ಮಾತಿನ ಜೊತೆ ಸಿನಿಮಾ ನೋಡಿ, ಆಟ ಆಡಿ: ಜೀ ಫೈವ್

By Super
|
ಮಾತಿನ ಜೊತೆ ಸಿನಿಮಾ ನೋಡಿ, ಆಟ ಆಡಿ: ಜೀ ಫೈವ್
ಬೆಂಗಳೂರು, ಜು. 28: ಮೊಬೈಲ್ ಇರುವುದೇ ಮಾತನಾಡಲಿಕ್ಕೆ ಎನ್ನುವ ಕಾಲ ಹೋಗಿ ಈಗ ಮೊಬೈಲ್ ಎಲ್ಲದಕ್ಕೂ ಬರುವ "ಆಲ್-ಇನ್-ಒನ್ " ಎಂಬಂತಾಗಿದೆ. ಜಿ'ಫೈವ್ ಮೊಬೈಲ್ ಕಂಪೆನಿ ಇದೀಗ ಜಿ'ಫೈವ್ ಸಿರೀಸ್ ನಲ್ಲಿ 3- E620, E650 and E680 ಎಂಬ ಮೂವೀ ಸ್ಪೆಷಲ್ ಹಾಗೂ ಜಿ'ಫೈವ್ G20 ಎಂಬ ಹೆಸರಿನ 1 ಗೇಮಿಂಗ್ ಫೋನ್, ಹೀಗೆ ಒಟ್ಟೂ ನಾಲ್ಕು ಮೊಬೈಲ್ ಮಾರುಕಟ್ಟೆಗೆ ತಂದಿದೆ.

E ಸಿರೀಸ್ ಮೊಬೈಲ್ ಗಳಾದ E680, E650 and E620 ಇವು ಒಂದೇ ತರಹದ ಆಕರ್ಷಕ ಫೀಚರ್ಸ್ ಒಳಗೊಂಡಿದೆ. 4 GB ಮೈಕ್ರೋ SD ಕಾರ್ಡ್, 20 ಸ್ಮಾಶ್ ಹಿಟ್ ಮೂವೀಸ್, ಭಾರತದ ಹಾಗೂ ಹಾಲಿವುಡ್ ಸಿನಿಮಾ ಫುಲ್ ಲೆಂಗ್ತ್ ಇದೆ. 20 ರಂಗ್ ಟೋನ್ಸ್, 5 FTV ವಿಡಿಯೋಸ್ ಪ್ರೀ ಲೋಡೆಡ್ ಇರುವುದು ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ.

'ಮೂವಿ ಕಿಂಗ್' ಸ್ಪೆಷಲ್ E 680 ಇದು, ಡ್ಯುಯಲ್ ಸಿಮ್ ಸ್ಟ್ಯಾಂಡ್ ಬೈ ಹೊಂದಿದೆ. ಅದರೆ 2.2 ಇಂಚ್ ಡಿಸ್ ಪ್ಲೇ ಹೊಂದಿರುವುದು ಅತಿ ಕಡಿಮೆ ಎನಿಸುತ್ತದೆ. FM ರೇಡಿಯೋ, ಯುನಿವರ್ಸೆಲ್ ಆಡಿಯೋ ಜಾಕ್, ಶಾರ್ಟ್ ರೇಂಜ್ ಕನೆಕ್ಟಿವಿಟಿ ಎಲ್ಲಾ ಇದೆ. E 650 2.4 ಡಿಸ್ ಪ್ಲೇ ಹೊಂದಿದೆ.

ಇನ್ನು ಜಿ'ಫೈವ್ G20 ಇದು ಸಂಪೂರ್ಣ ಗೇಮಿಂಗ್ ಆಧಾರಿತ ಮೊಬೈಲ್ ಫೋನ್ ಆಗಿದ್ದು ಸುಮಾರು 1000 ದಷ್ಟು ಪ್ರೀ ಲೋಡೆಡ್ ಗೇಮ್ ಗಳು ಲೌಡ್ ಔಟ್ ಪುಟ್ ಸ್ಪೀಕರ್ ಹಾಗೂ ಮಲ್ಟಿಮೀಡಿಯಾ & ಕ್ಯಾಮೆರಾ ಕಾರ್ಯಕ್ಷಮತೆಯ ಮೂಲಕ ಗ್ರಾಹಕರಿಗೆ ಸೇವೆ ನೀಡಲು ಸಜ್ಜಾಗಿವೆ. ಈ ಗೇಮಿಂಗ್ ಫೋನ್ ಮಿಕ್ಕ ಎಲ್ಲಾ ಮೊಬೈಲ್ ಗಳಿಗೆ ಸಖತ್ ಸ್ಪರ್ಧೆ ಕೊಡುವುದಂತೂ ಗ್ಯಾರಂಟಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X