XAGE ಮೊದಲ ಫುಲ್ ಟಚ್ ಸ್ಕ್ರೀನ್ ಮೊಬೈಲ್

Posted By: Staff

XAGE ಮೊದಲ ಫುಲ್ ಟಚ್ ಸ್ಕ್ರೀನ್ ಮೊಬೈಲ್
ಹೆಚ್ಚಿನವರಿಗೆ ಹೀಗೊಂದು ಮೊಬೈಲ್ ಕಂಪನಿ ಇದೆಯೆಂದು ತಿಳಿದಿರಲಿಕ್ಕಿಲ್ಲ. ಆದರೆ ಮುಂಬೈ ಮೂಲದ ಈ ಕಂಪನಿ ಸ್ಥಳೀಯವಾಗಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಕಂಪನಿಯು ದೇಶಾದ್ಯಂತ ವಿಸ್ತರಣಾ ಯೋಜನೆಯನ್ನೂ ಹೊಂದಿದೆ. ಪೂರ್ತಿ ಟಚ್ ಸ್ಕ್ರೀನ್ ಪರದೆಯ ಮೊದಲ ಡ್ಯೂಯಲ್ ಸಿಮ್ ಫೋನ್ ಹೊರತರುವುದಾಗಿ ಕ್ಸೆಜ್ ಪ್ರಕಟಿಸಿದೆ.

ನೂತನ ಡ್ಯೂಯಲ್ ಸಿಮ್ ಫುಲ್ ಟಚ್ ಸ್ಕ್ರೀನ್ ಮೊಬೈಲ್ ಹೆಸರು ಕ್ಷೇಜ್ ಎಂಟಿ 711. ಭಾರತಕ್ಕೆ ಬಂದ ಮೊದಲ ಡ್ಯೂಯಲ್ ಸಿಮ್ ಫುಲ್ ಟಚ್ ಸ್ಕ್ರೀನ್ ಫೋನಾಗಿದೆ. ಇದು ದೊಡ್ಡದಾದ 3.2 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ ಹೊಂದಿದೆ. ನೋಡಲು ಇದು ನೋಕಿಯಾ 5800 ಎಕ್ಸ್ ಪ್ರೆಸ್ ಮ್ಯೂಸಿಕ್ ನಂತೆ ಭಾಸವಾಗುತ್ತದೆ.

ಇದರಲ್ಲಿ ಕೆಲವು ಆಕರ್ಷಕ ಫೀಚರ್ ಗಳೂ ಇವೆ. ಇದು 3.2 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದ್ದು ಅತ್ಯಧಿಕ ಗುಣಮಟ್ಟದ ಛಾಯಾ ಚಿತ್ರಗಳನ್ನು ಕ್ಲಿಕ್ಕಿಸಬಹುದಾಗಿದೆ. ಈ ಹ್ಯಾಂಡ್ ಸೆಟಿನಲ್ಲಿ ವಿಡಿಯೋ ರೆಕಾರ್ಡಿಂಗ್ ಕೂಡ ಇದೆ. ಇದು ಆಂಡ್ರಾಯ್ಡ್ ಪವರ್ ಹೊಂದಿಲ್ಲ. ಎಫ್ ಎಂ ರೆಡಿಯೋ ಕೂಡ ಇದೆ. ಇದು 5 ಗಂಟೆಗಳ ಟಾಕ್ ಟೈಂ ಬ್ಯಾಟರಿ ಬಾಳಿಕೆ ಹೊಂದಿದೆ. ದರ: 5,799 ರುಪಾಯಿ.

ಫೀಚರ್ಸ್
* ಫುಲ್ ಟಚ್ ಸ್ಕ್ರೀನ್
* ಡ್ಯುಯಲ್ ಸಿಮ್ ಸ್ಟಾಂಡ್ ಬೈ
* 3.2 ಮೆಗಾ ಪಿಕ್ಸೆಲ್ ಕ್ಯಾಮರಾ
* ಜಾವಾ
* ಗೇಮ್ಸ್
* ಬ್ಲೂಟೂಥ್
* 8 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ
* ಸ್ವಯಂಚಾಲಿತ ಕರೆ ಸ್ವೀಕಾರ ಸೌಲಭ್ಯ ಮತ್ತು ಕರೆ ಧ್ವನಿಮುದ್ರಣ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot