ಆಪಲ್ ಐಫೋನ್ ಎಕ್ಸ್‌ನಲ್ಲೂ ಇಲ್ಲದ ಈ ಫೀಚರ್‌ಗಳು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿವೆ..!

  By GizBot Bureau
  |

  ಸ್ಯಾಮ್ ಸಂಗ್ ಇತ್ತೀಚೆಗಷ್ಟೇ ಗ್ಯಾಲಕ್ಸಿ ನೋಟ್ 9 ಫ್ಲಾಗ್ ಶಿಪ್ ಫೋನ್ ನ್ನು ಬಿಡುಗಡೆಗೊಳಿಸಿದ್ದು ಅದರ ಆರಂಭಿಕ ಬೆಲೆ ಅಂದರೆ 6ಜಿಬಿ ಮೆಮೊರಿ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇರುವ ವರ್ಷನ್ ನ ಬೆಲೆ 67,900 (MOP) ಆಗಿದೆ. ಈ 65,000- ಬೆಲೆಗೂ ಅಧಿಕ ಬೆಲೆಯ ಕೆಲವು ಫೋನ್ ಗಳಿವೆ .ಉದಾಹರಣೆಗೆ ಓಪೋ ಫೈಂಡ್ ಎಕ್ಸ್, ಹುವಾಯಿ ಪಿ20 ಪ್ರೋ, ಆಪಲ್ ಐಫೋನ್ ಎಕ್ಸ್ .

  ಆಪಲ್ ಐಫೋನ್ ಎಕ್ಸ್‌ನಲ್ಲೂ ಇಲ್ಲದ ಈ ಫೀಚರ್‌ಗಳು ಸ್ಯಾಮ್‌ಸಂಗ್‌ನಲ್ಲಿವೆ..!

  ಐಫೋನ್ ಎಕ್ಸ್ ನ ಪ್ರಾರಂಭಿಕ ಬೆಲೆಯು 95,390 (MRP) ಆಗಿದೆ ಮತ್ತು ಅದರಲ್ಲಿ 64GB ಸ್ಟೋರೇಜ್ ಅವಕಾಶವಿರುತ್ತದೆ. ಹಾಗಾದ್ರೆ ಐಫೋನ್ ಎಕ್ಸ್ ಗೆ ಹೋಲಿಸಿದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ನಲ್ಲಿ ಏನೇನಿದೆ ಎಂಬ 10 ವಿಚಾರಗಳನ್ನು ನಾವಿಲ್ಲಿ ಪ್ರಸ್ತಾಪಿಸುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ದೊಡ್ಡ ಸ್ಕ್ರೀನ್

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 6.4-ಇಂಚಿನ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ Quad HD+ ರೆಸಲ್ಯೂಷನ್ ಹೊಂದಿದೆ. ಆಫಲ್ ಐಫೋನ್ ಎಕ್ಸ್ ಇದಕ್ಕಿಂತ ಬಹಳ ಸಣ್ಣದಿದ್ದು 5.8-ಇಂಚಿನ ಡಿಸ್ಪ್ಲೇಯು 1125x2436 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ.

  ಉತ್ತಮ ಸೆಲ್ಫೀ ಕ್ಯಾಮರಾ (specs wise)

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 8ಎಂಪಿ ಸೆಲ್ಫೀ ಕ್ಯಾಮರಾ ಹೊಂದಿದ್ದು ಅದರ ದ್ಯುತಿರಂಧ್ರ f/1.7 ಆಗಿದೆ. ಆದರೆ ಐಫೋನ್ ಎಕ್ಸ್ ನಲ್ಲಿ 7MP ಕ್ಯಾಮರಾವಿದ್ದು ಅದರ ದ್ಯುತಿರಂಧ್ರ f/2.2 ಆಗಿದೆ.

  8GB RAM ವೇರಿಯಂಟ್

  ಸ್ಯಾಮ್ ಸಂಗ್ ಗ್ಯಾಲಕ್ಸಿಯ ಟಾಪ್ ಎಂಡ್ ವರ್ಷನ್ ನಲ್ಲಿ 8GB RAM ಇದೆ. ಆದರೆ ಅದುವೇ ಐಫೋನ್ ಎಕ್ಸ್ ನಲ್ಲಿ ಕೇವಲ 3ಜಿಬಿ ಮೆಮೊರಿ ಮಾತ್ರವೇ ಇದೆ.

  ದುಪ್ಪಟ್ಟು ಇಂಟರ್ನಲ್ ಸ್ಟೋರೇಜ್ 

  ಸ್ಯಾಮ್ ಸಂಗ್ ಗ್ಯಾಲಕ್ಸಿಯ ಟಾಪ್ ಎಂಡ್ ವರ್ಷನ್ ನಲ್ಲಿ ಇಂಟರ್ನಲ್ ಸ್ಟೋರೇಜ್ ಕೆಪಾಸಿಟಿ 512GB ಆಗಿದ್ದು ಅದನ್ನು 1ಟಿಬಿ ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ. ಅಂದರೆ ನೀವು 512ಜಿಬಿ ಮೈಕ್ರೋ ಎಸ್ ಡಿ ಕಾರ್ಡ್ ಬಳಕೆ ಮಾಡಬಹುದು.ಆದರೆ ಆಪಲ್ ಐಫೋನ್ ಎಕ್ಸ್ ನಲ್ಲಿ 256GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಅಷ್ಟೇ ಇದೆ.

  ಅಧಿಕ ಬ್ಯಾಟರಿ ಕೆಪಾಸಿಟಿ 

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ನಲ್ಲಿ ಬ್ಯಾಟರಿ ಕೆಪಾಸಿಟಿಯು ಐಫೋನ್ ಎಕ್ಸ್ ನಿಂದ ಅಧಿಕವಾಗಿದೆ. ಗ್ಯಾಲಕ್ಸಿ ನೋಟ್ 9 ನಲ್ಲಿ ಬ್ಯಾಟರಿ ಸಾಮರ್ಥ್ಯವು 4,000mAh ಆಗಿದೆ ಆದರೆ ಅದೇ ಐಫೋನ್ ಎಕ್ಸ್ ನಲ್ಲಿ 2,716mAh ಆಗಿದೆ.

  ಎಸ್- ಪೆನ್ 

  ಗ್ಯಾಲಕ್ಸಿ ನೋಟ್ 9 ನಲ್ಲಿ ಬ್ಲೂಟೂತ್ ಅನೇಬಲ್ ಆಗಿರುವ ಎಸ್ ಪೆನ್ ಇದೆ. ಇದು ಮಲ್ಟಿಟಾಸ್ಕಿಂಗ್ ಮತ್ತು ಪ್ರೊಡಕ್ಟಿವಿಟಿಯನ್ನು ಹೆಚ್ಚಿಸಲು ನೆರವು ನೀಡುತ್ತದೆ.ಎಸ್ ಪೆನ್ ನಿಜಕ್ಕೂ ಗ್ಯಾಲಕ್ಸಿ ನೋಟ್ 9 ಗೆ ವ್ಯಾಲ್ಯೂ ಆಡ್ ಮಾಡುತ್ತದೆ. ಆದರೆ ಈ ಬೆಂಬಲವು ನಿಮಗೆ ಐಫೋನ್ ಎಕ್ಸ್ ನಲ್ಲಿ ಲಭ್ಯವಾಗುವುದಿಲ್ಲ.

  10,000 ರೂ. ಮೌಲ್ಯದ Dex ಸಪೋರ್ಟ್ ಗ್ಯಾಲಕ್ಸಿ ನೋಟ್ 9ನಲ್ಲಿದೆ

  ಗ್ಯಾಲಕ್ಸಿ ನೋಟ್ 9 ನಲ್ಲಿ ನೀವು ಯುಎಸ್ ಬಿ ಟೈಪ್ ಸಿ ಗೆ HDMI dongle ನ್ನು ಸ್ಮಾರ್ಟ್ ಫೋನ್ ಮೂಲಕ ಯಾವುದೇ ಮಾನಿಟರ್ ಗೆ ಕನೆಕ್ಟ್ ಮಾಡಿ ಪ್ರಸೆಂಟೇಷನ್ ಮಾಡಲು ಸಹಾಯಕವಾಗಿದೆ. ದೊಡ್ಡ ಸ್ಕ್ರೀನ್ ಗಳನ್ನು ಇದರಲ್ಲಿ ಸುಲಭವಾಗಿ ಕನೆಕ್ಟ್ ಮಾಡಿಕೊಳ್ಳಬಹುದು. ಆದರೆ ಈ ವೈಶಿಷ್ಟ್ಯವು ಐಫೋನ್ ಎಕ್ಸ್ ನಲ್ಲಿ ಮಿಸ್ ಆಗಿದೆ.

  ಉಚಿತ ಆಕ್ಸಸರೀಸ್ ಗಳು 

  ಸ್ಯಾಮ್ ಸಂಗ್ ನಲ್ಲಿ 6000 ರುಪಾಯಿ ಬೆಲೆ ಬಾಳುವ ಹಾರ್ಮನ್ ಎಕೆಜೆ ಇಯರ್ ಫೋನ್ ಲಭ್ಯವಿದೆ. ಅಡಾಪ್ಟರ್ ಕೂಡ ಉಚಿತವಾಗಿ ಸಿಗುತ್ತದೆ (USB Type-C ಗೆ microUSB ಮತ್ತು Type-C ಗೆ USB). ಐಫೋನ್ ಎಕ್ಸ್ ನಲ್ಲಿ ಬೇಸಿಕ್ ಇಯರ್ ಪಾಡ್ ಜೊತೆಗೆ ಲೈಟನಿಂಗ್ ಕನೆಕ್ಟರ್ ಅಷ್ಟೇ ಲಭ್ಯವಾಗುತ್ತದೆ.

  3.5mm ಹೆಡ್ ಫೋನ್ ಜ್ಯಾಕ್

  ಗ್ಯಾಲಕ್ಸಿ ನೋಟ್ 9 ನಲ್ಲಿ 3.5ಎಂಎಂನ ಹೆಡ್ ಫೋನ್ ಜ್ಯಾಕ್ ಇದೆ. ಐಫೋನ್ ಎಕ್ಸ್ ಗೆ ರೆಗ್ಯುಲರ್ ಹೆಡ್ ಫೋನ್ ಕನೆಕ್ಟ್ ಮಾಡುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ.

  ಬೆಲೆ

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ನ ಆರಂಭಿಕ ಬೆಲೆ ರುಪಾಯಿ 67,900 (MOP) ಅದು 6GB RAM ಮತ್ತು 128GB ಸ್ಟೋರೇಜ್ ವರ್ಷನ್ ಗೆ , ಎಂದೇ ಆಪಲ್ ಐಫೋನ್ 64ಜಿಬಿ ಸ್ಟೋರೇಜ್ ವರ್ಷನ್ ನ ಆರಂಭಿಕ ಬೆಲೆ ರುಪಾಯಿ 95,390 (MRP)

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  10 things Samsung's most expensive smartphone has that Apple iPhone X does not. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more