Subscribe to Gizbot

ಸ್ಪೈಸ್ ಹೊಸ ಮೊಬೈಲ್ ಶೀಘ್ರದಲ್ಲಿ ಮಾರುಕಟ್ಟೆಗೆ

Posted By: Super

ಸ್ಪೈಸ್ ಹೊಸ ಮೊಬೈಲ್ ಶೀಘ್ರದಲ್ಲಿ ಮಾರುಕಟ್ಟೆಗೆ
ಸ್ವದೇಶಿ ಮೊಬೈಲ್ ಕಂಪೆನಿ ಸ್ಪೈಸ್ ಭಾರತದಲ್ಲಿ ಸಾಕಷ್ಟು ಪ್ರಸಿದ್ಧವಾಗಿದೆ. ಇದರ ಉತ್ಪನ್ನಗಳು ವಿದೇಶಗಳಲ್ಲಿ ಕೂಡ ಬಳಕೆಯಾಗುತ್ತಿದ್ದು ಜನಪ್ರಿಯತೆ ಪಡೆದಿದೆ.

ಈಗಾಗಲೇ ಸಾಕಷ್ಟು ಮಾದರಿಯ ಮೊಬೈಲುಗಳು ಮಾರುಕಟ್ಟೆಯಲ್ಲಿದ್ದರೂ ಸ್ಪೈಸ್ ಇನ್ನೊಂದನ್ನು ಹೊಸದಾಗಿ ಬಿಡುಗಡೆ ಮಾಡಿದೆ. ಹೆಸರು ಸ್ಪೈಸ್ QT 53.

ಮೊದಲಿನ ತನ್ನ ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು ಬೇರೆ ಮೊಬೈಲ್ ಗಳನ್ನು ಅವಲೋಕಿಸಿ ಸಾಕಷ್ಟು ಬದಲಾವಣೆಯೊಂದಿಗೆ ಈ ಹೊಸ ಮೊಬೈಲ್ ಸೃಷ್ಠಿಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇದರಲ್ಲಿರುವ ವಿಶೇಷತೆಗಳ ಪಟ್ಟಿ ಹೀಗಿದೆ:
* ಡ್ಯುಯಲ್ ಸಿಮ್(GSM+GSM), QWERTY ಕೀ ಪ್ಯಾಡ್
* ಡ್ಯುಯಲ್ ಬ್ಯಾಂಡ್ GSM 900/ 1800 MHz/ GPRS & WAP
* 2.0 ಇಂಚ್ TFT 176 X 220 ಡಿಸ್ ಪ್ಲೇ, 0.3 ಮೆಗಾ ಪಿಕ್ಸೆಲ್,
* 0.3 ಮೆಗಾ ಪಿಕ್ಸೆಲ್ VGA ಕ್ಯಾಮೆರಾ, FM ರೇಡಿಯೋ
* 8 GB ಮೆಮೊರಿ
* WMA.An MP4 ಮ್ಯೂಸಿಕ್ ಫಾರ್ಮೆಟ್ಸ್
* MP3 ರಿಂಗ ಟೋನ್ಸ್
* ಬ್ಲೂ ಟೂಥ್, USB
* 800 mAH Li-ion, 7.5 ತಾಸುಗಳು & 360 ತಾಸುಗಳ ಸ್ಟ್ಯಾಂಡ್ ಬೈ ಬ್ಯಾಟರಿ
* 112.6 X 62.5 X 12.6 mm ಅಳತೆಯ ಸುಂದರ ಆಕಾರ, 94 ಗ್ರಾಮ್ ತೂಕ

ಹೀಗೆ ಸಾಕಷ್ಟು ಫೀಚರ್ಸ್ ಇರುವ ಈ ಫೋನ್ ಇನ್ನೂ ಸ್ಟೋರ್ ಗಳಲ್ಲಿ ಲಭ್ಯವಿಲ್ಲ. ಇದು ಗ್ರಾಹಕರ ಕೈಸೇರಲು ಸ್ವಲ್ಪ ಕಾಲ ಬಾಕಿ. ನಂತರ ಬಹಶಃ ಬಿಸಿ ಬಿಸಿ ಕೇಕ್ ನಂತೆ ಮಾರಾಟವಾಗಬಹುದು. ಸದ್ಯಕ್ಕೆ ಬೆಲೆ ನಿಗದಿಯಾಗಿಲ್ಲ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot