ಎಲ್ ಜಿ ಆಪ್ಟಿಮಸ್ ವೈಟ್ ಕ್ಲಿಕ್ ಆಗೋದು ಗ್ಯಾರಂಟಿ!

Posted By: Staff

ಎಲ್ ಜಿ ಆಪ್ಟಿಮಸ್ ವೈಟ್ ಕ್ಲಿಕ್ ಆಗೋದು ಗ್ಯಾರಂಟಿ!
ಬೆಂಗಳೂರು, ಜು. 20: ಎಲ್ ಜಿ ಕಂಪೆನಿ ನೆದರ್ ಲ್ಯಾಂಡ್ ನಲ್ಲಿ ಈಗಾಗಲೇ ಬಿಡುಗಡೆಮಾಡಿರುವ ಸ್ಮಾರ್ಟ್ ಫೋನ್ ಆಪ್ಟಿಮಸ್ ಬ್ಲಾಕ್ ಆವೃತ್ತಿಯನ್ನು ಇದೀಗ ಎಲ್ ಜಿ 'ಆಪ್ಟಿಮಸ್ ವೈಟ್' ಎಂಬ ಹೆಸರಿನ ಮೂಲಕ ಬಿಡುಗಡೆಮಾಡಲಿದೆ. ಎಲ್ ಜಿ 'ಆಪ್ಟಿಮಸ್ ಬ್ಲಾಕ್' ನಂತೆ ಎಲ್ಲಾ ವಿಶೇಷತೆಗಳನ್ನು ಹೊಂದಿದ್ದು ಕೇವಲ ಬಣ್ಣ ಮಾತ್ರ ಬದಲಾಗಿ ಬಿಳಿಯ ಬಣ್ಣ ಇದೆ.

ಈ ಎಲ್ ಜಿ 'ಆಪ್ಟಿಮಸ್ ವೈಟ್' ನಲ್ಲಿ ಮಲ್ಟಿಮೀಡಿಯಾದಲ್ಲಿ ಮ್ಯೂಸಿಕ್ ಪ್ಲೇಯರ್, ವಿಡಿಯೋ ಪ್ಲೇಯರ್, ವಿಡಿಯೋ ರೆಕಾರ್ಡಿಂಗ್, ಹೈ ಡೆಪನಿಷನ್ ವಿಡಿಯೋ ಫಾರ್ಮೆಟ್, 3.5 ಯುನಿವರ್ಸಲ್ ಜಾಕ್, ಎಲ್ಲಾ ರೀತಿಯ ಸೌಲಭ್ಯ ಹೊಂದಿದೆ. 4.0 ಇಂಚ್ ಟಚ್ ಸ್ಕ್ರೀನ್ ಹೊಂದಿರುವ ಇದು ಎಕ್ಸಲೆಂಟ್ ವಿಡಿಯೋ ಕ್ವಾಲಿಟಿ ಹೊಂದಿದೆ. 720p ಫಾರ್ಮೆಟ್ ಹೈ ಡೆಪನಿಷನ್ ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯದ 5 ಮೆಗಾ ಪಿಕ್ಸೆಲ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಇದರಲ್ಲಿ 3G ನೆಟ್ ವರ್ಕ್ ವಿಡಿಯೋ ಕಾಲಿಂಗ್, ವೈರ್ ಲೆಸ್ LAN, ಬ್ಲೂ ಟೂಥ್ 3.0 EDR, USB ಪಿಸಿ ಸಿಂಕ್, 2G ಟೆಕ್ನಾಲಜಿಯ GPRS & EDGE, 3G ನೆಟವರ್ಕ್ ನ ಇಂಟರ್ ನೆಟ್ & ಡಾಟಾ ಟ್ರಾನ್ಸ್ ಫರ್ ವೇಗ 14 Mbps ಇದೆ. ಈ ಮೊಬೈಲ್ ಆಂಡ್ರಾಯ್ಡ್ 2.2 ಫ್ರೊಯೋ OS ಮೂಲಕ ಕಾರ್ಯ ನಿರ್ವಹಿಸುತ್ತದೆ. 32 GB ಹೊರ ಮೆಮೊರಿ, Wi-Fi, ಜಾವಾ, ಗೇಮ್ಸ್ ಲಭ್ಯವಿದೆ.

ದರವು ಕೂಡ ಆಪ್ಟಿಮಸ್ ಬ್ಲಾಕ್ ಆವೃತ್ತಿಯಷ್ಟೇ ಆಗಿದ್ದು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಈ ಫೋನ್ ಕ್ಲಿಕ್ ಆಗೋದು ಗ್ಯಾರಂಟಿ!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot