ಭವಿಷ್ಯವನ್ನೇ ಬದಲಾಯಿಸುವ ಟಾಪ್ ಅನ್ವೇಷಣೆಗಳು

By Shwetha
|

ಟೈಮ್ ಮಿಶನ್‌ನಲ್ಲಿ ನೀವು 100 ವರ್ಷಗಳ ಹಿಂದೆ ಚಲಿಸಿದರೆ, ಸಂಪೂರ್ಣ ವಿಶ್ವವನ್ನೇ ನೀವು ಪ್ರಥಮ ಮಹಾ ಯುದ್ಧದ ಮಧ್ಯಭಾಗದಲ್ಲಿ ಕಾಣುವಿರಿ ಒಂದು ವಿಕ್ಟೋರಿಯಾ ಯುಗ ಇನ್ನೊಂದು 20 ನೇ ಶತಮಾನವಾಗಿದೆ. 1916 ರಲ್ಲಿ ಐನ್‌ಸ್ಟನ್‌ ಅಯಸ್ಕಾಂತೀಯ ಅಲೆಗಳು ಸಂಶೋಧನೆಯಂತೆ ಬಹಳಷ್ಟು ಅನ್ವೇಷಣೆಗಳು ನಮ್ಮ ಜಗತ್ತನ್ನು ಆಧುನಿಕಗೊಳಿಸುತ್ತಿದೆ.

ವಿಶ್ವವನ್ನು ಬದಲಾಯಿಸುತ್ತಿರುವ ಹಲವಾರು ಅನ್ವೇಷಣೆಗಳು ನಡೆದಿದ್ದು ಇದು ನಿಜಕ್ಕೂ ಹೊಸ ಯುಗವನ್ನು ನಮ್ಮ ಕಣ್ಣ ಮುಂದೆ ತೆರೆದಿಟ್ಟಿದೆ ಈ ಅನ್ವೇಷಣೆಗಳು ನಮ್ಮ ಜೀವನವನ್ನೇ ಬದಲಾಯಿಸುವಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಇದರ ಒಂದೊಂದು ವಿಶೇಷತೆಗಳು ಒಂದೊಂದು ಹೊಸ ಲೋಕವನ್ನು ಪ್ರಸ್ತುತಪಡಿಸಿವೆ. ಇಂದಿನ ಲೇಖನದಲ್ಲಿ ಈ ಅದ್ಭುತ ಅನ್ವೇಷಣೆಗಳನ್ನು ಕುರಿತು ಕೆಲವೊಂದು ಮಾಹಿತಿಯನ್ನು ನಾವು ನೀಡುತ್ತಿದ್ದು ಇದರಿಂದ ಲೋಕದ ಬದಲಾವಣೆಯ ನಿಯಮಾವಳಿಗಳನ್ನು ನಿಮಗೆ ಅರಿಯಬಹುದು.

#1

#1

ಫಿಂಗರ್ ಪ್ರಿಂಟ್ ಲಾಕ್ಸ್, ಐರಿಸ್ ಸ್ಕ್ಯಾನ್ಸ್ ಮತ್ತು ಮುಖ ಮತ್ತು ಧ್ವನಿ ಗುರುತಿಸುವಿಕೆ ಬಿಡಗಡೆಗೊಳ್ಳಲಿದ್ದು, ನಿಮ್ಮ ವೈಯಕ್ತಿಕ ಡಿವೈಸ್‌ಗೆ ಮಾತ್ರವಲ್ಲದೆ ಬ್ಯಾಂಕ್, ಸೆಕ್ಯುರಿಟಿ ಮತ್ತು ಬಾರ್ಡರ್ ನಿಯಂತ್ರಣದಲ್ಲೂ ಈ ಬದಲಾವಣೆ ಬರಲಿದೆ.

#2

#2

ಕೃತಕ ಸ್ನಾಯುಗಳು, ಪ್ರಾಸ್ಥೆಟಿಕ್ ಲಿಂಬ್ಸ್, ಹಾರ್ಟ್ ವೆಲ್ಸ್ಚ್, ಜೊತೆಗೆ ಮಾನವ ದೇಹದ ಭಾಗಗಳು 3 ಡಿ ಅವತರಣಿಕೆಯಲ್ಲಿ ಬರಲಿವೆ. ರೋಗಿಗಳ ಸ್ವಂತ ಕೋಶಗಳ ಮೂಲಕ ಈ ಮಾರ್ಪಾಡುಗಳನ್ನು ಮಾಡಲಾಗಿದೆ.

#3

#3

ಈ ನಗರದಲ್ಲಿ ಮೋಟಾರ್ ಕಾರುಗಳ ನಿರ್ಬಂಧ, ಒಳಾಂಗಣ ಕೃಷಿ ಮತ್ತು ಪ್ರತ್ಯೇಕವಾಗಿ ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯನ್ನು ಪಡೆಯಲಾಗುತ್ತದೆ.

#4

#4

ದಕ್ಷಿಣ ಅಮೇರಿಕಾದ ಕೆಲವೊಂದು ಭಾಗಗಳಲ್ಲಿ ಪರ್ಯಾಯ ಪ್ರೋಟೀನ್ ಉತ್ಪನ್ನಗಳು ದೊರೆಯುತ್ತಿದ್ದು, ಮಾಂಸಾಹಾರಿಗಳು ಇದರ ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ. ಇದರಿಂದ ಪ್ರಾಣಿ ಹತ್ಯೆ ಕೂಡ ತಪ್ಪುತ್ತದೆ.

#5

#5

ಸ್ವಯಂ ಚಾಲಿತ ಕಾರುಗಳು ಈಗಾಗಲೇ ಪರೀಕ್ಷಣಾ ಹಂತದಲ್ಲಿದ್ದು ಇನ್ನೇನು ಕೆಲವೇ ವರ್ಷಗಳಲ್ಲಿ ಇದು ರಸ್ತೆಗಳಲ್ಲಿ ಸಾಮಾನ್ಯವಾಗಿ ಓಡಾಡಲಿದೆ. ಏಐ, ಜಿಪಿಎಸ್ ಮತ್ತು ಟೆಲಿ ಕಮ್ಯುನಿಕೇಶನ್ ವ್ಯವಸ್ಥೆಗಳಿಗೆ ನಾವು ಚಿರರಿಣಿಯಾಗಿರಲೇಬೇಕು. ಈ ಕಾರುಗಳಿಗೆ ಚಾಲಕರುಗಳು ಬೇಡ ಕಾರೇ ಸ್ವತಃ ಜಿಪಿಎಸ್ ಆಧಾರದ ಮೇಲೆ ಓಡಿಸುತ್ತದೆ.

#6

#6

ಕಣ್ಣುಗಳಲ್ಲಿ ಕೂಡ ಇಂತಹ ಪರಿಶೋಧನೆಗಳು ನಡೆಯುತ್ತಿದ್ದು ಬಯೋನಿಕ್ ಕಣ್ಣುಗಳು ಗಾಢ ವೀಕ್ಷತೆ, ಚಿತ್ರ ಮತ್ತು ವೀಡಿಯೊ ಕ್ಯಾಪ್ಚರ್ ಅನ್ನು ಒದಗಿಸಲಿದೆ.

#7

#7

ಇಂದಿನ ಆಧುನಿಕ ಯುಗದಲ್ಲಿ ಕ್ಯಾನ್ಸರ್‌ನಂತಹ ಭೀಕರ ರೋಗಗಳಿಗೆ ಔಷಧಗಳಿದ್ದರೂ ಇನ್ನೂ ಇದಕ್ಕಿಂತ ಅಭಿವೃದ್ಧಿಪೂರ್ವಕ ಔಷಧಗಳನ್ನು ಒದಗಿಸುವಂತಹ ಅನ್ವೇಷಣೆಗಳು ನಡೆಯುತ್ತಿವೆ. ಈ ಔಷಧವು ಪ್ರಸ್ತುತ ಚಿಕಿತ್ಸೆಯಿಂದ ಉಂಟಾಗುತ್ತಿರುವ ನೋವನ್ನು ಪರಿಹರಿಸಲಿದ್ದು ನಿರ್ದಿಷ್ಟ ಭಾಗಕ್ಕೆ ಔಷಧದ ಪೂರೈಕೆಯನ್ನು ಮಾಡಲಿದೆ.

#8

#8

ನಿಮಗೆ ಒಬ್ಬಂಟಿಗರು ಎಂಬ ಭಾವನೆಯನ್ನು ಈ ರೊಬೋಟ್‌ಗಳು ದೂರಮಾಡಲಿದ್ದು ನಮ್ಮ ದೈನಂದಿನ ಜೀವನದಲ್ಲಿ ಕೂಡ ರೊಬೋಟ್‌ಗಳು ಪಾತ್ರವಹಿಸಲಿವೆ.

#9

#9

2050 ರ ಹೊತ್ತಿಗೆ, ಮಂಗಳನಲ್ಲಿ ಶಾಶ್ವತವಾಗಿ ವಿಜ್ಞಾನಿಗಳು, ಸಂಶೋಧಕರು ಮತ್ತು ಪ್ರಯಾಣಿಕರು ಬೀಡುಬಿಡಲಿದ್ದಾರೆ.

#10

#10

19 ನೇ ಶತಮಾನದಲ್ಲಿ ಉದ್ಭವವಾದ ಆಯಿಲ್ ಯುಗ ಅಂತ್ಯವನ್ನು ಕಾಣಲಿದೆ. ನವೀಕರಿಸಬಹುದಾದ, ಪರಮಾಣು ವಿದಳನ, ಅಯಾನು ನೋದನ ತಂತ್ರಜ್ಞಾನ ಇದರ ಬದಲಿಗೆ ಬರಲಿದೆ.

#11

#11

ಮೊದಲ ಹಂತದಲ್ಲಿ ಅನುವಂಶಕ ರೋಗ, ಅಲರ್ಜಿಗಳು ಮತ್ತು ಜನನ ದೋಷಗಳನ್ನು ಪತ್ತೆಹಚ್ಚುವುದು, ಎರಡನೇ ಹಂತದಲ್ಲಿ ಕೂದಲಿನ ಬಣ್ಣ, ತ್ವಚೆಯನ್ನು ಪತ್ತೆಮಾಡುವುದಾಗಿದೆ. ಮೂರನೇ ಹಂತದಲ್ಲಿ ಗುಪ್ತಚರ ಮತ್ತು ವ್ಯಕ್ತಿತ್ವ ವಿಷಯಗಳನ್ನು ಸುಧಾರಿಸಲು ಮೆದುಳಿನ ಕುಶಲ ನಿರ್ವಹಣೆಯನ್ನು ಸುಧಾರಿಸುವುದಾಗಿದೆ.

#12

#12

ನಿಮ್ಮ ಊಟ ನಿದ್ದೆಯ ಮೇಲೆ ಮಾನಿಟರ್ ಮಾಡುವ ವೇರಿಯೇಬಲ್ ಇದಾಗಿದ್ದು ನಿಮ್ಮ ದೇಹ ಯಾವ ರೀತಿಯಲ್ಲಿ ನಿಮ್ಮೊಂದಿಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಗೊತ್ತುಪಡಿಸಬಹುದಾಗಿದೆ.

#13

#13

ಇನ್ನಷ್ಟು ಆರೋಗ್ಯಕರ ವಾತಾವರಣವನ್ನು ನೀವು ಪಡೆದುಕೊಳ್ಳಲಿದ್ದು ಆರೋಗ್ಯಮಯವಾಗಿ ನೀವು ಬದುಕಲಿದ್ದೀರಿ ಮತ್ತು ನಿಮ್ಮ 130 ನೇ ಹುಟ್ಟುಹಬ್ಬವನ್ನು ಆಚರಿಸುವಷ್ಟರ ಮಟ್ಟಿಗೆ ನೀವು ಸದೃಢರಾಗಿರುತ್ತೀರಿ.

#14

#14

ಹೌದು ಮಾನವ ಮನುಷ್ಯನನ್ನು ನೀವು ಆದಷ್ಟು ಬೇಗನೇ ಕಾಣಲಿದ್ದು ಎಲ್ಲವೂ ಯಂತ್ರಮಯ ರೂಪದಲ್ಲಿ ನಿಮಗಿವರು ಕಂಡುಬರಲಿದ್ದಾರೆ.

#15

#15

ಭೂಮಿಯಿಂದ ಆಕಾಶಕ್ಕೆ ಸಂಪರ್ಕಗೊಳ್ಳುವ ಇಲಾವೇಟರ್ ಅನ್ನು ಆವಿಷ್ಕರಿಸಲಿದ್ದು ಇದು ಮಾನವ ನಿರ್ಮಿತ ಸ್ಪೇಸ್ ಸ್ಟೇಶನ್ ಆಗಿರಬಹುದು ಅಥವಾ ಕ್ಯಾಪ್ಚರ್ ಮಾಡಿದ ಆಸ್ಟ್ರಾಯ್ಡ್ ಕೂಡ ಆಗಿರಬಹುದಾಗಿದೆ.

#16

#16

ಓಜೋನ್ ಪದರವು ಶೀಘ್ರದಲ್ಲಿ ಚೇತರಿಕೆಯನ್ನು ಕಂಡುಕೊಳ್ಳಲಿದೆ.

#17

#17

ಇದೂ ಕೂಡ ಮಾನವ ಆವಿಷ್ಕಾರದ ಪಟ್ಟಿಯಲ್ಲಿ ಬರಲಿದ್ದು, ತಂತ್ರಜ್ಞಾನವನ್ನು ಇನ್ನಷ್ಟು ವೇಗದಲ್ಲಿ ಸುಧಾರಿಸಲಿದೆ.

#18

#18

ಮಾನವರನ್ನು ಜ್ಯುಪಿಟರ್‌ಗೆ ಕಳುಹಿಸುವ ಯೋಜನೆಗಳು ನಡೆಯುತ್ತಿದ್ದು ವಿಜ್ಞಾನಿಗಳು ಈ ರೀತಿಯಲ್ಲೂ ಪ್ರಯತ್ನಗಳನ್ನು ಕೈಗೊಳ್ಳುತ್ತಿದ್ದಾರೆ.

#19

#19

ಯುರೋಪ್ ಪ್ರಾಂತ್ಯಗಳಲ್ಲಿ ಈಗಾಗಲೇ ತಾಪಮಾನ ಏರುತ್ತಿದ್ದು ಬೇಸಿಗೆಯಲ್ಲಿ 40 ಡಿಗ್ರಿ ಸೆಲ್ಶಿಯಸ್ ಅನ್ನು ಇದು ತಲುಪಲಿದೆ.

#20

#20

ಭೂಮಿಯ ಮೇಲಿರುವ ಕೊನೆಯ ಸತ್ಯವಾದ ಮರುಭೂಮಿಯಾಗಿದೆ. ಅಂತೂ ಈ ಮರುಭೂಮಿಯೂ ಜೀವ ಪಡೆದು ವಸಾಹತು ಶಾಹಿ ಆಡಳಿತವನ್ನು ಕೈಗೊಳ್ಳಲಿದೆ.

#21

#21

ವಿಶ್ವವು ಹೆಚ್ಚು ಸಂಪರ್ಕಗೊಂಡಂತೆ ಬೇರೆ ಬೇರೆ ಮಾನವ ಭಾಷೆಗಳು ಅಭಿವೃದ್ಧಿಗೊಳ್ಳಲಿವೆ. ಹೊಸ ಹೊಸ ಭಾಷೆಗಳನ್ನು ಭವಿಷ್ಯವು ಕಾಣಲಿದ್ದು ಅನ್ವೇಷಣೆಯ ಕ್ಷೇತ್ರದಲ್ಲೇ ಇದು ಹೊಸ ಕ್ರಾಂತಿಯನ್ನುಂಟು ಮಾಡಲಿದೆ.

#22

#22

ನಮ್ಮನ್ನು ಮೀರಿಸುವ ಆವಿಷ್ಕಾರಗಳನ್ನು ಜಗತ್ತು ಕಾಣಲಿದ್ದು ಇದು ಸ್ತಂಭೀಭೂತಗೊಳಿಸುವಂತಿರುತ್ತದೆ. ರೊಬೋಟ್‌ಗಳಲ್ಲೇ ವೈವಿಧ್ಯತೆಗಳನ್ನು ನಾವು ಕಾಣುವವರಿದ್ದೇವೆ.

#23

#23

2116 ರ ಹೊತ್ತಿಗೆ ನಾವು ಟೈಪ್ 1 ಗುರಿಯನ್ನು ತಲುಪಿರುತ್ತೇವೆ ಅಂದರೆ ಪುನರೂಜ್ಜೀವಿತ ಮತ್ತು ಆಂಟಿ ಮ್ಯಾಟರ್ ಆಧಾರಿತ ಮೂಲಗಳನ್ನು ನಾವು ಬಳಸಲಿದ್ದೇವೆ.

#24

#24

ಮಾನವನ ವಾಸಕ್ಕೆ ಮಂಗಳನಲ್ಲಿ ತಯಾರಿ ನಡೆಸುತ್ತಿರುವಂತೆಯೇ ಅಲ್ಲಿ ಕೃಷಿ ನಡೆಸುವ ಸಂಶೋಧನೆಗಳು ನಡೆಯುತ್ತಿದೆ. ಅಂತೂ ಇಂತೂ ನಾವು ಈ ಯೋಜನೆಯನ್ನು ಆದಷ್ಟು ಬೇಗನೇ ತಲುಪುತ್ತೇವೆ ಎಂಬುದು ವಿಜ್ಞಾನಿಗಳ ಭರವಸೆಯಾಗಿದೆ.

#25

#25

ಹಾರ್ಡ್ ಬದಲಿಗೆ ಸ್ಮಾರ್ಟ್ ಆಗಿ ಕೆಲಸ ಮಾಡಿ ಎಂಬ ಸಿದ್ಧಾಂತ ಜಾರಿಗೆ ಬರಲಿದ್ದು ಕಡಿಮೆ ಉದ್ಯೋಗದಲ್ಲಿ ಹೆಚ್ಚಿನ ಸಂತಸವನ್ನು ಉದ್ಯೋಗಿಗಳು ಪಡೆದುಕೊಳ್ಳಲಿದ್ದಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಂಡ್ರಾಯ್ಡ್‌ ಮೊಬೈಲ್‌ಗೆ 'ರೀಸೈಕಲ್‌ ಬಿನ್' ಫೀಚರ್‌ ಪಡೆಯುವುದು ಹೇಗೆ?

ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

ಭವಿಷ್ಯದ ತಂತ್ರಜ್ಞಾನ ಹೇಗಿರುತ್ತದೆ ವೀಡಿಯೋ ಬಿಡುಗಡೆ: ಮ್ಯಾಜಿಕ್ ಲೀಪ್‌

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
things that will change everything in the next century..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more