ಎಲ್ ಜಿ ಬ್ರೈಸ್: ಏನ್ ಸ್ಪೆಷಲ್? ಯಾವಾಗ ಬರುತ್ತೆ?

Posted By: Staff

ಎಲ್ ಜಿ ಬ್ರೈಸ್: ಏನ್ ಸ್ಪೆಷಲ್? ಯಾವಾಗ ಬರುತ್ತೆ?
ಎಲ್ ಜಿ ಮೊಬೈಲ್ ಪ್ರಿಯರಿಗಿದು ಸಿಹಿ ಸುದ್ದಿ. ಕಂಪನಿಯು ಈ ವರ್ಷದ ಅಂತ್ಯಕ್ಕೆ LG Bryce ಎಂಬ ಸ್ಮಾರ್ಟ್ ಫೋನ್ ಹೊರತರಲಿದೆ. ಎಲ್ ಜಿ ಕಂಪನಿಯ ಫೋನ್ ಗಳಲ್ಲಿ ಹೆಚ್ಚಿನ ಗ್ರಾಹಕರು ಬಯಸುವುದು ವಿಶಾಲ ಪರದೆ. ನೂತನ ಬ್ರೈಸ್ 4.3 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿರಲಿದೆ.

ನೂತನ Bryce ನಲ್ಲಿ ಮ್ಯೂಸಿಕ್ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡುವ ಮತ್ತು ಪ್ಲೇ ಬ್ಯಾಕ್ ಫೀಚರ್ ಗಳಿವೆ. ಇದು ಕೂಡ ವಿವಿಧ ಮಲ್ಟಿಮೀಡಿಯಾ ಫಾರ್ಮೆಟ್ ಗಳಲ್ಲಿದ್ದು ಹೈ ಡೆಫಿನೆಷನ್ ವಿಡಿಯೋ ಫಾರ್ಮೆಟ್ ಹೊಂದಿದೆ.

ಇಷ್ಟೇ ಅಲ್ಲದೇ ಬ್ರೈಸ್ ನಲ್ಲಿ ಆರ್ ಡಿ ಸಪೋರ್ಟ್ ನೊಂದಿಗೆ ಎಫ್ ರೇಡಿಯೋ, 3.5 mm ಅಡಿಯೋ ಜಾಕ್ ಇರಲಿದೆ. ಬೇಕಿದ್ದರೆ ವಿಡಿಯೋಗಳನ್ನು ದೊಡ್ಡ ಪರದೆಯಲ್ಲಿ ಸ್ಪಷ್ಟವಾಗಿ ನೋಡಲು ಸಹಕಾರಿಯಾಗುವಂತೆ HDMI ವಿಡಿಯೋ ಸೌಲಭ್ಯವಿದೆ.

ಈ ಮೊಬೈಲಿನ ಹಿಂಭಾಗದಲ್ಲಿರುವ ಕ್ಯಾಮರಾ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ನೆರವಾಗಲಿದೆ. ಜೊತೆಗೆ ಹೈ ಡೆಫಿನೇಷನ್(720p video) ವಿಡಿಯೋ ರೆಕಾರ್ಡಿಂಗ್ ಸೌಲಭ್ಯವೂ ಇದೆ. ಮತ್ತೊಂದು ಖುಷಿಪಡಬೇಕಾದ ವಿಷಯವೆಂದರೆ ಇದು 34 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಸ್ಮಾರ್ಟ್ ಫೋನ್ 5 ಗಂಟೆಯ ಟಾಕ್ ಟೈಂ ಬ್ಯಾಟರಿ ಬ್ಯಾಕ್ ಅಪ್ ಹೊಂದಿದೆಯಂತೆ!

ಎಲ್ ಜಿ ಬ್ರೈಸ್ ವಿಶೇಷತೆಗಳು

* ಬ್ಲೂಟೂಥ್, ವೈಫೈ, ಜಿಪಿಆರ್ಎಸ್, ಇಡಿಜಿಇ, ಯುಎಸ್ಬಿ ಪಿಸಿ sync
* ಅತ್ಯಧಿಕ ಸ್ಪೀಡ್ ಹೊಂದಿರುವ 3ಜಿ ಮತ್ತು 4ಜಿ ಕನೆಕ್ಟಿವಿಟಿ
* ಆಂಡ್ರಾಯ್ಡ್ ಒಎಸ್
* 5 ಮೆಗಾ ಫಿಕ್ಸೆಲ್ ಕ್ಯಾಮರಾ
* 720ಪಿ ವಿಡಿಯೋ ಕ್ಯಾಮರಾ(ಹೈ ಡೆಫಿನೇಷನ್)
* ಎಚ್ ಡಿಎಂಐ ಔಟ್ ಫೀಚರ್
* ಜಾವಾ ಸಪೋರ್ಟ್

ಈ ಸ್ಮಾರ್ಟ್ ಫೋನ್ 2011ರ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆಯಂತೆ. ಭಾರತದಲ್ಲಿ ಇದರ ದರ ಎಷ್ಟಿರಲಿದೆ ಎಂದು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot