ಪುರಾತನ ಯುಗದ ಈ ರಹಸ್ಯಗಳ ಅಂತ್ಯವೆಂದು?

By Shwetha
|

ಭೂಮಿಯೆಂಬ ಅದ್ಭುತ ಸ್ಥಳ ಹಲವಾರು ರಹಸ್ಯಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಗುಹೆಗಳು, ವಿಭಿನ್ನ ಆಕಾರದ ಮನುಷ್ಯರು, ರಹಸ್ಯಮಯ ಸ್ಥಳಗಳು ಹೀಗೆ ಈ ಬ್ರಹ್ಮಾಂಡದಲ್ಲಿ ನಿಮಗೆ ಅದ್ಭುತಗಳ ಸರಮಾಲೆಯೇ ದೊರಕುವುದು ಖಂಡಿತ. ಆರಂಭ ಕಾಲದಿಂದಲೂ ಈ ಅದ್ಭುತಗಳು ಭೂಮಿಯ ಮೇಲಿದ್ದು ಕೆಲವೊಂದು ತಮ್ಮೊಳಗಿನ ಸತ್ಯವನ್ನು ಬಯಲು ಮಾಡಿದ್ದರೆ ಇನ್ನು ಕೆಲವು ಹಾಗೆಯೇ ರಹಸ್ಯಗಳನ್ನು ಕಾಪಾಡಿಕೊಂಡು ಬರುತ್ತಿವೆ.

ಓದಿರಿ: ಟರ್ಕಿಯ ಸಂಶೋಧಕನಿಂದ 'ಘೋಸ್ಟ್‌ ಫೋನ್‌' ಆವಿಷ್ಕಾರ!

ನಮ್ಮ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಇಂತಹ ರಹಸ್ಯಗಳನ್ನು ಬೇಧಿಸುವಲ್ಲಿ ಇನ್ನೂ ಪ್ರಯತ್ನವನ್ನು ಪಡುತ್ತಿದೆ. ಏಲಿಯನ್‌ಗಳ ಪತ್ತೆ, ಬರ್ಮುಡಾ ಟ್ರಯಾಂಗಲ್ ರಹಸ್ಯ, ವಿಚಿತ್ರ ಜೀವಿಗಳ ಅಂಗಾಂಗಳು ಪತ್ತೆಯಾಗಿರುವುದು, ಪುರಾತನ ಗುಹೆಗಳ ಚಿತ್ರಕಲೆಗಳು, ಹೀಗೆ ಈ ರಹಸ್ಯಗಳು ಇನ್ನೂ ಅಂತ್ಯವನ್ನು ಕಾಣದೇ ಕಾಡುತ್ತಲೇ ಇವೆ. ಇದಕ್ಕೆ ಇನ್ನಷ್ಟು ಪೂರಕವಾಗಿ ಕೆಲವೊಂದು ನಿಗೂಢ ರಹಸ್ಯಗಳನ್ನು ನಾವು ಇಂದಿಲ್ಲಿ ತಿಳಿಸುತ್ತಿದ್ದು ಇದು ನಿಮ್ಮನ್ನು ಅಚ್ಚರಿಗೊಳಿಸಲಿರುವುದು ನಿಜ.

#1

#1

ತನ್ನ ಮುಖದಲ್ಲಿ ವಿಚಿತ್ರ ಸಂಕೇತವನ್ನು ಮೂಡಿಸಿರುವ ಮಮ್ಮಿಯೊಂದು 1886 ರಲ್ಲಿ ಪತ್ತೆಯಾಗಿದೆ. ಇದರ ಪತ್ತೆಯ ನಂತರ ಈ ಮಮ್ಮಿಯ ಮುಖದಲ್ಲಿ ಮೂಡಿರುವ ವಿಚಿತ್ರ ಭಾವವಾಗಿದೆ.

ಮಮ್ಮಿಯ ಮುಖಭಾವ

ಮಮ್ಮಿಯ ಮುಖಭಾವ

ಈ ಮಮ್ಮಿಯ ಮುಖಭಾವನ್ನು ಪತ್ತೆಹಚ್ಚಲು ಯಾರಿಗೂ ಇದುವರೆಗೆ ಸಾಧ್ಯವಾಗಿಲ್ಲ. ಮರಣ ಹೊಂದುವಾಗ ಶರೀರವು ಬಹಳ ನೋವನ್ನು ಅನುಭವಿಸಿತ್ತು ಎಂಬುದು ಇದರಿಂದ ಕಂಡುಬರುತ್ತಿದೆ. ಶರೀರವನ್ನು ಜೀವಂತವಾಗಿ ಉರಿಸಲಾಗಿದೆ ಎಂಬುದು ಅಧ್ಯಯನಕಾರರ ಮಾತಾಗಿದೆ.

ಉರಿಯುತ್ತಿರುವ ದೀಪಗಳು

ಉರಿಯುತ್ತಿರುವ ದೀಪಗಳು

ಮಧ್ಯಕಾಲೀನ ಯುಗದಲ್ಲಿ, ಯಾವುದೇ ಇಂಧನವನ್ನು ಬಳಸದೇ ದೀಪಗಳನ್ನು ಉರಿಸಲಾಗುತ್ತಿತ್ತು. ನಂತರ ಇವುಗಳನ್ನು ಗಾಳಿಯಾಡದ ಸ್ಥಳಗಳಲ್ಲಿ ಇರಿಸಲಾಗುತ್ತಿತ್ತು.

ಮಾರ್ಗದರ್ಶಿ

ಮಾರ್ಗದರ್ಶಿ

ಮೃತರಾದವರಿಗೆ ಮಾರ್ಗದರ್ಶಿಯಾಗಿ ಈ ದೀಪಗಳನ್ನು ಉರಿಸಲಾಗುತ್ತಿತ್ತು. ವರ್ಷಗಳಾದರೂ ಈ ದೀಪ ಉರಿಯುತ್ತಿತ್ತು ಮತ್ತು ಮೂಢನಂಬಿಕೆಯುಳ್ಳ ಜನರು ಅದನ್ನು ನಂದಿಸಲು ಪ್ರಯತ್ನಿಸುತ್ತಿದ್ದರು.

ದೆವ್ವಗಳ ಕಾಟ

ದೆವ್ವಗಳ ಕಾಟ

ದೆವ್ವಗಳ ಕಾಟದಿಂದಾಗಿ ಈ ದೀಪಗಳು ನಂದದೇ ಹಾಗೇ ಉರಿಯುತ್ತಿದೆ ಎಂಬುದು ಇವರ ವಾದವಾಗಿದ್ದು ಆತ್ಮಕ್ಕೆ ಇವುಗಳು ಹಾನಿಯನ್ನು ಉಂಟುಮಾಡಬಹುದು ಎಂಬುದು ಇವರುಗಳ ನಂಬಿಕೆಯಾಗಿತ್ತು.

ವಿದ್ಯುತ್

ವಿದ್ಯುತ್

ಆ ಕಾಲದಲ್ಲಿಯೇ ವಿದ್ಯುತ್ ಅನ್ನು ಕಂಡುಹಿಡಿಯಲಾಗಿದ್ದು ಅದನ್ನೇ ದೀಪಗಳ ರೂಪದಲ್ಲಿ ಬಳಸಲಾಗುತ್ತಿತ್ತು ಎಂಬ ಪ್ರತೀತಿಯೂ ಇದೆ.

ಪುರಾತನ ರಚನೆ

ಪುರಾತನ ರಚನೆ

11 ವರ್ಷಗಳ ಹಿಂದೆ, 2003 ರಲ್ಲಿ ವಿಜ್ಞಾನಿಗಳು ಆಕಸ್ಮಿಕವಾಗಿ ಗ್ಯಾಲಿ ಸಮುದ್ರದ ಅಡಿಯಲ್ಲಿ ವೃತ್ತಾಕಾರದ ರಚನೆಯೊಂದನ್ನು ಅನ್ವೇಷಿಸಿದ್ದರು. ಈ ರಚನೆಯು 12,000 ವರ್ಷಗಳಷ್ಟು ಹಳೆಯದಾಗಿದ್ದು ಭೂಮಿಯಲ್ಲೇ ಈ ರಚನೆಯನ್ನು ನಿರ್ಮಿಸಿದ್ದು ಜಲಪ್ರಳಯದ ಸಂದರ್ಭದಲ್ಲಿ ಇದು ಸಾಗರವನ್ನು ಸೇರಿಕೊಂಡಿದೆ ಎಂಬುದಾಗಿದೆ.

10 ಮೀಟರ್‌ಗಳಷ್ಟು ಉದ್ದ

10 ಮೀಟರ್‌ಗಳಷ್ಟು ಉದ್ದ

10 ಮೀಟರ್‌ಗಳಷ್ಟು ಉದ್ದವಾಗಿದ್ದು, ಇದರ ತೂಕ 60,000 ಟೋನ್‌ಗಳಾಗಿದೆ. ಬಸಾಲ್ಟ್‌ನಿಂದ ಇದನ್ನು ನಿರ್ಮಿಸಲಾಗಿದೆ. 2 ಸ್ಟೋನ್ ಹೆಂಗೆ ರಚನೆಯ ಗಾತ್ರಕ್ಕೆ ಇದು ಸಮನಾಗಿದೆ.

ಈಜಿಪ್ಟ್ ದೇವಾಲಯದಲ್ಲಿನ ಶೂಗಳು

ಈಜಿಪ್ಟ್ ದೇವಾಲಯದಲ್ಲಿನ ಶೂಗಳು

2004 ರಲ್ಲಿ ಈಜಿಪ್ಟ್‌ನಲ್ಲಿ ಸಂಶೋಧಕರು ಒಂದು ನಿಧಿಯೊಂದನ್ನು ಅನ್ವೇಷಿಸಿದ್ದರು. ಏಳು ಶೂಗಳನ್ನು ಒಂದು ಜಾರ್‌ನಲ್ಲಿ ಇವರುಗಳು ಪತ್ತೆಮಾಡಿದ್ದರು.

2,000 ವರ್ಷಗಳಷ್ಟು ಹಳೆಯ ಶೂ

2,000 ವರ್ಷಗಳಷ್ಟು ಹಳೆಯ ಶೂ

ಅದರಲ್ಲಿ ಎರಡು ಜೊತೆ ಶೂಗಳು ಮಕ್ಕಳದಾಗಿದ್ದು, ಉಳಿದವುಗಳು ದೊಡ್ಡವರದಾಗಿತ್ತು ಸುಮಾರು 2,000 ವರ್ಷಗಳಷ್ಟು ಹಳೆಯ ಶೂಗಳು ಇವುಗಳಾಗಿರಬಹುದು ಎಂಬ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಹೆಚ್ಚು ದುಬಾರಿ

ಹೆಚ್ಚು ದುಬಾರಿ

ಈ ಶೂಗಳು ಹೆಚ್ಚು ದುಬಾರಿಯಾಗಿತ್ತು ಎಂಬ ಮಾಹಿತಿ ಕೂಡ ಅಧ್ಯಯನದಿಂದ ತಿಳಿದು ಬಂದಿದೆ.

ಪಾದದ ಅಚ್ಚುಗಳು

ಪಾದದ ಅಚ್ಚುಗಳು

ಜೂನ್ 1, 1968 ರಂದು ಫಾಸಿಲ್ ಹಂಟರ್ ದೈತ್ಯ ಗಾತ್ರದ್ದು ಎಂದೇ ಪರಿಗಣಿತವಾಗಿರುವ ಶೂ ಅಚ್ಚನ್ನು ಪತ್ತೆಮಾಡಿದ್ದಾರೆ. ಇದು ಆಳವಾಗಿ ಮಣ್ಣಿನಲ್ಲಿ ಹೂತಿತ್ತು.

600 ವರ್ಷಗಳಷ್ಟು ಹಳೆಯದು

600 ವರ್ಷಗಳಷ್ಟು ಹಳೆಯದು

ಇದು ಸುಮಾರು 600 ವರ್ಷಗಳಷ್ಟು ಹಳೆಯದಾಗಿರಬಹುದು ಎಂಬುದು ಹಂಟರ್ ನಂಬಿಕೆಯಾಗಿದ್ದು, ಆ ಕಾಲದಲ್ಲಿಯೂ ಶೂಗಳನ್ನು ಬಳಸುತ್ತಿದ್ದರು ಎಂಬ ಅಂಶವನ್ನು ಇದು ತೋರಿಸಿದೆ.

ಡೈನೋಸರ್ ಮಾದರಿಯ ಜೀವಿ

ಡೈನೋಸರ್ ಮಾದರಿಯ ಜೀವಿ

ಡೈನೋಸರ್ ಮಾದರಿಯ ಜೀವಿ ಇದಾಗಿದ್ದು ಹಲವಾರು ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿ ಇದನ್ನು ದೃಢೀಕರಿಸಲಾಗಿದೆ. ಇನ್ನೂ ಇದು ಕಂಡುಬಂದಿದ್ದು ನೀರಿನೊಳಗೆ ಇದು ಈಜುತ್ತದೆ ಎಂಬುದಾಗಿ ತಿಳಿದವರು ಹೇಳುತ್ತಾರೆ.

ಸಸ್ಕಾಚ್

ಸಸ್ಕಾಚ್

ಸಸ್ಕಾಚ್ ಎಂಬ ಹೆಸರಿನ, ದೈತ್ಯ ಹೆಜ್ಜೆಯ ಜೀವಿಗಳು ಹಿಮಪಾತದಲ್ಲಿ ಇವುಗಳು ವಾಸಿಸುತ್ತಿದ್ದು ಯುಎಸ್ ಮತ್ತು ಕೆನಡಾ ಪ್ರಾಂತ್ಯದಲ್ಲಿ ಕಂಡುಬಂದಿದೆ. ಮೊದಲಿಗೆ ಇವುಗಳು ಗೊರಿಲ್ಲಾಗಳಾಗಿ ಕಂಡುಬಂದಿದ್ದು, ಇದರ ನಡೆಯುವ ವಿಧವನ್ನು ಆ ಕಾಲದ ಮಾನವರಗೆ ಹೋಲಿಸಲಾಗಿದೆ.

ದೈತ್ಯ ಅಸ್ಥಿಪಂಜರ

ದೈತ್ಯ ಅಸ್ಥಿಪಂಜರ

ವಿಸ್ಕೋನ್‌ಸಿನ್ ದೆಲ್ವಾನ್ ನದಿಯ ಬಳಿ ದೊರೆತಿರುವ ದೈತ್ಯ ಅಸ್ಥಿಪಂಜರದ ಅನ್ವೇಷಣೆಯನ್ನು ಕೈಗೊಂಡವರು ಫಿಲಿಪ್ಸ್ ಸಹೋದರರಾಗಿದ್ದಾರೆ. ಮಾನವಂತೆಯೇ ಕಾಣುವ ಇವರು ಕೆಲವೊಂದು ಅಂಶಗಳಿಂದ ದೈತ್ಯರು ಎಂಬುದಾಗಿ ಕಂಡುಬಂದಿದ್ದಾರೆ.

ರಹಸ್ಯಮಯ ಕಣಿವೆಗಳು ಮತ್ತು ಗುಹೆ

ರಹಸ್ಯಮಯ ಕಣಿವೆಗಳು ಮತ್ತು ಗುಹೆ

ದೈತ್ಯರು 1931 ರಲ್ಲಿ ಮಾಜಿ ಖಗೋಳಶಾಸ್ತ್ರಜ್ಞ ಬ್ರೂಸ್ ರೆಸ್ಸೆಲ್ ತಾವು ರಹಸ್ಯಮಯ ಕಣಿವೆಗಳು ಮತ್ತು ಗುಹೆಗಳನ್ನು ಅನ್ವೇಷಿಸಿದ್ದಾಗಿ ಘೋಷಿಸಿದ್ದಾರೆ. ತಮ್ಮ ಸಹೋದ್ಯೋಗಿ ಡೇನಿಯಲ್ ಜೊತೆಗೂಡಿ ಬ್ರೂಸ್ ಈ ಅನ್ವೇಷಣೆಯನ್ನು ಮಾಡಿದ್ದಾರೆ. ಇವರುಗಳಿಗೆ 2.7 ಮೀಟರ್‌ಗಳ ಹೆಚ್ಚಿನ ಮಾನವ ಅಸ್ಥಿಪಂಜರಗಳು ದೊರೆತಿವೆ.

ಲಾವ್ ಲೇಕ್ ಕಣಿವೆ

ಲಾವ್ ಲೇಕ್ ಕಣಿವೆ

32 ಕಿಲೋಮೀಟರ್ ಉದ್ದವಿರುವ ಲಾವ್ ಲೇಕ್ ಕಣಿವೆ ಬಹು ಪುರಾತನಾಗಿದ್ದು ಡೇವಿಡ್ ಹರ್ಟ್ ಮತ್ತು ಜೇಮ್ಸ್ ಪಗ್ ಈ ಕಣಿವೆಯ ಅನ್ವೇಷಣೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.

ದೈತ್ಯ ಮಾನವ ಕೈಬೆರಳು

ದೈತ್ಯ ಮಾನವ ಕೈಬೆರಳು

ಈಜಿಪ್ಟ್‌‌ನಲ್ಲಿ 2012 ರಲ್ಲಿ ಪತ್ತೆಯಾದ ದೈತ್ಯ ಮಾನವ ಕೈಬೆರಳು, ಆನ್‌ಲೈನ್ ಮತ್ತು ವೆಬ್‌ಸೈಟ್ ತಾಣಗಳಲ್ಲಿ ಬಹು ದೊಡ್ಡ ಸುದ್ದಿಯನ್ನೇ ಮಾಡಿತು. ಇದು 38 ಸೆಂಟಿಮೀಟರ್ಸ್ ಉದ್ದವಿದ್ದು, ದೈತ್ಯವಾಗಿದೆ.

ದೈತ್ಯ ಪರ್ವತ

ದೈತ್ಯ ಪರ್ವತ

2014 ರಲ್ಲಿ ಟಿವಿ ಶೋ ಒಂದರಲ್ಲಿ ಜಾರ್ಜಿಯಾದ ಈ ದೈತ್ಯ ಪರ್ವತಗಳ ಬಗ್ಗೆ ಸುದ್ದಿಯನ್ನು ಬಿತ್ತರಿಸಿದೆ. ಈ ಪರ್ವತಗಳಲ್ಲಿ ದೊಡ್ಡ ಅಸ್ಥಿಪಂಜರಗಳೂ ದೊರಕಿವೆ ಎಂಬುದಾಗಿ ಸುದ್ದಿಯಾಗಿದೆ.

Best Mobiles in India

English summary
The world is full of mysteries and some have still remained unsolved even thousands of years later. The discoveries might remain unsolved because they seem to defy science and reason, empirically.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X