ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂತ್ರಜ್ಞಾನ ಮಾಯಾಲೋಕ ಸೃಷ್ಟಿಸಲಿದೆ ಜಪಾನ್!!..ಹೇಗಿರಲಿದೆ ಗೊತ್ತಾ?

  ಪ್ರಪಂಚದ ತಂತ್ರಜ್ಞಾನವನ್ನೆಲ್ಲಾ ತನ್ನಬಳಿ ಇಟ್ಟುಕೊಂಡಿರುವ ಜಪಾನ್ ಎಂದರೆ ತಂತ್ರಜ್ಞಾನ ಲೋಕದ ಚಿಲುಮೆ ಎಂದು ಎಲ್ಲರಿಗೂ ಅನಿಸುತ್ತದೆ.! ಚಿಕ್ಕ ದೇಶವಾದರೂ ಅತ್ಯುನ್ನತ ತಾಂತ್ರಿಕತೆಗೆ ಹೆಸರು ಮಾಡಿರುವ ಜಪಾನ್ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೊಸದೊಂದು ಮಾಯಾ ಲೋಕವನ್ನೇ ಸೃಷ್ಟಿಸಲು ಸಿದ್ದತೆ ನಡೆಸಿದೆ.!!

  ಹೌದು, ಇಡೀ ಜಗತ್ತಿಗೆ ತಾನೇ ರೋಬಾಟಿಕ್ಸ್ ತಂತ್ರಜ್ಞಾನದ ಜಾಗತಿಕ ಮುಂದಾಳು ಎಂಬುದನ್ನು ತೋರಿಸಲು ಹೊರಟಿರುವ ಜಪಾನ್ ಒಲಿಂಪಿಕ್ಸ್ ಕ್ರೀಡೆ ನಡೆಯುವ ಒಡಾಯಿಬಾ ಗ್ರಾಮದಲ್ಲಿ ರೋಬೋಟ್‌ಗಳದ್ದೇ ಪ್ರತ್ಯೇಕ ಗ್ರಾಮ ನಿರ್ಮಿಸಲಿದೆಯಂತೆ.! ಹಾಗಾದರೆ, ಈ ರೋಬೋಟ್ ಗ್ರಾಮದ ಕಲ್ಪನೆ ಏನು? 2020ರಲ್ಲಿ ಜಪಾನ್ ಪರಿಚಯಿಸಲು ಸಿದ್ದತೆ ನಡೆಸಿರುವ ತಂತ್ರಜ್ಞಾನಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಟೋಕಿಯೊ ಒಲಿಂಪಿಕ್ಸ್!!

  ಇಡೀ ಪ್ರಪಂಚವೇ ತಿರುಗಿ ನೋಡುವ ಒಂದು ಕ್ರೀಡಾ ಹಬ್ಬ ಎಂದರೆ ಅದು 'ಒಲಿಂಪಿಕ್ಸ್'. ವಿಶ್ವದ ಬಹುತೇಕಾ ಎಲ್ಲಾ ರಾಷ್ಟ್ರಗಳು ಭಾಗವಹಿಸುವ ಒಲಪಿಂಕ್ಸ್ ಕ್ರೀಡಾಕೂಟ 2020ರಲ್ಲಿ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯಲಿದೆ. ಹಾಗಾಗಿ, ಇಡೀ ಜಗತ್ತಿಗೆ ತಾನೇ ರೋಬಾಟಿಕ್ಸ್ ತಂತ್ರಜ್ಞಾನದ ಜಾಗತಿಕ ಮುಂದಾಳು ಎಂಬುದನ್ನು ತೋರಿಸಲು ಜಪಾನ್ ಹೊರಟಿದೆ.!!

  5G ಪರಿಚಯಿಸಲಿದೆ ಜಪಾನ್!!

  2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಹೊಸದೊಂದು ಮಾಯಾ ಲೋಕವನ್ನೇ ಸೃಷ್ಟಿಸಲು ಸಿದ್ಧತೆ ನಡೆಸಿರುವ ಜಪಾನ್ 5ಜಿ ಸಂಪರ್ಕ ವ್ಯವಸ್ಥೆ ಪರಿಚಯಿಸಲಿದೆ ಎನ್ನುತ್ತಿವೆ ವರದಿಗಳು. ವಿಶ್ವದಲ್ಲಿ 5G ಬರಲು ಇನ್ನೈದು ವರ್ಷಗಳಾದರೂ ಬೇಕು ಎನ್ನುತ್ತಿದ್ದ ತಜ್ಞರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 5ಜಿ ಬಳಸಬಹುದು.!!

  ರೋಬೋಟ್‌ಗಳದ್ದೇ ಗ್ರಾಮ!!

  ಒಲಿಂಪಿಕ್ಸ್ ಕ್ರೀಡೆ ನಡೆಯುವ ಒಡಾಯಿಬಾ ಗ್ರಾಮದಲ್ಲಿ ರೋಬಾಟ್‌ಗಳದ್ದೇ ಪ್ರತ್ಯೇಕ ಗ್ರಾಮ ಇರುತ್ತದಂತೆ. ಅತಿಥಿಗಳ ಸಂಚಾರ ವ್ಯವಸ್ಥೆ, ಮನರಂಜನೆ, ಊಟೋಪಚಾರ ಮೇಲ್ವಿಚಾರಣೆ ಮತ್ತು 27 ಭಾಷೆಗಳಲ್ಲಿ ಮಾತಾಡಬಲ್ಲ ರೋಬಾಟ್‌ಗಳ ಸೈನ್ಯವೇ ಸಜ್ಜಾಗುತ್ತಿದೆ ಎನ್ನುತ್ತಿವೆ ಮಾಧ್ಯಮ ವರದಿಗಳು.!!

  ತಂತ್ರಜ್ಞಾನಗಳ ಆಗರ!!

  ಚಾಲಕರಿಲ್ಲದ ಕಾರುಗಳು, ಜಲಜನಕ ಶಕ್ತಿಯಿಂದ ನಿಶ್ಶಬ್ದ ಚಲಿಸುವ ವಾಹನಗಳು, ಗಂಟೆಗೆ 600 ಕಿ.ಮೀ ವೇಗದ ಸೂಪರ್ ಮ್ಯಾಗ್ಲೆವ್ ರೈಲು, ಎಚ್‌ಡಿ ಟಿವಿಗಳಿಗಿಂತ 16 ಪಟ್ಟು ಹೆಚ್ಚು ಸ್ಪಷ್ಟವಾಗಿ ಚಿತ್ರಗಳನ್ನು ಬಿತ್ತರಿಸುವ 8ಕೆ ಟಿವಿ ಮತ್ತು ಹೆಜ್ಜೆ ಹೆಜ್ಜೆಗೂ ರೋಬಾಟ್‌ಗಳು ಟೋಕಿಯಾದಲ್ಲಿ ಕಾಣಸಿಗುತ್ತವೆ.!!

  How to create two accounts in one Telegram app (KANNADA)
  ಸಾವಿರಾರು ಕೋಟಿ ಖರ್ಚು!!

  ಸಾವಿರಾರು ಕೋಟಿ ಖರ್ಚು!!

  ರೋಬಾಟ್‌ಗಳ ಆಗರ ಎಂದು ಹೆಸರಾಗಿರುವ ಜಪಾನ್‌ ಒಲಿಂಪಿಕ್ಸ್‌ನಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಲು ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡುತ್ತಿದೆ. !! ವಿಶ್ವವಿದ್ಯಾಲಯಗಳಿಗೆ, ವಿಜ್ಞಾನ ತಂತ್ರಜ್ಞಾನ ಸಂಘಟನೆಗಳಿಗೆ, ಹವ್ಯಾಸಿ ಎಂಜಿನಿಯರ್‌ಗಳಿಗೆ ಮತ್ತು ಸಾಫ್ಟ್‌ವೇರ್ ಟೆಕಿಗಳಿಗೆ ನೀರಿನಂತೆ ಹಣ ಚೆಲ್ಲುತ್ತಿದೆ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The organizers will start formulating a detailed outline to utilize cutting-edge technology to manage the games and accommodate spectators.to know more visit to kannada.gizbot.com
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more