ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗ್ತಿದೆ ರೂ. 12,000ವರೆಗೂ ರಿಯಾಯಿತಿ

By GizBot Bureau
|

ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಾದ್ರೆ ಇತ್ತೀಚೆಗಷ್ಟೇ ತನ್ನ ಬೆಲೆಯಲ್ಲಿ ಇಳಿಕೆ ಕಂಡಿರುವ ಕೆಲವು ಫೋನ್ ಗಳ ಪಟ್ಟಿ ಇಲ್ಲಿದೆ ನೋಡಿ. ಬಜೆಟ್ ಸ್ಮಾರ್ಟ್ ಪೋನ್ ಗಳ ಜೊತೆಗೆ ಈ ಪಟ್ಟಿಯಲ್ಲಿ ಕೆಲವು ಫ್ಲ್ಯಾಗ್ ಶಿಪ್ ಪೋನ್ ಗಳ ಪಟ್ಟಿಯೂ ಇದೆ.

ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗ್ತಿದೆ ರೂ. 12,000ವರೆಗೂ ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8, ಸೋನಿ ಎಕ್ಸ್ ಪೀರಿಯಾ ಎಕ್ಸ್ ಝಡ್, ವಿವೋ ವಿ9 ಇತ್ಯಾದಿ. ಹಾಗಾದ್ರೆ ಬೆಲೆ ಇಳಿಕೆ ಕಂಡಿರುವ ಫೋನ್ ಗಳು ಯಾವುದು ಇಲ್ಲಿದೆ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8: ರೂಪಾಯಿ 55,900 (ಇಳಿಕೆಯಾದ ಬೆಲೆ ರೂಪಾಯಿ 12,000)

ಕಳೆದ ವರ್ಷ ಬಿಡುಗಡೆಗೊಂಡಿರುವ ಫ್ಲ್ಯಾಗ್ ಶಿಪ್ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಕೆಲವೇ ದಿನಗಳ ಮುಂಚೆ ಬೆಲೆ ಇಲಿಕೆ ಕಂಡಿದ್ದು 12,000 ರುಪಾಯಿ ಇಳಿಕೆಯಾಗಿದೆ. ಅಂದರೆ ಬಿಡುಗಡೆಗೊಂಡಾಗ ಇದರ ಬೆಲೆ 67,900 ರೂಪಾಯಿ ಆಗಿತ್ತು. ಸದ್ಯ ಈ ಫೋನ್ ಕೇವಲ 55,900 ರುಪಾಯಿಗೆ ಸಿಗುತ್ತದೆ. ಸ್ಯಾಮ್ ಸಂಗ್ ಗ್ಯಾಲಕ್ಸಿನೋಟ್ 8 ಡುಯಲ್ ಹಿಂಭಾಗದ ಕ್ಯಾಮರಾ ಹೊಂದಿದ್ದ ಮೊದಲ ಫೋನ್ ಆಗಿದೆ. ಇದು ಆಂಡ್ರಾಯ್ಡ್ Nougat ನಲ್ಲಿ ರನ್ ಆಗುತ್ತದೆ ಮತ್ತು ಕಂಪೆನಿಯ ಸ್ವಂತ ಪ್ರೊಸಸರ್ Exynos ನ್ನು ಹೊಂದಿದೆ. ಇದು 6ಜಿಬಿ ಮೆಮೊರಿ ಮತ್ತು 64ಜಿಬಿ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮತ್ತಷ್ ಹಿಗ್ಗಿಸಿಕೊಳ್ಳಲು ಅವಕಾಶವಿದೆ.

ನೋಕಿಯಾ 6.1: ಪ್ರಾರಂಭಿಕ ಬೆಲೆ 15,499ರೂಪಾಯಿ (ಇಳಿಕೆಯಾದ ಬೆಲೆ ರೂಪಾಯಿ 1,500)

ಇತ್ತೀಚೆಗೆ ಬಿಡುಗಡೆಗೊಂಡಿರುವ ಬಜೆಟ್ ಸ್ಮಾರ್ಟ್ ಫೋನ್ ನೋಕಿಯಾ 1500 ರೂಪಾಯಿ ಬೆಲೆ ಇಳಿಕೆ ಕಂಡಿದೆ. 3GB RAM ಮತ್ತು 4GB RAM ಎರಡೂ ವರ್ಷನ್ ನ ಫೋನ್ ಬೆಲೆಯೂ ಕೂಡ 1500 ರೂಪಾಯಿ ಇಳಿಕೆಯಾಗಿದ್ದು ಈಗ ಕ್ರಮವಾಗಿ 15,499 ಮತ್ತು 17,499 ರೂಪಾಯಿ ಬೆಲೆಗೆ ಸಿಗುತ್ತದೆ. ಇದರಲ್ಲಿ 5.5-ಇಂಚಿನ ಫುಲ್ HD ಡಿಸ್ಪ್ಲೇ ಜೊತೆಗೆ ಕ್ವಾಲಂಕ್ ಸ್ನ್ಯಾಪ್ ಡ್ರ್ಯಾಗನ್ 630 ಪ್ರೊಸೆಸರ್ ನ್ನು ಹೊಂದಿದೆ.3000mAh ಬ್ಯಾಟರಿ ಸೌಲಭ್ಯವಿದ್ದು 16ಎಂಪಿ ಹಿಂಭಾಗದ ಕ್ಯಾಮರಾವು LED ಫ್ಲ್ಯಾಶ್ ಲೈಟ್ ಸೌಲಭ್ಯದಿಂದ ಬರುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6+:ರೂಪಾಯಿ 23,990 (ಇಳಿಕೆಯಾದ ಬೆಲೆ ರೂಪಾಯಿ2,000)

ಬಿಡುಗಡೆಗೊಂಡ ಎರಡೇ ತಿಂಗಳಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6+ ಸ್ಮಾರ್ಟ್ ಫೋನಿನ ಬೆಲೆಯು ಇಳಿಕೆ ಕಂಡಿದ್ದು 25,990 ರೂಪಾಯಿಗೆ ಬಿಡುಗಡೆಗೊಂಡಿದ್ದ ಫೋನ್ 2000 ರೂಪಾಯಿಯ ಬೆಲೆ ಇಳಿಕೆಯಲ್ಲಿ 23,990 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಓರಿಯೋ ಮೂಲಕ ರನ್ ಆಗುತ್ತದೆ 6ಇಂಚಿನ ಫುಲ್-HD+ ಡಿಸ್ಪ್ಲೇಯನ್ನು ಹೊಂದಿದೆ.ಈ ಡಿವೈಸ್ Qualcomm Snapdragon 450 ಪ್ರೊಸೆಸರ್ ನಿಂದ ಪವರ್ ಆಗಿದ್ದು ಇದರಲ್ಲಿ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ. 3500mAh ಬ್ಯಾಟರಿಯನ್ನು ಇದು ಒಳಗೊಂಡಿದ್ದು ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6: ರೂಪಾಯಿ 20,890 (ಇಳಿಕೆಯಾದ ಬೆಲೆ ರೂಪಾಯಿ2,100)

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6+ ಜೊತೆಗೆ ಗ್ಯಾಲಕ್ಸಿ ಎ6 ಕೂಡ ಬಿಡುಗಡೆಗೊಂಡಿತ್ತು. ಗ್ಯಾಲಕ್ಸಿ ಎ 6 ನ ಬೆಲೆಯು 22,990 ರೂಪಾಯಿಗೆ ಬಿಡುಗಡೆಯಾಗಿದ್ದು ಇದೀಗ 2,100 ರೂಪಾಯಿ ಬೆಲೆ ಇಳಿಕೆಯಾಗಿದೆ ಮತ್ತು 20,890 ರುಪಾಯಿ ಬೆಲೆಗೆ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಡಿವೈಸ್ Exynos 7870 SoC ನಿಂದ ಪವರ್ಡ್ ಆಗಿದ್ದು 5.6-ಇಂಚಿನ HD+ ಸೂಪರ್ AMOLED ಇನ್ಫಿಟಿನಿ ಡಿಸ್ಪ್ಲೇ ಜೊತೆಗೆ 18:5:9 ಅನುಪಾತವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ 3000mAh ಬ್ಯಾಟರಿಯನ್ನು ಹೊಂದಿದೆ.4ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಇನ್ನಷ್ಟು ಹಿಗ್ಗಿಸಿಕೊಳ್ಳಲು ಅವಕಾಶವಿದೆ.

ವಿವೋ ವಿ9: ರೂಪಾಯಿ 20,990 (ಇಳಿಕೆಯಾದ ಬೆಲೆ ರೂಪಾಯಿ2,000)

ವಿವೋ ವಿ9 2000 ರುಪಾಯಿಯ ಬೆಲೆ ಇಳಿಕೆ ಕಂಡಿದ್ದು 22,990 ಗೆ ಬಿಡುಗಡೆಗೊಂಡಿದ್ದ ಈ ಫೋನ್ ಸದ್ಯ 20,990 ರುಪಾಯಿಗೆ ಲಭ್ಯವಾಗುತ್ತದೆ.ಇದು.3-ಇಂಚಿನ ಫುಲ್ HD+ ಐಫೋನ್ ಎಕ್ಸ್ ನಂತಹ ನಾಚ್ ಸ್ಕ್ರೀನ್ ಡಿಸ್ಪ್ಲೇ ಮತ್ತು Qualcomm Snapdragon 626 ಪ್ರೊಸೆಸರ್ ನ್ನು ಹೊಂದಿದೆ. ಇದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. 24ಎಂಪಿ ಸೆಲ್ಫೀ ಕ್ಯಾಮರಾ ಜೊತೆಗೆ ಫೇಸ್ ಅನ್ ಲಾಕ್ ತಂತ್ರಜ್ಞಾನವನ್ನು ಹೊಂದಿದೆ. ಹಿಂಭಾಗದಲ್ಲಿ16MP+5MP ಎರಡು ಮಾಡ್ಯೂಲ್ ನ ಕ್ಯಾಮರಾವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿಜೆ4: ರೂಪಾಯಿ 9,990 (ಇಳಿಕೆಯಾದ ಬೆಲೆ ರೂಪಾಯಿ500)

ಸ್ಯಾಮ್ ಸಂಗ್ ಗ್ಯಾಲಕ್ಸಿಜೆ4 500 ರೂಪಾಯಿ ಬೆಲೆ ಇಳಿಕೆ ಕಂಡಿದೆ. 9,990 ರುಪಾಯಿಗೆ ಬಿಡುಗಡೆಗೊಂಡಿದ್ದ ಈ ಪೋನ್ ಸದ್ಯ 9,490 ರುಪಾಯಿ ಬೆಲೆಗೆ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 5.5-ಇಂಚಿನ HD ಡಿಸ್ಪ್ಲೇ ಜೊತೆಗೆ ತನ್ನದೇ ಕಂಪೆನಿಯ ಸ್ವಂತ Exynos 7570 quad-core ಪ್ರೊಸೆಸರ್ ನ್ನು ಒಳಗೊಂಡಿದೆ. ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. 3GB ಮೆಮೊರಿ ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಇದು ಹೊಂದಿದೆ.

ವಿವೋ ವಿ9 ಯ್ಯೂತ್: ರೂಪಾಯಿ 16,990 (ಇಳಿಕೆಯಾದ ಬೆಲೆ ರೂಪಾಯಿ2,000)

18,990 ರುಪಾಯಿಗೆ ಬಿಡುಗಡೆಗೊಂಡಿದ್ದ ವಿವೋ ವಿ9 ಸದ್ಯ 2000 ರುಪಾಯಿಯ ಬೆಲೆ ಇಳಿಕೆ ಕಂಡಿದ್ದು 16,990 ರೂಪಾಯಿ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು 6.3-ಇಂಚಿನ ಫುಲ್ ವ್ಯೂ ಡಿಸ್ಪ್ಲೇ ಜೊತೆಗೆ Qualcomm Snapdragon 450 ಆಕ್ಟಾ-ಕೋರ್- ಪ್ರೊಸೆಸರ್ ನ್ನು ಹೊಂದಿದೆ. 4GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿರುವ ಈ ಫೋನಿನ ಬ್ಯಾಟರಿ ಸಾಮರ್ಥ್ಯವು 3260mAh ಆಗಿದೆ. 16ಎಂಪಿ ಸೆಲ್ಫೀ ಕ್ಯಾಮರಾ ಮತ್ತು 16MP+2MP ಎರಡು ಹಿಂಭಾಗದ ಕ್ಯಾಮರಾವನ್ನು ಇದು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7 ಡುಯೋ: ರೂಪಾಯಿ 14,990 (ಇಳಿಕೆಯಾದ ಬೆಲೆ ರೂಪಾಯಿ2,000)

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7 ಡುಯೋ ಮಾರಾಟದ ಬೆಲೆ 14,990 ಆಗಿದ್ದು 2000 ರುಪಾಯಿ ಇಳಿಕೆ ಕಂಡಿದೆ. ಈ ಫೋನ್ ಬಿಡುಗಡೆಗೊಂಡಾಗ ಇದರ ಬೆಲೆ 16,990 ರೂಪಾಯಿ ಆಗಿತ್ತು.ಈ ಡಿವೈಸ್ 4GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದ್ದು 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಲು ಅವಕಾಶವಿದೆ. ಈ ಡಿವೈಸ್ ನ ಬ್ಯಾಟರಿ ಸಾಮರ್ಥ್ಯ 3000mAh ಆಗಿದ್ದು 5.5-ಇಂಚಿನ HD ಡಿಸ್ಪ್ಲೇ ಜೊತೆಗೆ 720x1280 ಪಿಕ್ಸಲ್ ರೆಸಲ್ಯೂಷನ್ ನ್ನು ಇದು ಹೊಂದಿದೆ.

ಬ್ಲಾಕ್ ಬೆರ್ರಿ ಕೀ ಒನ್: ರೂಪಾಯಿ 33,975 (ಇಳಿಕೆಯಾದ ಬೆಲೆ ರೂಪಾಯಿ6,024)

ಬ್ಲಾಕ್ ಬೆರಿ ಫ್ಲಾಗ್ ಶಿಪ್ ಫೋನ್ ಬ್ಲಾಕ್ ಬೆರ್ರಿ ಕೀ 2 ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಇದರ ಜೊತೆಗೆ ಕಳೆದ ವರ್ಷ ಬಿಡುಗಡೆಯಾದ ಬ್ಲಾಕ್ ಬೆರ್ರಿ ಕೀ ಒನ್ ಫೋನಿನ ಬೆಲೆಯು ಇಳಿಕೆಯಾಗಿದ್ದು ಸದ್ಯ 33,975 ರುಪಾಯಿಗೆ ಲಭ್ಯವಾಗುತ್ತಿದೆ. ಬಿಡುಗಡೆಗೊಂಡಾಗ ಇದರ ಬೆಲೆ 39,999 ರುಪಾಯಿ ಆಗಿತ್ತು ಮತ್ತು ಸದ್ಯ 6,024 ರುಪಾಯಿ ಇಳಿಕೆಯನ್ನು ಇದು ಕಂಡಿದೆ. 4.5- ಇಂಚಿನ ಸ್ಕ್ರ್ಯಾಚ್ ರೆಸಿಸ್ಟೆನ್ಸ್ ಫುಲ್-HD ಡಿಸ್ಪ್ಲೇಯನ್ನು ಇದು ಹೊಂದಿದ್ದು ಜೊತೆಗೆ 1080x1620 ಪಿಕ್ಸಲ್ ರೆಸಲ್ಯೂಷನ್ ನ್ನು ಇದು ಒಳಗೊಂಡಿದೆ.ಇದನ್ನು ಹೊರತು ಪಡಿಸಿ QWERTY ಕೀಬೋರ್ಡ್ ನ್ನು ಇದು ಹೊಂದಿದೆ. Qualcomm Snapdragon 625 ಪ್ರೊಸೆಸರ್ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಪೇರ್ ಆಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7 ನೆಕ್ಸ್ಟ್: ರೂಪಾಯಿ 10,990 (ಇಳಿಕೆಯಾದ ಬೆಲೆ ರೂಪಾಯಿ2,000)

32GB ವರ್ಷನ್ ನ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7 ನೆಕ್ಸ್ಟ್ 2,000 ರುಪಾಯಿ ಬೆಲೆ ಇಳಿಕೆ ಕಂಡಿದ್ದು ಬಿಡುಗಡೆಗೊಂಡಾಗ ಇದ್ದ 12,990 ರೂಪಾಯಿಯಿಂದ ಈಗ 10,990 ರೂಪಾಯಿ ಬೆಲೆಗೆ ಖರೀದಿಸಲು ಅವಕಾಶವಿದೆ. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 7.1 Nougat ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ. 1.6GHz ಆಕ್ಟಾ ಕೋರ್ ಪ್ರೊಸೆಸರ್ ನ್ನು ಇದು ಹೊಂದಿದೆ. ಇದು 5.5-ಇಂಚಿನ HD ಡಿಸ್ಪ್ಲೇ ಜೊತೆಗೆ 720x1280 ಪಿಕ್ಸಲ್ ರೆಸಲ್ಯೂಷನ್ ಹೊಂದಿದೆ ಮತ್ತು 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿದೆ.

ಸೋನಿ ಎಕ್ಸ್ ಪೀರಿಯಾ XZs: ರೂಪಾಯಿ 29,990 (ಇಳಿಕೆಯಾದ ಬೆಲೆ ರೂಪಾಯಿ10,000)

ಹೈ ಎಂಡ್ ಸ್ಮಾರ್ಟ್ ಫೋನ್ ಆಗಿರುವ ಸೋನ್ ಎಕ್ಸ್ ಪೀರಿಯಾ XZs ನಲ್ಲೂ ಕೂಡ ಬೆಲೆ ಇಳಿಕೆಯಾಗಿದ್ದು 39,990 ರುಪಾಯಿಗೆ ಬಿಡುಗಡೆ ಕಡಿದ್ದ ಈ ಫೋನ್ 10,000 ರೂಪಾಯಿ ಬೆಲೆ ಇಳಿಕೆಯಾಗಿದ್ದು ಸದ್ಯ 29,990 ರುಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಳೆದ ವರ್ಷದ ಎಪ್ರಿಲ್ ನಲ್ಲಿ ಈ ಫೋನ್ ಬಿಡುಗಡೆಗೊಳಿಸಲಾಗಿತ್ತು. 5.2-ಇಂಚಿನ ಫುಲ್ HD TRILUMINOS IPS LCD ಡಿಸ್ಪ್ಲೇ ಜೊತೆಗೆ 1080x1920 ಪಿಕ್ಸಲ್ ರೆಸಲ್ಯೂಷನ್ ನ್ನು ಇದು ಹೊಂದಿದೆ. Qualcomm Snapdragon 820 ಪ್ರೊಸೆಸರ್ ಜೊತೆಗೆ 4GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು 256ಜಿಬಿ ವರೆಗೆ ಹಿಗ್ಗಿಸಿಕೊಳ್ಳಲು ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 (2018): ರೂಪಾಯಿ 7,690 (ಇಳಿಕೆಯಾದ ಬೆಲೆ ರೂಪಾಯಿ500)

ಬಜೆಟ್ ಸ್ಮಾರ್ಟ್ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 (2018) ನ ಇಳಿಕೆಯಾದ ಬೆಲೆ ರೂಪಾಯಿ 500. ಇದು ಬಿಡುಗಡೆಗೊಂಡಾಗ ಇದರ ಮಾರುಕಟ್ಟೆ ಮೌಲ್ಯ 8,190 ಆಗಿತ್ತು ಮತ್ತು ಸದ್ಯ 7,690 ರುಪಾಯಿ ಬೆಲೆಗೆ ಮಾರಕಟ್ಟೆಯಲ್ಲಿ ಲಭ್ಯವಿದೆ. The ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 (2018) ಇದು Qualcomm Snapdragon ಪ್ರೊಸೆಸರ್ ನ್ನು ಹೊಂದಿದೆ ಮತ್ತು 2ಜಿಬಿ RAM ಮತ್ತು 16GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿದೆ.

ಸೋನಿ ಎಕ್ಸ್ ಪೀರಿಯಾ ಆರ್1: ರೂಪಾಯಿ 9,990 (ಇಳಿಕೆಯಾದ ಬೆಲೆ ರೂಪಾಯಿ1,000)

ಬಜೆಟ್ ಸ್ಮಾರ್ಟ್ ಫೋನ್ ಸೋನಿ ಎಕ್ಸ್ ಪೀರಿಯಾ 1,000 ರುಪಾಯಿ ಬೆಲೆ ಇಳಿಕೆ ಕಂಡಿದ್ದು ಸದ್ಯ 9,990 ರುಪಾಯಿಗೆ ಖರೀದಿಸುವ ಅವಕಾಶವಿದೆ. ಬಿಡುಗಡೆಗೊಂಡಾಗ ಈ ಫೋನಿನ ಬೆಲೆ 10,990 ರೂಪಾಯಿ ಇತ್ತು. ಈ ಸ್ಮಾರ್ಟ್ ಫೋನ್ 5.2-ಇಂಚಿನ HD ಡಿಸ್ಪ್ಲೇ ಜೊತೆಗೆ Qualcomm Snapdragon 430 ಪ್ರೊಸೆಸರ್ ನ್ನು ಹೊಂದಿದೆ. 2GB RAM ಮತ್ತು 16GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿಜೆ2 (2017): ರೂಪಾಯಿ 6,190 (ಇಳಿಕೆಯಾದ ಬೆಲೆ ರೂಪಾಯಿ1,200)

ಕಳೆದ ವರ್ಷ ಬಿಡುಗಡೆಯಾಗಿದ್ದು ಈ ಸ್ಯಾಮ್ ಸಂಗ್ ಗ್ಯಾಲಕ್ಸಿಜೆ2 (2017) ಫೋನ್ 1,200 ರುಪಾಯಿ ಬೆಲೆ ಇಳಿಕೆಯನ್ನು ಕಂಡಿದೆ. 7,390 ರುಪಾಯಿ ಬೆಲೆ ನಿಗದಿಯಾಗಿದ್ದ ಈ ಫೋನ್ ಸದ್ಯ 6,190 ರುಪಾಯಿ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. 4.7-ಇಂಚಿನHD ಡಿಸ್ಪ್ಲೇ ಜೊತೆಗೆ 540x960 ಪಿಕ್ಸಲ್ ರೆಸಲ್ಯೂಷನ್ ನ್ನು ಇದು ಹೊಂದಿದೆ. ಕಂಪೆನಿಯ ಸ್ವಂತ ಪ್ರೊಸೆಸರ್ 1.3GHz quad-core Exynos ನ್ನು ಇದು ಹೊಂದಿದೆ. 1GB RAM ಮತ್ತು 8GB ಇಂಟರ್ನಲ್ ಸ್ಟೋರೇಜ್ ಇದು ಮೈಕ್ರೋ ಎಸ್ ಡಿ ಕಾರ್ಡ್ ಕೂಡ ಬಳಕೆ ಮಾಡಬಹುದು.

ಸೋನಿ ಎಕ್ಸ್ ಪೀರಿಯಾ ಎಲ್2: ರೂಪಾಯಿ 14,990 (ಇಳಿಕೆಯಾದ ಬೆಲೆ ರೂಪಾಯಿ5,000)

ಮಿಡ್ ರೇಂಜಿನ ಸೋನಿ ಎಕ್ಸ್ ಪೀರಿಯಾ ಎಲ್2 5,000 ರುಪಾಯಿ ಬೆಲೆ ಇಳಿಕೆ ಕಂಡಿದೆ. 19,990 ರುಪಾಯಿ ಬೆಲೆಗೆ ಬಿಡುಗಡೆಗೊಂಡಿದ್ದ ಈ ಪೋನ್ ಸದ್ಯ 14,990 ರುಪಾಯಿ ಬೆಲೆಗೆ ಲಭ್ಯವಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೊಗೊಂಡಿದ್ದ ಈ ಫೋನ್ 1.5GHz quad-core ಮೀಡಿಯಾ ಟೆಕ್ MT6737T ಪ್ರೊಸೆಸರ್ ನ್ನು ಹೊಂದಿದೆ. 5.5-ಇಂಚಿನ HD ಡಿಸ್ಪ್ಲೇ ಜೊತೆಗೆ 720x1280 ಪಿಕ್ಸಲ್ ರೆಸಲ್ಯೂಷನ್ ಇದೆ. 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ನ್ನು ಹೊಂದಿದ್ದು ಮೆಮೊರಿ ಕಾರ್ಡ್ ಕೂಡ ಬೆಂಬಲ ನೀಡುತ್ತದೆ.

ಓಪೋ ಎಫ್7: ರೂಪಾಯಿ 19,990 (ಇಳಿಕೆಯಾದ ಬೆಲೆ ರೂಪಾಯಿ3,000)

ಓಪೋ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಓಪೋ ಎಫ್ 7 ಈ ವರ್ಷದ ಆರಂಭದಲ್ಲಿ 22,990 ರುಪಾಯಿ ಬೆಲೆಗೆ ಬಿಡುಗಡೆಯಾಗಿತ್ತು ಮತ್ತು ಸದ್ಯ 3,000 ರುಪಾಯಿ ಬೆಲೆ ಇಳಿಕೆಯಾಗಿ 19,990 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ. ಈ ಹ್ಯಾಂಡ್ ಸೆಟ್ ನಲ್ಲಿ bezel-less 6.23-ಇಂಚಿನ ಫುಲ್ HD+ ಡಿಸ್ಪ್ಲೇ ಇದೆ ಮತ್ತು ಮೀಡಿಯಾ ಟೆಕ್ ಹೆಲಿಯೋ ಪಿ60 ಆಕ್ಟಾ ಕೋರ್ ಪ್ರೊಸೆಸರ್ ನ್ನು ಇದು ಹೊಂದಿದೆ. ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ ಮತ್ತು 25ಎಂಪಿ ಸೆಲ್ಫೀ ಕ್ಯಾಮರಾ ಜೊತೆಗೆ AI Beauty Technology 2.0ನ್ನು ಇದು ಒಳಗೊಂಡಿದೆ.

ಹಾನರ್ 7ಎಕ್ಸ್: ಪ್ರಾರಂಭಿಕ ಬೆಲೆ 11,999 ( ಇಳಿಕೆಯಾದ ಬೆಲೆ ರೂಪಾಯಿ1,000)

ಹುವಾಯಿ ಸಬ್ ಬ್ರ್ಯಾಂಡ್ ಆಗಿರುವ ಹಾನರ್ ಹಾನರ್ 7ಎಕ್ಸ್ ನ ಬೆಲೆಯನ್ನು ಭಾರತದಲ್ಲಿ ಕಡಿಮೆ ಮಾಡುವುದಾಗಿ ಪ್ರಕಟಿಸಿದೆ. 12,999 ರುಪಾಯಿ ಬೆಲೆಗೆ ಬಿಡುಗಡೆ ಕಂಡಿರುವ ಈ ಫೋನಿನ ಬೆಲೆಯಲ್ಲಿ 1,000 ರುಪಾಯಿ ಇಳಿಕೆಯಾಗಲಿದ್ದು 11,999 ರುಪಾಯಿ ಬೆಲೆಗೆ ಗ್ರಾಹಕರು ಇನ್ನು ಮುಂದೆ ಖರೀದಿಸಲು ಅವಕಾಶವಿರುತ್ತದೆ. ಈ ಡಿವೈಸ್ ನ ವೈಶಿಷ್ಟ್ಯತೆಯೆಂದರೆ 5.93-ಇಂಚಿನ ಫುಲ್ HD+ ‘ಫುಲ್ ವ್ಯೂ' ಡಿಸ್ಪ್ಲೇಮತ್ತು octa-core HiSilicon Kirin 659 ಪ್ರೊಸೆಸರ್ ನ್ನು ಇದು ಹೊಂದಿದೆ. 3340mAh ಸಾಮರ್ಥ್ಯದ ಬ್ಯಾಟರಿಯನ್ನು ಇದು ಹೊಂದಿದ್ದು ಡುಯಲ್ ಹಿಂಭಾಗ ಕ್ಯಾಮರಾ ಸೆಟ್ ಅಪ್ ನ್ನು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7 ಪ್ಲೋ: ರೂಪಾಯಿ 16,900 (ಇಳಿಕೆಯಾದ ಬೆಲೆ ರೂಪಾಯಿ4,000)

ಸ್ಯಾಮ್ ಸಂಗ್ ಗ್ಯಾಲಕ್ಸಿಜೆ7 ಪ್ರೋ 4,000 ರುಪಾಯಿ ಬೆಲೆ ಇಳಿಕೆ ಕಂಡಿದೆ. 20,900 ರುಪಾಯಿಗೆ ಬಿಡುಗಡೆಗೊಂಡಿದ್ದ ಈ ಫೋನ್ ಈಗ 16,900 ರುಪಾಯಿಗೆ ಲಭ್ಯವಾಗುತ್ತದೆ. ಇದು 5.5-ಇಂಚಿನ ಫುಲ್-HD ಡಿಸ್ಪ್ಲೇ ಆಕ್ಟಾ-ಕೋರ್ Exynos 7870 ಪ್ರೊಸೆಸರ್ ಜೊತೆಗೆ 3GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಇದೆ. ಆಂಡ್ರಾಯ್ಡ್ 7.0 Nougat ಆಪರೇಟಿಂಗ್ ಸಿಸ್ಟಮ್ ಮುಖಾಂತರ ಇದು ರನ್ ಆಗುತ್ತದೆ. 13ಎಂಪಿ ಪ್ರೈಮರಿ ಕ್ಯಾಮರಾ ಮತ್ತು ಸೆಕೆಂಡರಿ ಕ್ಯಾಮರಾವನ್ನು ಇದು ಹೊಂದಿದೆ.

ಎಲ್ ಜಿ ವಿ30+: ರೂಪಾಯಿ 41,990 (ಇಳಿಕೆಯಾದ ಬೆಲೆ ರೂಪಾಯಿ3,000)

ಎಲ್ ಜಿ ವಿ 30+ ಫ್ಲ್ಯಾಗ್ ಶಿಪ್ ಪೋನ್ ಆಗಿದ್ದು ಕಳೆದ ವರ್ಷದ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿದೆ.44,990 ರುಪಾಯಿ ಬೆಲೆಗೆ ಬಿಡುಗಡೆ ಕಂಡಿದ್ದ ಈ ಫೋನಿನ ಬೆಲೆಯಲ್ಲಿ 3,000 ರುಪಾಯಿ ಬೆಲೆ ಇಳಿಕೆಯಾಗಿದ್ದು ಸದ್ಯ 41,990 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ. ಇದು ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 825 ಪ್ರೊಸೆಸರ್ ನ್ನು ಒಳಗೊಂಡಿದೆ. ಆಂಡ್ರಾಯ್ಡ್ Nougat ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುವ ಈ ಫೋನ್ 3300mAh ಬ್ಯಾಟರಿಯನ್ನು ಹೊಂದಿದೆ ಜೊತೆಗೆ ಕ್ವಾಲ್ಕಂ ಕ್ವಿಕ್ ಚಾರ್ಜ್ 3.0 ಮತ್ತು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ6: ರೂಪಾಯಿ 15,890 (ಇಳಿಕೆಯಾದ ಬೆಲೆ ರೂಪಾಯಿ 600)

ಸ್ಯಾಮ್ ಸಂಗ್ ಗ್ಯಾಲಕ್ಸಿಜೆ6 ಮತ್ತೊಂದು ಬಜೆಟ್ ಸ್ಮಾರ್ಟ್ ಫೋನ್ ಆಗಿದ್ದು 16,490 ರುಪಾಯಿಗೆ ಬಿಡುಗಡೆಯಾಗಿತ್ತು.ಈಗ 600 ರುಪಾಯಿ ಬೆಲೆ ಇಳಿಕೆ ಕಂಡಿದ್ದು 15,890 ರುಪಾಯಿಗೆ ಸಿಗುತ್ತದೆ. ಈ ಸ್ಮಾರ್ಟ್ ಫೋನ್ 5.6-ಇಂಚಿನ HD+ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಹೊಂದಿದೆ. ಎರಡು ಹಿಂಭಾಗದ ಕ್ಯಾಮರಾ ಹೊಂದಿದ್ದು 13MP ಮತ್ತು 5MP ಸಾಮರ್ಥ್ಯವಿದೆ. ಮುಂಭಾಗದ ಕ್ಯಾಮರಾ 8ಎಂಪಿ ಸಾಮರ್ಥ್ಯವನ್ನು ಹೊಂದಿದ್ದು 3,000 mAh ಬ್ಯಾಟರಿಯನ್ನು ಇದು ಹೊಂದಿದೆ. 4GB ಮೆಮೊರಿ ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
20 smartphones that got price cuts of up to Rs 12,000 recently. To know more this visit kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more