ಮಗುವಿನ ಮೇಲೆ ಎರಗಿದ ಸಿಂಹ ಮುಂದೇನಾಯಿತು? ವೀಡಿಯೊ ವೈರಲ್

Written By:

ಇಂಟರ್ನೆಟ್ ಎಂಬ ಮಾಯಾ ಜಗತ್ತಿನಲ್ಲಿ ಎಲ್ಲಾ ಪ್ರಶ್ನೆಗೂ ಎಲ್ಲಾ ಕುತೂಹಲಕ್ಕೂ ಉತ್ತರವಿದೆ. ಅಂತೆಯೇ ಹೆಚ್ಚು ರೋಚಕವಾದ ಭಯಾನಕ ಕಥಾನಕಗಳೂ ಇಲ್ಲಿ ನಡೆಯುತ್ತಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವಾರು ಘಟನೆಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವುದನ್ನು ನಿಮಗೆ ಕಾಣಬಹುದಾಗಿದೆ. ಇಂದಿಲ್ಲಿ ನಾವು ತಿಳಿಸುತ್ತಿರುವುದು ಜಪಾನ್‌ನ ಮೃಗಾಲಯದಲ್ಲಿ ಭಾರೀ ಗಾತ್ರದ ಸಿಂಹವೊಂದು ಹಸುಳೆಯ ಮೇಲೆರಗಿದ್ದು ಇದು ವೀಡಿಯೊದಲ್ಲಿ ಸೆರೆಯಾಗಿ ಜಾಲತಾಣದಲ್ಲಿ ರೋಚಕವಾಗಿ ಹಬ್ಬಿದೆ.

ಓದಿರಿ: ನಿಗೂಢತೆಯನ್ನು ಬಚ್ಚಿಟ್ಟುಕೊಂಡಿರುವ ಫೋಟೋಗ್ರಾಫ್ಸ್

ಮಗುವಿನ ಮೇಲೆ ಸಿಂಹವು ಎರಗಿ ನಂತರ ಏನಾಯಿತು? ಇಂತಹ ಭಯಾನಕ ಹೃದಯವಿದ್ರಾವಕ ಘಟನೆ ವೀಡಿಯೊದಲ್ಲಿ ಸೆರೆಯಾದದ್ದಾದರೂ ಏಕೆ? ಪ್ರಚಾರ ಪಡೆದಿದ್ದಾರೂ ಏಕೆ? ಮೊದಲಾದ ನಿಮ್ಮ ಸಂದೇಹಗಳಿಗೆ ಪ್ರಶ್ನೆಗಳಿಗೆ ಉತ್ತರ ಈ ಸ್ಲೈಡರ್‌ಗಳಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಗುವಿನ ಮೇಲೆರಗಲು ಹಾರಿದೆ

ಮಗುವಿನ ಮೇಲೆರಗಲು ಹಾರಿದೆ

#1

ಜೂನಲ್ಲಿ ಮಗು ಸಿಂಹವನ್ನು ಆಟಕ್ಕಾಗಿ ಕರೆದಿದ್ದು ಹಸಿದಿದ್ದ ಸಿಂಹ ಮಗು ಹಿಂತಿರುಗಿ ಹೋಗುತ್ತಿದ್ದಂತೆಯೇ ಮಗುವಿನ ಮೇಲೆರಗಲು ಹಾರಿದೆ.

ಗ್ಲಾಸ್ ಪರದೆ

ಗ್ಲಾಸ್ ಪರದೆ

#2

ಆದರೆ ಸಿಂಹವಿದ್ದ ಜಾಗದ ಸುತ್ತಲೂ ಗ್ಲಾಸ್ ಪರದೆಯನ್ನು ಹಾಕಿದ್ದರಿಂದಾಗಿ ಸಿಂಹಕ್ಕೆ ಮುಖಭಂಗವಾಗಿದೆ. ಮಗು ಅಪಾಯದಿಂದ ಪಾರಾಗಿದೆ.

ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ

ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ

#3

ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಭಯಾನಕವಾಗಿದ್ದು ಸಿಂಹ ಮಗುವಿನ ಮೇಲೆರಗಿದ್ದು ಅಷ್ಟೊಂದು ಭೀಭತ್ಸವಾಗಿದ್ದು ನಂತರ ಗ್ಲಾಸ್‌ಗೆ ಅದರ ಮುಖ ಢಿಕ್ಕಿಯಾದಾಗ ಭಯದಿಂದ ಮುಚ್ಚಿದ ಕಣ್ಣುಗಳನ್ನು ತೆರೆದು ನಾವು ವೀಡಿಯೊವನ್ನು ದಿಟ್ಟಿಸುತ್ತೇವೆ.

ನಿಖರ

ನಿಖರ

#4

ವೀಡಿಯೊದಲ್ಲಿ ಮಗು ಮತ್ತು ಸಿಂಹ ಒಬ್ಬರನ್ನೊಬ್ಬರು ಸ್ವಲ್ಪ ಸಮಯ ನೋಡುತ್ತಾರೆ. ಇದನ್ನೂ ನಿಖರವಾಗಿ ಸೆರೆಹಿಡಿಯಲಾಗಿದೆ.

ಗಾಜನ್ನು ಮುರಿಯುವ ಪ್ರಯತ್ನ

ಗಾಜನ್ನು ಮುರಿಯುವ ಪ್ರಯತ್ನ

#5

ಸಿಂಹ ಮತ್ತೂ ತನ್ನ ಪ್ರಯತ್ನವನ್ನು ಬಿಡದೆ ಗಾಜನ್ನು ಮುರಿಯುವ ಪ್ರಯತ್ನವನ್ನು ಮಾಡಿರುವುದು ವೀಡಿಯೊದಲ್ಲಿ ಚಿತ್ರಿತವಾಗಿದೆ.

ಹಿಂದಕ್ಕೆ ವಾಲಿದೆ

ಹಿಂದಕ್ಕೆ ವಾಲಿದೆ

#6

ಸಿಂಹದ ಹಠಾತ್ ದಾಳಿಗೆ ಮಗು ಭಯಬಿದ್ದಂತೆ ಕಾಣುತ್ತಿಲ್ಲ. ಸ್ವಲ್ಪ ಹಿಂದಕ್ಕೆ ವಾಲಿದೆ ಎಂಬುದು ಕಂಡಿದೆ.

ಉದ್ರೇಕ

ಉದ್ರೇಕ

#7

ಮೃಗಾಲಯದವರು ಹೇಳಿರುವಂತೆ ಮಗುವನ್ನು ಕಂಡು ಸಿಂಹವು ಕೊಂಚ ಉದ್ರೇಕಗೊಂಡಿದ್ದು ಸ್ನೇಹದ ಪ್ರವೃತ್ತಿಯಲ್ಲಿ ಮಗುವಿನ ಸಮೀಪ ಬಂದಿದೆ ಎಂದಾಗಿದೆ.

ಸಿಂಹವು ಮಗುವಿನ ಮೇಲೆರಗಿರುವ ವೀಡಿಯೊ ಇಲ್ಲಿದೆ

ಸಿಂಹವು ಮಗುವಿನ ಮೇಲೆರಗಿರುವ ವೀಡಿಯೊ

ವೀಡಿಯೊ ಇಲ್ಲಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In the video, the boy and a lion observe each other for a moment. The moment the boy turns his back on it, the lion charges at him.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot