ಸ್ಮಾರ್ಟ್‌ಫೋನ್ ಬ್ರೌಸಿಂಗ್‌ಗಾಗಿ ಒಪೇರಾ ಮಿನಿ: ಒಮ್ಮೆ ಬಳಸಿ ನೋಡಿ

By Shwetha
|

ಒಪೇರಾ ಹೆಸರಾಂತ ಥರ್ಡ್ ಪಾರ್ಟಿ ಬ್ರೌಸರ್ ಎಂದೆನಿಸಿದ್ದು ಗೂಗಲ್‌ನ ಕ್ರೊಮ್ ಅಥವಾ ಆಪಲ್ ಸಫಾರಿ ಬ್ರೌಸರ್‌ಗೆ ಬಳಕೆದಾರ ಸ್ನೇಹಿ ಎಂದೆನಿಸಿದೆ. ಸ್ಮಾರ್ಟ್‌ಫೋನ್ ಬಳಕೆದಾರರಾದ್ಯಂತ ಹೆಚ್ಚು ಜನಪ್ರಿಯವಾಗಿರುವ ಹೆಚ್ಚು ವೇಗದ ಮೊಬೈಲ್ ಬ್ರೌಸರ್ ಅಪ್ಲಿಕೇಶನ್ ಎಂದೆನಿಸಿದೆ. ಇನ್ನಷ್ಟು ಉತ್ತಮ ಅನುಭವವನ್ನು ಒದಗಿಸಲು, ಕಂಪೆನಿಯು ಇತ್ತೀಚೆಗೆ ತಾನೇ ಒಪೇರಾ ಮಿನಿ ಬ್ರೌಸರ್ ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡಿದ್ದು ಇದು ವೇಗದ್ದಾಗಿದ್ದು ಉತ್ತಮವಾಗಿದೆ. ಒಪೇರಾ ಮಿನಿಯ ಅತ್ಯಾಧುನಿಕ ಆವೃತ್ತಿ 90% ದಷ್ಟು ಮೊಬೈಲ್ ಡೇಟಾ ಬಳಕೆಯಲ್ಲಿ ಉಳಿಕೆಯನ್ನು ಮಾಡಲಿದೆ.

ಒಪೇರಾ ಮಿನಿ ನಿಮ್ಮ ಮೆಚ್ಚಿನ ವೆಬ್‌ಸೈಟ್‌ಗಳನ್ನು ಉಳಿಸಲು ಸಹಾಯ ಮಾಡಲಿದೆ. ನೀವು ಸೈಟ್‌ಗಳಲ್ಲಿ ಸೀಮಿತ ನಿಯಮವನ್ನು ಪಾಲಿಸಬೇಕಾಗಿಲ್ಲ. ಸ್ಪೀಡ್ ಡಯಲ್ ಬಳಸಿಕೊಂಡು ಅನಿಯಮಿತ ಸೈಟ್‌ಗಳನ್ನು ಪ್ರವೇಶಿಸಲು ಬ್ರೌಸರ್ ನಿಮ್ಮನ್ನು ಅನುಮತಿಸುತ್ತದೆ. ಇಂದಿನ ಲೇಖನದಲ್ಲಿ ಒಪೇರಾ ಮಿನಿಯ ವಿಶೇಷತೆಗಳನ್ನು ತಿಳಿದುಕೊಳ್ಳಲಿದ್ದು ಯುಸಿ ಬ್ರೌಸರ್‌ಗಿಂತಲೂ ಇದು ಉತ್ತಮ ಆಯ್ಕೆ ಎಂಬುದಾಗಿ ನಿಮಗೆ ತಿಳಿಸಲಿದೆ.

ಸ್ಪೀಡ್ ಡಯಲ್ ಮೂಲಕ ವೆಬ್‌ಸೈಟ್‌ಗಳನ್ನು ಪ್ರವೇಶಿಸುವುದು

ಸ್ಪೀಡ್ ಡಯಲ್ ಮೂಲಕ ವೆಬ್‌ಸೈಟ್‌ಗಳನ್ನು ಪ್ರವೇಶಿಸುವುದು

ಸ್ಪೀಡ್ ಡಯಲ್ ಪಟ್ಟಿಯಲ್ಲಿ ನಿಮ್ಮ ಮೆಚ್ಚಿನ ವೆಬ್‌ಸೈಟ್‌ಗಳನ್ನು ಸೇವ್ ಮಾಡಲು ಒಪೇರಾ ಮಿನಿ ನಿಮಗೆ ನೆರವಾಗಲಿದೆ. ಸೈಟ್‌ಗಳನ್ನು ಸೀಮಿತ ಸಂಖ್ಯೆಯಲ್ಲಿ ಉಳಿಸುವ ಅಗತ್ಯ ನಿಮಗೆ ಇರುವುದಿಲ್ಲ. ಅನಿಯಮಿತ ಸೈಟ್‌ಗಳನ್ನು ಸ್ಪೀಡ್ ಡಯಲ್ ಮೂಲಕ ನಿಮಗೆ ಪ್ರವೇಶಿಸಬಹುದಾಗಿದೆ.

ವೀಡಿಯೊ ಬೂಸ್ಟ್‌ನೊಂದಿಗೆ ಲೋಡಿಂಗ್ ಸಮಯ ಕಡಿಮೆ

ವೀಡಿಯೊ ಬೂಸ್ಟ್‌ನೊಂದಿಗೆ ಲೋಡಿಂಗ್ ಸಮಯ ಕಡಿಮೆ

ವೀಡಿಯೊವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸುವಾಗ ನಮಗೆ ಬಫರಿಂಗ್ ಸಮಸ್ಯೆ ಎದುರಾಗುತ್ತಿರುತ್ತದೆ. ಅದಾಗ್ಯೂ ಅತ್ಯಾಧುನಿಕ ಒಪೇರಾ ಮಿನಿ ಬ್ರೌಸರ್‌ನೊಂದಿಗೆ ಬಳಕೆದಾರರು ಉತ್ತಮ ವೀಡಿಯೊ ಅನುಭವವನ್ನು ಗಳಿಸಬಹುದು ಎಂಬುದಾಗಿ ಕಂಪೆನಿ ಖಾತ್ರಿಪಡಿಸುತ್ತಿದೆ. ಕಂಪೆನಿ ಹೇಳಿರುವಂತೆ, ಇದು ಪ್ರಥಮ ವೆಬ್ ಬ್ರೌಸರ್ ಆಗಿದ್ದು ವೀಡಿಯೊ ಬೂಸ್ಟ್ ತಂತ್ರಜ್ಞಾನದೊಂದಿಗೆ ಬಂದಿದೆ ಇದು ವೀಡಿಯೊ ಡೇಟಾವನ್ನು ಕನಿಷ್ಟಗೊಳಿಸುತ್ತದೆ.

ಹೋಮ್‌ಸ್ಕ್ರೀನ್‌ನಲ್ಲಿ ವೆಬ್‌ಸೈಟ್ ಶಾರ್ಟ್‌ಕಟ್

ಹೋಮ್‌ಸ್ಕ್ರೀನ್‌ನಲ್ಲಿ ವೆಬ್‌ಸೈಟ್ ಶಾರ್ಟ್‌ಕಟ್

ಸೈಟ್ ಅನ್ನು ಲಾಂಚ್ ಮಾಡುವುದು ಹೆಚ್ಚು ಸರಳವಾಗಿದ್ದು, ಹೋಮ್ ಸ್ಕ್ರೀನ್‌ನಲ್ಲಿ ಇದರ ಶಾರ್ಟ್ ಕಟ್ ಅನ್ನು ಇರಿಸಿದಾಗ ಇದು ಇನ್ನಷ್ಟು ಅನುಕೂಲವಾಗಿರುತ್ತದೆ. ಅಪ್ಲಿಕೇಶನ್‌ಗಳು ಹೀಗೆ ಮಾಡಲು ಈಗಾಗಲೇ ನಿಮ್ಮನ್ನು ಅನುಮತಿಸುತ್ತದೆ. ಒಪೇರಾ ಮಿನಿ ನಿಮ್ಮ ಫೋನ್ ಸ್ಕ್ರೀನ್‌ನಲ್ಲಿಯೇ ಭೇಟಿ ಮಾಡಿದ ಸೈಟ್‌ಗಳನ್ನು ಉಳಿಸಲು ಅನುಮತಿಸುತ್ತದೆ.

ಡೌನ್‌ಲೋಡಿಂಗ್ ಇನ್ನಷ್ಟು ಸುಲಭ ಮತ್ತು ಸರಳ

ಡೌನ್‌ಲೋಡಿಂಗ್ ಇನ್ನಷ್ಟು ಸುಲಭ ಮತ್ತು ಸರಳ

ನಿಧಾನ ಮೊಬೈಲ್ ನೆಟ್‌ವರ್ಕ್‌ನಲ್ಲಿ ವೀಡಿಯೊಗಳನ್ನು ಸ್ಟ್ರೀಮ್ ಮಾಡುವುದು ಕಿರಿಕಿರಿಯನ್ನುಂಟು ಮಾಡುತ್ತಿರುತ್ತದೆ. ಇದೇ ವೀಡಿಯೊವನ್ನು ಪುನಃ ಪುನಃ ಬಳಕೆದಾರರು ಸ್ಟ್ರೀಮ್ ಮಾಡುತ್ತಿರುತ್ತಾರೆ. ಒಪೇರಾ ಮಿನಿಯಲ್ಲಿರುವ ಬಿಲ್ಟ್ ಇನ್ ಮೀಡಿಯಾ ಪ್ಲೇಯರ್ ಸಾಮಾಜಿಕ ತಾಣಗಳಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದು ಸ್ಮಾರ್ಟ್‌ಫೋನ್‌ನ ಮೆಮೊರಿ ಕಾರ್ಡ್‌ನಲ್ಲಿ ಇದು ಉಳಿದುಕೊಳ್ಳುತ್ತದೆ.

ಇನ್‌ ಬಿಲ್ಟ್ ಜಾಹೀರಾತು ಬ್ಲಾಕರ್

ಇನ್‌ ಬಿಲ್ಟ್ ಜಾಹೀರಾತು ಬ್ಲಾಕರ್

ಇನ್‌ಬಿಲ್ಟ್ ಜಾಹೀರಾತು ಬ್ಲಾಕರ್ ಡೇಟಾವನ್ನು ಉಳಿಸುವಲ್ಲಿ ನೆರವನ್ನು ನೀಡಲಿದೆ, ಅಂತೆಯೇ ಬ್ರೌಸಿಂಗ್ ಅನ್ನು ವೇಗಗೊಳಿಸಲಿದೆ. ಕಿರಿಕಿರಿಯನ್ನುಂಟು ಮಾಡುವ ಜಾಹೀರಾತುಗಳನ್ನು ನಿವಾರಿಸುವಲ್ಲಿ ಬ್ಲಾಕರ್ ನೆರವಾಗಲಿದ್ದು ಹಿಂದೆಂದಿಗಿಂತಲೂ ಒಪೇರಾ ಮಿನಿ ಹೆಚ್ಚು ವೇಗ ಮತ್ತು ತ್ವರಿತವಾಗಿದೆ.

13 ಭಾರತೀಯ ಭಾಷೆಗಳಿಗೆ ಬೆಂಬಲ

13 ಭಾರತೀಯ ಭಾಷೆಗಳಿಗೆ ಬೆಂಬಲ

ಇಂಗ್ಲೀಷ್ ಅನ್ನು ಒಂದು ಭಾಷೆಯಂತೆ ಬಳಸಲು ಎಲ್ಲಾ ಬಳಕೆದಾರರು ಆರಾಮವಾಗಿರುವುದಿಲ್ಲ. ಒಪೇರಾ ಮಿನಿಯ ಅತ್ಯಾಧುನಿಕ ಆವೃತ್ತಿ 90 ಭಾಷೆಗಳಿಗೆ ಬೆಂಬಲವನ್ನು ನೀಡುತ್ತಿದ್ದು, ಇದರಲ್ಲಿ 13 ಭಾರತೀಯ ಭಾಷೆಗಳೂ ಸೇರಿಕೊಂಡಿದೆ. ಅಸ್ಸಾಮಿ, ಬೆಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳು ಇದರಲ್ಲಿದೆ.

ಯಾವುದೇ ನೆಟ್‌ವರ್ಕ್ ಅಥವಾ ಡಿವೈಸ್ ಇರಲಿ ಆನ್‌ಲೈನ್‌ನಲ್ಲಿರಿ

ಯಾವುದೇ ನೆಟ್‌ವರ್ಕ್ ಅಥವಾ ಡಿವೈಸ್ ಇರಲಿ ಆನ್‌ಲೈನ್‌ನಲ್ಲಿರಿ

ಕೆಲವೊಮ್ಮೆ ನಾವು ನೆಟ್‌ವರ್ಕ್ ಕೊರತೆ ಮತ್ತು ಇಂಟರ್ನೆಟ್ ಕನೆಕ್ಶನ್ ವೇಗದೊಂದಿಗೆ ಸಮಸ್ಯೆಯನ್ನು ಎದುರಿಸುತ್ತಿರುವರಿಗೆ ಮೊಬೈಲ್ ಡಿವೈಸ್‌ಗಳಲ್ಲಿ ತೊಂದರೆ ಉಂಟಾಗಲಿದೆ. ಒಪೇರಾ ಮಿನಿ ಉತ್ತಮ ಬ್ರೌಸಿಂಗ್ ಅನುಭವವನ್ನು ನಿಮಗೆ ಒದಗಿಸುತ್ತಿದ್ದು ಮೊಬೈಲ್ ನೆಟ್‌ವರ್ಕ್ ನಿಧಾನಗತಿಯಲ್ಲಿದ್ದರೂ ಇದು ಬೆಂಬಲವನ್ನು ಒದಗಿಸಲಿದೆ.

ನೈಟ್ ಮೋಡ್, ಉತ್ತಮ ಯುಐ ಮತ್ತು ಇಂಟರ್ಫೇಸ್

ನೈಟ್ ಮೋಡ್, ಉತ್ತಮ ಯುಐ ಮತ್ತು ಇಂಟರ್ಫೇಸ್

ಹೆಚ್ಚಿನ ಬಳಕೆದಾರರು ಇಂಟರ್ನೆಟ್ ಅನ್ನು ರಾತ್ರಿ ಮಲಗುವ ಸಮಯದಲ್ಲಿ ಬಳಸುತ್ತಿರುತ್ತಾರೆ. ಮಂದ ಬೆಳಕಿನಲ್ಲಿ ಫೋನ್ ಬಳಸುವುದು ನಿಮ್ಮ ಕಣ್ಣಿಗೆ ತೊಂದರೆಯನ್ನು ಉಂಟುಮಾಡಲಿದೆ. ಒಪೇರಾ ಮಿನಿಯಲ್ಲಿರುವ ವಿಶೇಷತೆಯು ಬ್ರೈಟ್ ಸ್ಕ್ರೀನ್‌ನ ಇಫೆಕ್ಟ್‌ಗಳನ್ನು ಮಂದಗೊಳಿಸಿ ನಿಮ್ಮ ಕಣ್ಣಿಗೆ ಅನುಕೂಲಕರವಾಗಿರುವಂತೆ ಬ್ರೌಸ್ ಮಾಡಲು ಸಹಾಯ ಮಾಡುತ್ತದೆ.

Best Mobiles in India

English summary
Today we compare the two, and list 7 top features of the Opera Mini which not only make it a better option than UC browser, but also an efficient browser in its segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X