ಕೇರಳದಲ್ಲಿ ಸಂಭವಿಸಿದ ರಕ್ತಮಳೆ! ಇಂತಹುದೇ ಇನ್ನಷ್ಟು!

Written By:

ಭಾರತವು ರಹಸ್ಯ ಮತ್ತು ಅನ್ವೇಷಣೆಗಳ ತಾಣವಾಗಿದೆ ಎಂಬುದಾಗಿ ಇಡೀ ವಿಶ್ವವು ನಂಬುತ್ತಿದೆ. ನಿಜಕ್ಕೂ ನಮ್ಮ ದೇಶವು ನಂಬಲು ಆಗದೇ ಇರುವಂತಹ ರಹಸ್ಯಗಳನ್ನು ಪಡೆದುಕೊಂಡಿದ್ದು ಏಲಿಯನ್ ಅಸ್ತಿತ್ವ, ರಹಸ್ಯದ ಗೂಡಾಗಿರುವ ಕೆಲವೊಂದು ಸ್ಥಳಗಳು, ವಿಚಿತ್ರ ಮಾನವರುಗಳು, ಕಣ್ಮರೆಯಾಗಿರುವ ವಿಮಾನ ಹಡಗುಗಳು, ದೆವ್ವಗಳ ಚೇಷ್ಟೆ ಹೀಗೆ ವಿಚಿತ್ರ ಅಂಶಗಳನ್ನು ನಮ್ಮ ದೇಶದಲ್ಲಿ ಕಾಣಬಹುದಾಗಿದೆ.

ಓದಿರಿ: ಕೊಲಂಬಸ್‌ಗಿಂತ 2,800 ವರ್ಷಗಳ ಹಿಂದೆಯೇ ಚೀನಿಯರಿಂದ ಅಮೆರಿಕ ಅನ್ವೇಷಣೆ

ಇಂದಿನ ಲೇಖನದಲ್ಲಿ ಇಂತಹುದೇ ಟಾಪ್ ರಹಸ್ಯಗಳನ್ನೊಳಗೊಂಡಿರುವ ಕೆಲವೊಂದು ವಿಷಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದು ಇಂತಹ ವಿಚಿತ್ರಗಳ ನಮ್ಮ ದೇಶದಲ್ಲಿ ನಡೆದಿದೆಯೇ ಎಂಬುದಾಗಿ ನೀವು ಮಂತ್ರಮುಗ್ಧಗೊಳ್ಳುತ್ತೀರಿ. ಬನ್ನಿ ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯುಎಫ್‌ಒ ಅಸ್ತಿತ್ವ

ಯುಎಫ್‌ಒ ಅಸ್ತಿತ್ವ

ಲಡಾಕ್‌ನಲ್ಲಿರುವ ಕೊಂಗಕಾ ಲಾ ಪ್ರದೇಶವು ಯುಎಫ್‌ಒ ಅಸ್ತಿತ್ವನ್ನು ಹೊಂದಿದೆ ಎಂಬ ವದಂತಿಯನ್ನು ಪಡೆದುಕೊಂಡಿದೆ. ಈ ಪರ್ವತ ಪ್ರದೇಶಗಳಲ್ಲಿ ಹಾರುವ ತಟ್ಟೆ ಮತ್ತು ವಿಚಿತ್ರ ಬೆಳಕು ಹಾದು ಹೋಗುವುದನ್ನು ಹಲವಾರು ಜನರು ಗಮನಿಸಿದ್ದಾರೆ. 100 ಫೀಟ್ ಉದ್ದಕ್ಕಿರುವ ವಸ್ತುವನ್ನು 1951 ರಲ್ಲಿ ದೆಹಲಿಯಲ್ಲಿ ಇವರು ಕಂಡುಕೊಂಡಿದ್ದು, 1954 ರಲ್ಲಿ ಬಿಹಾರದಲ್ಲಿ ಕೂಡ ಇದು ನಡೆದಿದೆ. 2007 ರಲ್ಲಿ ಕೋಲ್ಕತ್ತಾದಲ್ಲೂ ಇಂತಹ ಘಟನೆ ನಡೆದಿದೆ.

