ಸ್ಯಾಮ್ಸಂಗ್ ಬಂಪರ್ ಆಫರ್: ಗ್ಯಾಲಾಕ್ಸಿ ಎಸ್8 ಪ್ಲಸ್, ಗ್ಯಾಲಕ್ಸಿ ಎಸ್7 ಎಡ್ಜ್ ದರದಲ್ಲಿ ಭಾರೀ ಕಡಿತ!!

By: Prathap T

ವಿಶ್ವದಾದ್ಯಂತ ಹೆಚ್ಚು ಜನಪ್ರಿಯತೆ ಪಡೆದು ಎಲ್ಲರ ಕೈ ಕಿಸೆಯಲ್ಲಿ ಸಾಮಾನ್ಯ ಬಳಕೆ ವಸ್ತುವಾಗಿರುವ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ತನ್ನ ಗ್ರಾಹಕರ ಸಂಖ್ಯೆಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ. ಈ ರೀತಿಯ ಸಂಚಲನ ಸೃಷ್ಟಿಸುವುದರಿಂದಲೇ ಕಳೆದ ಒಂದು ವಾರದ ಹಿಂದೆ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಸ್ಮಾರ್ಟ್ಫೋನ್ ಬಿಡುಗಡೆಗೊಂಡ ಬೆನ್ನಲ್ಲೇ ಗ್ರಾಹಕರು ಕೂಡಿಟ್ಟು ಹಣವನ್ನು ನೀಡಿ ಖರೀದಿಸಲು ಮುಗಿ ಬಿದ್ದಿದ್ದರು.

ಸ್ಯಾಮ್ಸಂಗ್ ಬಂಪರ್ ಆಫರ್

ಡುಯಲ್ ಕ್ಯಾಮೆರಾ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಅತ್ಯಂತ ಉತ್ಕೃಷ್ಟ ಸಾಧನ ಎಂದು ಬಿಂಬಿಸಲಾಗಿರುವುದಲ್ಲದೇ, ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್ಫೋನ್ ಗಳಲ್ಲಿ ಇದೂ ಕೂಡ ಒಂದಾಗಿದೆ.

ಹೀಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಬಿಡುಗಡೆ ದೊಡ್ಡ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ, ಮತ್ತೊಂದು ಆಸಕ್ತಿದಾಯಕವಾದ ಕೊಡುಗೆಯೊಂದನ್ನು ಘೋಷಿಸಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8ನ ಹಿಂದಿನ ಪ್ರಮುಖ ಸ್ಮಾರ್ಟ್ಫೋನ್ ಗಳ ಮೂಲ ದರವನ್ನು ಕಡಿಮೆ ಮಾಡಿ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಿದೆ. ಈಗಾಗಲೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ಮತ್ತು ಗ್ಯಾಲಾಕ್ಸಿ ಎಸ್ 7 ಎಡ್ಜ್ ಸ್ಮಾರ್ಟ್ಫೋನ್ ಬೆಲೆ ಕಡಿತ ಮಾಡಿದೆ.

ಗ್ಯಾಲಾಕ್ಸಿ ಎಸ್ 8 ಮತ್ತು ಎಸ್ 8 ಪ್ಲಸ್ ಬೆಲೆಯಲ್ಲೂ ಕಡಿಮೆ ಮಾಡಿ ಗ್ರಾಹಕರಿಗೆ ನೀಡುವ ಕುರಿತು ಸ್ಯಾಮ್ಸಂಗ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ಹಾಗಾಗಿ ನೀವು ಸ್ಯಾಮ್ಸಂಗ್ ಅಭಿಮಾನಿಗಳಾಗಿದ್ದರೆ, ನಿಮಗಾಗಿ ಅತ್ಯಂತ ದುಬಾರಿ ಸ್ಮಾರ್ಟ್ಫೋನ್ ಗಳನ್ನು ಕಡಿಮೆ ದರಕ್ಕೆ ಪಡೆಯಲು ಪಡೆಯಲು ನಿಶ್ಚಯಿಸುವುದು ಒಳ್ಳೆಯದು. ಆನಿಟ್ಟಿನಲ್ಲಿ ಅಂತಹ ಸ್ಮಾರ್ಟಫೋನ್ ಆಫರ್ ಗಳ ಮಾಹಿತಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

English summary
Ahead of Galaxy Note 8 launch Samsung has drop down the price for its previous flagship models. Samsung Galaxy S8 plus and S7 have already seen a price cut
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot