Subscribe to Gizbot

ಜೀವನದಲ್ಲಿ ಒಮ್ಮೆಯಾದರೂ ಈ ಟೆಕ್ ಅದ್ಭುತಗಳನ್ನು ನೋಡಲೇಬೇಕು

Written By:

ಪ್ರಕೃತಿಯು ನಮಗೆ ಅತ್ಯದ್ಭುತ ಕೊಡುಗೆಗಳನ್ನು ನೀಡಿದೆ. ಈ ಕೊಡುಗೆಗಳು ನಿಜಕ್ಕೂ ಅಸಾಮಾನ್ಯವಾಗಿದ್ದು ಮಾನವ ರಚನೆಗಿಂತ ಇದು ಹೆಚ್ಚು ವೈವಿಧ್ಯತೆಯನ್ನು ಪಡೆದುಕೊಂಡಿದೆ. ಅದಾಗ್ಯೂ ಮಾನವ ನಿರ್ಮಿತ ಕಟ್ಟಡಗಳು ವಿಶ್ವದ ಅದ್ಭುತ ಸ್ಮರಣೆಗಳಾಗಿ ಮಾರ್ಪಾಡುಗೊಂಡಿದ್ದು ಇದು ಏಕೆ ಇಷ್ಟೊಂದು ವಿಭಿನ್ನತೆಗಳನ್ನು ಪಡೆದುಕೊಂಡಿದೆ ಎಂಬುದನ್ನು ಅರಿತುಕೊಳ್ಳೋಣ.

ಇಂದಿನ ಲೇಖನದಲ್ಲಿ ವಿಶ್ವದ ಅತ್ಯದ್ಭುತ ಇಂಜಿನಿಯರಿಂಗ್ ಅದ್ಭುತಗಳತ್ತ ನಾವು ನಿಮ್ಮನ್ನು ಕೊಂಡೊಯ್ಯುತ್ತಿದ್ದು ಇದು ಏಕೆ ಇಷ್ಟೊಂದು ವಿಶೇಷತೆಯನ್ನು ಪಡೆದುಕೊಂಡಿದೆ ಎಂಬುದನ್ನು ಅರಿಯಲು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿರುವ ಮಾಹಿತಿಗಳನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1,991 ಮೀಟರ್ ಉದ್ದ

ಆಕಾಶಿ ಕಯಿಕೊ ಬ್ರಿಡ್ಜ್

ಪರ್ಲ್ ಬ್ರಿಡ್ಜ್ ಎಂಬ ಹೆಸರನ್ನು ಪಡೆದುಕೊಂಡಿರುವ ಈ ಸೇತುವೆ ಆಧುನಿಕ ಸಿವಿಲ್ ಇಂಜಿನಿಯರಿಂಗ್‌ನ ಅದ್ಭುತ ಎಂದೆನಿಸಿದೆ. ಜಪಾನ್‌ನಲ್ಲಿರುವ ಈ ಸೇತುವೆ ವಿಶ್ವದ ಅತಿ ದೊಡ್ಡ ಸೇತುವೆ ಎಂದೆನಿಸಿದೆ. 1,991 ಮೀಟರ್ ಉದ್ದವಿರುವ ಈ ಸೇತುವೆಯನ್ನು 1998 ರಲ್ಲಿ ಪೂರ್ಣಗೊಳಿಸಲಾಯಿತು.

ವಿಶ್ವದ ಹನ್ನೆರಡನೆಯ ಅತಿ ದೊಡ್ಡ ಸೇತುವೆ

ಮಿಲುವಾ ವಿಯಡಕ್ಟ್

ಕೇಬಲ್ ಮಾದರಿಯ ರೋಡ್ ಬ್ರಿಡ್ಜ್ ಆಗಿರುವ ಮಿಲುವಾ ವಿಯಡಕ್ಟ್ ವಿಶ್ವದ ಹನ್ನೆರಡನೆಯ ಅತಿ ದೊಡ್ಡ ಸೇತುವೆ ಎಂಬ ಶ್ಲಾಘನೆಗೆ ಒಳಗಾಗಿದೆ. 14 ಡಿಸೆಂಬರ್ 2004 ರಂದು ಇದನ್ನು ಸಂಪೂರ್ಣಗೊಳಿಸಲಾಯಿತು.

1092 ಫೀಟ್ ಉದ್ದ

ಯುಎಸ್ಎಸ್ ಜಾರ್ಜ್ ಎಚ್‌ ಡಬ್ಲ್ಯೂ ಬುಶ್

2001 ರಲ್ಲಿ ಇದರ ನಿರ್ಮಾಣವನ್ನು ಮಾಡಿದ್ದು, 1092 ಫೀಟ್ ಉದ್ದವಿರುವ ವಾರ್ ಶಿಪ್ ಎರಡು ನ್ಯೂಕ್ಲಿಯರ್ ರಿಯಾಕ್ಟರ್‌ಗಳ ಶಕ್ತಿಯನ್ನು ಪಡೆದುಕೊಂಡಿದೆ. ಮರುಇಂಧನದ ಅವಶ್ಯಕತೆಯಿಲ್ಲದೆ ಈಕೆ 20 ವರ್ಷಗಳಿಗಿಂತಲೂ ಅಧಿಕ ಸಮಯ ಕಾರ್ಯನಿರ್ವಹಿಸಬಲ್ಲುದು.

1,222 ಕೀ.ಮೀ ಉದ್ದ

ಉತ್ತರ ಯುರೋಪಿಯನ್ ಗ್ಯಾಸ್ ಪೈಪ್‌ಲೈನ್

ವಿಶ್ವದಲ್ಲೇ ಅತಿ ಉದ್ದವಾಗಿರುವ ಸಬ್ ಸೀ ಪೈಪ್‌ಲೈನ್ ಇದಾಗಿದ್ದು, 1,222 ಕೀ.ಮೀ ಉದ್ದವನ್ನು ಇದು ಹೊಂದಿದೆ.

ಅತಿ ದೊಡ್ಡ ಸ್ಟೀಲ್ ರಚನೆ

ಬೀಜಿಂಗ್ ನ್ಯಾಶನಲ್ ಸ್ಟೇಡಿಯಮ್

ವಿಶ್ವದ ಅತಿ ದೊಡ್ಡ ಸ್ಟೀಲ್ ರಚನೆಯಾಗಿರುವ ಇದು ಹಕ್ಕಿಯ ಗೂಡು ಎಂಬ ಹೆಸರನ್ನು ಪಡೆದುಕೊಂಡಿದೆ. ಚೀನಾದ ಬೀಜಿಂಗ್‌ನಲ್ಲಿ ಈ ಸ್ಟೇಡಿಯಮ್ ಇದೆ.

ಗ್ಲಾಸ್ ಇಲಾವೇಟರ್

ಬೈಲಾಂಗ್ ಇಲಾವೇಟರ್

ವಿಶ್ವದಲ್ಲೇ ಹೆಚ್ಚು ಭಾರವಾದ ಉದ್ದವಾದ ಇಲಾವೇಟರ್ ಇದಾಗಿದೆ. ಇದು ಗ್ಲಾಸ್ ಇಲಾವೇಟರ್ ಆಗಿದ್ದು, ಚೀನಾದಲ್ಲಿದೆ. 1070 ಫೀಟ್ ಎತ್ತರದಲ್ಲಿದೆ.

ಕೃತಕ ಬೀಚ್‌

ಪಾಮ್ ಐಲ್ಯಾಂಡ್ಸ್

ಆಧುನಿಕ ಇಂಜಿನಿಯರಿಂಗ್ ಯಶಸ್ಸಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ. ದುಬೈನ ಕೃತಕ ಐಲ್ಯಾಂಡ್ ಆಗಿರುವ ಪಾಮ್ ಐಲ್ಯಾಂಡ್ಸ್ 1500 ವಿಲ್ಲಾಗಳನ್ನು ಒಳಗೊಂಡಿದೆ. ಅಂತೆಯೇ ಕೃತಕ ಬೀಚ್‌ಗಳು ಇದರಲ್ಲಿದೆ.

31 ಮೈಲುಗಳಷ್ಟು ಉದ್ದ

ಯೂರೋಟ್ಯೂನಲ್

ಆಧುನಿಕ ಇಂಜಿನಿಯರಿಂಗ್ ಸಾಧನೆಗೆ ಇದು ಸೂಕ್ತವಾಗಿರುವಂಥದ್ದು. ಈ ಗುಹೆಯು ಇಂಗ್ಲೇಂಡ್‌ನಿಂದ ಆರಂಭಗೊಂಡು ಫ್ರಾನ್ಸ್‌ನಲ್ಲಿ ಅಂತ್ಯಗೊಳ್ಳುತ್ತದೆ. ಇದು ನೀರಿನಲ್ಲಿದೆ. ಈ ಗುಹೆಯು 31 ಮೈಲುಗಳಷ್ಟು ಉದ್ದವಾಗಿದ್ದು ಸಮುದ್ರದಲ್ಲಿ 23 ನೆಯದ್ದಾಗಿದೆ.

ಅತಿದೊಡ್ಡ ಪವರ್ ಸ್ಟೇಶನ್

ಮೂರು ಅದ್ಭುತ ಡ್ಯಾಮ್‌ಗಳು

ಯಾಂಗ್ಟೇಜ್ ನದಿಯಲ್ಲಿರುವ ಈ ಮೂರು ಡ್ಯಾಮ್‌ಗಳು ಚೀನಾದಲ್ಲಿ ನೆಲೆಗೊಂಡಿದೆ. ಅತಿದೊಡ್ಡ ಪವರ್ ಸ್ಟೇಶನ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಆ ಪ್ರದೇಶಕ್ಕೆ ವಿದ್ಯುತ್ ಅನ್ನು ಇದು ಉತ್ಪಾದಿಸುತ್ತದೆ.

ಸರ್ವೇ ಟೆಲಿಸ್ಕೋಪ್

ಪ್ಯಾನ್ ಸ್ಟಾರ್ಸ್

ಪನೋರಮಿಕ್ ಸರ್ವೇ ಟೆಲಿಸ್ಕೋಪ್ ಆಗಿರುವ ಪ್ಯಾನ್ ಸ್ಟಾರ್ಸ್ ಹವಾಯಿ ವಿಶ್ವವಿದ್ಯಾನಿಲಯವು ಇದನ್ನು ಅಭಿವೃದ್ಧಿಪಡಿಸಿದೆ. ಸಣ್ಣ ಸಣ್ಣ ಕನ್ನಡಿಗಳನ್ನು ಈ ಕಟ್ಟಡವು ಒಳಗೊಂಡಿದ್ದು ದೊಡ್ಡ ಕ್ಯಾಮೆರಾವನ್ನು ಇದಕ್ಕೆ ಹೊಂದಿಸಲಾಗಿದೆ. ಇದು ಆರ್ಥಿಕ ವೀಕ್ಷಣಾ ಸಿಸ್ಟಮ್ ಅನ್ನು ಉತ್ಪಾದಿಸುತ್ತದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ವೋಡಾಫೋನ್ ಬಳಕೆದಾರರು ಉಚಿತ ಇಂಟರ್ನೆಟ್‌ ಬಳಸುವುದು ಹೇಗೆ?
ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಫೋನ್ ಮೇಳ
ವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳು
ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Below is a list of top 10 Modern Engineering Wonders of The Modern World.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot