ಆಂಡ್ರಾಯ್ಡ್, ಐಫೋನ್‌ಗಿಂತ 'ವಿಂಡೋಸ್‌' ದಿ ಬೆಸ್ಟ್ ಏಕೆ?

By Shwetha
|

ವಿಶ್ವದಾದ್ಯಂತ ಸ್ಮಾರ್ಟ್‌ಫೋನ್ ಮಾರಾಟ ಸ್ಪರ್ಧೆಯ ಮೇಲೆ ನಡೆಯುತ್ತಿದೆ, ಆಂಡ್ರಾಯ್ಡ್ ಮತ್ತು ಐಓಎಸ್ ಈಗ ಮಾರಾಟದ ಸ್ಥಳಗಳಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರಾಗಿದ್ದು, ಇದರೊಂದಿಗೆ ಮೈಕ್ರೋಸಾಫ್ಟ್ ಕೂಡ ತನ್ನ ಹೆಸರನ್ನು ಉಳಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ. ಹೊಸ ಹೊಸ ನವೀನ ಫೀಚರ್‌ಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಸ್ತುತಪಡಿಸುವುದುರ ಮೂಲಕ ಈ ಫೋನ್ ಕಂಪೆನಿ ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿದೆ.

ಓದಿರಿ: ಇಂಟರ್ನೆಟ್‌ನಲ್ಲಿ ಖ್ಯಾತರಾದ ಜೋಡಿಗಳು; ಇವರು ಮಾಡಿದ್ದಾರೂ ಏನು?

ಇಂದಿನ ಲೇಖನದಲ್ಲಿ ನೀವು ವಿಂಡೋಸ್ ಫೋನ್ ಅನ್ನು ಕೊಳ್ಳುವತ್ತ ಗಮನ ಹರಿಸಿದ್ದೀರಿ ಎಂದಾದಲ್ಲಿ ಆಂಡ್ರಾಯ್ಡ್‌ಗಿಂತ ವಿಂಡೋಸ್ ಏಕೆ ಅತ್ಯುತ್ತಮ ಎಂಬುದನ್ನು ತಿಳಿಸಲು ಇಚ್ಛಿಸುತ್ತಿದ್ದೇವೆ. ಕೆಲವೊಂದು ಕಾರಣಗಳಿಗೆ ವಿಂಡೋಸ್ ಆಂಡ್ರಾಯ್ಡ್‌ಗಿಂತ ಸೂಕ್ತ ಎಂಬ ಭಾವನೆ ನಮ್ಮ ಮನದಲ್ಲಿ ಮೂಡುತ್ತದೆ ಇದು ಏಕೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳು ಮೂಲಕ ಅರಿತುಕೊಳ್ಳಿ.

ಸರಳ, ತ್ವರಿತ ಮತ್ತು ಹ್ಯಾಂಗ್ ಸಮಸ್ಯೆಯನ್ನು ಹೊಂದಿರುವುದಿಲ್ಲ

ಸರಳ, ತ್ವರಿತ ಮತ್ತು ಹ್ಯಾಂಗ್ ಸಮಸ್ಯೆಯನ್ನು ಹೊಂದಿರುವುದಿಲ್ಲ

ವಿಂಡೋಸ್ ಫೋನ್ ಸರಳ ಯುಐ ಅನ್ನು ಪಡೆದುಕೊಂಡಿದ್ದು, ಬಾಕ್ಸ್ ಮಾದರಿಯಲ್ಲಿ ಅಪ್ಲಿಕೇಶನ್ ಪಟ್ಟಿಯನ್ನು ಹೊಂದಿರುತ್ತದೆ. ಆಂಡ್ರಾಯ್ಡ್ ಮತ್ತು ಐಓಎಸ್‌ನಂತೆ ಅಪ್ಲಿಕೇಶನ್ ಡ್ರಾವರ್‌ಗಳನ್ನು ನೀವಿಲ್ಲಿ ಪಡೆದುಕೊಳ್ಳುವುದಿಲ್ಲ. ಒಮ್ಮೊಮ್ಮೆ ಈ ಓಎಸ್‌ಗಳನ್ನು ಹೊಂದಿರುವ ಡಿವೈಸ್‌ಗಳು ನೀವು ಟೆಕ್ಸ್ಟ್ ಕಳುಹಿಸುತ್ತಿರುವಾಗ ಹ್ಯಾಂಗ್ ಆಗುವ ಸಾಧ್ಯತೆ ಕೂಡ ಇರುತ್ತದೆ.

ಬ್ಯಾಟರಿ ಸಮರ್ಥ

ಬ್ಯಾಟರಿ ಸಮರ್ಥ

ಏಕೈಕ ಚಾರ್ಜ್‌ನಲ್ಲಿಯೇ 13 ರಿಂದ 14 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಬ್ಯಾಟರಿ ಪ್ಯಾಕ್ ಅನ್ನು ವಿಂಡೋಸ್ ಫೋನ್ ಹೊಂದಿರುತ್ತದೆ. ಆದ್ದರಿಂದ ಫೋನ್ ಅನ್ನು ಹೇಗೆ ಬಳಸಿದರೂ ಚಾರ್ಜ್ ಮುಗಿಯುವ ಭಯ ಇರುವುದಿಲ್ಲ. ಇದರಿಂದ ಅಪ್ಲಿಕೇಶನ್ ಬಳಕೆಯ ಸಂದರ್ಭದಲ್ಲಿ ಬ್ಯಾಟರಿ ಡ್ರೈನ್ ಆಗುವ ಸಂಭವ ಇರುವುದಿಲ್ಲ.

ಉತ್ತಮ ರಚನೆ

ಉತ್ತಮ ರಚನೆ

ಫೋನ್ ತಯಾರಿಕಾ ಕ್ಷೇತ್ರದಲ್ಲಿ ನಿಪುಣ ಎಂದೆನಿಸಿಕೊಂಡಿರುವ ನೋಕಿಯಾವು ವಿಂಡೋಸ್ ಫೋನ್‌ಗಳನ್ನು ಪ್ರಸ್ತುತಪಡಿಸಿದೆ. ಲ್ಯೂಮಿಯಾ ಆಧಾರಿತ ಫೋನ್‌ಗಳು ಅತಿ ಸಮರ್ಥ ಎಂದೆನಿಸಿದ್ದು ಎಂತಹುದೇ ಸವಾಲುಗಳನ್ನು ಸ್ವೀಕರಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತವೆ.

ಉತ್ತಮ ಕ್ಯಾಮೆರಾಗಳು

ಉತ್ತಮ ಕ್ಯಾಮೆರಾಗಳು

ವೃತ್ತಿಪರ ಫೋಟೋಗ್ರಫಿಗಾಗಿ ಲ್ಯೂಮಿಯಾ ಫೋನ್‌ಗಳು ಹೇಳಿಮಾಡಿಸಿದವುಗಳಾಗಿದ್ದು, ನೋಕಿಯಾ ಲ್ಯೂಮಿಯಾ 1020 ವೃತ್ತಿಪರ ಫೋಟೋಗ್ರಫಿಗಾಗಿ ಸೂಕ್ತ ಎಂದೆನಿಸಿದ್ದು ಅದಕ್ಕೆ ತಕ್ಕುದಾದ ಪರಿಕರಗಳೊಂದಿಗೆ ಬಂದಿವೆ.

ಗುಂಪಿನಲ್ಲಿ ಪ್ರತ್ಯೇಕತೆ

ಗುಂಪಿನಲ್ಲಿ ಪ್ರತ್ಯೇಕತೆ

ಆಂಡ್ರಾಯ್ಡ್ ಬಳಕೆ ಮಾಡುವಾಗ ಇರದ ಆರಾಮದಾಯಕತೆ ವಿಂಡೋಸ್ ಫೋನ್‌ಗಳನ್ನು ಬಳಸುವಾಗ ಇದೆ ಎಂಬುದು ಬಳಕೆದಾರರ ಅಭಿಪ್ರಾಯವಾಗಿದೆ. ಸ್ವೈಪ್ ಕೀಬೋರ್ಡ್ಸ್, ಕಸ್ಟಮೈಸ್ ಆಕ್ಶನ್ ಸೆಂಟರ್, ಲಾಕ್ ಸ್ಕ್ರೀನ್ ಆಯ್ಕೆಗಳು ಹೀಗೆ ಓಎಸ್ ಅನನ್ಯತೆಗಳನ್ನು ಪಡೆದುಕೊಂಡು ಬಂದಿವೆ. ಸ್ಕ್ರೀನ್‌ಗಳು ಕೂಡ ಅಮೋಲೆಡ್ ಪರದೆಗಳನ್ನು ಪಡೆದುಕೊಂಡು ಬಂದಿವೆ.

Best Mobiles in India

English summary
Here are some reasons why Windows Phones are much better choices over the competition in the market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X