ಮೊಬೈಲ್ ಜಗತ್ತಿಗೆ ಬೀಟೆಲ್ ಪಾದಾರ್ಪಣೆ

By Super
|
ಮೊಬೈಲ್ ಜಗತ್ತಿಗೆ ಬೀಟೆಲ್ ಪಾದಾರ್ಪಣೆ
ಬೆಂಗಳೂರು, ಜು. 22: ಬೀಟೆಲ್ ಕಂಪೆನಿ ಲ್ಯಾಂಡ್ ಲೈನ್ ಹಾಗೂ ನೆಟ್ ವರ್ಕ್ ಸೇವೆಯಲ್ಲಿ ಅತ್ಯಂತ ಜನಪ್ರಿಯ ಹೆಸರು. ಭಾರತದಲ್ಲಿ ಏಕಮೇವ ಲೀಡರ್ ಆಗಿರುವ ಇದು ಏಷ್ಯಾದಲ್ಲೇ ಅತ್ಯಂತ ದೊಡ್ಡ ಹಾಗೂ ಅದ್ವತೀಯ ಕಂಪೆನಿ. ಏರ್ ಟೆಲ್ ಜನಕ ಆಗಿರುವ ಭಾರತಿ ಎಂಟರ್ ಪ್ರೈಸಸ್ ನೊಂದಿಗೆ ಸಹಯೋಗ ಹೊಂದಿರುವ ಇದು ಈಗ ತನ್ನ ಚಿತ್ತವನ್ನು ಮೊಬೈಲ್ ತಯಾರಿಕೆಯತ್ತ ಹೊರಳಿಸಿದೆ.

ಬೇರೆ ಕಂಪೆನಿಗಳಿಗೆ ಹೋಲಿಸಿದಾಗ ಬಹಳ ಲೇಟಾಗಿ ಎಂಟ್ರಿ ಕೊಡುತ್ತಿರುವ ಬೀಟೆಲ್, ಈ ಉದ್ಯಮದಲ್ಲಿ ಪ್ರತಿಶತ 100% ಯಶಸ್ಸು ಪಡೆಯಬಹುದು ಎಂಬ ಆಶಯದೊಂದಿಗೆ ಕಾಲಿಟ್ಟಿದೆ. ಹಾಗಾಗಿ ಇತ್ತೀಚಿಗೆ ಅದು 2 ಹೊಸ ಮೊಬೈಲ್ ಗಳನ್ನು ಬಿಡುಗಡೆ ಮಾಡಿದೆ. ಅವು- ಬೀಟೆಲ್ GD 310 ಮತ್ತು GD 218. ಇವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕೈಗಟಕುವ ಬೆಲೆ ಹೊಂದಿವೆ. ಇವೆಲ್ಲ ವಿಷಯಗಳನ್ನು ಕಂಪೆನಿಯ CEO ಶ್ರೀ ವಿನೋದ್ ಸಾವನಿ ದೃಢಪಡಿಸಿದ್ದಾರೆ.

ಅವರ ಮಾತಿನಂತೆ ಇದು ಕೇವಲ ಪ್ರಾರಂಬಿಕ ಹಂತವಾಗಿದ್ದು ಮುಂದೆ ಕಂಪೆನಿ ಇನ್ನೂ ಉನ್ನತ ತಣತ್ರಜ್ಞಾನದ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡಲಿದೆ. ಈಗ ಬಿಡುಗಡೆ ಮಾಡಿರುವ ಬೀಟೆಲ್ GD 310 ಮತ್ತು GD 218 ಮೊಬೈಲ್ ಗಳೆಡರೂ ಡ್ಯುಯಲ್ ಸಿಮ್ ಸ್ಟ್ಯಾಂಡ್ ಬೈ ಹಾಗೂ ಬೇಸಿಕ್ VGA ಗುಣಮಟ್ಟದ ವಿಡಿಯೋ ರೆಕಾರ್ಡೆಬಲ್ ಕ್ಯಾಮೆರಾ ಹೊಂದಿವೆ.

ಬೀಟೆಲ್ GD 310 ಇದು ಒನ್ ಟಚ್ ಟಾರ್ಚ್ ಲೈಟ್, 1200 mAh ಬ್ಯಾಟರಿ, ಎಫ್ ಎಂ ರೇಡಿಯೋ, ಲೌಡ್ ಸ್ಪೀಕರ್ ಹೊಂದಿದೆ. ಇದರ ದರ ರು. 1,799.

ಬೀಟೆಲ್ GD 218, ದರ ರು. 1,499 ಆಗಿದ್ದು 1800 mAh ಬ್ಯಾಟರಿ, 15 ತಾಸುಗಳ ಟಾಕ್ ಟೈಮ್, 25 ದಿನಗಳ ಸ್ಟ್ಯಾಂಡ್ ಬೈ ಹೊಂದಿದೆ. ವಿಸ್ತರಿಸಬಹುದಾದ 8 GB ಮೆಮೊರಿ ಹೊಂದಿರುವ ಇದು ಮನರಂಜನೆಗೆ ಕೂಡ ಮಹತ್ವ ನೀಡಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X