ಎಲೆಕ್ಟ್ರಾನಿಕ್ ಡಿವೈಸ್ ಗಳಿಂದ ಕಣ್ಣಿನ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?

By Gizbot Bureau
|

ಸ್ಮಾರ್ಟ್ ಫೋನ್ ಗಳು, ಟ್ಯಾಬ್ಲೆಟ್ ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಯಾವಾಗಲೂ ಬಳಕೆ ಮಾಡುವುದರಿಂದಾಗಿ ನಮ್ಮ ಕಣ್ಣುಗಳ ಮೇಲೆ ಅಡ್ಡಪರಿಣಾಮಗಳಾಗುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ ಅದಕ್ಕಾಗಿ ನಾವೇನೂ ಮಾಡುವುದಿಲ್ಲ.ಯಾಕೆಂದರೆ ಅದು ನಮ್ಮ ಲೈಫ್ ಸ್ಟೈಲ್ ಆಗಿದೆ ಮತ್ತು ನಮ್ಮ ಕೆಲಸವು ನಮ್ಮನ್ನು ಈ ವಸ್ತುಗಳಿಂದ ದೂರವಿರುವುದಕ್ಕೆ ಅವಕಾಶ ನೀಡುವುದಿಲ್ಲ.

ಎಲೆಕ್ಟ್ರಾನಿಕ್ ಡಿವೈಸ್ ಗಳಿಂದ ಕಣ್ಣಿನ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?

ಇದೀಗ ಟೊಲೆಟೋ ಯುನಿವರ್ಸಿಟಿಯ ಅಧ್ಯಯನಕಾರರು ನೀವು ಹೀಗೆ ಮೊಬೈಲ್ ಮತ್ತು ಇತರೆ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಬಳಕೆಯನ್ನು ಅತಿಯಾಗಿ ಮುಂದುವರಿಸಿದ್ದೇ ಆದಲ್ಲಿ ನಿಮ್ಮ 50 ನೇ ವಯಸ್ಸಿಗೆ ಕಣ್ಣುಗಳನ್ನು ಕಳೆದುಕೊಳ್ಳುತ್ತೀರಿ ಅಥವಾ ಕಣ್ಣಿಗೆ ಸಂಬಂಧಿಸಿದ ಇತರೆ ಕಾಯಿಲೆಗಳಿಗೆ ತುತ್ತಾಗುತ್ತೀರಿ ಎಂದು ಎಚ್ಚರಿಸಿದೆ. ಹಾಗಾಗಿ ಈ ರೀತಿ ಆಗದಂತೆ ತಡೆಯುವುದಕ್ಕೆ ನೀವೇನು ಮಾಡಬೇಕು ಎಂಬ ಬಗ್ಗೆ ಕೆಲವು ಅಂಶಗಳನ್ನು ನಾವಿಲ್ಲಿ ಹೇಳುತ್ತಿದ್ದೇವೆ.

ಸ್ಮಾರ್ಟ್ ಫೋನ್ ಮತ್ತು ಇತರೆ ಡಿವೈಸ್ ಗಳಲ್ಲಿರುವ ನೀಲಿ ಬೆಳಕು ಪ್ರಮುಖ ಅಂಶವಾಗಿರುತ್ತದೆ.

ಸ್ಮಾರ್ಟ್ ಫೋನ್ ಮತ್ತು ಇತರೆ ಡಿವೈಸ್ ಗಳಲ್ಲಿರುವ ನೀಲಿ ಬೆಳಕು ಪ್ರಮುಖ ಅಂಶವಾಗಿರುತ್ತದೆ.

ಟೊಲೆಟೋ ಯುನಿವರ್ಸಿಟಿಯ ಆಪ್ಟಿಕಲ್ ಕೆಮೆಸ್ಟ್ರಿ ಅಧ್ಯಯನಕಾರರ ಪ್ರಕಾರ, ನೀಲಿ ಬೆಳಕು ಕಣ್ಣಿನ ರೆಟಿನಾದಿಂದ ಕೆಲವು ಮಾಲಿಕ್ಯೂಲ್ ಗಳನ್ನು ಟ್ರಾನ್ಸ್ಫರ್ಮ್ ಮಾಡುತ್ತದೆ ಮತ್ತು ಇದು ಜೀವಕೋಶಗಳ ಸಾಯಿಸುವಿಕೆಗೆ ಕಾರಣವಾಗುತ್ತದೆ.

ಈ ಅಧ್ಯಯನವು ನೀಲಿ ಬೆಳಕಿಗೆ ಕಣ್ಣುಗಳನ್ನು ಅತಿಯಾಗಿ ತೆರೆಯುವುದರಿಂದಾಗಿ ನೀವು 50 ನೇ ವಯಸ್ಸಿಗೆ ಕಾಲಿಡುವಾಗ ಕುರುಡುತನ ಅಥವಾ ಇತರೆ ಕಣ್ಣಿನ ಸಮಸ್ಯೆಗಳು ಬರುವ ಸಾಧ್ಯತೆಯನ್ನು ಸಾಬೀತುಪಡಿಸಿದೆ.

ಸ್ಮಾರ್ಟ್ ಫೋನಿನ ಡಿಸ್ಪ್ಲೇ ಸೆಟ್ಟಿಂಗ್ಸ್

ಸ್ಮಾರ್ಟ್ ಫೋನಿನ ಡಿಸ್ಪ್ಲೇ ಸೆಟ್ಟಿಂಗ್ಸ್

ಯೌವ್ವನದಲ್ಲಿ ತೆಗೆದುಕೊಳ್ಳುವ ಕಾಳಜಿಯು ಮುಪ್ಪಿನಲ್ಲಿ ಕಣ್ಣಿನ ಸಮಸ್ಯೆಯಿಂದ ದೂರವಿರುವಂತೆ ನೋಡಿಕೊಳ್ಳುತ್ತದೆ.

ಸ್ಮಾರ್ಟ್ ಫೋನಿನ ಡಿಸ್ಪ್ಲೇ ಸೆಟ್ಟಿಂಗ್ಸ್ ನಲ್ಲಿ ಯಾವಾಗಲೂ ನೀಲಿ ಲೈಟ್ ಫಿಲ್ಟರ್ ನ್ನು ಸ್ವಿಚ್ ಆನ್ ಮಾಡಿ.

ಬ್ಲೂ ಲೈಟ್ ಫಿಲ್ಟರ್ ಜೊತೆಗೆ ಉತ್ತಮ ಗುಣಮಟ್ಟದ ಸ್ಕ್ರೀನ್ ಪ್ರೊಟೆಕ್ಟರ್ ನ್ನು ಬಳಸಿ.

ನಿಮ್ಮ ಕೆಲಸವು ಯಾವಾಗಲೂ ಕಂಪ್ಯೂಟರ್ ಮುಂದೆ ಕುಳಿತು ಮಾಡುವುದೇ ಆಗಿದ್ದಲ್ಲಿ ಆಗಾಗ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.

ಡಿವೈಸ್ ಗಳ ಸ್ಕ್ರೀನ್

ಡಿವೈಸ್ ಗಳ ಸ್ಕ್ರೀನ್

ನಿಮ್ಮ ಕಣ್ಣುಗಳಿಗೆ ಆರಾಯದಾಯಕ ಅನುಭವ ನೀಡುವ ಕಣ್ಣಿನ ಡ್ರಾಪ್ ಗಳನ್ನು ನಿಮ್ಮ ವೈದ್ಯರ ಸಲಹೆಯ ಮೇರೆಗೆ ಪಡೆದುಕೊಳ್ಳಿ.

ಸಂಪೂರ್ಣ ಕತ್ತಲೆಯಲ್ಲಿ ನಿಮ್ಮ ಡಿವೈಸ್ ಗಳ ಸ್ಕ್ರೀನ್ ನೋಡಬೇಡಿ.

ಒಂದು ವೇಳೆ ನೀವು ಗ್ಲಾಸ್ ಧರಿಸುವವರಾಗಿದ್ದಲ್ಲಿ ಬ್ಲೂ ಲೈಟ್ ಮತ್ತು ಯುವಿ ಫಿಲ್ಟರ್ ಇರುವ ಉತ್ತಮ ಗುಣಮಟ್ಟದ ಲೆನ್ಸ್ ಗಳನ್ನು ಬಳಕೆ ಮಾಡಿ.

ಯುವಿ/ಬ್ಲೂ ಲೈಟ್ ಫಿಲ್ಟರ್

ಯುವಿ/ಬ್ಲೂ ಲೈಟ್ ಫಿಲ್ಟರ್

ದಿನಪೂರ್ತಿ ರಿಲ್ಯಾಕ್ಸ್ ಆಗಿರುವುದಕ್ಕಾಗಿ ಆಗಾಗ ಕಣ್ಣುಗಳನ್ನು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.

ಒಂದು ವೇಳೆ ಅಗತ್ಯವಿದ್ದಲ್ಲಿ ರಾತ್ರಿಯ ವೇಳೆ ಯುವಿ/ಬ್ಲೂ ಲೈಟ್ ಫಿಲ್ಟರ್ ಇರುವ ಗ್ಲಾಸ್ ಗಳನ್ನು ಧರಿಸುವುದಕ್ಕೆ ಮುಜುಗರ ಪಟ್ಟುಕೊಳ್ಳಬೇಡಿ.

Best Mobiles in India

Read more about:
English summary
12 things you must do to prevent eye diseases caused by constant use of smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X