Subscribe to Gizbot

ತಿಮ್ಮಪ್ಪನಿಗೂ ತಟ್ಟಿದೆ ವಾನ್ನಾ ಕ್ರೈ ಬಿಸಿ..!! ಹ್ಯಾಕ್ ಆಯ್ತು ಟಿಟಿಡಿ ಕಂಪ್ಯೂಟರ್

Written By:

ವಿಶ್ವದ 15೦ಕ್ಕೂ ಹೆಚ್ಚು ದೇಶಗಳ ಲಕ್ಷಾಂತರ ಕಂಪ್ಯೂಟರ್‌ಗಳು ಏಕಕಾಲಕ್ಕೆ ವನ್ನಾ ಕ್ರೈ ರಾನ್ ಸಮ್ ದಾಳಿಗೆ ಸಿಲುಕಿದ್ದು, ಭಾರತದ ಹಲವು ಕಡೆಗಳಲ್ಲಿ ಈ ದಾಳಿ ನಡೆದಿದೆ. ಈ ಸೈಬರ್ ದಾಳಿಯ ಬಿಸಿ ತಿರುಪತಿ ದೇವಾಲಯಕ್ಕೂ ತಟ್ಟಿದ್ದು, ತಿರುಪತಿ ದೇವಾಲಯದ ಕಂಪ್ಯೂಟರ್ ಗಳೂ ಹ್ಯಾಕ್ ಆಗಿವೆ.

ತಿಮ್ಮಪ್ಪನಿಗೂ ತಟ್ಟಿದೆ ವಾನ್ನಾ ಕ್ರೈ ಬಿಸಿ..!! ಹ್ಯಾಕ್ ಆಯ್ತು ಟಿಟಿಡಿ ಕಂಪ್ಯೂಟರ

ಟಿಟಿಡಿ ಆಡಳಿತ ಮಂಡಳಿಯ ಕೆಲವು ಕಂಪ್ಯೂಟರ್‌ಗಳು ವನ್ನಾ ಕ್ರೈ ರಾನ್ ಸಮ್ ದಾಳಿಗೆ ತುತ್ತಾಗಿದೆ. ದೇವಸ್ಥಾನದ ಆಡಳಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಬಳಕೆ ಮಾಡಲಾಗುವ 22 ಕಂಪ್ಯೂಟರ್ ಗಳಿಗೆ ರಾನ್ಸಮ್ ವೇರ್ ವೈರಸ್ ದಾಳಿಗೆ ಒಳಾಗಿದೆ ಎಂಬ ಮಾಹಿತಿಯೂ ದೊರೆತಿದೆ.

ದರ್ಶನದ ಟಿಕೆಟ್ ಹಾಗೂ ಭಕ್ತಾದಿಗಳಿಗೆ ಸಂಬಂಧಿಸಿದ ಸೇವೆ ಒದಗಿಸುವ ಕಂಪ್ಯೂಟರ್ ಗಳು ಮಾತ್ರ ಹ್ಯಾಕ್ ಆಗಿದ್ದು, ಇದರಿಂದ ಯಾವುದೇ ಡೊಡ್ಡ ಮಟ್ಟದ ತೊಂದರೆಯಾಗಿಲ್ಲ. ವೈರಸ್ ದಾಳಿಯಿಂದಾಗಿ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಿಮ್ಮಪ್ಪನಿಗೂ ತಟ್ಟಿದೆ ವಾನ್ನಾ ಕ್ರೈ ಬಿಸಿ..!! ಹ್ಯಾಕ್ ಆಯ್ತು ಟಿಟಿಡಿ ಕಂಪ್ಯೂಟರ

ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಟಿಸಿಎಸ್ ನೆರವಿನೊಂದಿಗೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಅಧಿಕಾರಿಗಳು ದಾಳಿಗೆ ಸಿಲುಕದ ಕಂಪ್ಯೂಟರ್ ಗಳ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Read more about:
English summary
The Tirumala Tirupati Devastanam's (TTD) computer systems became a prey to the "WannaCry ransomware," with almost 10 computers used in administrative functions getting affected. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot