ಆಪಲ್ ಐಫೋನ್ ‍X ನಂತೆ ಕಾಣುವ 6 ಆಂಡ್ರಾಯ್ಡ್ ಫೋನ್‌ಗಳು....!

|

ಆಪಲ್ ಐಫೋನ್ ಎಕ್ಸ್ ನ ನಾಚ್ ಡಿಸ್ಪ್ಲೇ ಹೊರಬಂದ ನಂತರ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಕಂಪೆನಿಗಳಿಗೆ ಇದು ಭಾರೀ ಇಷ್ಟವಾದಂತೆ ಕಾಣುತ್ತಿದೆ.ಆಪಲ್ ನ 10 ನೇ ವಾರ್ಷಿಕೋರ್ಷವದ ಐಫೋನ್ ಆಗಿ 2017 ರಲ್ಲಿ ಆಪಲ್ ಈ ಫೋನನ್ನು ಪರಿಚಯಿಸಿದ ನಂತರ ಭಾರೀ ಪ್ರಚಾರ ಪಡೆದುಕೊಂಡಿತ್ತು. 2018 ರಲ್ಲಿ 300 ಮಿಲಿಯನ್ ಸ್ಮಾರ್ಟ್ ಫೋನ್ ಗಳು ನಾಚ್ ನಂತೆಯೇ ಬಿಡುಗಡೆಗೊಂಡಿವೆ ಎಂದು ರಿಸರ್ಚ್ ಕಂಪೆನಿಗಳು ತಿಳಿಸುತ್ತವೆ. ಈ 300 ಮಿಲಿಯನ್ ಸ್ಮಾರ್ಟ್ ಫೋನ್ ಗಳಲ್ಲಿ ಶೇಕಡಾ 55 ರಷ್ಟು ಆಂಡ್ರಾಯ್ಡ್ ಫೋನ್ ಗಳು ಮತ್ತು ಇನ್ನುಳಿದ ಶೇಕಡಾ 45 ಆಪಲ್ ಫೋನ್ ಗಳಾಗಿವೆ.

ಆಪಲ್ ಐಫೋನ್ ‍X ನಂತೆ ಕಾಣುವ 6 ಆಂಡ್ರಾಯ್ಡ್ ಫೋನ್‌ಗಳು....!


ಇಲ್ಲಿ ಭಾರತದಲ್ಲಿ ಲಭ್ಯವಿರುವ 6 ಆಂಡ್ರಾಯ್ಡ್ ಫೋನ್ ಗಳ ಪಟ್ಟಿಯನ್ನು ತಯಾರಿಸಲಾಗಿದೆ. ಅವು ಐಫೋನ್ ಎಕ್ಸ್ ನಂತೆಯೇ ಕಾಣುತ್ತವೆ , ಇನ್ನು ಕೆಲವು ಸ್ಮಾರ್ಟ್ ಫೋನ್ ಗಳು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿವೆ..

ಒನ್ ಪ್ಲಸ್ 6 (ಆರಂಭಿಕ ಬೆಲೆ 34,999 ರುಪಾಯಿಗಳು)
ನಾಚ್ ಡಿಸ್ಪ್ಲೇ ಯಲ್ಲಿ ಅತೀ ಹೆಚ್ಚು ಮನ್ನಣೆ ಪಡೆದ ಫೋನ್ ಗಳಲ್ಲಿ ಒನ್ ಪ್ಲಸ್ 6 ಕೂಡ ಒಂದು. ಇದರಲ್ಲಿ 6.28-inch full-HD+ (1080x2280 pixels) ಫುಲ್ ಆಪ್ಟಿಕ್ AMOLED ಡಿಸ್ಪ್ಲೇ ಯು 19:9 ಅನುಪಾತದಲ್ಲಿದೆ. Qualcomm's ಫ್ಲಾಗ್ ಶಿಪ್ ಪ್ರೊಸೆಸರ್ Snapdragon 845 ಮತ್ತು Adreno 630 GPUನಲ್ಲಿ ಇದು ರನ್ ಆಗುತ್ತೆ. ಕ್ಯಾಮರಾ ವಿಚಾರಕ್ಕೆ ಬಂದರೆ 16MP ಪ್ರೈಮರಿ ಕ್ಯಾಮರಾ ಜೊತೆಗೆ ಸೋನಿ IMX519 ಸೆನ್ಸರ್ ಜೊತೆಗೆ 1.22-micron ಪಿಕ್ಸಲ್ ಸೈಜ್ ಮತ್ತು f/1.7 ದ್ಯುತಿರಂದ್ರ ಹೊಂದಿದೆ. ಸೆಕೆಂಡರಿ ಕ್ಯಾಮರಾವು 20MP ಜೊತೆಗೆ ಸೋನಿ IM376K ಸೆನ್ಸರ್ ನ್ನು ಒಳಗೊಂಡಿದೆ.ಎದುರು 16-ಮೆಗಾಪಿಕ್ಸಲ್ ಜೊತೆಗೆ ಸೋನಿ IMX371 ಸೆನ್ಸಾರ್ ಮತ್ತು f/2.0 aperture ಹೊಂದಿದೆ.RAM ಮತ್ತು ಸ್ಟೋರೇಜ್ ಗೆ ಅನುಗುಣವಾಗಿ ಎರಡು ವೇರಿಯಂಟ್ ನಲ್ಲಿ ಈ ಫೋನ್ ಲಭ್ಯವಾಗಲಿದೆ. 6GB RAM/64GB ಸ್ಟೋರೇಜ್ ಮತ್ತು 8GB RAM/128GB ಸ್ಟೋರೇಜ್ ಇರುವ ಫೋನ್ ಗಳು ಕ್ರಮವಾಗಿ 34,999 ರುಪಾಯಿ ಮತ್ತು 39,999 ರುಪಾಯಿ ಆಗಿದೆ.

ಓಪೋ ಎಫ್ 7 (ಆರಂಭಿಕ ಬೆಲೆ 21990 ರುಪಾಯಿಗಳು)
ಐಫೋನ್ ಎಕ್ಸ್ ನಂತೆಯೇ ಡಿಸ್ಪ್ಲೇ ಹೊಂದಿರುವ ಮತ್ತೊಂದು ಫೋನ್ ಎಂದರೆ ಅದು ಓಪೋ ಎಫ್ 7.ಇದರಲ್ಲಿ 6.23-ಇಂಚಿನ ಫುಲ್ ಹೆಚ್ ಡಿ + 1080x2280 pixel resolution ನ ಡಿಸ್ಪ್ಲೇಯು 19:9 ಅನುಪಾತದಲ್ಲಿದೆ. ಓಪೋ ಎಫ್ 7 ನಲ್ಲಿ ಐಫೋನ್ ಎಕ್ಸ್ ನಂತೆ ಮೇಲ್ಬಾಗದಲ್ಲಿ ನಾಚ್ ಇದೆ. 64-bit octa-core MediaTek Helio P60ಪ್ರೊಸೆಸರ್ ಹೊಂದಿದೆ. 4GB RAM ಜೊತೆಗೆ 64GB ROM ಮತ್ತು 6GB RAM ಮತ್ತು 128GB ROM ನ ಸ್ಟೋರೇಜ್ ಕೆಪಾಸಿಟಿ ಹೊಂದಿದೆ. 25-ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾ ಮತ್ತು 16-ಮೆಗಾಪಿಕ್ಸಲ್ ನ ಕ್ಯಾಮರಾವು LED ಫ್ಲ್ಯಾಷ್ ನೊಂದಿಗೆ ಬರಲಿದೆ. 4GB . Oppo F7ನ 4GB RAM, ಮತ್ತು 6GB RAMನ ಬೆಲೆಯು ಕ್ರಮವಾಗಿ Rs 21,990 ಮತ್ತು 26,990 ಆಗಿದೆ.

ಹುವಾಯಿ ಪಿ20 ಪ್ರೋ(ಆರಂಭಿಕ ಬೆಲೆ 64,999 ರುಪಾಯಿಗಳು)
ತ್ರಿವಳಿ rear ಕ್ಯಾಮರಾ ಹೊಂದಿರುವ ಪ್ರಪಂಚದ ಮೊದಲ ಸ್ಮಾರ್ಟ್ ಫೋನ್ ಹುವಾಯಿ ಪಿ20 ಪ್ರೋ ನಲ್ಲೂ ಐಫೋನ್ ಎಕ್ಸ್ ನಲ್ಲಿರುವಂತೆ 6.1-inch full HD+ ಡಿಸ್ಪ್ಲೇಯಲ್ಲಿ ನಾಚ್ ಇದೆ. 4000mAh ಬ್ಯಾಟರಿ ಇದ್ದು, octa-core Kirin 970 ಪ್ರೊಸೆಸರ್ ನ್ನು ಹೊಂದಿದೆ. 6GB RAM ಮತ್ತು 128ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಇರುತ್ತೆ. ತ್ರಿವಳಿ rear ಕ್ಯಾಮರಾ 20ಎಂಪಿ ಮೋನೋಕ್ರೋಮ್ ಸೆನ್ಸರ್ ಜೊತೆಗೆ f/1.6 ದ್ಯುತಿರಂದ್ರ, 40ಎಂಪಿ RGB ಕ್ಯಾಮರಾ ಜೊತೆಗೆ f/1.8 ದ್ಯುತಿರಂದ್ರ ಮತ್ತು 8ಎಂಪಿ ಟೆಲಿಫೋಟೋ ಕ್ಯಾಮರಾ ಜೊತೆಗೆ f/2.4 ದ್ಯುತಿರಂದ್ರ ಹೊಂದಿದೆ.ಇದರ ಬೆಲೆ 64,999 ರುಪಾಯಿಗಳು.

ವಿವೋ ವಿ9(ಆರಂಭಿಕ ಬೆಲೆ 23,990 ರುಪಾಯಿಗಳು)
ವಿವೋ ವಿ9 ನಲ್ಲೂ ಕೂಡ ಐಫೋನ್ ಎಕ್ಸ್ ನಲ್ಲಿರುವಂತೆ ನಾಚ್ ಡಿಸ್ಪ್ಲೇ ಇದೆ., ಇದರ ಬೆಲೆ 23,990. ಇದರಲ್ಲಿ 6.3-ಇಂಚಿನ IPS LCD 'ಫುಲ್ ವಿವ್’ ಡಿಸ್ಪ್ಲೇ ಜೊತೆಗೆ 2280 x 1080 ಪಿಕ್ಸಲ್ ರೆಸೋಲ್ಯೂಷನ್ ಮತ್ತು 19:9 ಅನುಪಾತದಲ್ಲಿದೆ. Qualcomm Snapdragon 626 ಪ್ರೊಸೆಸರ್ ಪೇರ್ ಆಗಿರುವುದು 4ಜಿಬಿ of RAM and 64ಜಿಬಿ ಇಂಟರ್ನಲ್ ಸ್ಟೋರೇಜ್ ಜೊತೆಗೆ. 24 ಎಂಪಿ ಸೆಲ್ಫೀ ಕ್ಯಾಮರಾ ಜೊತೆಗೆ f/2.0 ದ್ಯುತಿರಂದ್ರ ಮತ್ತು ಡುಯಲ್ rear ಕ್ಯಾಮರಾ 16ಎಂಪಿ (f/2.0 ದ್ಯುತಿರಂದ್ರ) ಮತ್ತು 5ಎಂಪಿ(f/2.2 ದ್ಯುತಿರಂದ್ರ) ಹೊಂದಿದೆ.

ಹಾನರ್ 10(ಬೆಲೆ 32,999 ರುಪಾಯಿಗಳು)
ಹುವಾಯಿಯ ಸಬ್ ಬ್ರಾಂಡ್ ಆಗಿರುವ ಹಾನರ್ 10 ನ ವೈಶಿಷ್ಟ್ಯವೆನೆಂದರೆ a 5.84-ಇಂಚಿನ ಫುಡ್ ಹೆಚ್ ಡಿ + ಡಿಸ್ಪ್ಲೇ 19:9 ಅನುಪಾತದಲ್ಲಿ ನಾಚ್ ಸ್ಕ್ರೀನ್ ಹೊಂದಿದೆ. ಆಕ್ಟಾ ಕೋರ್ ಕಂಪೆನಿಯKirin 970ಪ್ರೊಸೆಸರ್ ನ್ನು ಹೊಂದಿದೆ. 6ಜಿಬಿ RAM ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ನ್ನು ಒಳಗೊಂಡಿದೆ. ಆಂಡ್ರಾಯ್ಡ್ 8.1 Oreo-based EMUI 8.1 ಇಂಟರ್ ಫೇಸ್ ಮತ್ತು ಫಾಸ್ಟ್ ಚಾರ್ಜಿಂಗ್ ಗೆ ಸಹಕಾರಿಯಾಗುವಂತೆ 3400mAhಬ್ಯಾಟರಿ ಸೌಲಭ್ಯವನ್ನು ಒಳಗೊಂಡು ಇದು ರನ್ ಆಗುತ್ತೆ.

ಹುವಾಯಿ ಪಿ20 ಲೈಟ್ (ಬೆಲೆ 19,999 ರುಪಾಯಿಗಳು)
ಮತ್ತೊಂದು ಫೋನ್ ಎಂದರೆ ಅದು ಹುವಾಯಿ ಸ್ಮಾರ್ಟ್ ಫೋನ್. ಇದು ಕೂಡ ನಾಚ್ ಅನ್ನು ಹೊಂದಿದೆ. 5.8-ಇಂಚಿನTFT LCD ಫುಲ್ ಹೆಚ್ ಡಿ+ ಡಿಸ್ಪ್ಲೇ ಇದೆ. ಆಕ್ಟಾ- ಕೋರ್ Kirin 659 ಪ್ರೊಸೆಸರ್, 4ಜಿಬಿ RAM ಜೊತೆಗೆ 64GB ಇನ್ ಬಿಲ್ಟ್ ಸ್ಟೋರೇಜ್ ವ್ಯವಸ್ಥೆ ಇದೆ. 3,000mAh ಬ್ಯಾಟರಿ, ಡುಯಲ್ rear ಕ್ಯಾಮರಾ ಒಳಗೊಂಡಿದೆ. ಇದರಲ್ಲಿ 16MP ಮತ್ತು 2MP ಸೆನ್ಸರ್ ಇದ್ದು ಅದು f/2.2 ದ್ಯುತಿರಂದ್ರ ಹೊಂದಿದೆ. ಮುಂಭಾಗದ ಕ್ಯಾಮರಾ 16MP ಸೆನ್ಸರ್ ಮತ್ತು f/2.0 ದ್ಯುತಿರಂದ್ರವನ್ನು ಒಳಗೊಂಡಿದೆ.

ಅಸೂಸ್ ಝೆನ್ ಫೋನ್ ಎಸ್ ಝಡ್ ( ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ)
ಮೊಬೈಲ್ ವರ್ಡ್ ಕಾಂಗ್ರೆಸ್ 2018 ನಲ್ಲಿ ಮೊದಲು ಬಿಡುಗಡೆಗೊಂಡಿರುವ ಅಸೂಸ್ ಝೆನ್ ಫೋನ್ ಎಸ್ ಝಡ್ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ. ಝೆನ್ ಫೋನ್ ಸೀರೀಸ್ ಗಳಲ್ಲೇ ಐಫೋನ್ ಎಕ್ಸ್ ನಂತೆ ನಾಚ್ ಇರುವ ಫೋನ್ ಇದು. 6.2-ಇಂಚಿನ ಫುಡ್ ಹೆಚ್.ಡಿ + IPS ಡಿಸ್ಪ್ಲೇಯು 19:9 ಅನುಪಾತದಲ್ಲಿದೆ. a Qualcomm Snapdragon 845 ಪ್ರೊಸೆಸರ್ ಇದೆ. 8ಜಿಬಿ RAM ಮತ್ತು 256ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಇದೆ.

ಆಸೂಸ್ ಝೆನ್ ಫೋನ್ 5 (ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ)
ಝೆನ್ ಫೋನ್ 5ಝಡ್ ಜೊತೆಗೆ ಇದು ಕೂಡ MWC 2018ದಲ್ಲಿ ಬಿಡುಗಡೆಗೊಂಡಿದೆ. ಇದ್ರಲ್ಲೂ ಕೂಡ ನಾಚ್ ಇದೆ. ಡುಯಲ್ rear ಕ್ಯಾಮರಾವನ್ನು ಲಂಬವಾಗಿ ಅಳವಡಿಸಲಾಗಿದೆ. Qualcomm Snapdragon 636 ಪ್ರೊಸೆಸರ್ ಇದೆ. 4ಜಿಬಿ RAM ಅಥವಾ 6ಜಿಬಿ RAM ಮತ್ತು 64ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಇರಲಿದೆ. ಝೆನ್ ಫೋನ್ 5, . ಝೆನ್ ಫೋನ್ 5ಝಡ್ ನಂತೆಯೇ ಇರಲಿದ್ದು ಪ್ರಮುಖವಾಗಿ ಸ್ಟೋರೇಜ್, ಪ್ರೊಸೆಸರ್ ಮತ್ತು RAM ನಲ್ಲಿ ಕೆಲವು ಬದಲಾವಣೆಗಳಿರಲಿದೆ ಅಷ್ಟೇ..

ನೋಕಿಯಾ ಎಕ್ಸ್ 6 (ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ)
ನಾಚ್ ಇರುವ ನೋಕಿಯಾದ ಮೊದಲ ಸ್ಮಾರ್ಟ್ ಫೋನ್ ನೋಕಿಯಾ ಎಕ್ಸ್ 6 ಮಾರುಕಟ್ಟೆಗೆ ಸದ್ಯದಲ್ಲೇ ಕಾಲಿಡಲಿದೆ. ಇದರಲ್ಲಿ 5.8-ಇಂಚಿನ FHD+ ಡಿಸ್ಪ್ಲೇಯು 2280x1080 ಪಿಕ್ಸಲ್ ರೆಸೋಲ್ಯೂಷನ್ ಮತ್ತು 19:9 ಅನುಪಾತವದಲ್ಲಿರಲಿದೆ. Qualcomm Snapdragon 636 ಪ್ರೊಸೆಸರ್ ನ್ನು ಒಳಗೊಂಡಿದೆ. ಎರಡು ರೀತಿಯ ಸ್ಟೋರೇಜ್ ಆಪ್ಶನ್ ಇದರಲ್ಲಿ ಇರಲಿದೆ.ಅವುಗಳೆಂದರೆ 4ಜಿಬಿ/6ಜಿಬಿ RAM ಮತ್ತು 32ಜಿಬಿ/64ಜಿಬಿ ಸ್ಟೋರೇಜ್ . ಇದರ ಕ್ಯಾಮರಾ ವಿಭಾಗವನ್ನು ಪರಿಗಣಿಸಿದರೆ ಡ್ಯುಯಲ್ rear ಕ್ಯಾಮರಾ ಸೆಟ್ ಅಪ್ ಇರಲಿದ್ದು, ಅದು 16ಎಂಪಿ ಆಟೋಫೋಕಸ್ ಸೆನ್ಸರ್ ಜೊತೆಗೆ f/2.0 ದ್ಯುತಿರಂದ್ರ ಮತ್ತು 5ಎಂಪಿ ಮೋನೋಕ್ರೋಮ್ ಸೆನ್ಸರ್ ಜೊತೆಗೆ f/2.2 ದ್ಯುತಿರಂದ್ರ ಹೊಂದಿರಲಿದೆ.

LG G7 ThinQ , G7+ ThinQ ( ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ)
ಸೌತ್ ಕೋರಿಯಾದ ಈ ಎರಡೂ ಮೊಬೈಲ್ ಫೋನ್ ಗಳು ಐಫೋನ್ ಎಕ್ಸ್ ನಂತೆಯೇ ನಾಚ್ ಹೊಂದಿದ್ದು, ಅದನ್ನೇ ಹೋಲುವಂತಿದೆ. RAM ಮತ್ತು ಸ್ಟೋರೇಜ್ ವಿಚಾರದಲ್ಲಿ ಆ ಎರಡೂ ಮೊಬೈಲ್ ನಲ್ಲಿ ವ್ಯತ್ಯಾಸಗಳಿವೆ. G7 ThinQ ನಲ್ಲಿ 4ಜಿಬಿ RAM ಜೊತೆಗೆ 64ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಇದೆ. LG G7+ ThinQ ಇದರಲ್ಲಿ 6ಜಿಬಿ RAM ಜೊತೆಗೆ 128ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಅವಕಾಶವಿದೆ. ಉಳಿದವೆಲ್ಲ ವೈಶಿಷ್ಟ್ಯಗಳು ಕೂಡ ಒಂದೇ ಆಗಿದೆ. 6.1-inch QHD+ ಫುಲ್ ವಿಷನ್ ಡಿಸ್ಪ್ಲಯು 19.5:9 ಅನುಪಾತದಲ್ಲಿದೆ. ಎರಡೂ ಫೋನ್ ಗಳು ಕೂಡ Qualcomm Snapdragon 845 ಪ್ರೊಸೆಸರನ್ನು ಹೊಂದಿದೆ. 16ಎಂಪಿ ಸೆನ್ಸಾರ್ ನ ಡುಯಲ್ rear ಕ್ಯಾಮರಾ ಸೆಟ್ ಅಪ್ ಇದೆ. ಮುಂಭಾಗದಲ್ಲಿ 8ಎಂಪಿ ಕ್ಯಾಮರಾವಿದೆ. ಎರಡೂ ಫೋನ್ ಗಳಲ್ಲೂ 3000mAh ಬ್ಯಾಟರಿ ಇದೆ.ಇವು ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ ಆದರೆ ಸದ್ಯದಲ್ಲೇ ಬರುವ ನಿರೀಕ್ಷೆ ಇದೆ.

Best Mobiles in India

English summary
6 Android smartphones that 'look like' Apple iPhone X. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X