Subscribe to Gizbot

ವಿಶ್ವದ ಅಂತ್ಯದ ಬಗ್ಗೆ 'ಲಿಯೊನಾರ್ಡೊ ಡಾ ವಿಂಚಿ' ಹೇಳಿದ್ದ ಭವಿಷ್ಯ ಬಹಿರಂಗ

Written By:

'ಲಿಯೊನಾರ್ಡೊ ಡಿ ಸರ್‌ ಪೈರೋ ಡಾ ವಿಂಚಿ ಅಥವಾ ಸಾಮಾನ್ಯವಾಗಿ ಪ್ರಖ್ಯಾತವಾದ 'ಲಿಯೊನಾರ್ಡೊ ಡಾ ವಿಂಚಿ'ರವರು ಇಟಲಿಯ ನವೋದಯ ಕಾಲದ ಮಹಾನ್‌ ವಿದ್ವಾಂಸ. ಇತಿಹಾಸ ಪುಸ್ತಕಗಳನ್ನು ಓದಿರುವ ಎಲ್ಲರಿಗೂ 'ಲಿಯೊನಾರ್ಡ್‌ ಡಾ ವಿಂಚಿ' ಹೆಸರು ಪರಿಚಿತ.

ಅಂದಹಾಗೆ ಲಿಯೊನಾರ್ಡೊ ಡಾ ವಿಂಚಿ ಕೇವಲ ಒಬ್ಬ ವಿದ್ವಾಂಸ ಮಾತ್ರವಲ್ಲದೇ ಚಿತ್ರ ಕಲಾವಿದ, ಶಿಲ್ಪಿ, ವಾಸ್ತುಶಿಲ್ಪಿ, ಸಂಗೀತಗಾರ, ವಿಜ್ಞಾನಿ, ಗಣಿತಜ್ಞ, ಎಂಜಿನಿಯರ್, ಸಂಶೋಧಕ, ಅಂಗರಚನಾಕಾರ, ಭೂವಿಜ್ಞಾನಿ ಭೂಪಟ ರಚನೆಗಾರ, ಸಸ್ಯಶಾಸ್ತ್ರಜ್ಞ ಮತ್ತು ಲೇಖಕ. ಜಗತ್ತು ಕಂಡ ಅತ್ಯಂತ ಬುದ್ಧಿವಂತ ಎಂದೇ ಹೆಸರಾಗಿರುವವರು 'ಲಿಯೊನಾರ್ಡ್‌ ಡಾ ವಿಂಚಿ'. ಇವರು ಜಗತ್ತಿನ ಅಂತ್ಯ 4006 ವರ್ಷದಲ್ಲಿ 'ಜಾಗತಿಕ ಪ್ರವಾಹ'ದಿಂದ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಡಾ ವಿಂಚಿ ಹೇಳಿರುವ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಭೂಮಿಯ ಅಂತ್ಯ: ಭವಿಷ್ಯ ನುಡಿದ ಸ್ಟೀಫನ್ ಹಾಕಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಾಗತಿಕ ಪ್ರವಾಹದಿಂದ 4006 ರಲ್ಲಿ ಪ್ರಪಂಚ ಅಂತ್ಯ

ಜಾಗತಿಕ ಪ್ರವಾಹದಿಂದ 4006 ರಲ್ಲಿ ಪ್ರಪಂಚ ಅಂತ್ಯ

'ಲಿಯೊನಾರ್ಡೊ ಡಾ ವಿಂಚಿ' ಮತ್ತು ಇತರರು ಪ್ರಪಂಚ ಅಂತಿಮವಾಗಿ ಒಂದು ದಿನ ಕೊನೆಗೊಳ್ಳುತ್ತದೆ. ಡಾ ವಿಂಚಿ ಪ್ರಕಾರ ಜಗತ್ತು 'ಜಾಗತಿಕ ಪ್ರವಾಹ'ದಿಂದ 4006 ನೇ ವರ್ಷದಲ್ಲಿ ಅಂತ್ಯಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

 ಲಿಯೊನಾರ್ಡೊ ಡಾ ವಿಂಚಿ

ಲಿಯೊನಾರ್ಡೊ ಡಾ ವಿಂಚಿ

ಲಿಯೊನಾರ್ಡೊ ಡಾ ವಿಂಚಿಯವರು ಒಬ್ಬ ಮಹಾನ್‌ ವಿದ್ವಂಸ ಎನ್ನುವುದಕ್ಕಿಂತ ಜಗತ್ತು ಕಂಡ ಅತಿ ಬುದ್ಧಿವಂತ ಮತ್ತು ಪ್ರಕಾಶಮಾನವಾದ ಮನಸ್ಸುಗಳ ವ್ಯಕ್ತಿ. ಗಗನಯಾತ್ರಿ ಅರ್ಮಗೆಡ್ಡಾನ್ ಮತ್ತು ಇತರರಂತೆ ಡಾ ವಿಂಚಿ ಸಹ ವಿಶ್ವ ಅಂತ್ಯಗೊಳ್ಳುವ ಬಗ್ಗೆ ಆಸಕ್ತಿಹೊಂದಿದ್ದರು.

 ಭವಿಷ್ಯವಾಣಿ

ಭವಿಷ್ಯವಾಣಿ

ವ್ಯಾಟಿಕನ್‌ ಸಂಶೋಧಕ 'ಸಬ್ರಿನಾ ಸ್ಫೋರ್ಝಾ ಗಲಿಟ್ಜಿಯಾ', 'ಡಾ ವಿಂಚಿ' ಜಗತ್ತು ಹೇಗೆ ಅಂತ್ಯಗೊಳ್ಳುತ್ತದೆ ಎಂಬ ಬಗ್ಗೆ 'ಜಗತ್ತಿನ ಅಂತ್ಯ ಜಾಗತಿಕ ಪ್ರವಾಹದಿಂದ ಆಗುತ್ತದೆ. ಅಂತ್ಯವು 4006 ವರ್ಷದಲ್ಲಿ ಮಾರ್ಚ್‌ 21 ರಿಂದ ಪ್ರಾರಂಭವಾಗಿ ನವೆಂಬರ್‌ ಮೊದಲ ದಿನ 4006 ನೇ ವರ್ಷದಲ್ಲಿ ಕೊನೆಗೊಳ್ಳುತ್ತದೆ ಎಂದು ಭವಿಷ್ಯ ನುಡಿದಿರುವ ಬಗ್ಗೆ ಹೇಳಿದ್ದಾರೆ.

ಸಮುದ್ರದ ನೀರು

ಸಮುದ್ರದ ನೀರು

ಡಾ ವಿಂಚಿ'ರವರು 'ಸಮುದ್ರದ ನೀರು ಪರ್ವತಗಳಿಗಿಂತ ಆಕಾಶದೆತ್ತರಕ್ಕೆ ಎತ್ತರಕ್ಕೆ ಉಬ್ಬಿ ಜನರು ವಾಸಿಸುವ ಪ್ರದೇಶಗಳಿಗೆ ಪುನಃ ಬೀಳುತ್ತದೆ" ಎಂದು ಹೇಳಿದ್ದಾರೆ.

ಸ್ಫೋರ್ಝ ಹೇಳಿದ್ದೇನು

ಸ್ಫೋರ್ಝ ಹೇಳಿದ್ದೇನು

ವ್ಯಾಟಿಕನ್‌ ಸಂಶೋಧಕಿಯಾದ ಸ್ಫೋರ್ಝ'ರವರು ಡಾ ವಿಂಚಿ ಹೇಳಿಕೆಗೆ ತೀರ್ಮಾನ ನೀಡುತ್ತ ಅಂದಿನ ಜಗತ್ತಿನ ಅಂತ್ಯ ಹೊಸ ಮಾನವ ಯುಗದ ಪ್ರಾರಂಭ ಎಂಬುದಾಗಿ ಗುರುತಿಸಿದ್ದಾರೆ. ಈ ಮಾಹಿತಿಯನ್ನು ಡಾ ವಿಂಚಿಯ 'ದಿ ಲಾಸ್ಟ್‌ ಸಪ್ಪರ್‌' ಭಿತ್ತಿಚಿತ್ರದ ಸುಳಿವುಗಳ ಆಧಾರದಿಂದ ಹೇಳಿದ್ದಾರೆ.

ಡಾ ವಿಂಚಿ ಹಸ್ತಪ್ರತಿಗಳು

ಡಾ ವಿಂಚಿ ಹಸ್ತಪ್ರತಿಗಳು

ಡಾ ವಿಂಚಿ'ರವರ ಭಿತ್ತಿ ಚಿತ್ರದಿಂದ ಮಾತ್ರವಲ್ಲದೇ ಅವರ ಹಸ್ತಪ್ರತಿಗಳನ್ನು ಒಬ್ಬ ಸಂಶೋಧಕನಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ 'ಸಬ್ರಿನಾ ಸ್ಫೋರ್ಝಾ ಗಲಿಟ್ಜಿಯಾ' ಅಧ್ಯಯನ ನಡೆಸಿದ್ದಾರಂತೆ. ಪ್ರಸ್ತುತದಲ್ಲಿ ಇವರು ವ್ಯಾಟಿಕನ್‌ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಲಾಸ್ಟ್‌ ಸಪ್ಪರ್‌ ವರ್ಣಚಿತ್ರ

ಲಾಸ್ಟ್‌ ಸಪ್ಪರ್‌ ವರ್ಣಚಿತ್ರ

'ಲಿಯೊನಾರ್ಡೊ ಡಾ ವಿಂಚಿ'ರವರು 1495 ರಲ್ಲಿ 'ಲಾಸ್ಟ್‌ ಸಪ್ಪರ್‌' ವರ್ಣಚಿತ್ರವನ್ನು ಬಿಡಿಸಲು ಪ್ರಾರಂಭಿಸಿ 1498 ರಲ್ಲಿ ಪೂರ್ಣಗೊಳಿಸಿದರು. 1978 ಮತ್ತು 1999 ನಡುವೆ ಯಥಾಸ್ಥಾಪನೆ ಹೆಚ್ಚಾಗಿ ನಡೆಯಿತು. ನಂತರದಲ್ಲಿ ಈ ವರ್ಣಚಿತ್ರವು ತೀವ್ರವಾಗಿ ಹದಗೆಟ್ಟಿತು.

 ಸಂದರ್ಶನ

ಸಂದರ್ಶನ

ವ್ಯಾಟಿಕನ್‌ ಸಂಶೋಧಕರಾದ 'ಸ್ಫೋರ್ಝ' ಇಟಲಿಯ 'ಲ ರಿಪಬ್‌ಬ್ಲಿಕ' ನ್ಯೂಸ್‌ ಪೇಪರ್‌ನೊಂದಿಗೆ ನಡೆಸಿದ ಸಂದರ್ಶನದ ಪ್ರಕಾರ, "ಡಾ ವಿಂಚಿ'ರವರು ಮನುಕುಲದ ಎಲ್ಲಾ ಚಟುವಟಿಕೆಗಳನ್ನು ಕಂಡಿದ್ದರು, ಅದೇ ಲೆಕ್ಕಾಚಾರದ ಪ್ರಕಾರ ಜಗತ್ತಿನ ಅಂತಿಮ ಹೇಗೆ ಎಂದು ಹೇಳಲಾಗಿದೆ. ಇತರೆ ಹಲವು ಲೇಖಕರಾದ ಅರಿಸ್ಟಾಟಲ್‌, ಪ್ಲೇಟೊ ಸಹ ಪ್ರಾಚೀನ ಪುಸ್ತಕಗಳಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ" ಎಂಬುದನ್ನು ಹೇಳಿದ್ದಾರೆ.

ಡಾ ವಿಂಚಿ ಹೇಳಿಕೆ

ಡಾ ವಿಂಚಿ ಹೇಳಿಕೆ

"ಸುತ್ತಲಿನ ಎಲ್ಲ ಪ್ರದೇಶಗಳಲ್ಲು ಪೂಜ್ಯ ಮರಗಳನ್ನು ಕಾಣಬಹುದು. ಗಾಳಿಯಿಂದ ಊದಿಕೊಂಡ ನದಿಗಳು ಕೋಪಗೊಂಡು ವ್ಯಾಪಕವಾದ ತಗ್ಗುಪ್ರದೇಶಗಳಿಗೆ ನುಗ್ಗಿ ಅಲ್ಲಿನ ನಿವಾಸಿಗಳನ್ನು ಮುಳುಗಿಸಿ ಹರಿಯಬಹುದು- ಲಿಯೊನಾರ್ಡೊ ಡಾ ವಿಂಚಿ".

ಡಾ ವಿಂಚಿ ಬಗ್ಗೆ ಸ್ಪೋರ್ಝ ಹೇಳಿದ್ದೇನು

ಡಾ ವಿಂಚಿ ಬಗ್ಗೆ ಸ್ಪೋರ್ಝ ಹೇಳಿದ್ದೇನು

ವ್ಯಾಟಿಕನ್‌ ಸಂಶೋಧಕಿ "ಲಿಯೊನಾರ್ಡೊ ಒಬ್ಬ ವಿಜ್ಞಾನಿಯಾಗಿ ಮತ್ತು ಕಷ್ಟದ ಸಮಯದಲ್ಲಿ ಬದುಕಿದ್ದ ನಂಬಿಕೆಯ ವ್ಯಕ್ತಿಯಾಗಿ ತಮ್ಮ ಕೆಲಸಗಳಲ್ಲಿ ರಹಸ್ಯ ಸಂದೇಶಗಳನ್ನು ಸಂಘಟಿಸಿದ್ದರು.' ಆದ್ದರಿಂದ ದಾಳಿ ಸಂಭವಿಸಲಿಲ್ಲ" ಎಂದು ವಿವರಿಸಿದ್ದಾರೆ.

 1476 ರಿಂದ 1478 ನಡುವೆ ಕಾಣೆಯಾಗಿದ್ದ ಡಾ ವಿಂಚಿ

1476 ರಿಂದ 1478 ನಡುವೆ ಕಾಣೆಯಾಗಿದ್ದ ಡಾ ವಿಂಚಿ

ಅತ್ಯಂತ ಕುತೂಹಲದ ವಿಷಯವೆಂದರೆ ಲಿಯೊನಾರ್ಡೊ ಡಾ ವಿಂಚಿ'ರವರು 1476 ರಿಂದ 1478 ನಡುವೆ ಯಾರು ಸಹ ಪತ್ತೆಹಚ್ಚಲು ಸಾಧ್ಯವಾಗದಂತೆ ಕಾಣೆಯಾಗಿದ್ದರು. 1478 ರಲ್ಲಿ ಫ್ಲೊರೆನ್ಸ್‌ನಲ್ಲಿ ಕಾಣಿಸಿಕೊಂಡು ಅವರ ಎಲ್ಲಾ ಸೃಜನಶೀಲತೆ ಹೊಸ ಮಟ್ಟವನ್ನು ತಲುಪಿ ಕಲೆಗಳ ಜೊತೆಗೆ ಶಿಸ್ತನ್ನು ವಿಸ್ತರಿಸಿದ್ದರು.

rn

ವಿಶ್ವದ ಅಂತ್ಯ

ಲಿಯೊನಾರ್ಡೊ ಡಾ ವಿಂಚಿ' ಭವಿಷ್ಯ ನುಡಿದ ವಿಶ್ವದ ಅಂತ್ಯ ಹೇಗಿರುತ್ತದೆ ಎಂಬ ವೀಡಿಯೊ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Leonardo Da Vinci like many other predicted that the world would eventually end one day. According to da Vinci, this would occur by means of a ‘Global Flood’ in the years 4006.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot