ಗೂಗಲ್ ಹುಡುಕಿದೆ ಯಶಸ್ಸಿಗೆ ಹೊಸ ದಾರಿ

ಈಗ ಅದು ಗೂಗಲ್ + ಎಂಬ ಹೊಸ ಸೋಶಿಯಲ್ ನೆಟ್ ವರ್ಕ್ ಮೂಲಕ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿದೆ. ಲಿಮಿಟೆಡ್ ಇನ್ವಿಟೇಶನ್ ಬೇಸ್ಡ್ ಬೇಟಾ ಫಾರ್ಮೆಟ್ ನಲ್ಲಿ ಈದೀಗ ದೊರೆಯುತ್ತಿರುವ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳ ಸೇವೆಗಿಂತ ತಾನು ಕೊಡುವ ಈ ಸೇವೆ ಹೆಚ್ಚಿನ ಜನಪ್ರಿಯತೆ ಗಳಿಸಬೇಕೆಂಬ ಉದ್ದೇಶದಿಂದ ಮೊಬೈಲ್ ಹ್ಯಾಂಡ್ ಸೆಟ್ ಹಾಗೂ ನೆಟ್ ಬುಕ್ ಗಳಲ್ಲಿ ಇನ್ನು ಮುಂದೆ ಈ ಸೇವೆಯನ್ನು ನೀಡಲು ಗೂಗಲ್ ನಿರ್ಧರಿಸಿದೆ.
ಸದ್ಯಕ್ಕೆ ದೊರೆತಿರುವ ಮಾಹಿತಿಯ ಪ್ರಕಾರ, ಗೂಗಲ್ ತನ್ನ ಹೊಸ 'ಗೂಗಲ್ ನೆಕ್ಸಸ್ 3' ಫೋನ್ ನಲ್ಲಿ ಸ್ಪೆಷಲ್ ಬಟನ್ ಒನ್ ಟಚ್ ಮೂಲಕ ಈ ಸೇವೆಯನ್ನು ಅಳವಡಿಸಲು ಮುಂದಾಗಿದೆ. ಈಗಾಗಲೇ ಸಾಕಷ್ಟು ಮೊಬೈಲ್ ಗಳಲ್ಲಿ ಕಂಡುಬರುವ ಫೇಸ್ ಬುಕ್ ಗೆ ಅತಿ ವೇಗವಾಗಿ ಜಾರಬಲ್ಲ ಬಟನ್ ನಂತೆ ಈ ಗೂಗಲ್ ನಲ್ಲಿ ಕೂಡ ಲಭ್ಯವಾಗಲಿದೆ.
ಇದಕ್ಕೆ ಬೇಕಾಗಿರುವ ನೆಕ್ಸಸ್ 3 ಡಿವೈಸ್ ಎಚ್ ಟಿಸಿ ಬದಲು ಸ್ಯಾಮ್ ಸಂಗ್ ತಯಾರಿಸಲಿದ್ದು, ಇದನ್ನು ಈಗಾಗಲೇ ಸ್ಯಾಮ್ ಸಂಗ್ ತನ್ನ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದೆ. ಇದೆಲ್ಲ ಈಗ ಕೇವಲ ಅಂತೆ-ಕಂತೆ ಸುದ್ದಿಗಳಾಗಿದ್ದರೂ ಬೆಂಕಿ ಇಲ್ಲದೇ ಹೊಗೆ ಏಳಲು ಸಾಧ್ಯವಿಲ್ಲ ಎಂಬುದು ಎಲ್ಲರ ಅನುಭವ ತಾನೇ! ಹಾಗಾಗಿ ಯಾವಾಗ ಗೂಗಲ್ ಈ ಸೇವೆ ಪ್ರಾರಂಭಿಸಲಿದೆ ಎಂಬುದನ್ನಷ್ಟೇ ಕಾಲ ಹೇಳಬೇಕಾಗಿದೆ...


Click it and Unblock the Notifications








