ಶ್ಯೋಮಿ ರೆಡ್ಮೀ ನೋಟ್ 3 ಯನ್ನು ಹಿಂದಿಕ್ಕಿದ ಹೋನರ್ 5ಸಿ

  By Shwetha
  |

  ಹುವಾವೆಯ ಆನ್‌ಲೈನ್ ನಿರ್ದಿಷ್ಟ ಬ್ರ್ಯಾಂಡ್, ಹೋನರ್ ತನ್ನ ಹೊಸ ವೈಶಿಷ್ಟ್ಯಪೂರ್ಣ ಫೀಚರ್‌ಗಳನ್ನೊಳಗೊಂಡಿರುವ ಡಿವೈಸ್ ಹೋನರ್ 5ಸಿಯನ್ನು ಭಾರತದಲ್ಲಿ ಲಾಂಚ್ ಮಾಡಿದ ನಂತರ ಹೆಚ್ಚಿನ ಅಭಿಮಾನಿಗಳನ್ನು ಪಡೆದುಕೊಂಡಿದೆ. ರೂ 10,999 ಕ್ಕೆ ಈ ಡಿವೈಸ್ ಲಭ್ಯವಿದ್ದರೂ ಇದರಲ್ಲಿರುವ ವಿಶೇಷತೆ ಮಾತ್ರ ಯಾರನ್ನೂ ಬೇಕಾದರೂ ಆಕರ್ಷಿಸಬಲ್ಲುದು.

  ಓದಿರಿ: ಹೋನರ್ 5ಸಿ ಸ್ಮಾರ್ಟ್‌ಫೋನ್ ಕ್ಯಾಮೆರಾ ವಿಶೇಷತೆ

  ಹೋನರ್ 5ಸಿ ಗೂ ಕಠಿಣ ಸ್ಪರ್ಧೆಯನ್ನು ನಾವು ನಿರೀಕ್ಷಿಸಬಹುದಾಗಿದ್ದು ಶ್ಯೋಮಿ ರೆಡ್ಮೀ ನೋಟ್ 3 ಈ ಡಿವೈಸ್‌ಗೆ ಸ್ಪರ್ಧಿ ಎಂದೆನಿಸಿದೆ. ಶ್ಯೋಮಿ ರೆಡ್ಮೀ ನೋಟ್ 3 ಹೋನರ್ 5ಸಿಗೆ ಕಾರ್ಯಕ್ಷಮತೆ ಮತ್ತು ವಿಶೇಷತೆಗಳಲ್ಲಿ ಭರ್ಜರಿ ಸ್ಪರ್ಧಿಯಾಗಿದೆ. ಇಂದಿನ ಲೇಖನದಲ್ಲಿ ರೆಡ್ಮೀ ನೋಟ್ 3 ಗಿಂತ ಹೋನರ್ 5ಸಿ ಏಕೆ ಅತ್ಯುತ್ತಮ ಎಂಬುದನ್ನು ಕುರಿತು ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಮೆಟಲ್ ಬ್ಯೂಟಿ

  ಹೋನರ್ 5ಸಿಯನ್ನು ಏರ್‌ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಮ್ ಅಲಾಯ್ ಬಾಡಿಯಿಂದ ಮಾಡಿದ್ದು ಬೆಲೆಗೆ ತಕ್ಕದುದಾಗಿ ಡಿವೈಸ್ ಬಿಡುಗಡೆಗೊಂಡಿದೆ. ಈ ಬೆಲೆಯಲ್ಲಿ ಬರುವ ಡಿವೈಸ್‌ಗಳಲ್ಲಿ ಇದು ಉತ್ತಮ ಸ್ಪರ್ಧಿ ಎಂದೆನಿಸಿದೆ. ಶ್ಯೋಮಿ ಫೋನ್ ಕೂಡ ಮೆಟಾಲಿಕ್ ರಚನೆಯನ್ನು ಪಡೆದುಕೊಂಡಿದೆ.

  ಉತ್ತಮ ಡಿಸ್‌ಪ್ಲೇ

  ಹೋನರ್ 5 ಸಿ ಯು ಸುಂದರವಾದ 5.2 ಇಂಚಿನ ಪೂರ್ಣ ಎಚ್‌ಡಿ ಐಪಿಸ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ರೆಸಲ್ಯೂಶನ್ 1920 x 1080 ಪಿಕ್ಸೆಲ್‌ಗಳಾಗಿವೆ, ಪಿಕ್ಸೆಲ್ ಡೆನ್ಸಿಟಿ 424PPI ಎಂದೆನಿಸಿದೆ. ಇದು ಉತ್ತಮ ರೆಸಲ್ಯೂಶನ್ ಅನ್ನು ನೀಡುತ್ತಿದ್ದು, ಉತ್ತಮ ಬಣ್ಣವನ್ನು ರಿಪ್ರೊಡ್ಯೂಸ್ ಮಾಡುತ್ತದೆ. ರೆಡ್ಮೀ ನೋಟ್ 3 ಕೂಡ FHD 1080p ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.

  ಪವರ್ ಫುಲ್ ಹಾರ್ಡ್‌ವೇರ್

  ಹೋನರ್ 5ಸಿಯಲ್ಲಿ ನಿಮಗೆ ಗಮನ ಸೆಳೆಯುವಂತಹದ್ದು Kirin 650 SoC ಆಗಿದ್ದು ಇದು ಓಕ್ಟಾ ಕೋರ್ ಸಿಪಿಯು 16nm ಪ್ರೊಸೆಸಿಂಗ್ ಪವರ್ ಅನ್ನು ಪಡೆದುಕೊಂಡಿದೆ, ಮಾಲಿ T830 ಜಿಪಿಯು ಇದರಲ್ಲಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 SoC ಗಿಂತ ಇದು ಹೆಚ್ಚು ಪ್ರಬಲ ಎಂಬುದು ಕಂಪೆನಿಯ ಅಭಿಪ್ರಾಯವಾಗಿದೆ.

  ಹೆಚ್ಚುವರಿ RAM ಮತ್ತು ಸಂಗ್ರಹಣಾ ಸಾಮರ್ಥ್ಯ

  ಹೋನರ್ ಉತ್ತಮ ಸ್ಟೋರೇಜ್ ಸ್ಪೇಸ್ ಅನ್ನು ಬಳಕೆದಾರರಿಗೆ ನೀಡುತ್ತಿದ್ದು ಒಂದೇ ಸ್ಥಳದಲ್ಲಿ ಡೇಟಾವನ್ನು ಸಂಗ್ರಹಿಸಿಡಬಹುದಾಗಿದೆ. 2 ಜಿಬಿ RAM ಅನ್ನು ಡಿವೈಸ್ ಒದಗಿಸುತ್ತಿದ್ದು 16 ಜಿಬಿ ಆಂತರಿಕ ಸಂಗ್ರಹಣೆ ಇದರಲ್ಲಿದೆ. ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ಇದನ್ನು ವಿಸ್ತರಿಸಬಹುದಾಗಿದೆ. ರೆಡ್ಮೀ ನೋಟ್ 3, 2ಜಿಬಿ RAM ನೊಂದಿಗೆ ಬಂದಿದ್ದು, 16 ಜಿಬಿ ಸಂಗ್ರಹಣೆ ಮತ್ತು ವಿಸ್ತರಣಾ ಸಾಮರ್ಥ್ಯವನ್ನು ಹೊಂದಿದೆ.

  8 ಎಮ್‌ಪಿ ಮುಂಭಾಗ ಕ್ಯಾಮೆರಾ

  ಸ್ಮಾರ್ಟ್‌ಫೋನ್ ಬಳಕೆದಾರರು ಇಷ್ಟಪಡುವುದೇ ಸೆಲ್ಫಿಗಾಗಿ. ಹೋನರ್ 5ಸಿ, 13 ಎಮ್‌ಪಿ ಪ್ರಾಥಮಿ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಎಲ್‌ಇಡಿ ಫ್ಲ್ಯಾಶ್ ಲೈಟ್, PDAF ಅನ್ನು ಇದು ಒಳಗೊಂಡಿದೆ. ಮುಂಭಾಗದಲ್ಲಿ 8 ಎಮ್‌ಪಿ ಕ್ಯಾಮೆರಾ ಇದ್ದು ಸೆಲ್ಫಿ ಮತ್ತು ವೀಡಿಯೊ ಕ್ಯಾಪ್ಚರ್ ಮಾಡಲು ಅನುಕೂಲಕರ ಎಂದೆನಿಸಿದೆ. ರೆಡ್ಮೀ ನೋಟ್ 3, ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

  ವರ್ಧಿತ ಭದ್ರತೆ

  ಹೋನರ್ 5ಸಿ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬಂದಿದ್ದು, ರೆಡ್ಮೀ ನೋಟ್ 3 ನಲ್ಲೂ ಇದೇ ಅಂಶವನ್ನು ಕಂಡುಕೊಳ್ಳಬಹುದಾಗಿದೆ. ಅದಾಗ್ಯೂ ಹೋನರ್ 5 ಸಿಯ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬೆರಳಚ್ಚನ್ನು ಕ್ಷಿಪ್ರವಾಗಿ ನೋಂದಾಯಿಸಲಿದ್ದು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

  ಆಂಡ್ರಾಯ್ಡ್ ಮಾರ್ಶ್ ಮಲ್ಲೊ

  ಹೋನರ್ 5ಸಿ ಕೂಡ ಮಾರ್ಶ್ ಮಲ್ಲೊ ಓಎಸ್ ಅನ್ನು ಪಡೆದುಕೊಂಡಿದ್ದು, ಇದೇ ಬೆಲೆಗೆ ಇತರ ಫೋನ್‌ಗಳೂ ಇದೇ ಓಎಸ್ ಅನ್ನು ಒಳಗೊಂಡು ಬಂದಿವೆ. ಮಾರ್ಶ್ ಮಲ್ಲೊ ಸ್ಥಳೀಯ EMUI 4.1 ಅನ್ನು ಪಡೆದುಕೊಂಡು ಬಂದಿದ್ದು, ಬಳಸಲು ಅತಿ ಸರಳ ಮತ್ತು ಮೋಜಿನದ್ದಾಗಿದೆ. ಶ್ಯೋಮಿ ರೆಡ್ಮೀ ನೋಟ್ 3 ಆಂಡ್ರಾಯ್ಡ್‌ನ ಹಳೆಯ ಆವೃತ್ತಿಯಲ್ಲಿ ಚಾಲನೆಯಾಗುತ್ತಿದ್ದು MIUI 7 ಇದರ ಮೇಲ್ಭಾಗದಲ್ಲಿದೆ.

  ಅದ್ಭುತ ಬ್ಯಾಟರಿ

  ಹೋನರ್ 5ಸಿ 3000mAh ಬ್ಯಾಟರಿಯೊಂದಿಗೆ ಬಂದಿದ್ದು 10 ಗಂಟೆಗಳ ನಿರಂತರ ಸೇವೆಯನ್ನು ಇದು ಒದಗಿಸುತ್ತಿದೆ. ಕಿರಿನ್ 650 ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತಿದ್ದು ದೀರ್ಘವಾದ ಬ್ಯಾಟರಿ ಜೀವನವನ್ನು ಒದಗಿಸುತ್ತಿದೆ. ರೆಡ್ಮೀ ನೋಟ್ 3, 4,000mAh ನಾನ್ ರಿಮೂವೇಬಲ್ ಬ್ಯಾಟರಿಯನ್ನು ಹೊಂದಿದ್ದು, ಇದೇ ಪ್ರಕಾರದ ಬ್ಯಾಟರಿ ಸಾಮರ್ಥ್ಯಗಳನ್ನು ಡಿವೈಸ್ ಹೊಂದಿಲ್ಲ.

  ಕನೆಕ್ಟಿವಿಟಿ ಆಯ್ಕೆಗಳು

  4 ಜಿ ಸಕ್ರಿಯಗೊಂಡಿರುವ ಹೋನರ್ 5ಸಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಎಂದೆನಿಸಿದ್ದು 4G ಎಲ್‌ಟಿಇ ಕನೆಕ್ಟಿವಿಟಿಯೊಂದಿಗೆ ಬಂದಿದೆ ಎರಡೂ ಸಿಮ್ ಕಾರ್ಡ್‌ನಲ್ಲಿ ವಿಶೇಷತೆಯನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಬ್ಲ್ಯೂಟೂತ್, ವೈಫೈ, GPS/AGPS, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಇದರಲ್ಲಿದೆ. ರೆಡ್ಮೀ ನೋಟ್ 3, ಡ್ಯುಯಲ್ ಸಿಮ್ ಹೊಂದಿದ್ದು 4ಜಿ ಎಲ್‌ಟಿಇ ಬೆಂಬಲ, ಪ್ರಮಾಣಿತ ಸಂಪರ್ಕ ವಿಶೇಷತೆಗಳನ್ನು ಹೊಂದಿದೆ.

  ಸರಳ ಮತ್ತು ಹಗುರವಾದ ಡಿವೈಸ್

  ಹೋನರ್ 5ಸಿ ಹ್ಯಾಂಡಿ ಸ್ಮಾರ್ಟ್‌ಫೋನ್ ಎಂದೆನಿಸಿದ್ದು, ಹಗುರ ಮತ್ತು ಕೈನಲ್ಲಿ ಭದ್ರವಾಗಿ ಕೂರುವಂತಿದೆ. ನಿಮ್ಮ ಪಾಕೆಟ್‌ನಲ್ಲೂ ಡಿವೈಸ್ ಸುಭದ್ರವಾಗಿ ಇರಬಲ್ಲುದು. ರೆಡ್ಮೀ ನೋಟ್ 3 ಕೂಡ ಇದೇ ವಿಶೇಷತೆಯನ್ನು ಹೊಂದಿದೆ. ಹೋನರ್ 5ಸಿ 156 ಗ್ರಾಮ್ ತೂಕವನ್ನು ಪಡೆದುಕೊಂಡಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Huawei's online specific brand, Honor won hearts with the launch of its new feature-packed smartphone dubbed as Honor 5C in India. The phone boasts an impressive set of specifications and features, against its price of Rs 10,999.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more