ಎಲ್ ಜಿ ನೀಡಲಿದೆ ಕುಕ್ಕೀ ಡ್ಯುಯೆಟ್ ಮೊಬೈಲ್ ಕೊಡುಗೆ

Posted By: Staff

ಎಲ್ ಜಿ ನೀಡಲಿದೆ ಕುಕ್ಕೀ ಡ್ಯುಯೆಟ್ ಮೊಬೈಲ್ ಕೊಡುಗೆ
ಅಗ್ಗದ ಬೆಲೆಗೆ ಗ್ರಾಹಕರ ಮನ ಮೆಚ್ಚುವ ಮೊಬೈಲ್ ನೀಡುವ ಎಲ್ ಜಿ ಕಂಪನಿ ಇದೀಗ ಇನ್ನೊಂದು ಥ್ರಿಲ್ ನೀಡಲಿದೆ. ಎಲ್ ಜಿ ಕುಕ್ಕೀ ಡ್ಯುಯಟ್ C310 ಮೊಬೈಲ್ ಬಿಡುಗಡೆಗೆ ಎಲ್ ಜಿ ಸಜ್ಜಾಗಿದೆ.

ಹಳೆಯ ಮೊಬೈಲ್ ಗಳಿಗೆ ಹೋಲಿಸಿದರೆ ಈ ಮೊಬೈಲ್ ನಲ್ಲಿ ಅತ್ಯುನ್ನತ ಅವಕಾಶ ನೀಡಿರುವುದಾಗಿ ಕಂಪನಿ ತಿಳಿಸಿದೆ. 6.1 ಸಿಎಂ TFT 320*240 ಪಿಕ್ಸಲ್ ರೆಸೊಲ್ಯೂಷನ್ ಸ್ಕ್ರೀನ್ ಹೊಂದಿರುವ ಮೊಬೈಲ್ ಗುಣಮಟ್ಟದಲ್ಲಿ ಹಿಂದೇಟಾಕುವಂತಿಲ್ಲ.

2 ಮೆಗಾ ಪಿಕ್ಸಲ್ ಕ್ಯಾಮೆರಾದೊಂದಿಗೆ ಮೊಬೈಲ್ ಒಳಗಿನ ಕ್ಯಾಮೆರಾದಿಂದ ಸ್ಪಷ್ಟತೆಯ ಚಿತ್ರಣ ನೀವು ನಿರೀಕ್ಷಿಸಬಹುದಾಗಿದೆ. ಆಡಿಯೋ, ವಿಡಿಯೋ ಪ್ಲೇಯರ್, ಎಫ್ ಎಂ ಮುಂತಾದ ಅನೇಕ ಸಂಗೀತದ ಆಯ್ಕೆಗಳೂ ನಿಮಗೆ ಖುಷಿ ನೀಡಲಿವೆ.

USB 2.0 ಪೋರ್ಟ್, ಬ್ಲೂಟೂಥ್, ವೈ-ಫೈ ನೊಂದಿಗೆ ಡ್ಯೂಯಲ್ ಸಿಮ್ GSM ಮತ್ತು ಉತ್ತಮ ನೇವಿಗೇಶನ್ ಗೆಂದು GPRS ತಂತ್ರಜ್ಞಾನವನ್ನೂ ಒಳಗೊಂಡಿದೆ. 19 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯದೊಂದಿಗೆ ಮೆಮೊರಿ ವಿಸ್ತರಣೆಗೆ 4ಜಿಬಿ ಮೆಮೊರಿ ಸೌಲಭ್ಯವಿದೆ. 1250 mAh ಪವರ್ ಬೆಂಬಲಿತ ಲೀಥಿಯಂ ಬ್ಯಾಟರಿ 18 ಗಂಟೆ ಟಾಕ್ ಟೈಂ ಮತ್ತು 500 ಗಂಟೆ ಸ್ಟಾಂಡ್ ಬೈ ಟೈಂ ನೀಡಲಿದೆ.

ಈ ಕುಕ್ಕೀ ಮೊಬೈಲ್ ಕಪ್ಪು ಮತ್ತು ಕೆಂಪು ಆಕರ್ಷಕ ಬಣ್ಣದಲ್ಲಿ ಲಭ್ಯವಿದ್ದು, ಇದರ ಬೆಲೆ 5000 ರು ಎಂದು ತಿಳಿಸಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot