ ಬೇಕಾಗಿರುವ ವಿದ್ಯುತ್ ನಮಗೆ ಈಗಾಗಲೇ ನೀರು, ಬೆಳಕು, ಗಾಳಿ ಮತ್ತು ಅಣು ಹೀಗೆ ವಿವಿಧ ಮಾದರಿಯಲ್ಲಿ ಉತ್ಪಾದನೆಯಾಗುತ್ತಿದೆ. ಆದರೂ, ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ವಿಜ್ಞಾನಿಗಳು ವಿವಿಧ ಆಯ್ಕೆಗಳನ್ನು ಸಂಶೋಧಿಸುತ್ತಿದ್ದಾರೆ.

ವಿದ್ಯುತ್ ಉತ್ಪಾದನೆಗೆ ಇಂದು ಅತ್ಯಾಧುನಿಕ ರೀತಿಯ ಹಲವು ಆವಿಷ್ಕಾರಗಳು ನಮಗೆ ಕಾಣಸಿಗುತ್ತವೆ! ಇನ್ನು ಇದಕ್ಕೆ ಉದಾಹರಣೆಯಾಗಿ ನೆದರ್‌ಲೆಂಡ್ ಇದೀಗ ವಿಶ್ವದಲ್ಲಿಯೇ ಮೊದಲು ಸೈಕಲ್ ಸೋಲಾರ್ ಮಾರ್ಗದಲ್ಲಿ ವಿದ್ಯುತ್ ಉತ್ಪಾದನೆಮಾಡುವ ಮಾರ್ಗವನ್ನು ನಿರ್ಮಿಸಿದೆ.!!

ರೋಡಿಗೂ ಬಂತು ತಂತ್ರಜ್ಞಾನ!..ವಿಶ್ವದ ಮೊದಲ ಸೈಕಲ್ ಸೋಲಾರ್ ಮಾರ್ಗ!!

500 ರೂ.ಇದ್ದರೆ ಮನೆಫ್ಯಾನ್ ಮೂಲಕ AC ತಯಾರಿಸುವುದು ಹೇಗೆ? ವಿಡಿಯೋ!!

ಹೌದು, ನಗರಗಳ ಸೈಕಲ್ ಬಳಕೆದಾರರಿಗೆಂದೇ ಸಣ್ಣ ರಸ್ತೆಯನ್ನು ನಿರ್ಮಾಣ ಮಾಡಿರುವ ನೆದರ್‌ಲೆಂಡ್ ದೇಶದಲ್ಲಿ ರಸ್ತೆಗೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ.! ಮಾರ್ಗದಲ್ಲಿ ಅಳವಡಿಸಿರುವ ವಿಶೇಷ ಸೋಲಾರ್‌ ಪ್ಯಾನಲ್‌ಗಳು ಸೂರ್ಯನ ಶಾಖದ ಜೊತೆಗೆ, ಸೈಕಲ್ ಚಲಿಸಿಯೂ ವಿದ್ಯುತ್ ಉತ್ಪಾದನೆಯಾಗಿ ಬ್ಯಾಟರಿಯಲ್ಲಿ ಶೇಖರವಾಗುತ್ತದೆ.!!

ರೋಡಿಗೂ ಬಂತು ತಂತ್ರಜ್ಞಾನ!..ವಿಶ್ವದ ಮೊದಲ ಸೈಕಲ್ ಸೋಲಾರ್ ಮಾರ್ಗ!!

3 ಮೀಟರ್ ಅಗಲವಿರುವ ಈ ರಸ್ತೆಯಲ್ಲಿ ಹಾಕಲಾಗಿರುವ ಸೋಲಾರ್‌ ಪ್ಯಾನಲ್‌ಗಳು ಟೆಂಪರ್‌ ಗ್ಲಾಸ್ ಹೊಂದಿದ್ದು, ಬಹಳ ಗಟ್ಟಿಮುಟ್ಟಾಗಿವೆ. ಹಾಗಾಗಿ, ಸೈಕಲ್ ಸವಾರಿಯಿಂದ ಈ ಪ್ಯಾನಲ್‌ಗಳಿಗೆ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ. ಇನ್ನು ಶೇಖರವಾದ ವಿದ್ಯುತ್ ಬಳಸಿಕೊಂಡು ಅಲ್ಲಿನ ಬೀದಿದೀಪಗಳನ್ನು ಉರಿಸಲಾಗುತ್ತದೆ.!

English summary
embedded with solar panels covered in tempered glass.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot