ಈ ಹಳ್ಳಿಗಳ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಏಕೆ!

By Suneel
|

ಪ್ರಪಂಚದಾದ್ಯಂತ ಕೆಲವು ಪ್ರದೇಶಗಳು ಜನರು ವಾಸಿಸಲು ಯೋಗ್ಯವಲ್ಲ ಎಂದ ಮೇಲೆ ಅಲ್ಲಿನ ಹಳ್ಳಿಗಳು ಸ್ಥಳಾಂತರವಾಗಿವೆ. ಆದ್ರೂನೂ ಸಹ ಇಂದಿಗೂ ಪ್ರಪಂಚದಾದ್ಯಂತ ಕೆಲವು ಹಳ್ಳಿಗಳು ಜ್ವಾಲಾಮುಖಿ ಉಂಟಾಗುವ ಪ್ರದೇಶದಲ್ಲಿವೆ. ಮಣ್ಣಿನಿಂದ ಕಟ್ಟಲಾದ ಮನೆಗಳೇ ಇರುವ ಹಳ್ಳಿಗಳು ದೊಡ್ಡ ಬಂಡೆಗಳ ಕೆಳಗೆ ಇವೆ.

ಆದರೂ ಸಹ ಅಲ್ಲಿನ ಜನತೆ ಅದೇ ನಿಸರ್ಗಕ್ಕೆ ಹೊಂದಿಕೊಂಡಿದ್ದಾರೆ. ಪ್ರಪಂಚದಲ್ಲಿ ಇಂತಹ ಹಳ್ಳಿಗಳು ಇದ್ದಾವ? ಎಂದು ಆಶ್ಚರ್ಯ ಪಡುವಂತೆ ಕೆಲವು ಹಳ್ಳಿಗಳು ಗುಪ್ತವಾಗಿವೆ. ಇವುಗಳು ದೊಡ್ಡ ಕಣಿವೆಯೊಳಗೆ, ಬಂಡೆಗಳ ಮೇಲ್ಮೈ ಮೇಲೆ ಮತ್ತು ಭೂಗತವಾಗಿವೆ. ಈ ಹಳ್ಳಿಗಳ ಫೋಟೋಗಳು ಅಲ್ಲಿನ ವಿಶೇಷತೆ ಮತ್ತು ಆಶ್ಚರ್ಯಕರ ಅಂಶಗಳಿಂದ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿವೆ. ಅಂತಹ ಹಳ್ಳಿಗಳು ಯಾವುವು ಮತ್ತು ಅವುಗಳ ಫೋಟೋಗಳನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ತಿಳಿಯಿರಿ.

ವಿಶ್ವದ ಅಂತ್ಯದ ಬಗ್ಗೆ 'ಲಿಯೊನಾರ್ಡೊ ಡಾ ವಿಂಚಿ' ಹೇಳಿದ್ದ ಭವಿಷ್ಯ ಬಹಿರಂಗ

ಅಯಾಗಶಿಮ

ಅಯಾಗಶಿಮ

ಫಿಲಿಪೈನ್‌ ಸಮುದ್ರದ ಮಧ್ಯೆ ಇರುವ ಅಯಾಗಶಿಮ ಹಳ್ಳಿಯು ಪ್ರಪಂಚದ ಅತ್ಯಂತ ಧೈರ್ಯಶಾಲಿ ಹಳ್ಳಿಯಾಗಿದ್ದು, ಅಲ್ಲಿ 200 ಕ್ಕೂ ಹೆಚ್ಚಿನ ನಿವಾಸಿಗಳು ವಾಸಿಸುತ್ತಿದ್ದಾರೆ. ಗಾಬರಿ ಪಡುವಂತಹ ವಿಷಯ ಅಂದ್ರೆ ಈ ಹಳ್ಳಿ ಇರುವುದು ಜ್ವಾಲಾಮುಖಿ ಉಂಟಾಗುವ ಪ್ರದೇಶದಲ್ಲಿ.

ಮೊನೆಮ್‌ವಾಸಿಯಾ

ಮೊನೆಮ್‌ವಾಸಿಯಾ

ಬೃಹದಾಕಾರದ ಬಂಡೆಯಿಂದ ಮರೆಯಾಗಿರುವ ಮೊನೆಮ್‌ವಾಸಿಯಾ ಇರುವುದು ಗ್ರೀಕ್‌ ಕರಾವಳಿ ಪ್ರದೇಶದಲ್ಲಿರುವ ದ್ವೀಪದಲ್ಲಿ. ಕ್ರಿ.ಶ 375 ರಲ್ಲಿ ಭೂಕಂಪದಿಂದ ಮುಖ್ಯ ಭೂಭಾಗದಿಂದ ದೂರವಾದ ಈ ಹಳ್ಳಿಗರು ಓಡಾಡಲು ಸಣ್ಣ ಮಾರ್ಗ ಕಲ್ಪಿಸಲಾಗಿದೆ.

ಫುಗ್ತಾಲ್ ಮಠ

ಫುಗ್ತಾಲ್ ಮಠ

ಉತ್ತರ ಭಾರತದಲ್ಲಿ ಗುಪ್ತವಾಗಿರುವ ಈ ಏಕಾಂಗಿ ಹಳ್ಳಿಯನ್ನು ಫುಗ್ತಾಲ್ ಮಠ ಎಂದು ಕರೆಯಲಾಗುತ್ತದೆ. ಮಣ್ಣು ಮತ್ತು ಮರದಿಂದ ನಿರ್ಮಿಸಲಾದ ಮನೆಗಳಿದ್ದು, ಬಂಡೆಗಲ್ಲಿನ ಗುಹೆಯ ದ್ವಾರದಲ್ಲಿ ಹೆಚ್ಚಿನ ಮನೆಗಳು ನಿರ್ಮಿಸವಾಗಿವೆ. ಲಡಾಕ್‌ ಜಿಲ್ಲೆಯ ಜಾನ್‌ಸ್ಕರ್‌ ಪ್ರದೇಶದಲ್ಲಿ ಈ ಗುಪ್ತ ಹಳ್ಳಿ ಇದೆ.

ಐಸಾರ್‌ಟಾಗ್‌

ಐಸಾರ್‌ಟಾಗ್‌

64 ಕ್ಕೂ ಹೆಚ್ಚಿನ ಜನರಿರುವ ಐಸಾರ್‌ಟಾಗ್‌ ಹಳ್ಳಿ ಇರುವುದು ಗ್ರೀನ್‌ಲ್ಯಾಂಡ್‌ನಲ್ಲಿ. ಹಿಮ ಮತ್ತು ಮಂಜು ಹೆಚ್ಚಾಗಿ ಇರುವ ಪ್ರದೇಶದಲ್ಲಿ ಜನರು ಕೇವಲ ಭೇಟೆಯಾಡಿದ ಮಾಂಸವನ್ನು ಮಾತ್ರ ತಿಂದು ಬದುಕುತ್ತಾರಂತೆ. ಇಲ್ಲಿ ಯಾವ ಸಸ್ಯವನ್ನು ಬೆಳೆಯಲು ಸಾಧ್ಯವಾಗುವುದಿಲ್ಲ.

ಗಸಡಲುರ್ ಹಳ್ಳಿ

ಗಸಡಲುರ್ ಹಳ್ಳಿ

ಡೆನ್ಮಾರ್ಕ್‌ನ ಪಶ್ಚಿಮ ಭಾಗದಲ್ಲಿನ ಫ್ಯಾರೋ ದ್ವೀಪದಲ್ಲಿ ಗಸಡಲುರ್‌ ಹಳ್ಳಿ ಇದೆ. ಕೇವಲ 16 ಜನರು ಶಾಂತವಾಗಿ ಇಲ್ಲಿ ನಿವಾಸಿಗಳಾಗಿದ್ದಾರೆ. ಅಲ್ಲದೇ ಉತ್ತರ ಅಟ್ಲಾಂಟಿಕ್‌ನ ಗಲ್ಫ್‌ ಸ್ಟ್ರೀಮ್‌ ಸಹ ಇಲ್ಲಿಯೇ ಇದೆ.

ಹುವಾಕೆಶಿನಾ

ಹುವಾಕೆಶಿನಾ

ಪ್ರಪಂಚದ ಅತ್ಯಂತ ಒಣ ಹವಾಮಾನದಲ್ಲಿ, ಸೊಂಪಾದ ಪಾಮ್‌ ಮರಗಳು ಇರುವ ಓಯಸಿಸ್‌ ಮಧ್ಯೆ ಹುವಾಕೆಶಿನಾ ಹಳ್ಳಿ ಇದೆ. ಅಂದಹಾಗೆ ಹುವಾಕೆಶಿನಾ ಇರುವುದು ಪೆರುವಿನಲ್ಲಿ. ಮ್ಯಾಜಿಕಲ್ ಪ್ರದೇಶವೆಂದು ಕರೆಯಲಾಗುವ ಹುವಾಕೆಶಿನಾದಲ್ಲಿ 96 ನಿವಾಸಿಗಳಿದ್ದು ಮರಳಿನ ಬ್ಯುಸಿನೆಸ್‌ ಅನ್ನು ಸಹ ಮಾಡುತ್ತಾರೆ.

ಬಂಡಿಯಾಗರ

ಬಂಡಿಯಾಗರ

ಮಣ್ಣಿನಿಂದ ಕಟ್ಟಿದ ಮಾದರಿ ಹಳ್ಳಿಯಾಗಿ ಬಂಡಿಯಾಗರ ಕಾಣುತ್ತದೆ. ಆದರೆ ವಾಸ್ತವವಾಗಿ ಈ ಹಳ್ಳಿಯು ಪಶ್ಚಿಮ ಆಫ್ರಿಕಾದಲ್ಲಿದೆ. ಬಂಡಿಯಾಗರ ಪ್ರಸ್ಥಭೂಮಿ, ಕಮರಿಗಳು ಮತ್ತು ಬಯಲು ಪ್ರದೇಶಗಳಲ್ಲಿರುವ ಕೆಂಪು ಬಣ್ಣದ ಹಳ್ಳಿಯಾಗಿದೆ.

 ಅನ್‌ಡ್ರಿಡಾಲ್‌

ಅನ್‌ಡ್ರಿಡಾಲ್‌

ನಾರ್ವೆಯಲ್ಲಿರುವ ಅನ್‌ಡ್ರಿಡಾಲ್‌ ಹಳ್ಳಿಯಲ್ಲಿ 100 ಜನರಿದ್ದು, 500 ಕ್ಕೂ ಹೆಚ್ಚು ಆಡುಗಳು ಇವೆ. ಅಲ್ಲದೇ ಪ್ರಖ್ಯಾತ ಪ್ರವಾಸಿ ತಾಣ ಅನ್‌ಡ್ರಿಡಾಲ್‌ ಆಗಿದೆ. ಅಲ್ಲದೇ ಕಂದು ಬಣ್ಣದ ಆಡಿನ ಗಿಣ್ಣು ಮತ್ತು ಮಾಂಸಕ್ಕೆ ಸಹ ಅನ್‌ಡ್ರಿಡಾಲ್‌ ಪ್ರದೇಶ ಹೆಸರುವಾಸಿಯಾಗಿದೆ.

ಫ್ಯೂರೋರ್‌

ಫ್ಯೂರೋರ್‌

ಇಟಲಿಯ ಈ ಫ್ಯೂರೋರ್‌ ಹಳ್ಳಿಯು ಪ್ರಕಾಶಮಾನ ಬಣ್ಣದಲ್ಲಿ ಕಾಣಿಸುವುದಲ್ಲದೇ ಭಿತ್ತಿಚಿತ್ರಗಳಿಂದ ಕಂಗೊಳಿಸುತ್ತದೆ. ನೈಋತ್ಯ ಇಟಲಿಯ ಕ್ಯಾಂಪನಿಯಾ ಪ್ರದೇಶದಲ್ಲಿ ಫ್ಯೂರೋರ್‌ ಇದೆ.

ಸಪ

ಸಪ

ಉತ್ತರ ವಿಯೆಟ್ನಾಂ ಪ್ರದೇಶದಲ್ಲಿ ಬೆಟ್ಟಗಳ ಸಾಲಿನಲ್ಲಿ, ಕ್ಯಾಸ್ಕೇಡಿಂಗ್‌ ರೋಮಾಂಚಕ ಹಸಿರು ಭತ್ತ ಬೆಳೆಯುವ ಪ್ರದೇಶದಲ್ಲಿ ಸಪ ಹಳ್ಳಿ ಕಂಡುಬರುತ್ತದೆ.

ಕೂಬರ್‌ ಪೆಡಿ

ಕೂಬರ್‌ ಪೆಡಿ

ಉತ್ತರ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕಂಡುಬರುವ ಕೂಬರ್ ಪೆಡಿ ಪ್ರದೇಶದ ಹತ್ತಿರದಲ್ಲಿನ ಡ್ಯೂಗಟ್ಸ್ ಎಂಬಲ್ಲಿ 1,00೦ ಕ್ಕೂ ಹೆಚ್ಚಿನ ಜನರು ಭೂಗತ ನಿವಾಸಿಗಳಾಗಿದ್ದರೆ.

ರ್ಯೂಗನ್

ರ್ಯೂಗನ್

ಪರ್ವತ ಪ್ರದೇಶದಲ್ಲಿ ಕಂಡುಬರುವ ಶಾಂತ ವಾತಾವರಣದ ಹಳ್ಳಿ ಎಂದರೆ ರ್ಯೂಗನ್. ಇದು ಫ್ರಾನ್ಸ್‌ನ ಪರ್ವತ ಶ್ರೇಣಿ ಆಲ್ಫಾಸ್‌ ದಿ ಹಾಟ್‌ ಪ್ರವೆನ್ಸ್‌ನಲ್ಲಿ ಇದೆ. ಪ್ರವಾಸಿಗರು ಒಂದು ವರ್ಷಗಳ ಕಾಲ ಬೇಕಾದರೂ ಸಹ ಇಲ್ಲಿ ತಂಗಬಹುದಾಗಿದೆಯಂತೆ.

 ಸುಪೈ

ಸುಪೈ

600 ಕ್ಕೂ ಹೆಚ್ಚು ಬುಡಕಟ್ಟು ಜನರು ವಾಸಿಸುವ ಹವಸುಪೈ ಕಣಿವೆ ಪ್ರದೇಶವು ಅರಿಜೋನದಲ್ಲಿದೆ. ಹವಸುಪೈ ಅಮೆರಿಕದಲ್ಲಿರುವ ಭಾರತೀಯ ಸಣ್ಣ ರಾಷ್ಟ್ರವಾಗಿದೆ. ಪ್ರವಾಸಿಗರು ಇಲ್ಲಿಗೆ ಕಾಲ್ನಡಿಗೆ ಅಥವಾ ಹೆಲಿಕಾಪ್ಟರ್‌ ಮೂಲಕ ಹೋಗಬಹುದಾಗಿದೆ. ವಿಶೇಷ ಅಂದ್ರೆ ರಹಸ್ಯ ತಾಣವಾಗಿರುವ ಈ ಹಳ್ಳಿಯಲ್ಲಿ ಕೆಫೆ, ಜೆನೆರಲ್‌ ಸ್ಟೋರ್‌, ಲಾಡ್ಜ್‌, ಪೋಸ್ಟ್‌ ಆಫೀಸ್‌, ಶಾಲೆ, ಚರ್ಚ್‌ ಎಲ್ಲವೂ ಸಹ ಇವೆ.

ತ್ರಿಸ್ಟಾನ್ ಡ ಕುನ್ಹಾ

ತ್ರಿಸ್ಟಾನ್ ಡ ಕುನ್ಹಾ

ಪ್ರಪಂಚದ ಅತ್ಯಂತ ದೂರದ ಪ್ರದೇಶ ಎಂದು 'ತ್ರಿಸ್ಟಾನ್‌ ಡ ಕುನ್ಹಾ' ಹಳ್ಳಿಗೆ ಪ್ರಶಸ್ತಿ ನೀಡಬಹುದು. ಯಾಕಂದ್ರೆ 'ತ್ರಿಸ್ಟಾನ್ ಡ ಕುನ್ಹಾ' ಗೆ ಹೋಗಲು 6 ದಿನಗಳ ಕಾಲ ಬೋಟ್‌ನಲ್ಲಿ ಪ್ರಯಾಣ ಮಾಡಬೇಕು. ಸೈಂಟ್ ಹೆಲೆನಾ 1,243 ಮೈಲಿಗಳು, ದಕ್ಷಿಣ ಆಫ್ರಿಕಾದಿಂದ 1,491 ಮೈಲಿ ಮತ್ತು 2,088 ಮೈಲಿಗಳು ದಕ್ಷಿಣ ಅಮೆರಿಕಾದಿಂದ ದೂರವಿದೆ.

ಮೊನ್‌ಸಾಂಟೊ

ಮೊನ್‌ಸಾಂಟೊ

ಸರಾಸರಿ ಒಂದು ಪ್ರವಾಸಿ ಹಡಗಿನ ತೂಕವಿರುವ ಬಂಡೆಯ ಕೆಳಗಿರುವ ಹಳ್ಳಿ ಮೊನ್‌ಸಾಂಟೊ. ಈ ಹಳ್ಳಿಯು ಪೋರ್ಚುಗೀಸ್‌ನಲ್ಲಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಿಶ್ವದ ಅಂತ್ಯದ ಬಗ್ಗೆ 'ಲಿಯೊನಾರ್ಡೊ ಡಾ ವಿಂಚಿ' ಹೇಳಿದ್ದ ಭವಿಷ್ಯ ಬಹಿರಂಗ<br /></a><a href=7 ವರ್ಷದ ಬಾಲಕನ ಮೆಸೇಜ್‌ನಿಂದ 15 ಜನರು ಪ್ರಾಣಾಪಾಯದಿಂದ ಪಾರು" title="ವಿಶ್ವದ ಅಂತ್ಯದ ಬಗ್ಗೆ 'ಲಿಯೊನಾರ್ಡೊ ಡಾ ವಿಂಚಿ' ಹೇಳಿದ್ದ ಭವಿಷ್ಯ ಬಹಿರಂಗ
7 ವರ್ಷದ ಬಾಲಕನ ಮೆಸೇಜ್‌ನಿಂದ 15 ಜನರು ಪ್ರಾಣಾಪಾಯದಿಂದ ಪಾರು" />ವಿಶ್ವದ ಅಂತ್ಯದ ಬಗ್ಗೆ 'ಲಿಯೊನಾರ್ಡೊ ಡಾ ವಿಂಚಿ' ಹೇಳಿದ್ದ ಭವಿಷ್ಯ ಬಹಿರಂಗ
7 ವರ್ಷದ ಬಾಲಕನ ಮೆಸೇಜ್‌ನಿಂದ 15 ಜನರು ಪ್ರಾಣಾಪಾಯದಿಂದ ಪಾರು

Best Mobiles in India

English summary
These Villages Photos are went viral on social Platform. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X