ಎಲ್ ಜಿ ತಂದಿರುವ ಈ ಬ್ಲ್ಯಾಕ್ ಬ್ಯೂಟಿ ಹೆಸರೇನು?

By Super
|
ಎಲ್ ಜಿ ತಂದಿರುವ ಈ ಬ್ಲ್ಯಾಕ್ ಬ್ಯೂಟಿ ಹೆಸರೇನು?
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ ಜಿ ಕಂಪನಿ ಎಲ್ ಜಿ ಆಪ್ಟಿಮಸ್ ಪ್ರೊ C660 ಎಂಬ ಸ್ಮಾರ್ಟ್ ಫೋನ್ ಪರಿಚಯಿಸಿದೆ. ಈ ವಿನೂತನ ಮೊಬೈಲ್ ಪೋಟ್ರೇಟ್ ಡಿಸ್ಪ್ಲೇ ಹೊಂದಿರುವ ಪ್ರಪಂಚದ ಮೊದಲ ಮೊಬೈಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಾರ್ ವಿನ್ಯಾಸದಲ್ಲಿ ಮೂಡಿಬಂದಿರುವ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 2.3 ಅಥವಾ ಆಂಡ್ರಾಯ್ಡ್ ಜಿಂಜರ್ ಬರ್ಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿದೆ.

ಎಲ್ ಜಿ ಆಪ್ಟಿಮಸ್ ಪ್ರೊ C660 ವಿಶೇಷತೆ:
* ಕ್ವೆರ್ಟಿ ಕೀ ಪ್ಯಾಡ್
* 119.5x59.7x12.9ಎಂಎಂ ಸುತ್ತಳತೆ
* 128 ಗ್ರಾಂ ತೂಕ
* 2.8 ಇಂಚು, QVGA, 240x320 TFT ಟಚ್ ಡಿಸ್ಪ್ಲೇ, 262k ಬಣ್ಣಗಳ ರೆಸೊಲ್ಯೂಷನ್
* ಮಲ್ಟಿ ಟಚ್ ಸೌಲಭ್ಯ, ಝೂಮಿಂಗ್ ಸೌಲಭ್ಯ
* 800 MHz ಪ್ರೊಸೆಸರ್
* 3.15 ಮೆಗಾ ಪಿಕ್ಸಲ್ ಫೋಕಸ್ ಫ್ರಂಟ್ ಕ್ಯಾಮೆರಾ
* 4x ಡಿಜಿಟಲ್ ಝೂಮ್ ಮತ್ತು ವಿಡಿಯೋ ರೆಕಾರ್ಡಿಂಗ್, 640x480 ಪಿಕ್ಸಲ್
* 2ಜಿ GSM ಫ್ರಿಕ್ವೆನ್ಸಿ ಬಂಬಲಿತ
* 3ಜಿ, ವೈ-ಫೈ, GPRS, EDGE ಮತ್ತು ಬ್ಲೂಟೂಥ್, USB 2.0 ಪೋರ್ಟ್
* 3.5 ಎಂಎಂ ಆಡಿಯೋ ಜ್ಯಾಕ್
* ಜಾವಾ ಅಪ್ಲಿಕೇಶನ್
* 156 ಎಂಬಿ ಆಂತರಿಕ ಮೆಮೊರಿ ಸಾಮರ್ಥ್ಯ
* 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್, 2 ಜಿಬಿ ಮೈಕ್ರೊ SD ಕಾರ್ಡ್

ಅತ್ಯುನ್ನತ 1500mAh ಲಿಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ 852 ಗಂಟೆ ಸ್ಟಾಂಡ್ ಬೈ ಟೈಂ ಮತ್ತು 13.5 ಗಂಟೆ ಟಾಕ್ ಟೈಂ ನೀಡುತ್ತದೆ. ಎಲ್ಲ ಸ್ಮಾರ್ಟ್ ಫೋನ್ ಗಳಂತೆಯೇ ಇದರಲ್ಲಿಯೂ ಕೂಡ ಫೇಸ್ ಬುಕ್, ಟ್ವಿಟ್ಟರ್, ಪಿಕಾಸ ಸಾಮಾಜಿಕ ತಾಣಗಳ ಅವಕಾಶವಿದೆ.

ಬೆಲೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಈ ಬ್ಲ್ಯಾಕ್ ಸ್ಮಾರ್ಟ್ ಫೋನ್ ಕೇವಲ 10,000 ರುಗೆ ಲಭ್ಯವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X