ಅಜಂತಾ ಎಲ್ಲೋರಾ ಗುಹೆಗಳು

ಅಜಂತಾ ಎಲ್ಲೋರಾ ಗುಹೆಗಳು

ಗುಹಾಂತರ ದೇವಾಲಯ ಎಂದೇ ಕರೆಯಿಸಿಕೊಂಡಿರುವ ಅಜಂತಾ ಯುಎಫ್‌ಒ ಗುರುತನ್ನು ಪಡೆದುಕೊಂಡಿವೆ ಎಂಬುದಾಗಿ ಹೇಳಲಾಗುತ್ತಿದೆ. 300 ಬಿಸಿಯಲ್ಲೇ ಇದರ ತಯಾರಕರು ಹಾರುವ ತಟ್ಟೆಗಳನ್ನು ಈ ಭಾಗಗಳಲ್ಲಿ ಕಂಡುಕೊಂಡಿದ್ದಾರೆ.

ಸಹಜ ದಹನಕ್ಕೊಳಗಾದ ಮಗು

ಸಹಜ ದಹನಕ್ಕೊಳಗಾದ ಮಗು

2013 ರಲ್ಲಿ ರಾಹುಲ್ ಹೆಸರಿನ ಮಗು, ಬೆಂಕಿಯಲ್ಲಿದ್ದ ಸ್ಥಿತಿಯಲ್ಲಿ ತನ್ನ ತಂದೆತಾಯಿಗಳಿಗೆ ದೊರೆತಿದೆ. ಬೆಂಕಿಯು ಮಗುವನ್ನು ಆಕರ್ಷಿಸುತ್ತಿದ್ದು, ಜ್ವಾಲೆಗಳಿಗೆ ಮಗು ಒಳಗಾಗಿರುವಂತೆ ನಾಲ್ಕು ಬಾರಿ ಸಂಭವಿಸಿದೆ ಎನ್ನಲಾಗಿದೆ. ವೈದ್ಯರುಗಳು ಯಾವುದೇ ತಾರ್ಕಿಕ ವಿವರಣೆಯನ್ನು ಇದುವರೆಗೂ ನೀಡಿಲ್ಲ.

ಕೇರಳಾದಲ್ಲಿ ನಡೆದ ರಕ್ತ ಮಳೆ

ಕೇರಳಾದಲ್ಲಿ ನಡೆದ ರಕ್ತ ಮಳೆ

2001 ರ ಜುಲೈ ಮತ್ತು ಸಪ್ಟೆಂಬರ್ ಮಧ್ಯಭಾಗದಲ್ಲಿ ಕೇರಳಾದ ಇಡುಕ್ಕಿಯಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಆಕಾಶದಿಂದ ರಕ್ತದ ಮಳೆ ಆರಂಭವಾಗಿ ಜನರು ಬೆರಗಾಗಿ ಮತ್ತು ಭಯಭೀತಗೊಂಡಿದ್ದರು. ವಿಶ್ವದ ಕೊನೆಯೇ ಇದಾಗಿದೆ ಎಂಬುದಾಗಿ ಅವರು ಭಾವಿಸಿಕೊಂಡಿದ್ದರು. ಇದು ಏಕೆ ಸಂಭವಿಸಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ

ಅಸಂಖ್ಯ ಹಕ್ಕಿಗಳ ಮರಣ

ಅಸಂಖ್ಯ ಹಕ್ಕಿಗಳ ಮರಣ

ಪ್ರತೀ ವರ್ಷ ಸಪ್ಟೆಂಬರ್ ಮತ್ತು ನವೆಂಬರ್ ಮಧ್ಯಭಾಗದಲ್ಲಿ ಸ್ಥಳೀಯ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತಾವೇ ಸಾಯಿಸಿಕೊಳ್ಳುತ್ತಿವೆ. ಎತ್ತರದ ಮರ ಅಥವಾ ಕಟ್ಟಡಗಳಿಂದ ಕೆಳಕ್ಕೆ ಬಿದ್ದು ಪ್ರಾಣ ತ್ಯಾಗವನ್ನು ಮಾಡಿಕೊಳ್ಳುತ್ತಿವೆ.

ನೃತ್ಯ ಮಾಡುತ್ತಿರುವ ಬೆಳಕು

ನೃತ್ಯ ಮಾಡುತ್ತಿರುವ ಬೆಳಕು

ಪ್ರತಿ ಮಾನ್‌ಸೂನ್ ಸಮಯದಲ್ಲಿ, ರಹಸ್ಯವಾದ ಬೆಳಕುಗಳು ನೃತ್ಯಮಾಡುತ್ತಿರುವಂತೆ ನಿಮಗೆ ದೃಶ್ಯವೊಂದು ಬನ್ನಿ ಹುಲ್ಲುಗಾವಲಿನಲ್ಲಿ ಕಾಣಸಿಗಲಿದೆ. ಹಲವಾರು ಶತಮಾನಗಳಿಂದ ಈ ಬೆಳಕಿನ ನೃತ್ಯ ನಡೆಯುತ್ತಿದೆ ಎಂಬುದು ವಿಜ್ಞಾನಿಗಳ ಅಂಬೋಣವಾಗಿದೆ.

ರೂಪ್‌ಕುಂಡದ ಅಸ್ಥಿಪಂಜರ ನದಿ

ರೂಪ್‌ಕುಂಡದ ಅಸ್ಥಿಪಂಜರ ನದಿ

1942 ರಿಂದ, ಉತ್ತರಾಖಾಂಡದಲ್ಲಿರುವ ರೂಪ್‌ಕುಂಡ ನದಿಯ ತೀರದಲ್ಲಿ ನೂರಕ್ಕಿಂತ ಹೆಚ್ಚಿನ ಅಸ್ಥಿಪಂಜರಗಳು ದೊರೆಯುತ್ತಿವೆ. ಇವುಗಳು ಎಲ್ಲಿಂದ ಬರುತ್ತಿವೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.

ವೆಸ್ಟ್ ಬೆಂಗಾಳಾದ ದೆವ್ವದ ಬೆಳಕು

ವೆಸ್ಟ್ ಬೆಂಗಾಳಾದ ದೆವ್ವದ ಬೆಳಕು

ನದಿಯ ಮಧ್ಯಭಾಗದಲ್ಲಿ ಬೆಳಕೊಂದು ಕಾಣಿಸಿಕೊಳ್ಳುತ್ತದೆ ಎಂಬುದಾಗಿ ಅಲ್ಲಿನ ನಿವಾಸಿಗಳು ತಿಳಿಸಿದ್ದು ಇದು ದೆವ್ವಗಳದ್ದೇ ಕೆಲಸ ಎಂಬುದು ಅಲ್ಲಿನವರ ನಂಬಿಕೆಯಾಗಿದೆ. ನಂತರ ನೀರಿನಲ್ಲಿ ಈಜಾಡುತ್ತಿರುವಂತೆ ಕೂಡ ಇದು ಭಾಸವಾಗುತ್ತದೆ.

ಅವಳಿ ಹಳ್ಳಿ

ಅವಳಿ ಹಳ್ಳಿ

ಭಾರತದಲ್ಲಿ 1000 ದಷ್ಟು ಅವಳಿ ಜನನಗಳು ಉಂಟಾಗುತ್ತಿವೆ. ಅದರಲ್ಲೂ ಕೇರಳಾದಲ್ಲಿರುವ ಕೊಡ್ನಿಯಲ್ಲಿ 45 ಅವಳಿ ಜನನಗಳು ಪ್ರತೀ ಬಾರಿ ಉಂಟಾಗುತ್ತಿರುತ್ತದೆ. ಇಲ್ಲಿರುವ 2000 ಕುಟುಂಬಗಳಲ್ಲಿ 400 ಅವಳಿ ಮಕ್ಕಳ ಕುಟುಂಬವಿದೆ. ನಿಜಕ್ಕೂ ಇದು ವಿಚಿತ್ರದಲ್ಲಿ ವಿಚಿತ್ರ ಎಂದೆನಿಸಿದೆ.

ಸ್ಕೈಕ್ವೇಕ್ಸ್

ಸ್ಕೈಕ್ವೇಕ್ಸ್

ಜೋಧಪುರ ಮತ್ತು ಗಂಗಾ ನದಿಯ ತಟದಲ್ಲಿ ಸರಿಸುಮಾರು 1800 ಸ್ಥಳಗಳಲ್ಲಿ ದೊಡ್ಡದಾದ ಶಬ್ಧಗಳು ಅಂದರೆ ಕಿವಿಗಡಚಿಕ್ಕುವ ಧ್ವನಿಯನ್ನು ಆಲಿಸಿದ್ದಾರೆ. ಇದು ಯಾವ ರೀತಿಯ ಶಬ್ಧವೆಂದರೆ ರಹಸ್ಯ ಮಿಲಿಟರಿ ಡ್ರಿಲ್‌ಗಳು ನೀರಿನಾಳದ ಗುಹೆಗಳ ಛೇದನ, ಜೋರಾದ ಫಿರಂಗಿ ಧ್ವನಿಯನ್ನು ಇದು ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here's something that might jog your memory and remind you that there is a little magic out there.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot