ಕಂಪ್ಯೂಟರ್ ಮತ್ತು ಮೊಬೈಲ್ ಮೂಲಕ ಆನ್‌ಲೈನ್‌ನಲ್ಲಿ ವಿಡಿಯೋ ಗೇಮ್ ಆಡುವ ಮಕ್ಕಳ ಸರಾಸರಿ ಸಮಯವು ಕಳೆದ ಹದಿನೈದು ವರ್ಷಗಳಲ್ಲಿ 30 ನಿಮಿಷಗಳಷ್ಟು ಹೆಚ್ಚಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.! ಇದರ ಬೆನ್ನಲ್ಲೇ ಎರಡು ವರದಿಗಳು ಎರಡು ವಿಭನ್ನ ಪರಿಣಾಮವನ್ನು ಪ್ರಕಟಿಸಿ ಕುತೋಹಲಕ್ಕೆ ದಾರಿ ಮಾಡಿಕೊಟ್ಟಿವೆ.!!
ಹೌದು, ವಿಡಿಯೋ ಗೇಮ್ ಆಡುವ ಮಕ್ಕಳ ಬುದ್ದಿ ಚುರುಕಾಗಲಿದೆ ಎಂದು ಒಂದು ವರದಿ ಹೇಳಿದ್ದರೆ, ಮಕ್ಕಳು ವಿಡಿಯೋ ಗೇಮ್‌ಗೆ ಹೆಚ್ಚು ದಾಸರಾಗಿದ್ದರೆ ಅದನ್ನು ಗೇಮಿಂಗ್ ಡಿಸಾರ್ಡರ್ ಎಂದು ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ.!! ಹಾಗಾದರೆ, ಈ ಎರಡೂ ವರದಿಗಳು ಏನೆಲ್ಲಾ ಅಂಶಗಳನ್ನು ಹೇಳಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!
ಗೇಮಿಂಗ್ ಡಿಸಾರ್ಡರ್ ಗೋಷಣೆ?
ಇಂಟರ್ ನ್ಯಾಷನಲ್ ಕ್ಲಾಸಿಫಿಕೇಷನ್ ಆಫ್ ಡಿಸೀಸಸ್(ಐಸಿಡಿ) ಅನ್ನು ಈ ಮೊದಲು 1990 ರಲ್ಲಿ ಅಪ್‌ಡೇಟ್ ಮಾಡಲಾಗಿದ್ದು, ಇದೀಗ ಮತ್ತೆ ಅಪ್‌ಡೇಟ್ ಮಾಡಲಾಗುತ್ತಿದೆ.!! ವಿಶ್ವ ಆರೋಗ್ಯ ಸಂಸ್ಥೆ 2018 ರಲ್ಲಿ ಗೇಮಿಂಗ್ ಡಿಸಾರ್ಡರ್ ಅನ್ನು ಮಾನಸಿಕ ಸಮಸ್ಯೆಯನ್ನಾಗಿ ಘೋಷಿಸಲು ಸಿದ್ಧತೆ ನಡೆಸಿದೆ.!!
ಗ್ಯಾಜೆಟ್‌ಗಳಿಗೆ ಸಮಯ ಮೀಸಲು!!
2000 ಮತ್ತು 2015 ರ 15 ವರ್ಷಗಳಲ್ಲಿ ವಿಡಿಯೋ ಗೇಮ್ ಆಡುವ ಮಕ್ಕಳ ಸರಾಸರಿ ಸಮಯ ಬಾರಿ ಬೆಳವಣಿಗೆ ಕಂಡುಬಂದಿದ್ದರೆ, ಇನ್ನು ಇದೇ ಅವಧಿಯಲ್ಲಿ ಟಿವಿ ವೀಕ್ಷಣೆಗಾಗಿ ಮಕ್ಕಳು 10 ನಿಮಿಷಗಳನ್ನು ವ್ಯಯಿಸುತ್ತಿದ್ದಾರೆ. ಮಕ್ಕಳು ವೀಡಿಯೋ ಗೇಮ್ ಗಳಲ್ಲಿ ಮತ್ತು ಕಂಪ್ಯೂಟರನ್ನು ಬಳಸುವ ಒಟ್ಟು 40 ನಿಮಿಷಗಳಷ್ಟು ಹೆಚ್ಚಾಗುತ್ತದೆ.
ಆತಂಕಕಾರಿ ಬೆಳವಣಿಗೆ!!
ಮೊಬೈಲ್ ಮತ್ತು ಕಂಪ್ಯೂಟರನ್ನು ಬಳಸುವ ಮಕ್ಕಳು ವೀಡಿಯೋ ಗೇಮ್ ಹೆಚ್ಚು ಆಡುವ ವ್ಯಸನಕ್ಕೆ ಬೀಳುತ್ತಿದ್ದಾರೆ ಎನ್ನಲಾಗಿದೆ.! ವಿಡಿಯೋ ಗೇಮ್‌ಗಳನ್ನು ಆಡುವುದು ಅವರ ಮಲ್ಟಿ ಟಾಸ್ಕ್ ಸ್ಕಿಲ್ ಚುರುಕುಗೊಳಿಸಿದರೂ ಸಹ ಅದು ಅವರಿಗೆ ವ್ಯಸನವಾಗಿ ಬದಲಾದರೆ ಅಪಾಯ ಎಂದು ವರಗಿಗಳು ಹೇಳಿವೆ.!!
ಕಾಮಿಕ್ ಪ್ರಪಂಚ!!
ಮೊಬೈಲ್ ಮತ್ತು ವಿಡಿಯೋ ಗೇಮ್‌ಗಳು ಮಕ್ಕಳನ್ನು ಹೆಚ್ಚು ಸೆಳೆಯುವುದರಿಂದ ಮಕ್ಕಳು ಬಹುಬೇಗ ಕಾಮಿಕ್ ಪ್ರಪಂಚಕ್ಕೆ ಮುಖ ಮಾಡುತ್ತವೆ.!! ಮೊದಲೇ ಮಕ್ಕಳಲ್ಲಿ ಊಹಾ ಪ್ರಪಂಚದ ಕಲ್ಪನೆ ಇರುವುದರಿಂದ ಗೇಮ್ ಆಡುವುದು ಅವರಿಗೆ ಮನರಂಜನೆಯ ಬದಲಾಗಿ ವ್ಯಸನವಾಗುತ್ತಾ ಹೋಗಬಹುದು.!!
ಪೋಷಕರದ್ದು ತಪ್ಪು!!
ಮಕ್ಕಳು ಮೊಬೈಲ್, ಕಂಪ್ಯೂಟರ್ ಅಥವಾ ವಿಡಿಯೋ ಗೇಮ್‌ಗೆ ಹೆಚ್ಚು ದಾಸರಾಗಿದ್ದರೆ ಅದಕ್ಕೆ ಪೋಷಕರೆ ಹೊಣೆ ಎಂದು ವರದಿಗಳು ತಿಳಿಸಿವೆ. ಮಕ್ಕಳ ಗ್ಯಾಜೆಟ್ ಬಳಕೆಯಲ್ಲಿ ಮಿತಿ ಹೇರುವ ಜೊತೆಗೆ ವಾಸ್ತವತೆಯ ಪಾಠವನ್ನು ಮತ್ತು ಸಮಾಜದ ಸಂಪರ್ಕವನ್ನು ದೊರಕಿಸದೆ ಪೋಷಕರು ತಪ್ಪು ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.!!
ಓದಿರಿ:ಜಗತ್ತು ನಿಬ್ಬೆರಗಾಗುವ ಮತ್ತೊಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ!!.ಕೇವಲ 12 ಸಾವಿರಕ್ಕೆ!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.