ಮುಂದಿನ ನಿಮ್ಮ ಫೋನ್ ನಲ್ಲಿ ಸ್ಟಾಕ್ ಆಂಡ್ರಾಯ್ಡ್ ಬಳಸಬೇಕು ಎಂಬುದಕ್ಕೆ 5 ಪ್ರಮುಖ ಕಾರಣಗಳು

By Gizbot Bureau
|

ಆಂಡ್ರಾಯ್ಡ್ ಒಂದು ಉತ್ತಮ ದರ್ಜೆಯಲ್ಲಿರುವ ಆಪರೇಟಿಂಗ್ ಸಿಸ್ಟಮ್ ಆಗಿದ್ದರೂ ಕೂಡ ಹೆಚ್ಚಿನ ಮಂದಿಗೆ ಸ್ಟಾಕ್ ಆಂಡ್ರಾಯ್ಡ್ ಮತ್ತು ಇತರೆ ಹಲವಾರು ಆಪರೇಟಿಂಗ್ ಸಿಸ್ಟಮ್ ಗಳ ವರ್ಷನ್ ಬಗ್ಗೆ ತಿಳಿದೇ ಇಲ್ಲ. ಹಾಗಾಗಿ, ನೀವು ಹಲವಾರು ರೀತಿಯ ಸ್ಟಾಕ್ ಆಂಡ್ರಾಯ್ಡ್ ನ ಲಾಭಗಳನ್ನು ಕಳೆದುಕೊಳ್ಳುತ್ತೀರಿ.ಸ್ಟಾಕ್ ಆಂಡ್ರಾಯ್ಡ್ ಎನ್ನುವುದು ಗೂಗಲ್ ಬಿಡುಗಡೆಗೊಳಿಸಿರುವ ಶುದ್ಧ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಆಗಿದೆ.

ಸ್ಮಾರ್ಟ್ ಫೋನ್

ಇದನ್ನು ಸ್ಮಾರ್ಟ್ ಫೋನ್ ತಯಾರಕರು ಬದಲಾಯಿಸುವುದಕ್ಕೆ ಅವಕಾಶವಿರುವುದಿಲ್ಲ. ಆದರೆ ಮೂಲ ಸಾಧನದ ತಯಾರಕರು ಆಂಡ್ರಾಯ್ಡ್ ವರ್ಷನ್ ನ್ನು ಕಸ್ಟಮೈಸ್ ಮಾಡುವುದಕ್ಕೆ ಅವಕಾಶ ಹೊಂದಿರುತ್ತಾರೆ. ಉದಾಹರಣೆಗೆ ಸ್ಯಾಮ್ ಸಂಗ್ ನ ನೋಟ್ 10 ಮತ್ತು ಎಸ್ 10 ಆಂಡ್ರಾಯ್ಡ್ ಓಎಸ್ ನ ಕಸ್ಟಮೈಸ್ ಮಾಡಿದ್ದು ಅದನ್ನು ಸ್ಯಾಮ್ ಸಂಗ್ ಒನ್ ಯುಐ ಎಂದು ಕರೆಯಲಾಗುತ್ತದೆ. ಈ ಓಎಶ್ ನಲ್ಲಿ ಆಪ್ ಗಳು, ಡ್ರೈವರ್ ಗಳು, ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಬಿಡುಗಡೆಗೊಳ್ಳದ ಅತೀ ಹೆಚ್ಚು ಸಾಫ್ಟ್ ವೇರ್ ಗಳು ಇದರಲ್ಲಿ ಸೇರಿವೆ.

2019 ರಲ್ಲಿ ಹಲವು ಆಂಡ್ರಾಯ್ಡ್ ತಯಾರಕರು ಈಗಲೂ ಕೂಡ ಕಸ್ಟ್ ಮೈಜ್ ಮಾಡಿರುವ ಆಪರೇಟಿಂಗ್ ಸಿಸ್ಟಮ್ ನ ವರ್ಷನ್ ನ್ನು ಬಳಕೆ ಮಾಡುತ್ತಾರೆ. ಒಂದು ವೇಳೆ ನಿಮ್ಮ ಫೋನಿನಲ್ಲಿ ಸ್ಟಾಕ್ ಆಂಡ್ರಾಯ್ಡ್ ಇಲ್ಲದೇ ಇದ್ದಲ್ಲಿ ನಿಮ್ಮ ಡಿವೈಸ್ ನ್ನು ರೂಟ್ ಮಾಡುವ ಮೂಲಕ ನೀವದನ್ನು ಪಡೆದುಕೊಳ್ಳಬಹುದು ಅಥವಾ ಸ್ಟಾಕ್ ಆಂಡ್ರಾಯ್ಡ್ ಅನುಭವ ನೀಡುವ ಆಪ್ಸ್ ಗಳನ್ನು ನೀವು ಬಳಕೆ ಮಾಡಬಹುದು. ಬ್ರಾಂಡೆಡ್ ವರ್ಷನ್ ನ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡುವುದಕ್ಕಿಂತ ಸ್ಟಾಕ್ ಆಂಡ್ರಾಯ್ಡ್ ಬಳಕೆಯಿಂದ ಆಗುವ ಕೆಲವು ಪ್ರಮುಖವಾದ ಮತ್ತು ನೈಜವಾಗಿರುವ ಲಾಭಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಸ್ಟಾಕ್ ಆಂಡ್ರಾಂಯ್ಡ್ ಅನೇಕ ಭದ್ರತಾ ಲಾಭಗಳನ್ನು ಒದಗಿಸುತ್ತದೆ:

ಸ್ಟಾಕ್ ಆಂಡ್ರಾಂಯ್ಡ್ ಅನೇಕ ಭದ್ರತಾ ಲಾಭಗಳನ್ನು ಒದಗಿಸುತ್ತದೆ:

ಆಂಡ್ರಾಯ್ಡ್ ನಲ್ಲಿರುವ ಅತೀ ದೊಡ್ಡ ಸಮಸ್ಯೆಯೆಂದರೆ ಮಾಲ್ವೇರ್ ಗಳು ಮತ್ತು ಭದ್ರತಾ ಸಮಸ್ಯೆಗಳು. ಮಾಡಿಫೈ ಮಾಡಲಾಗಿರುವ ಆಂಡ್ರಾಯ್ಡ್ ವರ್ಷನ್ ಗಿಂತ ಗೂಗಲ್ ನಲ್ಲಿ ಅತೀ ವೇಗವಾಗಿ ಈ ಪ್ಯಾಚ್ ಗಳನ್ನು ಸರಿಮಾಡಲಾಗುತ್ತದೆ.ಇತ್ತೀಚೆಗಿನ ವರ್ಷಗಳಲ್ಲಿ ಗೂಗಲ್, ಡಿವೈಸ್ ಗಳ ಸೆಕ್ಯುರಿಟಿ ಪ್ಯಾಚ್ ಗಳನ್ನು ಬಿಡುಗಡೆಗೊಳಿಸುವಿಕೆಯಲ್ಲಿ ಬಹಳ ಅಭಿವೃದ್ಧಿಯನ್ನು ಸಾಧಿಸಿದೆ. ಹಾಗಾಗಿ ಸರಿಯಾದ ಸಮಯಕ್ಕೆ ನೂತನ ಸೆಕ್ಯುರಿಟಿ ಅಪ್ ಡೇಟ್ ಪಡೆಯುವುದಕ್ಕಾಗಿ ನೈಜವಾದ ಆಂಡ್ರಾಯ್ಡ್ ವರ್ಷನ್ ಬಳಕೆ ಮಾಡುವುದು ಬಹಳ ಒಳ್ಳೆಯದು.

ಆಂಡ್ರಾಯ್ಡ್ ಮತ್ತು ಗೂಗಲ್ ಆಪ್ಸ್ ಗಳ ಅಪ್ ಡೇಟ್ ಆಗಿರುವ ವರ್ಷನ್ ಇದರಲ್ಲಿ ಲಭ್ಯ:

ಆಂಡ್ರಾಯ್ಡ್ ಮತ್ತು ಗೂಗಲ್ ಆಪ್ಸ್ ಗಳ ಅಪ್ ಡೇಟ್ ಆಗಿರುವ ವರ್ಷನ್ ಇದರಲ್ಲಿ ಲಭ್ಯ:

ಬ್ರ್ಯಾಡೆಂಡ್ ವರ್ಷನ್ ನ ಆಂಡ್ರಾಯ್ಡ್ ನಲ್ಲಿ ತಯಾರಕರು ನೂತನ ವರ್ಷನ್ ನ ಓಎಸ್ ಬಿಡುಗಡೆಗೊಳಿಸುವುದರಲ್ಲಿ ಅತ್ಯಂತ ನಿಧಾನವಾಗಿರುತ್ತಾರೆ.ಹೆಚ್ಚಿನ ಗ್ರಾಹಕರು ಹೊಸ ವರ್ಷನ್ ಲಭ್ಯವಿದ್ದರೂ ಕೂಡ ಹಳೆಯ ವರ್ಷನ್ ನ್ನೇ ಬಹಳ ವರ್ಷಗಳ ಕಾಲ ಬಳಕೆ ಮಾಡಿ ಬಿಡುತ್ತಾರೆ. ಈ ಸಮಯದಲ್ಲಿ ನೂತನ ವರ್ಷನ್ ನ ಆಂಡ್ರಾಯ್ಡ್ ಪಡೆಯುವುದಕ್ಕೆ ಹೊಸ ಡಿವೈಸ್ ನ್ನೇ ಖರೀದಿಸಬೇಕಾಗುತ್ತದೆ. ಆದರೆ ಸ್ಟಾಕ್ ಆಂಡ್ರಾಯ್ಡ್ ನಲ್ಲಿ ನೂತನ ವರ್ಷನ್ ನ ಆಂಡ್ರಾಯ್ಡ್ ಮತ್ತು ಗೂಗಲ್ ಆಪ್ಸ್ ಗಳನ್ನು ಗೂಗಲ್ ಬಿಡುಗಡೆಗೊಳಿಸಿದ ಕೂಡಲೇ ಪಡೆದುಕೊಳ್ಳುತ್ತೀರಿ.

ಕಡಿಮೆ ಬ್ಲೋಟ್ ವೇರ್ ಮತ್ತು ಡುಪ್ಲಿಕೇಷನ್:

ಕಡಿಮೆ ಬ್ಲೋಟ್ ವೇರ್ ಮತ್ತು ಡುಪ್ಲಿಕೇಷನ್:

ಡಿವೈಸ್ ತಯಾರಕರು ಕಸ್ಟಮ್ ಸ್ಕಿನ್ ತಯಾರಿಸುವ ನಿಟ್ಟಿನಲ್ಲಿ ಹಲವು ರೀತಿಯ ಬದಲಾವಣೆಯನ್ನು ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಮಾಡುತ್ತಾರೆ.ಆದರೆ ನೀವು ಇದರಿಂದಾಗಿ ಸಾಕಷ್ಟು ನಕಲು ಪ್ರತಿಯನ್ನು ಹೊಂದುವಂತಾಗುತ್ತದೆ.ಗೂಗಲ್ ನಿಮ್ಮ ಉದ್ದೇಶಗಳಿಗಾಗಿ ಕ್ರೋಮ್ ನ್ನು ಒದಗಿಸುತ್ತದೆ ಆದರೆ ತಯಾರಕರು ನಿಮಗೆ ನೆಟ್ ವರ್ಕ್ ಬ್ರೌಸರ್ ನ್ನು ನೀಡುತ್ತಾರೆ. ಇದು ಅನಗತ್ಯ ಕ್ಲಟ್ಟರ್ ಗಳನ್ನು ಸೃಷ್ಟಿಸುತ್ತದೆ. ಹೆಚ್ಚಿನ ಈ ನಕಲು ಪ್ರತಿಯ ಆಪ್ ಗಳು ಬಳಕೆಗೆ ಅಗತ್ಯವಿರುವುದಿಲ್ಲ ಮತ್ತು ಅದನ್ನು ಅನ್ ಇನ್ಸ್ಟಾಲ್ ಮಾಡುವುದಕ್ಕೂ ಕೂಡ ಯಾವುದೇ ಆಯ್ಕೆಗಳಿರುವುದಿಲ್ಲ.

ಹೆಚ್ಚು ಸ್ಟೋರೇಜ್ ಮತ್ತು ಅತ್ಯುತ್ತಮ ಪ್ರದರ್ಶನ:

ಹೆಚ್ಚು ಸ್ಟೋರೇಜ್ ಮತ್ತು ಅತ್ಯುತ್ತಮ ಪ್ರದರ್ಶನ:

ಬ್ಲೋಟ್ ವೇರ್ ಗಳು ಡಿವೈಸ್ ನ ಬ್ಯಾಟರಿ ಲೈಫ್ ಮತ್ತು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಪ್ರಮುಖವಾಗಿ ಈ ಆಪ್ಸ್ ಗಳು ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುವಾಗ ಹೆಚ್ಚು ಪರಿಣಾಮ ಬೀರುತ್ತದೆ. ಬ್ಲೋಟ್ ವೇರ್ ಗಳು ನಿಮ್ಮ ಡಿವೈಸಿನ ಪ್ರದರ್ಶನವನ್ನು ನಿಧಾನಗೊಳಿಸುತ್ತದೆ ಮತ್ತು ತೊಂದರೆಗೆ ಸಿಲುಕಿಸುತ್ತದೆ. ಬ್ಲೋಟ್ ವೇರ್ ಆಪ್ಸ್ ಗಳನ್ನು ಅನ್ ಇನ್ಸ್ಟಾಲ್ ಮಾಡುವುದಕ್ಕೆ ಅವಕಾಶವಿಲ್ಲದೇ ಇರುವುದರಿಂದಾಗಿ ಆಂಡ್ರಾಯ್ಡ್ ನ ಬ್ರ್ಯಾಡೆಂಡ್ ವರ್ಷನ್ ನಲ್ಲಿ ಅತೀ ಹೆಚ್ಚು ಸ್ಟೋರೇಜ್ ವ್ಯವಸ್ಥೆ ಬೇಕಾಗುತ್ತದೆ. ಇದರ ಫಲಿತಾಂಶವಾಗಿ ಡಿವೈಸ್ ನಿಧಾನವಾಗುತ್ತದೆ. ಗೂಗಲ್ ಸಾಕಷ್ಟು ಆಂಡ್ರಾಯ್ಡ್ ಪ್ರದರ್ಶನವನ್ನು ಅಭಿವೃದ್ಧಿಗೊಳಿಸಿದ್ದು ಅದರಲ್ಲಿ ಬ್ಯಾಟರಿ ಆಪ್ಟಿಮೈಸೇಷನ್ ಕೂಡ ಸೇರಿದೆ.

ಉತ್ತಮ ಬಳಕೆದಾರರ ಆಯ್ಕೆ:

ಉತ್ತಮ ಬಳಕೆದಾರರ ಆಯ್ಕೆ:

ಮೊದಲಿಗೆ ಸ್ಟಾಕ್ ಆಂಡ್ರಾಯ್ಡ್ ಇತರೆ ಆಪರೇಟಿಂಗ್ ಸಿಸ್ಟಮ್ ಗಳಂತೆ ಕಾರ್ಯ ನಿರ್ವಹಿಸದ ಕಾರಣದಿಂದಾಗಿ ಟೀಕೆ ಮಾಡಲಾಯಿತು.ಆದರೆ ಇದೀಗ ಸ್ಟಾಕ್ ಆಂಡ್ರಾಯ್ಡ್ ಸಾಕಷ್ಟು ವಿಭಿನ್ನ ಆಪ್ಟಿಮೈಸೇಷನ್ ಮತ್ತು ಬಳಕೆಯೋಗ್ಯ ಶಾರ್ಟ್ ಕಟ್ ಗಳಿಂದಾಗಿ ನೂತನಗೊಂಡಿದೆ. ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕೆಲವು ಪ್ರಮುಖ ಆಪ್ ಗಳಿದ್ದು ನಿಮ್ಮ ಡಿವೈಸ್ ಗಾಗಿ ಅದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಸಾಕಷ್ಟು ಫೀಚರ್ ಗಳು ಲಭ್ಯವಿದ್ದು ಯಾವುದೇ ಸಮಸ್ಯೆ ಇಲ್ಲದ ಕಾರಣ ಹೆಚ್ಚಿನ ಮಂದಿ ತಮ್ಮ ಡಿವೈಸ್ ಗಳಲ್ಲಿ ನೈಜ ಆಂಡ್ರಾಯ್ಡ್ ಅನುಭವವನ್ನು ಒದಗಿಸುವಂತೆ ಇದೀಗ ತಯಾರಕರಿಗೆ ಹೇಳುತ್ತಿದ್ದಾರೆ.

Best Mobiles in India

Read more about:
English summary
Even though Android is the top-rated used operating system in today’s market, most people don’t know about the stock Android and other different versions of the OS. Therefore, you miss out on several benefits of stock Android.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X