2018 ರಲ್ಲಿ ಬಿಡುಗಡೆಗೊಂಡಿರುವ 10 ಆಲ್ಟ್ರಾ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು

|

2018 ಕೆಲವು ಪ್ರೀಮಿಯಂ ಫೋನ್ ಗಳಿಗೆ ಖಂಡಿತ ಬೆಸ್ಟ್ ವರ್ಷವಾಗಿತ್ತು. ಈ ವರ್ಷ ಹಲವು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂಡಿದ್ದವು. ಅಲ್ಟ್ರಾ ಪ್ರೀಮಿಯಂ ಫೋನ್ ಗಳು ಅಪ್ ಗ್ರೇಡ್ ಆಗಿದ್ದು ಕೆಲವು ಅಧ್ಬುತ ಫೀಚರ್ ಗಳು ಇವುಗಳಲ್ಲಿ ಸೇರಿಕೊಂಡಿದ್ದವು. ಈ ಹಿಂದಿನ ಫೋನ್ ಗಳಿಗಿಂತ ಇನ್ನಷ್ಟು ಉತ್ತಮ ಫೋನ್ ಗಳನ್ನಾಗಿಸುವಲ್ಲಿ ಈ ಫೀಚರ್ ಗಳು ಸಹಾಯಕವಾಗಿತ್ತು.

2018 ರಲ್ಲಿ ಬಿಡುಗಡೆಗೊಂಡಿರುವ 10 ಆಲ್ಟ್ರಾ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು

2018 ರಲ್ಲಿ ಬಿಡುಗಡೆಗೊಂಡಿರುವ ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು ಆಕರ್ಷಕ ಡಿಸೈನ್ ನ್ನು ಹೊಂದಿದ್ದವು ಮತ್ತು ಬೆಸ್ಟ್ ಕಟ್ಟಿಂಗ್ ಎಡ್ಜ್ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದ್ದವು. 2018 ರಲ್ಲಿ ಅಳವಡಿಸಿಕೊಂಡಿರುವ ಬೆಸ್ಟ್ ಪ್ರೀಮಿಯಂ ಎಡ್ಜ್ ಫೋನ್ ಗಳ ಪಟ್ಟಿ ಇಲ್ಲಿದೆ.

ಆಪಲ್ ಐಫೋನ್ XS/XS ಮ್ಯಾಕ್ಸ್

ಆಪಲ್ ಐಫೋನ್ XS/XS ಮ್ಯಾಕ್ಸ್

ಈ ವರ್ಷದ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಂಡಿರುವ ಫೋನ್ ಇದು. ಪವರ್ ಫುಲ್ ಆಗಿರುವ ಕ್ಯಾಮರಾ ಸೆಟ್ ಅಪ್ ನ್ನು ಇದು ಹೊಂದಿದ್ದು ಫೋಟೋ ಮತ್ತು ವೀಡಿಯೋ ರೆಕಾರ್ಜಿಂಗ್ ಗೆ ಅಧ್ಬುತವಾಗಿದೆ. ಕಂಪೆನಿಯ ಸ್ವಂತ ಐಕಾನಿಕ್ ಎ12 ಬಯೋನಿಕ್ ಚಿಪ್ ಸೆಟ್ ನ್ನು ಹೊಂದಿದೆ. ಐಫೋನ್ ಎಕ್ಸ್ಎಸ್ 5.8 ಇಂಚಿನ ಡಿಸ್ಪ್ಲೇ ಪೆನಲ್ ಹೊಂದಿದೆ. ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ 6.5 ಇಂಚಿನ ಡಿಸ್ಪ್ಲೇ ಪೆನಲ್ ಹೊಂದಿದೆ. ಸೂಪರ್ ರೆಟಿನಾ HD ಡಿಸ್ಪ್ಲೇಯನ್ನು ಎರಡೂ ಫೋನ್ ಗಳು ಹೊಂದಿದೆ. ಐಫೋನ್ ಎಕ್ಸ್ಎಸ್ ನ ಬೆಲೆ 99,990 ಮತ್ತು ಬೂದು, ಬೆಳ್ಳಿ, ಚಿನ್ನದ ಬಣ್ಣಗಳ ಆವೃತ್ತಿಯಲ್ಲಿ ಲಭ್ಯವಾಗುತ್ತದೆ. ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ ನ ಬೆಲೆ 1,04,990 ರುಪಾಯಿಗಳಾಗಿದ್ದು ಬೂದು, ಸಿಲ್ವರ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ.

ಗೂಗಲ್ ಪಿಕ್ಸಲ್ 3/ ಪಿಕ್ಸಲ್ 3 XL

ಗೂಗಲ್ ಪಿಕ್ಸಲ್ 3/ ಪಿಕ್ಸಲ್ 3 XL

ಹೈ ಎಂಡ್ ಪೀಚರ್ ಗಳನ್ನು ಒಳಗೊಂಡಿರುವ ಇದು ಸ್ಟಾಕ್ ಆಂಡ್ರಾಯ್ಡ್ UI ನ್ನು ಹೊಂದಿದ್ದು ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತದೆ. ಸಿಂಗಲ್ ಲೆನ್ಸ್ ಹಿಂಭಾಗದ ಕ್ಯಾಮರಾವಿದೆ. ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಮೇಡ್ ಬೈ ಗೂಗಲ್ ಇವೆಂಟ್ ನಲ್ಲಿ ಈ ಫೋನ್ ನ್ನು ಬಿಡುಗಡೆಗೊಳಿಸಲಾಯಿತು. ಗೂಗಲ್ ಪಿಕ್ಸಲ್ 3 5.5-ಇಂಚಿನ P-OLED ಡಿಸ್ಪ್ಲೇ ಪೆನಲ್ ನ್ನು ಹೊಂದಿದ್ದು ಇದರ ಬಲೆ Rs 66,500 ಗಳಾಗಿದೆ.ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ-ಬಿಳಿ,ಕಪ್ಪು. ಪಿಕ್ಸಲ್ 3ಎಕ್ಸ್ಎಲ್ 6.3-ಇಂಚಿನ P-OLED ಡಿಸ್ಪ್ಲೇ ಪೆನಲ್ ನ್ನು ಹೊಂದಿದೆ ಮತ್ತು ಇದರ ಬೆಲೆ Rs 78,500ಗಳ. ಪಿಕ್ಸಲ್ 3ಎಕ್ಸ್ಎಲ್ ಕೂಡ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ - ಬಿಳಿ ಮತ್ತು ಕಪ್ಪು

ಹುವಾಯಿ ಮೇಟ್ 20 ಪ್ರೋ

ಹುವಾಯಿ ಮೇಟ್ 20 ಪ್ರೋ

ಅಕ್ಟೋಬರ್ 2018 ರಲ್ಲಿ ಬಿಡುಗಡೆಗೊಂಡಿರುವ ಈ ಫೋನ್ ನವೆಂಬರ್ ನಲ್ಲಿ ಭಾರತಾದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗತೊಡಗಿತು. Kirin 980 ಚಿಪ್ ಸೆಟ್ ನ್ನು ಹೊಂದಿದೆ. ಒಟ್ಟು ಮೂರು ಕ್ಯಾಮರಾ ಸೆನ್ಸರ್ ನ್ನು ಹಿಂಭಾಗದ ಪೆನಲ್ ನಲ್ಲಿ ಹೊಂದಿದೆ. ಹಿಂಭಾಗದ ಕ್ಯಾಮರಾದಲ್ಲಿ 40-ಮೆಗಾಪಿಕ್ಸಲ್ ನ ಪ್ರೈಮರಿ ಲೆನ್ಸ್ f/1.8 ಅಪರ್ಚರ್ , 20-ಮೆಗಾಪಿಕ್ಸಲ್ ನ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಜೊತೆಗೆ f/2.2 ಅಪರ್ಚರ್, ಮತ್ತು ಮೂರನೆಯದ್ದು 8-ಮೆಗಾಪಿಕ್ಸಲ್ 3X ಟೆಲಿಫೋಟೋ ಲೆನ್ಸ್ ಜೊತೆಗೆ f/2.4 ಅಪರ್ಚರ್ ನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕಪ್ಪು, ಟ್ವಿಲೈಟ್, ಮಿಡ್ ನೈಟ್ ಬ್ಲೂ, ಮತ್ತು ಹಸಿರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುವ ಈ ಫೋನಿನ ಬೆಲೆ Rs 69,990.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಈ ಪಟ್ಟಿಯ ನಾಲ್ಕನೇ ಸ್ಥಾನದಲ್ಲಿದೆ.ಅಗಸ್ಟ್ ನಲ್ಲಿ ಈ ಫೋನ್ ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಯಿತು. ಎಸ್-ಪೆನ್ ಗೆ ಇದು ಬೆಂಬಲ ನೀಡುವುದರಿಂದಾಗಿ ಹಲವಾರು ಟಾಸ್ಕ್ ಗಳನ್ನು ಬಹಳ ವೇಗವಾಗಿ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇದರಲ್ಲಿ ಸ್ನ್ಯಾಪ್ ಡ್ರ್ಯಾಗನ್ 845/Exynos 9810 ಆಕ್ಟಾ- ಚಿಪ್ ಸೆಟ್ ನ್ನು ಅಳವಡಿಸಲಾಗಿದ್ದು 6GB RAM ವ್ಯವಸ್ಥೆ ಇದೆ. ಇದರ ಬೆಲೆ Rs 67,900 ಆಗಿದ್ದು ಮಿಡ್ ನೈಟ್ ಬ್ಲಾಕ್, ಮೆಟಾಲಿಕ್ ಕಾಪಲ್ ಮತ್ತು ಓಷಿಯನ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9/ಎಸ್9 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9/ಎಸ್9 ಪ್ಲಸ್

ಈ ಪಟ್ಟಿಯ ಐದನೇ ಸ್ಥಾನವು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9/ಎಸ್9 ಪ್ಲಸ್ ಗೆ ಸೇರುತ್ತದೆ.ಕುತೂಹಲಕಾರಿಯಾಗಿರುವ ಮತ್ತು ಆಕರ್ಷಕವಾಗಿರುವ ಡಿಸೈನ್ ನ್ನು ಎರಡೂ ಫೋನ್ ಗಳು ಹೊಂದಿದೆ. ಕೀ ಹೈಲೆಟ್ ಎಂದರೆ ಈ ಎರಡೂ ಫೋನ್ ಗಳ ಡಿಸ್ಪ್ಲೇ ಆಗಿದೆ. 5.8-ಇಂಚಿನ ಡಿಸ್ಪ್ಲೆ ಪೆನಲ್ ನ್ನು ಗ್ಯಾಲಕ್ಸಿ ಎಸ್ 9 ಹೊಂದಿದ್ದರೆ ಗ್ಯಾಲಕ್ಸಿ ಎಸ್9 ಪ್ಲಸ್ 6.2-ಇಂಚಿನ ಡಿಸ್ಪ್ಲೇ ಪೆನಲ್ ನ್ನು ಹೊಂದಿದೆ. ಸೂಪರ್ AMOLED ‘ಇನ್ಫಿನಿಟಿ ಡಿಸ್ಪ್ಲೇ ಯನ್ನು ಇದು ಹೊಂದಿದ್ದು ಬ್ರೈಟ್ ಮತ್ತು ಕ್ರಿಸ್ಪಿಯಾಗಿರುವ ಔಟ್ ಪುಟ್ ನ್ನು ನೀಡುತ್ತದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ನ ಬೆಲೆ Rs 57,900, ಅದೇ ಗ್ಯಾಲಕ್ಸಿ ಎಸ್ 9 ಪ್ಲಸ್ ನ ಬೆಲೆ Rs 52,900 ರುಪಾಯಿಗಳಾಗಿರುತ್ತದೆ.

ಒನ್ ಪ್ಲಸ್ 6ಟಿ

ಒನ್ ಪ್ಲಸ್ 6ಟಿ

ಈ ಪಟ್ಟಿಯ 6 ನೇ ಸ್ಥಾನವು ಒನ್ ಪ್ಲಸ್ ನ ಒನ್ ಪ್ಲಸ್ 6ಟಿ ಸ್ಮಾರ್ಟ್ ಫೋನ್ ಗೆ ಸಲ್ಲುತ್ತದೆ. ಅಕ್ಟೋಬರ್ 2018 ರಲ್ಲಿ ಅಂತ್ಯದಲ್ಲಿ ಇದನ್ನು ಪ್ರಕಟಿಸಲಾಯಿತು. ಗ್ಲಾಸ್ ಬ್ಯಾಕ್ ಡಿಸೈನ್ ನ್ನು ಹೊಂದಿರುವ ಇದು ಅಲ್ಯೂಮಿನಿಯಂ ಫ್ರೇಮ್ ಜೊತೆಗೆ ಟಿಯರ್ ಡ್ರಾಪ್ ನಾಚ್ ಡಿಸ್ಪ್ಲೇಯನ್ನು ಹೊಂದಿದೆ.ಹೈ-ಎಂಡ್ ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್ ನ್ನು ಹೊಂದಿರುವ ಇದು 6GB RAM ನ್ನು ಅಳವಡಿಸಲಾಗಿದೆ.ಡಿಸ್ಪ್ಲೇ 6.41-ಇಂಚಿನ ಆಪ್ಟಿಕ್ AMOLED ಪೆನಲ್ ಜೊತೆಗೆ ಸ್ಕ್ರೀನ್ ರೆಸಲ್ಯೂಷನ್ 1080 x 2340 ಪಿಕ್ಸಲ್ಸ್ ಮತ್ತು ಡೆನ್ಸಿಟಿ 402 ppi ಆಗಿದೆ. 3,700mAh ನಾನ್ ರಿಮೂವೇಬಲ್ Li-Po ಬ್ಯಾಟರಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರ ಬೆಲೆ 37,999 ಮತ್ತು ಮಿಡ್ ನೈಟ್ ಬ್ಲಾಕ್ , ಮಿರರ್ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಇದು ಲಭ್ಯವಾಗುತ್ತದೆ.

ಇನ್ನು ಒನ್ ಪ್ಲಸ್ ಮೆಕ್ಲಾರೆನ್ ಎಡಿಷನ್ ಕೂಡ ಸಿಗುತ್ತದೆ. ಇದರಲ್ಲಿ 10ಜಿಬಿ ಮೆಮೊರಿ ವ್ಯವಸ್ಥೆ ಇದ್ದು ಬೆಲೆ 50,999 ರುಪಾಯಿಗಳಾಗಿರುತ್ತದೆ.

ಆಸೂಸ್ ROG ಫೋನ್

ಆಸೂಸ್ ROG ಫೋನ್

ತೈವಾನಿನ ಟೆಕ್ ಸಂಸ್ಥೆ ತಯಾರಿಸಿರುವ ಈ ಫೋನ್ ಜೂನ್ ನಲ್ಲಿ ಬಿಡುಗಡೆಗೊಂಡಿದೆ. ಭಾರತೀಯ ಮಾರುಕಟ್ಟೆಗೆ ನವೆಂಬರ್ ನಲ್ಲಿ ಪರಿಚಯಿಸಲಾಯಿತು. ಈ ಸ್ಮಾರ್ಟ್ ಫೋನ್ 6-ಇಂಚಿನ ಫುಲ್ HD+ AMOLED HDR 9-Hz, 1ms ರೆಸ್ಪಾನ್ಸ್ ಸಮಯದ AMOLED ಡಿಸ್ಪ್ಲೇ ಜೊತೆಗೆ DCIP3 ನ್ನು ಗೇಮಿಂಗ್ ಗಾಗಿ ಬೆಂಬಲಿಸುತ್ತದೆ.ಸ್ನ್ಯಾಪ್ ಡ್ರ್ಯಾಗನ್ 845 SoC ನ್ನು 2.96GHz ಮತ್ತು ಇದು 8GB RAM ವ್ಯವಸ್ಥೆಯೊಂದಿಗೆ ಅಳವಡಿಸಲಾಗಿದೆ. ಇದರ ಬೆಲೆ Rs 69,990.

ಎಲ್ ಜಿ ವಿ40 ThinQ

ಎಲ್ ಜಿ ವಿ40 ThinQ

ವಿ40 ThinQ ಸೌತ್ ಕೊರಿಯನ್ ಸಂಸ್ಥೆ ತಯಾರಿಸಿರುವ ಹಣಕ್ಕೆ ತಕ್ಕದಾಗಿರುವ ಫೋನ್ ಆಗಿದೆ.ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್ ನ್ನು ಹೊಂದಿರುವ ಇದು Adreno 630 GPU ನ್ನು ಒಳಗೊಂಡಿದೆ. 6GB RAM ಮತ್ತು 64GB ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. 512GB ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ.ಭಾರತದಲ್ಲಿ ಇದರ ಬೆಲೆ Rs 72,490.

 ವಿವೋ ನೆಕ್ಸ್

ವಿವೋ ನೆಕ್ಸ್

ಪಾಪ್ ಅಪ್ ಸ್ಲೈಡರ್ ಮತ್ತು ಬೆಝಲ್ ಲೆಸ್ ಡಿಸೈನ್ ಹೊಂದಿರುವ ಮೊದಲ ಸ್ಮಾರ್ಟ್ ಫೋನ್ ವಿವೋ ನೆಕ್ಸ್. ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಇದು ಹೊಂದಿದೆ. ದೊಡ್ಡದಾಗಿರುವ ಅಂದರೆ 6.59-ಇಂಚಿನ ಸೂಪರ್ AMOLED ಡಿಸ್ಪ್ಲೇ ಪೆನಲ್ ಜೊತೆಗೆ 1080 x 2160 ಪಿಕ್ಸಲ್ ಸ್ಕ್ರೀನ್ ರೆಸಲ್ಯೂಷನ್ ನ್ನು ಇದು ಹೊಂದಿದೆ. ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್ ನ್ನು ಹೊಂದಿರುವ ಇದು 8GB RAM ನ್ನು ಮಲ್ಟಿಟಾಸ್ಕಿಂಗ್ ಗಾಗಿ ಹೊಂದಿದೆ. ಇದರ ಬೆಲೆ Rs 44,990. ಕಪ್ಪು ಮತ್ತು ಕೆಂಪು ಬಣ್ಣಗಳ ಆವೃತ್ತಿಯಲ್ಲಿ ಲಭ್ಯವಾಗುತ್ತದೆ.

ಓಪ್ಪೋ ಫೈಂಡ್ X

ಓಪ್ಪೋ ಫೈಂಡ್ X

ಒಪ್ಪೋ ಫೈಂಡ್ X ನಲ್ಲಿ ಪಾಪ್ ಅಪ್ ಕ್ಯಾಮರಾ ಡಿಸೈನ್ ಇದ್ದು ವಿವೋ ನೆಕ್ಸ್ ನಂತೆಯೇ ಇದೆ. ಇದರಲ್ಲಿ ಬೆಝಲ್- ಲೆಸ್ ಡಿಸೈನ್ ಮುಂಭಾಗದಲ್ಲಿದ್ದು ಬಾಡಿ-ಟು-ಸ್ಕ್ರೀನ್ ಅನುಪಾತ 93.8 ಶೇಕಡಾದಷ್ಟಿದೆ.ಗ್ಲಾಸ್ ಬ್ಯಾಕ್ ಡಿಸೈನ್ ನ್ನು ಇದು ಹೊಂದಿದ್ದು ಅಲ್ಯೂಮಿನಿಯಂ ಫ್ರೇಮ್ ಅಳವಡಿಸಲಾಗಿದೆ. It uses ಡುಯಲ್ ಕ್ಯಾಮರಾ ಲೆನ್ಸ್ ಇದ್ದು 16MP ಪ್ರೈಮರಿ ಸೆನ್ಸರ್ ಜೊತೆಗೆ f/2.0 ಅಪರ್ಚರ್ ಇದೆ ಮತ್ತು 20ಎಂಪಿ ಸೆಕೆಂಡರಿ ಸೆನ್ಸರ್ ಇದ್ದು f/.0 ಅಪರ್ಚರ್ ಆಗಿದೆ. ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್ ಇದ್ದು 8GB RAM ಪವರಿಂಗ್ ಆಗಿದೆ. ಎರಡು ಬಣ್ಣಗಳ ಆಯ್ಕೆ ಇದ್ದು ಕೆಂಪು ಮತ್ತು ನೀಲಿ ವರ್ಣಗಳಲ್ಲಿ ಲಭ್ಯವಾಗುತ್ತದೆ. ಇದರ ಬೆಲೆ Rs 58,000 ಆಗಿದೆ.

Best Mobiles in India

English summary
The year 2018 is nearing its end ad we have compiled a list of the best ultra-premium smartphones which are available in the market. The ultra-premium smartphones released in 2018 flaunts impressive design factor and are built with the best cutting-edge technology available in the market today

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X