Subscribe to Gizbot

ಎಲ್ ಜಿ ನೀಡಲಿದೆ ಡಬಲ್ ಪ್ಲೇ ಸ್ಮಾರ್ಟ್ ಫೋನ್

Posted By: Super

ಎಲ್ ಜಿ ನೀಡಲಿದೆ ಡಬಲ್ ಪ್ಲೇ ಸ್ಮಾರ್ಟ್ ಫೋನ್
ಪ್ರತಿಷ್ಟಿತ ಎಲ್ ಜಿ ಕಂಪನಿ ಅತ್ಯಾಧುನಿಕ ಡ್ಯೂಯಲ್ ಸ್ಕ್ರೀನ್ ತಂತ್ರಜ್ಞಾನದ ಎಲ್ ಜಿ ಡಬಲ್ ಪ್ಲೇ (ಎಲ್ ಜಿ ಫ್ಲಿಪ್ II) ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಿ ಗ್ರಾಹಕರಿಗೆ ಖುಷಿ ನೀಡಲಿದೆ.

ಗೂಗಲ್ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಸ್ಮಾರ್ಟ್ ಫೋನನ್ನು ತೆಗೆಯುತ್ತಿದ್ದಂತೇ ನಿಮ್ಮ ಕಣ್ಣುಂದೆ ಅತ್ಯಾಶ್ಚರ್ಯ ಕಾಣಿಸಿಕೊಳ್ಳುತ್ತದೆ.

ಇದರ ಡಿಸ್ಪ್ಲೇ ವಿನ್ಯಾಸವೇ ನಿಮ್ಮನ್ನು ಮಾರುಗೊಳಿಸುತ್ತದೆ. ಮೊದಲ ಸ್ಕ್ರೀನ್ TFT ಟಚ್ ಡಿಸ್ಪ್ಲೇ 320 x 480 ರೆಸೊಲ್ಯೂಷನ್ ಹೊಂದಿದ್ದು, ಅದರ ಕೆಳಗೆಯೇ ಕಾಣುವ ಇನ್ನೊಂದು ಪುಟ್ಟ ಸ್ಕ್ರೀನ್ ನಿಮ್ಮನ್ನು ಚಕಿತಗೊಳಿಸುತ್ತೆ. ಇದರ ಇನ್ನೊಂದು ವಿಶೇಷತೆ ಕ್ವೆರ್ಟಿ ಕೀಪ್ಯಾಡ್.

ಕೇವಲ ಡಬಲ್ ಸ್ಕ್ರೀನ್ ಹೊಂದಿರುವುದಷ್ಟೇ ವಿಶೇಷತೆಯಲ್ಲ, 99 ಗ್ರಾಂ ತೂಕವಿರುವ ಎಲ್ ಜಿ ಡಬಲ್ ಪ್ಲೇ 32 ಜಿಬಿ ಮೆಮೊರಿ ಬೆಂಬಲಿತವಾಗಿದೆ. LED ಫ್ಲಾಶ್ ಜೊತೆಗಿನ 5 ಮೆಗಾ ಪಿಕ್ಸಲ್ ಕ್ಯಾಮೆರಾದಿಂದ ಒಳ್ಳೆ ಚಿತ್ರಣ ಸಾಧ್ಯವಿದೆ.

ಮಾಹಿತಿ ವಿನಿಮಯಕ್ಕೆ ಬ್ಲೂಟೂಥ್ ಒದಗಿಸಲಾಗಿದೆ. ಇದರಲ್ಲಿ ವೈ-ಫೈ ಇಲ್ಲವೆಂದು ನಿರಾಶೆ ಪಡುವ ಅಗತ್ಯವಿಲ್ಲ, ಲಭ್ಯವಿರುವ ಬ್ಲೂಟೂಥ್ 2.1 ಆಯಾಮದ A2DP ದಾದ್ದರಿಂದ ನಿಮ್ಮ ನಿರೀಕ್ಷೆ ಕೈಗೂಡುತ್ತದೆ. ಹ್ಯಾಂಡ್ ಸೆಟ್ ಜೊತೆ 2.0 ಮೈಕ್ರೊ USB, ಮೀಡಿಯಾ ಪ್ಲೇಯರ್ ಇನ್ನಿತರ ಅಂಶ ಒಳಗೊಂಡಿದೆ.

ಲಿಯಾನ್ ಸ್ಟಾಂಡರ್ಡ್ ಬ್ಯಾಟರಿ ಹೊಂದಿರುವ ಇದರಲ್ಲಿ ಫೇಸ್ ಬುಕ್, ಟ್ವಿಟ್ಟರ್ ನಂತಹ ಸಾಮಾಜಿಕ ತಾಣ ಮತ್ತು ಮೈ ಸ್ಪೇಸ್, ಅಡೋಬ್ ಫ್ಲಾಶ್ ರೀಡರ್ ಸೌಲಭ್ಯವಿದೆ. ನವೆಂಬರ್ 2 ಕ್ಕೆ ಅಮೆರಿಕಕ್ಕೆ ಕಾಲಿಡಲಿರುವ ಎಲ್ ಜಿ ಡಬಲ್ ಪ್ಲೇ ಭಾರತಕ್ಕೆ ಮುಂದಿನ ವರ್ಷ ಬರಲಿದ್ದು, ಇದರ ಬೆಲೆ ಕೇವಲ 7, 500 ರು ಎಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot