ಆಂಡ್ರಾಯ್ಡ್ ಬಳಕೆದಾರರ ಉತ್ತಮ ಅನುಭವಕ್ಕಾಗಿ ಟಾಪ್‌ 5 ರಹಸ್ಯ ಟಚ್‌ ಗೆಸ್ಚರ್‌ಗಳು

By Suneel
|

ಹೊಸ ಹೊಸ ಆಂಡ್ರಾಯ್ಡ್ ಓಎಸ್‌ಗಳು ಅಭಿವೃದ್ದಿಗೊಂಡಂತೆ, ಹಲವು ಫೀಚರ್‌ಗಳು ಮತ್ತು ಕಾನ್ಫಿಗರೇಷನ್ ಟೂಲ್‌ಗಳು ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತಲೇ ಇವೆ. ಅಲ್ಲದೇ ಬಳಕೆದಾರರು ಇದುವರೆಗೂ ಬಳಸಲು ಮುಂದಾಗದ ಹಲವು ಹಿಡೆನ್‌ ಫೀಚರ್‌ಗಳು ಸಹ ಇವೆ.

ಸ್ಮಾರ್ಟ್‌ ಟಚ್ ಗೆಸ್ಚರ್‌ಗಳು, ಆಂಡ್ರಾಯ್ಡ್‌ನ(Android) ಫೀಚರ್‌ಗಳಾಗಿದ್ದು, ಬಳಕೆದಾರರಿಗೆ ಹೊಸ ಅನುಭವವನ್ನೇ ನೀಡುತ್ತವೆ. ಅಂತಹ ಟಾಪ್‌ 5 ಸ್ಮಾರ್ಟ್‌ ಟಚ್ ಟ್ರಿಕ್ಸ್‌ಗಳನ್ನು ನಾವು ನಿಮಗೆ ಪರಿಚಯಿಸುತ್ತಿದ್ದು, ಉತ್ತಮ ಅನುಭವಕ್ಕಾಗಿ ಈ ಟ್ರಿಕ್ಸ್‌ಗಳನ್ನು ಬಳಸಬಹುದು.

ನೀರಿನಲ್ಲಿ ತೇಲುವ ಸ್ಮಾರ್ಟ್‌ಫೋನ್ ಕ್ರಿಯೇಟ್ ಮಾಡಿದ ಬೆಂಗಳೂರಿನ ಹುಡುಗ

ಆಪ್‌ ಸೆಟ್ಟಿಂಗ್‌ಗಳ ಆಕ್ಸೆಸ್‌ಗಾಗಿ ಆಪ್ ನೋಟಿಫಿಕೇಶನ್‌ ಮೇಲೆ ದೀರ್ಘ ಪ್ರೆಸ್‌

ಆಪ್‌ ಸೆಟ್ಟಿಂಗ್‌ಗಳ ಆಕ್ಸೆಸ್‌ಗಾಗಿ ಆಪ್ ನೋಟಿಫಿಕೇಶನ್‌ ಮೇಲೆ ದೀರ್ಘ ಪ್ರೆಸ್‌

ಮೊಬೈಲ್‌ ಸ್ಕೀನ್‌ನಲ್ಲಿ ಒಂದು ಸೈಡ್‌ನಲ್ಲಿ ಆಪ್ ನೋಟಿಫಿಕೇಶನ್‌ ಬರುವುದು ರಹಸ್ಯವೇನಲ್ಲ. ನಂತರ ಅದು ಕಾಣೆಯಾಗಬಹುದು. ಆದರೆ ಅದೇ ನೋಟಿಫಿಕೇಶನ್ ಮೇಲೆ ದೀರ್ಘಕಾಲ ಪ್ರೆಸ್ ಮಾಡಿ, ಗಿಯರ್ ಕಾಗ್ ಐಕಾನ್ ಸೆಲೆಕ್ಟ್ ಮಾಡಿದರೆ, ನೀವು ಆಫ್‌ ಸೆಟ್ಟಿಂಗ್ಸ್‌ಗೆ ಹೋಗಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಪದಗಳ ಮೇಲೆ ಡಬಲ್‌ ಟ್ಯಾಪ್‌ ಮಾಡಿ ಶಾರ್ಟ್‌ಕಟ್ ಪಡೆಯಿರಿ

ಪದಗಳ ಮೇಲೆ ಡಬಲ್‌ ಟ್ಯಾಪ್‌ ಮಾಡಿ ಶಾರ್ಟ್‌ಕಟ್ ಪಡೆಯಿರಿ

ಅಂದಹಾಗೆ ಆಂಡ್ರಾಯ್ಡ್ ಮಾರ್ಷ್‌ಮಲ್ಲೊ ಓಎಸ್ ಕಾಪಿ-ಪೇಸ್ಟ್, ಡಬಲ್ ಟ್ಯಾಪ್ ಫಂಕ್ಷನ್‌ಗಳ ಅಪ್‌ಗ್ರೇಡ್‌ನೊಂದಿಗೆ ಬಂದಿದೆ. ಆದ್ದರಿಂದ ಒಂದು ಪದದ ಮೇಲೆ ಡಬಲ್‌ ಟ್ಯಾಪ್‌ ಮಾಡಿದರೆ ಮೆನು ಬಟನ್ 'ಕಾಪಿ ಮತ್ತು ಶೇರ್‌' ಬಟನ್‌ಗಳೊಂದಿಗೆ ಓಪನ್‌ ಆಗುತ್ತದೆ.

ಈ ಮೆನು ಬಟನ್ ಸೆಲೆಕ್ಟ್‌ ಆದ ಪದದ ಬಗ್ಗೆ ವೆಬ್‌ನಲ್ಲಿ ಸರ್ಚ್‌ ಮಾಡಲು ಸಹಾಯಕಾರಿ ಆಗಿದೆ. ಅಲ್ಲದೇ ಗೂಗಲ್‌ ಅಸಿಸ್ಟಂಟ್ ಮತ್ತು ಟ್ರ್ಯಾನ್ಸ್‌ಲೇಟ್ ಆಪ್ಶನ್‌ ಅನ್ನು ಸಹ ಪಡೆಯಬಹುದು.

ಯಾವುದೇ ಸ್ಕ್ರೀನ್‌ನಲ್ಲಿ ಜೂಮ್‌ ಇನ್‌ ಮಾಡಿ

ಯಾವುದೇ ಸ್ಕ್ರೀನ್‌ನಲ್ಲಿ ಜೂಮ್‌ ಇನ್‌ ಮಾಡಿ

ಹಲವು ಅಪ್ಲಿಕೇಶನ್‌ಗಳು ಎರಡು ಬೆರಳುಗಳನ್ನು ಬಳಸಿ ಸ್ಕ್ರೀನ್‌ ಅನ್ನು ಜೂಮ್‌ ಇನ್‌ ಮಾಡಲು ಸಹಾಯಕಾರಿ ಆಗಿವೆ. ಆದರೆ ಎಲ್ಲಾ ಅಪ್ಲಿಕೇಶನ್‌ಗಳಿಂದ ಸಾಧ್ಯವಾಗುವುದಿಲ್ಲ. ಆದರೆ ಇಂದು ಆಂಡ್ರಾಯ್ಡ್ ಸೆಟ್ಟಿಂಗ್ಸ್‌ನಿಂದ ನಿಮ್ಮ ಸ್ಕ್ರೀನ್‌ ಅನ್ನು ಯಾವುದೇ ಆಪ್‌ ಸಹಾಯವಿಲ್ಲದೇ ಜೂಮ್‌ ಇನ್‌ ಮಾಡಬಹುದು.

ಈ ಫಂಕ್ಷನ್ ಆಕ್ಟಿವೇಟ್‌ಗಾಗಿ Settings > Accessibility > Magnification gestures ಹೋಗಿ ಆಕ್ಟಿವೇಟ್ ಮಾಡಿ. ಒಮ್ಮೆ ಆಕ್ಟಿವೇಟ್ ಮಾಡಿದ ನಂತರ ಮೂರು ಬಾರಿ ಒಂದೇ ಸ್ಕ್ರೀನ್‌ನಲ್ಲಿ ಕ್ಲಿಕ್ ಮಾಡಿ ಜೂಮ್‌ ಇನ್‌ ಮಾಡಬಹುದು.

ಗೂಗಲ್‌ ಕೀಬೋರ್ಡ್ ಕಡಿಮೆ ಜಾಗ ಆವರಿಸುವಂತೆ ಮಾಡಿ

ಗೂಗಲ್‌ ಕೀಬೋರ್ಡ್ ಕಡಿಮೆ ಜಾಗ ಆವರಿಸುವಂತೆ ಮಾಡಿ

ಕೀಬೋರ್ಡ್ ಸೈಜ್ ಕಡಿಮೆ ಮಾಡಲು, ಕೀಬೋರ್ಡ್‌ನಲ್ಲಿ ಎಂಟರ್ ಕೀ ಲಾಂಗ್‌ ಪ್ರೆಸ್ ಮಾಡಿ, ನಂತರ ಹೊಸ ಆಪ್ಶನ್‌ಗಳು ಪ್ರದರ್ಶನವಾಗುತ್ತವೆ.

ಹೋಮ್‌ ಸ್ಕ್ರೀನ್‌ನಲ್ಲಿ ನೇರವಾಗಿರುವ ಆಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ

ಹೋಮ್‌ ಸ್ಕ್ರೀನ್‌ನಲ್ಲಿ ನೇರವಾಗಿರುವ ಆಪ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ

ಹೋಮ್‌ ಸ್ಕ್ರೀನ್‌ನಲ್ಲಿರುವ ಯಾವುದೇ ಆಪ್ ಮೇಲೆ ಲಾಂಗ್‌ ಪ್ರೆಸ್ ಮಾಡಿದರೆ, ಆ ಆಪ್‌ ಅನ್ನು ನೇರವಾಗಿ ಅನ್‌ಇನ್‌ಸ್ಟಾಲ್ ಮಾಡಬಹುದು. ಆಪ್‌ ಅನ್‌ಇನ್‌ಸ್ಟಾಲ್ ಮಾಡಲು ಆಪ್‌ ಮೇಲೆ ಲಾಂಗ್‌ ಪ್ರೆಸ್‌ ಮಾಡಿ, ನಂತರ ಅನ್‌ಇನ್‌ಸ್ಟಾಲ್ ಪದ ಪ್ರದರ್ಶನವಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Secret Touch Gestures That Will Improve Your Android User Experience Forever. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X