10 ದಿನಗಳ ಬ್ಯಾಟರಿ ಲೈಫ್ ನೀಡುವ ಫೋನ್ ಮಾರುಕಟ್ಟೆಗೆ
ಬ್ಯಾಟರಿ ಸಮಸ್ಯೆ ಸ್ಮಾರ್ಟ್‌ಫೋನ್‌ಗಳಿಗೆ ಇರುವ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಚೀನಾ ಮೂಲದ ಮೊಬೈಲ್ ಉತ್ಪಾದನಾ ಕಂಪನಿ 'ಕಿಟೆಲ್' ಈಗ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸ ಮೊಬೈಲ್ ಪರಿಚಯಿಸಿದೆ. ಅಂದಹಾಗೆ ಸ್ಮಾರ್ಟ್‌ಫೋನ್ ಹೆಸರು "K10000". ಇದರ ವಿಶೇಷತೆ ಅಂದ್ರೆ ಒಮ್ಮೆ ಚಾರ್ಜ್ ಮಾಡಿದರೆ 10 ದಿನಗಳ ವರೆಗೆ ನಿಮ್ಮ ಮೊಬೈಲ್ ಚಾರ್ಜ್ ಮಾಡುವ ಅವಶ್ಯಕತೆಯೇ ಇಲ್ಲ. ಈ ಸ್ಮಾರ್ಟ್‌ಫೋನ್ ಕೊಳ್ಳಲು ನೀವು ಇನ್ನಷ್ಟು ವಿಶೇಷ ಮಾಹಿತಿಯನ್ನು ತಿಳಿದುಕೊಳ್ಳಲೇ ಬೇಕು ಅಲ್ಲವೇ. ಗಿಜ್‌ಬಾಟ್ ನ ಈ ಲೇಖನ ಓದಿ.
ಓದಿರಿ: ಬೇಡಿಕೆ ಕುಸಿಯದ ಗೂಗಲ್ ಟಾಪ್ ಸರ್ಚ್ ಡಿವೈಸ್‌ಗಳು

ಕಿಟೆಲ್ ಕಂಪನಿ ಸ್ಮಾರ್ಟ್‌ಫೋನ್
ಚೀನಾ ಮೂಲದ ಕಿಟೆಲ್ ಮೊಬೈಲ್ ಉತ್ಪದನಾ ಕಂಪನಿ ತಯಾರಿಸಿರುವ ಹೊಸ ಮೊಬೈಲ್ ಹೆಸರು K10000. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲೇ ಅತ್ಯಧಿಕ ಬ್ಯಾಟರಿ ಪವರ್ ಹೊಂದಿರುವ ಸ್ಮಾರ್ಟ್ ಆಗಿದೆ.

K10000 ಸ್ಮಾರ್ಟ್‌ಫೋನ್ ವಿಶೇಷತೆ
ಕಿಟೆಲ್ ನ ಹೊಸ ಮೊಬೈಲ್ ಬ್ಯಾಟರಿಯೂ 10000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಈ ಸ್ಮಾರ್ಟ್‌ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 10 ದಿನಗಳ ವರೆಗೆ ಚಾರ್ಜ್ ಮಾಡುವ ಅವಶ್ಯಕತೆಯೇ ಇರುವುದಿಲ್ಲ.

K10000
K10000 ಸ್ಮಾರ್ಟ್‌ಫೋನ್ ಬ್ಯಾಟರಿ 10 ದಿನಗಳವರೆಗೆ ಪವರ್ ಚಾರ್ಜ್ ಕೇಲುವುದಿಲ್ಲ ಎಂದಿರುವ ಮೊಬೈಲ್ ಉತ್ಪಾದಕರು ಬ್ಯಾಟರಿಯೂ ಶೀಘ್ರ ಚಾರ್ಜ್ ಅಥವಾ ಲೈಫ್ ಸೈಕಲ್ ಎಂಬ ಯಾವ ಮಾಹಿತಿಯನ್ನು ಸಂಪೂರ್ಣವಾಗಿ ಹೇಳಿಲ್ಲ.

K10000
ಡ್ಯುಯಲ್ ಸಿಮ್ ಸಪೋರ್ಟ್(ಜಿಎಸ್‌ಎಂ ಮತ್ತು ಜಿಎಸ್‌ಎಂ)

K10000
5.5 ಇಂಚಿನ ಸ್ಕ್ರೀನ್ ಜೊತೆಗೆ ಹೆಚ್ಚು ಸ್ಪಷ್ಟತೆಯ 720 ಡಿಸ್‌ಪ್ಲೆ.

K10000
8MP ಹಿಂಭಾಗ ಕ್ಯಾಮೆರಾ ಜೊತೆಗೆ ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್ ಮತ್ತು 2MP ಮುಂಭಾಗ ಕ್ಯಾಮೆರಾ

K10000
2GB RAM
1GHz ಕ್ವಾಡ್-ಕೋರ್ ಮಿಡಿಯಾ ಟೆಕ್ MT6735 ಪ್ರೊಸೆಸರ್ಸ್
16GB ಆಂತರಿಕ ಶೇಖರಣಾ ಸಾಮರ್ಥ್ಯ
32GB ಮೈಕ್ರೋ ಎಸ್‌ಡಿ ಕಾರ್ಡ್
ಆಂಡ್ರಾಯ್ಡ್ 5.1 ಒಎಸ್

K10000
ವೈ-ಫೈ, ಬ್ಲೂಟೂತ್, 3G, 4G ಸಂಪರ್ಕಗಳು.

K10000
ಕಿಟೆಲ್ ಕಂಪನಿಯ K10000 ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದ್ದು, ಇದರ ಬೆಲೆ $239.99. (15,914 ರೂಪಾಯಿಗಳು)


Click it and Unblock the Notifications








