Subscribe to Gizbot

5 ಸಾವಿರಕ್ಕಿಂತ ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್ ಲೀಸ್ಟ್!!..ಈ 5 ಸ್ಮಾರ್ಟ್‌ಫೋನ್ ಯಾಕೆ ಬೆಸ್ಟ್?

Written By:

ನನ್ ಹತ್ರ ಕೇವಲ 5000 ರೂಪಾಯಿ ಮಾತ್ರ ಇದೆ. ಅದ್ರೆ ಇದೆ ಹಣದಲ್ಲಿ 5 ಇಂಚ್ ಡಿಸ್‌ಪ್ಲೇ ಇರೊ ಒಂದು ಒಳ್ಳೆ 4G ಮೊಬೈಲ್‌ ಖರೀದಿಸಬೇಕು ಅಂತ ಮೊಬೈಲ್‌ಗಾಗಿ ಹುಡುಕುತ್ತಿದ್ದೀರಾ? ಹಾಗಾದ್ರೆ ನಿಮ್ಮ ಬಜೆಟ್‌ಗೆ ತಕ್ಕಂತೆ ಫೀಚರ್ಸ್ ಸಹ ಹೊಂದಿರುವ ಈ ಟಾಪ್ ಐದು ಮೊಬೈಲ್‌ಗಳು ನಿಮಗೆ ಸರಿಹೋಗಬವಹುದು. ಟ್ರೈಮಾಡಿ ನೋಡಿ!!

ನಾವು ಯಾವಾಗಲೂ ಅಷ್ಟೆ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ ಒಳಗೊಂಡಿರುವ ಮೊಬೈಲ್‌ಗಳನ್ನು ಹುಡುಕುತ್ತಿರುತ್ತೀವಿ. ಎಲ್ಲಾ ಫೀಚರ್ಸ್ ಹೊಂದಿರುವ ಮೊಬೈಲ್ ಬೇಕು ಅಂದುಕೊಳ್ಳತ್ತೇವೆ. ಅಂತಹ ಮೊಬೈಲ್‌ ಹೇಗೆ ಹುಡುಕುವುದು ಎಂಬುದು ಕಷ್ಟವಾಗಿರುತ್ತದೆ. ಹಾಗಾಗಿ ನಾವು ಅಂತಹ ಟಾಪ್ ಐದು ಕಡಿಮೆ ಬೆಲೆಯ ಐದು ಮೊಬೈಲ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಮೊಬೈಲ್‌ಗಳನ್ನು ರೂಪಿಸಿ ಬಿಡುಗಡೆ ಮಾಡಿರುವ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್‌ಗಳು ಇಲ್ಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯು ಯುನಿಕ್ ( YU Yunique (4G VoLTE)

ಯು ಯುನಿಕ್ ( YU Yunique (4G VoLTE)

ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲ ಆಯ್ಕೆಯಾಗಿ ಯು ಯುನಿಕ್ ಮೊಬೈಲ್ ನಿಲ್ಲುತ್ತದೆ. 4000-5000 ರೂಪಾಯಿಗಳಿಗೆ ದೊರೆಯುವ ಮತ್ತು ಹಲವು ವಿಶೇಷಗಳನ್ನು ಹೊಂದಿರುವ ಈ ಮೊಬೈಲ್ ಕೊಂಡುಕೊಂಡರೆ ನಿಮ್ಮ ದುಡ್ಡಿಗೆ ಮೋಸವಾಗುವುದಿಲ್ಲ ಎನ್ನಬಹುದು. ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು. 4.7 ಇಂಚ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 8MP ಕ್ಯಾಮರಾ 2 MP ಸೆಲ್ಫಿ ಕ್ಯಾಮರಾ 1 GB ರ್ಯಾಮ್ 8 GB ಮೆಮೊರಿ 2000 mAhಬ್ಯಾಟರಿ

ಝೆನ್ ಸಿನಿ ಮ್ಯಾಕ್ಸ್( zen cinemax)

ಝೆನ್ ಸಿನಿ ಮ್ಯಾಕ್ಸ್( zen cinemax)

5000 ಕ್ಕಿಂತ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಎರಡನೇ ಉತ್ತಮ ಆಯ್ಕೆ ಎಂದರೆ ಅದು ಝೆನ್ ಸಿನಿ ಮ್ಯಾಕ್ಸ್ ಎನ್ನಬಹುದು. ಇದರ ಬೆಲೆ 4000 ರಿಂದ 5000 ರೂಪಾಯಿಗಳಲ್ಲಿದೆ. ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು. 5.5 ಇಂಚ್ ಡಿಸ್‌ಪ್ಲೇ 5MP ಕ್ಯಾಮರಾ 2GB ರ್ಯಾಮ್ 2900mAh ಬ್ಯಾಟರಿ

ಜ್ಹೋಲೋ ಇರಾ 1X (Xolo Era 1X (4G VoLTE)

ಜ್ಹೋಲೋ ಇರಾ 1X (Xolo Era 1X (4G VoLTE)

ಕಡಿಮೆ ದರದಲ್ಲಿ ಮೂರನೆ ಅತ್ಯುತ್ತಮ ಮೊಬೈಲ್ ಎಂದರೆ ಜ್ಹೋಲೋ ಇರಾ ಎಂದು ಹೇಳಬಹುದು. ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಇದರ ವಿಶೇಷಗಳಲ್ಲೊಂದು. 3500 ರಿಂದ 4500 ರರೂಪಾಯಿಗಳಲ್ಲಿ ದೊರೆಯುವ ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು. 5 ಇಂಚ್ ಡಿಸ್‌ಪ್ಲೇ 8MP ಕ್ಯಾಮರಾ 5 MP ಸೆಲ್ಫಿ ಕ್ಯಾಮರಾ 1 GB ರ್ಯಾಮ್ 8 GB ಮೆಮೊರಿ 2500 mAhಬ್ಯಾಟರಿ

ಇನ್ಫೋಕಸ್ M370 ( Infocus M370)

ಇನ್ಫೋಕಸ್ M370 ( Infocus M370)

ನೋಡಲು ಸ್ಟೈಲಿಶ್ ಆಗಿರಬೇಕು. ಫೀಚರ್ಸ್ ಸಹ ಉತ್ತಮವಾಗಿರಬೇಕು ಎಂದು ಮೊಬೈಲ್ ಹುಡುಕುತ್ತಿರುವವರಿಗೆ ನಾಲ್ಕನೆ ಆಯ್ಕೆ ಇನ್ಫೋಕಸ್ ಎಂದು ಖಡಾಖಂಡಿತವಾಗಿ ಹೇಳಬಹುದು.ಇದರ ಬೆಲೆ 4000 ರಿಂದ 5000 ರೂಪಾಯಿಗಳಲ್ಲಿದೆ. ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು. 5 ಇಂಚ್ ಡಿಸ್‌ಪ್ಲೇ 8MP ಕ್ಯಾಮರಾ 2 MP ಸೆಲ್ಫಿ ಕ್ಯಾಮರಾ 1 GB ರ್ಯಾಮ್ 8 GB ಮೆಮೊರಿ 2230 mAhಬ್ಯಾಟರಿ

ಇನ್‌ಟೆಕ್ಸ್ ಆಕ್ವ ಸ್ಟಾರ್ ( Intex Aqua Star 4G)

ಇನ್‌ಟೆಕ್ಸ್ ಆಕ್ವ ಸ್ಟಾರ್ ( Intex Aqua Star 4G)

ನಿಮ್ಮ ಕೊನೆಯ ಆಯ್ಕೆಯಾಗಿ ನಾವು ಇನ್‌ಟೆಕ್ಸ್ ಆಕ್ವ ಸ್ಟಾರ್ ಮೊಬೈಲನ್ನು ತೆಗೆದುಕೊಂಡಿದ್ದೇವೆ. ಉತ್ತಮ ಫೀಚರ್ಸ್ ಒಳಗೊಂಡಿದ್ದು, ಇದರ ಬೆಲೆ 4000 ರಿಂದ 5000 ರೂಪಾಯಿಗಳಲ್ಲಿದೆ. ಸಾಧಾರಣ ಪ್ರೋಸೆಸರ್ ಹೊಂದಿರುವ ಇನ್‌ಟೆಕ್ಸ್ ಆಕ್ವ ಸ್ಟಾರ್ ಮೊಬೈಲ್ ನಿಮ್ಮ ಐದನೆ ಆಯ್ಕೆಯಾಗಬಹುದು. ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು. 5 ಇಂಚ್ ಡಿಸ್‌ಪ್ಲೇ 8MP ಕ್ಯಾಮರಾ 2 MP ಸೆಲ್ಫಿ ಕ್ಯಾಮರಾ 1 GB ರ್ಯಾಮ್ 8 GB ಮೆಮೊರಿ 2೦೦೦ mAhಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
checkout best 4G phones under Rs. 5000 from different mobiles brands. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot