Subscribe to Gizbot

ವಿಜ್ಞಾನದಿತಿಹಾಸದಲ್ಲೇ ನೀವು ಕಂಡಿರದ ಕೇಳಿರದ ಭೀಕರ ಅನ್ವೇಷಣೆಗಳು

Written By:

ವಿಜ್ಞಾನದ ಮೂಲ ಬೆಸುಗೆಯೇ ಸಂಶೋಧನೆಯಾಗಿದ್ದು ಈ ಸಂಶೋಧನೆಗಳ ಆಧುನಿಕ ಮೂಲದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟು ಹಾಕಲು ನೆರವಾಗಿದೆ. ಈಗಿದ್ದ ಸಂಶೋಧನೆಗಿಂತಲೂ ಪುರೋಗತಿಯನ್ನು ಪಡೆದುಕೊಂಡಿರುವ ನವೀನ ಸಂಶೋಧನೆಗಳು ಜನ್ಮ ತಾಳುತ್ತವೆ. ಹೀಗೆ ಸಂಶೋಧನೆಗಳಿಗೆ ಪರಿಧಿ ಎಂಬುದೇ ಇರುವುದಿಲ್ಲ. ಹೊಸ ಹೊಸ ಕ್ರಾಂತಿಯೆಂಬಂತೆ ಇದು ಅಭಿವೃದ್ಧಿಯನ್ನು ಪಡೆದುಕೊಳ್ಳುತ್ತಲೇ ಇರುತ್ತದೆ.

ಆದರೆ ಹೊಸ ಕಾಲದ ಸಂಶೋಧನೆಗಳಿಗೂ ಹಿಂದಿದ್ದ ಸಂಶೋಧನೆಗಳಿಗೂ ಅಜಗಜಾಂತರ ವ್ಯತ್ಯಾಸಗಳಿದ್ದು ಅವುಗಳ ಬಗ್ಗೆಯೇ ಇಂದಿನ ಲೇಖನದಲ್ಲಿ ನಾವು ಮಾಹಿತಿಗಳನ್ನು ತಿಳಿಸಲಿದ್ದೇವೆ. ಈ ಸಂಶೋಧನೆಗಳು ವಿಚಿತ್ರವಾಗಿರದೇ ಭಯಾನಕವಾಗಿದ್ದವು ಎಂಬುದನ್ನೇ ಕೆಳಗಿನ ಸ್ಲೈಡರ್‌ಗಳು ತಿಳಿಸುತ್ತಿದ್ದು ಇದು ಎದೆಯಲ್ಲಿ ನಡುಕ ಹುಟ್ಟಿಸುಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನ್ಯೂಕ್ಲಿಯರ್ ಟೆಸ್ಟ್

#1

ನ್ಯೂಕ್ಲಿಯರ್ ಪರೀಕ್ಷೆ ಆಗಿರುವುದರ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಮನುಕುಲದ ನಾಶವನ್ನೇ ಈ ಅನ್ವೇಷಣೆಗಳು ಒಳಗೊಂಡಿವೆ. ಅಮೇರಿಕಾವು ನ್ಯೂಕ್ಲಿಯರ್ ಪರೀಕ್ಷೆಯನ್ನು ಜುಲೈ 16, 1945 ರಂದು ನಡೆಸಿತು. ಇದು ಹೆಚ್ಚು ಅಪಾಯಕಾರಿಯಾದ ಪರೀಕ್ಷೆ ಎಂದೆನಿಸಿತ್ತು

ಮನಸ್ಸಿನ ನಿಯಂತ್ರಣ

#2

ಜೋಸ್ ಡಿಲ್‌ಗಾಡೊ ಪ್ರೊಫೆಸರ್ ಮನಸ್ಸನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ. ಸ್ಟಿಮೊಸಿವರ್ ಎಂಬ ಪ್ರಥಮ ಅನ್ವೇಷಣೆಯನ್ನು ಈತ ನಡೆಸಿದ್ದ. ಇದನ್ನು ಪ್ರಾಣಿಗಳ ಮೆದುಳಿನಲ್ಲಿ ಬೆಳೆಸಲಾಯಿತು. ಪ್ರಾಣಿಗಳ ಮೆದುಳಿನ ಬೇರೆ ಬೇರೆ ಪ್ರಾಂತ್ಯಗಳನ್ನು ವಿದ್ಯುತ್ ಮೂಲಕ ಉತ್ತೇಜಿಸುವ ರಿಮೋಟ್ ಕಂಟ್ರೋಲ್ ಅನ್ನು ಇದಕ್ಕಾಗಿ ಬಳಸಲಾಗಿತ್ತು.

ಮರುಜೀವ ಪಡೆದುಕೊಳ್ಳುವುದು

#3

ಸತ್ತವರನ್ನು ಪುನಃ ಬದುಕಿಸುವ ಪವಾಡವನ್ನು ಯಾರಾದರೂ ನಡೆಸಬಹುದೇ? ಆದರೆ ಹೀಗೆ ನಡೆದಿರುವ ಘಟನೆಗಳೂ ಇವೆ. ರಾಬರ್ಟ್ ಇ ಹೆಸರಿನ ವೈದ್ಯ ಈ ರೀತಿಯ ಪ್ರಯೋಗವನ್ನು ನಡೆಸಿದ್ದ. ಆದರೆ ಈತನ ಪ್ರಯೋಗ ಯಶಸ್ಸನ್ನು ಕಾಣಲಿಲ್ಲ. ಸತ್ತ ವ್ಯಕ್ತಿಗಳಲ್ಲಿ ರಕ್ತ ಪರಿಚಲನೆಗೊಂಡು ನಂತರ ಪ್ರತಿಗರಣೆಕಾರಿ ಮತ್ತು ಎಪಿನ್ಫ್ರಿನ್ ಚುಚ್ಚುಮದ್ದನ್ನು ಪ್ರಯೋಗಿಸುವುದು ಇವನ ಉದ್ದೇಶವಾಗಿತ್ತು.

ಸ್ಟಾರ್‌ಫಿಶ್ ಪ್ರೈಮ್

#4

ಅಮೇರಿಕವು ಪ್ರಯೋಗಗಳಿಗೆ ಹೆಸರುವಾಸಿಯಾಗಿದೆ. ಜುಲೈ 9, 1962 ರಂದು ಅಮೇರಿಕಾವು ಭೂಮಿಯ ಗುರುತ್ವ ಕ್ಷೇತ್ರದಲ್ಲಿ ನ್ಯೂಕ್ಲಿಯರ್ ಆಯುಧಗಳನ್ನು ಪತ್ತೆಮಾಡಿತು.

ಹೇಡ್ರೋನ್ ಕೊಲಿಡರ್

#5

ವಿಶ್ವದ ಹೆಚ್ಚು ಬಲಿಷ್ಟ ಕೊಲಿಡರ್ ಇದಾಗಿದೆ. ಸ್ವಿಡ್ಜರ್‌ಲ್ಯಾಂಡ್‌ನ ಭೂಗತ ನೆಲದಡಿಯಲ್ಲಿ ಇದು ಸ್ಥಾಪನೆಗೊಂಡಿದೆ. ಪ್ರೊಟನ್ಸ್, ಇಲೆಕ್ಟ್ರನ್ಸ್ ಮತ್ತು ಇತರ ಉಪಪರಮಾಣು ಅಂಶಗಳ ಹೆಚ್ಚು ವೇಗದ ಘರ್ಷಣೆಗಾಗಿ ಬಳಸಲಾಗುತ್ತದೆ.

ರಷ್ಯನ್ ಬೋರ್‌ಹೋಲ್

#6

ಕೊಳವೆಗಳನ್ನು ಸೃಷ್ಟಿಸುವುದು ಪ್ರಯೋಗವೇ ಎಂಬುದು ನಿಮ್ಮ ಮನದಲ್ಲಿ ಮೂಡಬಹುದು. 40,000 ಫೀಟ್ ಆಳದಲ್ಲಿ ಕೊಳವೆ ತೋಡುವುದು ಎಂದರೆ ಅದು ಸಂಶೋಧನೆ ಅಲ್ಲವೇ ಅಲ್ಲ. 24 ಮೇ 1970 ರಂದು ಕೊಳವೆ ಬಾವಿ ನಿರ್ಮಾಣ ಕಾರ್ಯವನ್ನು ಆರಂಭಿಸಲಾಯಿತು. ಭೂಮಿಯ ಹೊಪದರದವರೆಗೆ ಕೊರೆಯುವುದು ಎಂಬುದು ಇದರ ಹಿನ್ನಲೆಯಾಗಿತ್ತು. ಇದುವರೆಗೂ ಇದೊಂದು ಭೂಮಿಯ ಆಳವಾದ ಕೃತಕ ಪಾಯಿಂಟ್ ಎಂಬುದಾಗಿ ಪ್ರಸಿದ್ಧವಾಗಿದೆ.

ನಾಜಿ ಅನ್ವೇಷಣೆಗಳು

#7

ನಾಜಿ ಪ್ರಯೋಗಗಳನ್ನು ಹೆಸರಿಸದ ಹೊರತು ಪ್ರಪಂಚದ ಅತಿ ಭಯಾನಕ ಪ್ರಯೋಗಗಳ ಪಟ್ಟಿ ಪೂರ್ಣಗೊಳ್ಳುವುದಿಲ್ಲ ಎಂದೇ ಹೇಳಬಹುದು. ನಾಜಿ ಎಂದಾಕ್ಷಣ ನಿಮ್ಮ ಮನದಲ್ಲಿ ಮೂಡುವುದು ಹಿಟ್ಲರ್ ಹೆಸರಾಗಿದೆ. ಫ್ರೀಜಿಂಗ್ ಅನ್ವೇಷಣೆಗಳನ್ನು ನಾಜಿ ಅವಧಿಯಲ್ಲಿ ಮಾಡಲಾಗಿದ್ದು ಅಂಗಚ್ಛೇದನಗಳನ್ನು ಮತ್ತು ವಿಷದೊಂದಿಗೆ ಪ್ರಯೋಗಗಳನ್ನು ಇಲ್ಲಿ ನಡೆಸಲಾಗಿದೆ. ಇದು ದೇಶಾದ್ಯಂತ ಹೆಚ್ಚಿನ ಮರಣಕ್ಕೆ ಕಾರಣವಾಯಿತು ಮತ್ತು ಹಲವಾರು ಜನರು ಮಾನಸಿಕ ಅಸ್ವಸ್ಥತೆಯನ್ನು ಪಡೆದುಕೊಂಡರು.

ಹೃದಯ ಇರಿಯುವಿಕೆ

#8

ವರ್ನರ್ ತಿಯೋಡರ್ ಒಟ್ಟೊ ಫಾರ್ಸ್‌ಮನ್ ಜರ್ಮನ್‌ನ ಶಸ್ತ್ರಚಿಕಿತ್ಸಾ ತರಬೇತಿ ಪಡೆಯುವ ವ್ಯಕ್ತಿಯಾಗಿದ್ದು ತನ್ನ ಹೃದಯವನ್ನು ತಾನೇ ಇರಿದುಕೊಂಡ ವ್ಯಕ್ತಿಯಾಗಿದ್ದ. ಕ್ಯಾಥಡ್ರಲ್ ಅನ್ನು ತನ್ನ ತೋಳಿನ ರಕ್ತನಾಳಗಳೊಳಗೆ ತೂರಿಸಿ ನಿಧಾನವಾಗಿ ತನ್ನ ಹೃದಯಕ್ಕೆ ಕೊಂಡೊಯ್ಯುವ ಪ್ರಯೋಗವನ್ನು ಈತ ಮಾಡಿದ. ಆದರೆ ತಕ್ಷಣವೇ ಈತ ಮರಣವನ್ನಪ್ಪಿದ.

ಆನೆ ಮತ್ತು ಆಸಿಡ್

#9

ನಿಯಮಿತ ಮನುಷ್ಯ ತೆಗೆದುಕೊಳ್ಳಬಹುದಾದ ಎಲ್‌ಎಸ್‌ಡಿ ಆಸಿಡ್ ಅನ್ನು ಟ್ರುಕೊ ಹೆಸರಿನ ಆನೆಗೆ ಅನ್ನು 3,000 ಕ್ಕಿಂತಲೂ ಹೆಚ್ಚು ಬಾರಿ ನೀಡಲಾಯಿತು. ಪುರುಷ ಆನೆಗಳ ಸ್ವಭಾವವನ್ನು ಅರಿತುಕೊಳ್ಳಲು ಈ ಆಸಿಡ್‌ನ ಪ್ರಯೋಗವನ್ನು ಮಾಡಲಾಯಿತು. ಈ ಆಸಿಡ್‌ನಿಂದಾಗಿ ಆನೆಯು ಹೆಚ್ಚು ವ್ಯಗ್ರಗೊಂಡು ನಿಯಂತ್ರಣವನ್ನು ತಪ್ಪಿತು. ಈ ಪ್ರಯೋಗದ 40-45 ನಿಮಿಷಗಳ ನಂತರ ಆನೆ ಸಾವನ್ನಪ್ಪಿತು.

ಪ್ರಾಜೆಕ್ಟ್ ಸ್ಟಾರ್ಮ್‌ಫುರಿ

#10

ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸುವ ಅಮೇರಿಕಾ 1940 ರಲ್ಲಿ ನಡೆಸಿದ ಪ್ರಯೋಗದಿಂದ ಸೋಲನ್ನು ಕಂಡಿತು. ಸೈಕ್ಲೋನ್‌ಗಳನ್ನು ದುರ್ಬಲಗೊಳಿಸಲು ಐಸ್ ಕ್ರಿಸ್ಟಲ್‌ಗಳನ್ನು ಬಳಸುವ ಪ್ರಯೋಗ ಇದಾಗಿತ್ತು. ಜೀವ ಹಾನಿಯನ್ನು ಕಡಿಮೆಗೊಳಿಸುವ ಉದ್ದೇಶವನ್ನು ಇದು ಒಳಗೊಂಡಿತ್ತು. ಇದಕ್ಕಾಗಿ ಅವರು ಲೋಡುಗಟ್ಟಲೆ ಐಸ್ ಕ್ರಿಸ್ಟಲ್‌ಗಳನ್ನು ಇದರ ಮೇಲೆ ಹಾಕಿದರು ಆದರೆ ಇದರಿಂದಾಗಿ ಹರಿಕೇನ್ ತನ್ನ ದಿಕ್ಕನ್ನು ಬದಲಾಯಿಸಿ ಸವನ್ನಾದ ಕರಾವಳಿ ನಗರವನ್ನು ತಲುಪಿ ಅಲ್ಲಿ ಜೀವ ಮತ್ತು ಆಸ್ತಿಗೆ ಹಾನಿಯನ್ನುಂಟು ಮಾಡಿತು.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಮಂಗಳನಿಂದ ಸೂರ್ಯನ ಚಿತ್ರಣ ಸೆರೆ: ಅಪರೂಪದ ಚಿತ್ರಗಳು
ವಿಶ್ವದ ಟಾಪ್ 10 ದುಬಾರಿ ಫೋನ್‌ಗಳು
ಟ್ವಿಟರ್‌ನ 10ನೇ ಹುಟ್ಟುಹಬ್ಬ: 10 ಕುತೂಹಲಕಾರಿ ವಿಷಯಗಳು
ಮಂಗಳನಲ್ಲಿ ಮಾನವನ ವಾಸ- ಸಾಧ್ಯತೆಗಳು ಅಸಾಧ್ಯತೆಗಳು

ಭೇಟಿ ನೀಡಿ

ಫೇಸ್‌ಬುಕ್ ಪುಟ

ನಮ್ಮ ಕನ್ನಡ.ಗಿಜ್‌ಬಾಟ್ ಪುಟಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we have assembled a list of 10 most dangerous, most terrifying experiments in history. Take a look.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot