Subscribe to Gizbot

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಏಕೆ ಖರೀಸಬೇಕು..?

Written By:

ಸ್ಯಾಮ್‌ಸಂಗ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಅಭಿಮಾನಿ ವರ್ಗವನ್ನು ಹೊಂದಿದೆ. ಇದೇ ಮಾದರಿಯಲ್ಲಿ ಸದ್ಯ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಸಹ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಚೀನಾ ಮೂಲದ ಕಂಪನಿಗಳಿಗೆ ನಡುಕ ಶುರುವಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಏಕೆ ಖರೀಸಬೇಕು..?

ಓದಿರಿ: ಅಮೆಜಾನ್ ಪ್ರೈಮ್ ಡೇ: ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಹಬ್ಬ, ಮಿಸ್ ಮಾಡಿಕೊಳ್ಳಬೇಡಿ.!!!

ಇದಕ್ಕೆ ಪ್ರಮುಖ ಕಾರಣ ಎಂದರೆ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಉತ್ತಮ ಗುಣವಿಶೇಷತೆಗಳನ್ನು ಹೊಂದಿದ್ದು, ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಉತ್ತಮ ಗುಣಮಟ್ಟದ ಫೋನ್ ಇದಾಗಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಕಡಗೆ ಒಲವು ತೋರಿಸುತ್ತಿದ್ದಾರೆ. ನೀವು ಈ ಫೋನ್ ಕೊಳ್ಳಬೇಕು ಎನ್ನುವುದಕ್ಕೆ ಕಾರಣಗಳನ್ನು ಇಲ್ಲಿ ನೀಡಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಾಪ್ ಎಂಡ್ ಕ್ಯಾಮೆರಾ:

ಟಾಪ್ ಎಂಡ್ ಕ್ಯಾಮೆರಾ:

ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನಲ್ಲಿ ಟಾಪ್ ಎಂಡ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ 13 MP ಹಿಂಬದಿಯ ಕ್ಯಾಮೆರಾ ಹಾಗೂ ಮುಂಭಾಗದಲ್ಲಿಯೂ 13 MP ಕ್ಯಾಮೆರಾವನ್ನು ನೋಡಬಹುದಾಗಿದೆ. ಇದು ಕ್ಲಿಯರ್ ಫೋಟೋಗಳನ್ನು ಸೆರೆಹಿಡಿಯಲು ಶಕ್ತವಾಗಿದೆ ಎನ್ನಲಾಗಿದೆ.

ಸೋಶಿಯಲ್ ಕ್ಯಾಮೆರಾ ಮೊಡ್:

ಸೋಶಿಯಲ್ ಕ್ಯಾಮೆರಾ ಮೊಡ್:

ಇದಲ್ಲದೇ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ನಲ್ಲಿ ಹೆಚ್ಚುವರಿಯಾಗಿ ಸೋಶಿಯಲ್ ಕ್ಯಾಮರಾ ಮೊಡ್ ನೀಡಲಾಗಿದೆ. ಇದು ನೀವು ತೆಗೆಯುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವಂತೆ ಎಡಿಡ್ ಮಾಡಿ ಫಿಲ್ಟರ್ ಗಳನ್ನು ಅಳವಡಿಸಿಕೊಡಲಿದೆ.

ಅತ್ಯುತ್ತಮ ಡಿಸ್‌ಪ್ಲೇ:

ಅತ್ಯುತ್ತಮ ಡಿಸ್‌ಪ್ಲೇ:

ಇದಲ್ಲದೇ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಅತ್ಯುತ್ತಮವಾಗಿದೆ. ಇದು 5.7 ಇಂಚಿನದಾಗಿದ್ದು, FHD ರೆಸಲ್ಯೂಶನ್ ಹೊಂದಿದೆ. ಸಿನಿಮಾ ನೋಡಲು, ಗೇಮ್ ಆಡಲು ಉತ್ತಮ ಅನುಭವನ್ನು ನೀಡಲಿದೆ. ಇದು ಸೂರ್ಯ ಬಿಸಿಲಿನಲ್ಲಿಯೂ ಕಾಣಿಸಿಲಿದ್ದು ಬಳಕೆಗೆ ಉತ್ತಮವಾಗಿದೆ.

ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆ:

ಇದಲ್ಲದೇ ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದಾಗಿದೆ. ಇದರಲ್ಲಿ 1.69GHz ವೇಗದ ಆಕ್ಟಾ-ಕೋರ್ ಪ್ರೋಸೆಸರ್ ಕಾಣಬಹುದಾಗಿದ್ದು, 4GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.

ಸಾಮಾನ್ಯ ಬೆಲೆ:

ಸಾಮಾನ್ಯ ಬೆಲೆ:

ಗ್ಯಾಲೆಕ್ಸಿ ಆನ್ ಮ್ಯಾಕ್ಸ್ ಹೊಂದಿರುವ ಫೀಚರ್ ಗಳಿಗೆ ಬೆಲೆಯು ಕಡಿಮೆ ಎಂದರೆ ತಪ್ಪಾಗುವುದಿಲ್ಲ . ರೂ.16,990ಕ್ಕೆ ಮಾರಾಟವಾಗುತ್ತಿರುವ ಈ ಪೋನ್ ನಲ್ಲಿ ಇರುವ ಆಯ್ಕೆಗಳು ಅತ್ಯುತ್ತಮವಾಗಿದೆ. ನೀವು ನೀಡುವ ಬೆಲೆಗೆ ಉತ್ತಮ ಪೋನ್ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Samsung Galaxy On Max has been the topic of conversation in almost all tech circles and the wait is finally over. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot