ವೊಡಾಫೊನಿನ ಮೊಬೈಲ್ ಫೇಸ್ ಬುಕ್ ಗಾನಾ ಬಜಾನಾ

Posted By: Staff

ವೊಡಾಫೊನಿನ ಮೊಬೈಲ್ ಫೇಸ್ ಬುಕ್ ಗಾನಾ ಬಜಾನಾ
ಬೆಂಗಳೂರು, ಜು. 29: ಈಗ ಎಲ್ಲೆಲ್ಲೂ ಮೊಬೈಲ್ ನದೇ ಕಾರುಬಾರು. ಇಂಟರ್ ನೆಟ್ ಸಾಮಾಜಿಕ ತಾಣಗಳಲ್ಲಿ ಫೇಸ್ ಬುಕ್ ನದೇ ದರ್ಬಾರು. ಮನುಷ್ಯ-ಮನುಷ್ಯರ ನಡುವೆ ಅಡ್ಡಗೋಡೆ ನಿರ್ಮಿಸುತ್ತಿದೆ ಎಂಬ ಆಪಾದನೆಯ ನಡುವೆಯೂ ಈ ಎರಡರ ಜೊತೆ ಎಲ್ಲರ ನಡೆ ಎಗ್ಗಿಲ್ಲದೇ ಸಾಗಿದೆ. ಈ ಅಂಶವನ್ನು ಎನ್ ಕ್ಯಾಷ್ ಮಾಡಿಕೊಳ್ಳಲು ಹೊರಟಿದೆ ವೊಡಾಫೋನ್ ಕಂಪೆನಿ. ಏಕೆಂದರೆ ಅದೀಗ ತರುತ್ತಿದೆ ಫೇಸ್ ಬುಕ್ ಬಟನ್ ಆಧಾರಿತ ಹೊಸ ಮೊಬೈಲ್ " ವೊಡಾಫೋನ್ 555 ಬ್ಲೂ "

ಲೇಟೆಸ್ಟ್ ವರದಿಯ ಪ್ರಕಾರ ವಿಶ್ವದಲ್ಲಿ ಸುಮಾರು 125 ದೇಶಗಳ 700 ಮಿಲಿಯನ್ ಜನರು ಸಾಮಾಜಿಕ ತಾಣಗಳನ್ನು ಬಳಸುತ್ತಾರೆ. ಅವುಗಳಲ್ಲಿ ಫೇಸ್ ಬುಕ್ ಅಗ್ರಗಣ್ಯ. ಇದನ್ನು ತನ್ನ ಮೊಬೈಲ್ ಮೂಲಕ ಜನರ ಕೈಗೇ ತರುತ್ತಿರುವ ವೊಡಾಫೋನ್ ಮಾರಾಟದ ಹೊಸ ದಾಖಲೆಯನ್ನು ಬರೆಯುವುದು ಗ್ಯಾರಂಟಿ ಬಿಡಿ!

ಮೈಕ್ರೋ & ಫುಲ್ ಆವೃತ್ತಿಗಳಲ್ಲಿ ಮೊಬೈಲ್ ಗಳಲ್ಲಿ ಲಭ್ಯವಿರುವ ಈ ಫೇಸ್ ಬುಕ್ ಜಗತ್ತಿನಾದ್ಯಂತ ದಿನಂಪ್ರತಿ ಬಳಕೆಯಾಗುತ್ತಿದೆ. ಒಂದೇ ಒಂದು ಬಟನ್ ಮೂಲಕ ಮೊಬೈಲ್ ನಲ್ಲಿ ಫೇಸ್ ಬುಕ್ ಅಕೌಂಟ್ ಎಕ್ಸೆಸ್ ಆಗುವ ಈ ವೊಡಾಫೋನ್ ಚಮತ್ಕಾರ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ!

ವೊಡಾಫೋನ್ ತನ್ನ ಸ್ವಯಂಶೋಧನೆಯ ಜಾವಾ OS ಬಳಕೆಯನ್ನೇ ಈ ಹೊಸ ಫೊನಿಗೂ ಅಳವಡಿಸಿದ್ದು ಇದನ್ನು ಟಿಸಿಎಲ್ ನ ತಯಾರಿಕೆಗೆ ಒಪ್ಪಿಸಿದೆ. ಟಿಸಿಎಲ್ ಇದನ್ನು EDGE ಮೂಲಕ ಮ್ಯಾನ್ಯುಪಾಕ್ಚರಿಂಗ್ ಮಾಡುತ್ತಿದ್ದು ಇದರಲ್ಲಿ Wi-Fi, 2 ಮೆಗಾ ಪಿಕ್ಸೆಲ್ ಕ್ಯಾಮೆರಾ, QWERTY ಕೀ ಪ್ಯಾಡ್, 2.8 ಇಂಚ್ ಸ್ಕ್ರೀನ್ ಹಾಗೂ ಅತ್ಯಾಧುನಿಕ ಮಲ್ಟಿಮೀಡಿಯಾ ಬಳಸಲಿದೆ.

ಇದು ಶೀಘ್ರದಲ್ಲಿಯೇ ಏಷ್ಯಾ ಮಾರುಕಟ್ಟೆಗೆ, ಆ ಮೂಲಕ ಭಾರತಕ್ಕೆ ಬರಲಿದೆ. ಸದ್ಯಕ್ಕೆ ಇದರ ಬೆಲೆ ಸುಮಾರು $100 ಎಂದು ಹೇಳಲಾಗಿದೆ. ಈ ವಿಷಯ ತಿಳಿದ ಮೇಲೆ ನಿಮ್ಮ ಫೇಸ್ ನಲ್ಲಿ ನಗು ಖಂಡಿತ ಉಕ್ಕವುದನ್ನು ಕನ್ನಡಿಯಲ್ಲಿ ನೋಡಿ. ಕನ್ನಡಿ ಸುಳ್ಳು ಹೇಳುವುದಿಲ್ಲ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot